»   » ಈ ವರ್ಷ ಸಪ್ತಪದಿ ತುಳಿದ ಪರಭಾಷಾ ತಾರೆಯರು

ಈ ವರ್ಷ ಸಪ್ತಪದಿ ತುಳಿದ ಪರಭಾಷಾ ತಾರೆಯರು

Posted By:
Subscribe to Filmibeat Kannada

ಸಿನಿಮಾ ಕ್ಷೇತ್ರದಲ್ಲಿ ಕೆಲವು ಸ್ಟಾರ್‌ಗಳ ಮದುವೆ ಲವ್‌ ಅಫೇರ್, ಲವ್‌ ಫೈಲ್ಯೂರ್, ಗುಟ್ಟಾಗಿ ಹೀಗೆ ಹಲವು ರೀತಿಯಲ್ಲಿ ಆಗುತ್ತಿರುತ್ತವೆ. ಸಾಮಾನ್ಯಾವಾಗಿ ಲವ್ ಬ್ರೇಕ್‌ ಅಪ್‌ ಗಳು ಹೆಚ್ಚಾಗಿ ಬಾಲಿವುಡ್‌ ಸಿನಿ ಅಂಗಳದಲ್ಲಿ ಸಾಮಾನ್ಯ.[ಈ ವರ್ಷ ಸಪ್ತಪದಿ ತುಳಿದ ಸ್ಯಾಂಡಲ್ ವುಡ್ ತಾರೆಯರು]

ನಿಶ್ಚಿತಾರ್ಥ ಮಾಡಿಕೊಂಡು, ಸ್ವಲ್ಪ ಲೇಟಾಗಿ ಯಾಕೋ ಸರಿ ಬರುತ್ತಿಲ್ಲ ಎಂದು ಹೇಳಿ ಬಿಟ್ಟು ಹೋಗೋ ಹಲವು ಪ್ರಸಂಗಗಳು ಕಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿರುತ್ತವೆ. ಇನ್ನೂ ಹಲವು ಸ್ಟಾರ್ ನಟ ನಟಿಯರ ಎರಡನೇ ಮತ್ತು ಮೂರನೇ ಮದುವೆಗಳು ಆಗಾಗ ಚಿತ್ರರಂಗ ಜಗತ್ತಿನಲ್ಲಿ ನಡೆಯುತ್ತಿರುತ್ತವೆ. 2016 ರಲ್ಲಿ ಜರುಗಿದ ಅಂತದ್ದೇ ಮದುವೆಗಳ ಲೀಸ್ಟ್‌ ಅನ್ನು ಇಂದು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.[2016ರ ಅತ್ಯುತ್ತಮ ಚಿತ್ರ-ನಟ-ನಟಿ-ನಿರ್ದೇಶಕರನ್ನ ಆಯ್ಕೆ ಮಾಡಿ!]

ಸಿನಿ ಪ್ರಿಯರಿಗೆ ಈಗಾಗಲೇ 2016 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ ವುಡ್‌ ಸ್ಟಾರ್ ನಟ ನಟಿಯರು ಯಾರು ಎಂದು ಹೇಳಿದ್ವಿ. ಈಗ ಬಾಲಿವುಡ್, ಟಾಲಿವುಡ್, ಮಾಲಿವುಡ್ ಕಾಲಿವುಡ್‌ ಸಿನಿ ಅಂಗಳದ ಯಾವ ನಟ ನಟಿಯರು ಸಪ್ತಪದಿ ತುಳಿದ್ರು ಅನ್ನೋ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಅವರ ಲೀಸ್ಟ್‌ ಇಲ್ಲಿದೆ ನೋಡಿ.[ಈ ವರ್ಷ ಸೌಂಡ್ ಮಾಡಿ ಮಕಾಡೆ ಮಲಗಿದ ಸಿನಿಮಾಗಳಿವು..]

ಸಪ್ತಪದಿ ತುಳಿದ ನಟಿ ಆಸಿನ್

ಮಲಯಾಳಿ ಬೆಡಗಿ ಅಸಿನ್‌ ತೊಟ್ಟುಮಾಕಳ್ ಮತ್ತು ಮೈಕ್ರೋಮ್ಯಾಕ್ಸ್ ಕಂಪನಿಯ ಸಹ ಸಂಸ್ಥಾಪಕ ರಾಹುಲ್‌ ಶರ್ಮಾ ಈ ವರ್ಷ ಸಪ್ತಪದಿ ತುಳಿದರು. ಇವರ ಮದುವೆ ಜನವರಿ 19 ರಂದು ನವ ದೆಹಲಿಯ NH8 ಮಾರ್ಗದಲ್ಲಿರುವ ದಸಿತ್ ದೇವರಾನ ಹೋಟೆಲ್‌ ನಲ್ಲಿ ಅದ್ಧೂರಿಯಾಗಿ ನೇರವೇರಿತು.[ಚಿತ್ರಗಳು: ಉದ್ಯಮಿ ಜೊತೆ ಸಪ್ತಪದಿ ತುಳಿದ ನಟಿ ಅಸಿನ್]

ಎರಡನೇ ಬಾರಿ ಹಸಮಣೆ ಏರಿದ ಶ್ರೀಜಾ

ಟಾಲವುಡ್‌ನ ಮೆಗಾ ಸ್ಟಾರ್ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ಮತ್ತು ಚಿತ್ತೂರು ಮೂಲದ ಜ್ಯುವೆಲ್ಲರಿ ಡಿಸೈನರ್ ಕಲ್ಯಾಣ್ ಎಂಬುವರೊಂದಿಗೆ ಎರಡನೇ ಬಾರಿ ಈ ವರ್ಷ ಹಸೆಮಣೆ ತುಳಿದರು. ಇವರ ಮದುವೆ ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಚಿರಂಜೀವಿ ರವರ ಪ್ರಕೃತಿ ರೆಸಾರ್ಟ್‌ ನಲ್ಲಿ ಕುಟುಂಬ ಹಾಗೂ ಆಪ್ತೇಷ್ಟರ ಸಮ್ಮುಖದಲ್ಲಿ ಬಂದೋಬಸ್ತ್‌ ನಲ್ಲಿ ನಡೆಯಿತು.['ಮೆಗಾ' ಮದುವೆ; ಅದ್ಧೂರಿಯಾಗಿ ನಡೆದ ಶ್ರೀಜಾ 'ಎರಡನೇ' ಕಲ್ಯಾಣ]

ಕಾಶ್ಮೀರಿ ಉದ್ಯಮಿ ವರಿಸಿದ ಊರ್ಮಿಳಾ

ಬಾಲಿವುಡ್ ಸ್ಟಾರ್‌ ಗಳು ಯಾರ್ ಮದುವೆ ಆದ್ರು ಅಂತ ಕೆಲವೊಮ್ಮೆ ಗೊತ್ತೇ ಆಗೋದಿಲ್ಲ. ಹಾಗೆಯೇ ರಂಗೀಲಾ ಬೆಡಗಿ ಊರ್ಮಿಳಾ ಸದ್ದಿಲ್ಲದೇ 2016 ರಲ್ಲಿ ಮದುವೆ ಆಗಿದ್ದಾರೆ. ರಾಮ್‌ ಗೋಪಾಲ್ ವರ್ಮಾ ಅವರ ಗರಡಿಯಿಂದ ಸತ್ಯ, ರಂಗೀಲ, ಜುದಾಯಿ,ದೌಡ್ ಸಿನಿಮಾಗಳ ಮೂಲಕ ಬೆಳಕಿಗೆ ಬಂದ ಪ್ರತಿಭೆ ಊರ್ಮಿಳಾ ಮತ್ತು ರೂಪದರ್ಶಿ ಮೊಹ್ಸಿನ್ ಅಖ್ತರ್ ಮೀರ್ ಅವರು ಈ ವರ್ಷ ನವ ಬಾಳಿಗೆ ಕಾಲಿಟ್ಟರು. ಇವರ ಮದುವೆ ಮಾರ್ಚ್‌ 03, 2016 ರಂದು ನೆರವೇರಿತು.[ರಂಗೀಲಾ ಬೆಡಗಿ ಊರ್ಮಿಳಾ ಸದ್ದಿಲ್ಲದೆ ಮದ್ವೆ]

ಬಾಲಿವುಡ್ ಬೆಡಗಿ ಬಿಪಾಶ ಬಸು

ಬಾಲಿವುಡ್ ಮಾಡೆಲ್ ಮತ್ತು ನಟಿ ಬಿಪಾಶ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಈ ವರ್ಷ ಹಸೆಮಣೆ ಏರಿದರು. ಇವರ ಮದುವೆ ಏಪ್ರಿಲ್ 30, 2016 ರಂದು ನಡೆಯಿತು.[ಕ್ವೀನ್ ಆಫ್ ಹಾರರ್ ಬಿಪ್ಸ್ ಗಾಗಿ ನೋಡಬಲ್: ವಿಮರ್ಶೆ]

ನವ ಜೀವನಕ್ಕೆ ಕಾಲಿಟ್ಟ ಪ್ರೀತಿ ಜಿಂಟಾ

ಬಹುಭಾಷ ಬಾಲಿವುಡ್ ನಟಿ ಪ್ರೀತಿ ಜಿಂಟಾ ರವರು ಈ ವರ್ಷ ತಮ್ಮ ದೀರ್ಘ ಕಾಲದ ಅಮೆರಿಕನ್ ಗೆಳೆಯ ಜೆನೆ ಗೂಡೆನಫ್‌ ಜೊತೆ ನವ ಜೀವನಕ್ಕೆ ಕಾಲಿಟ್ಟರು. 2016 ಫೆಬ್ರವರಿ 29 ರಂದು ಲಾಸ್‌ ಏಂಜಲ್ಸ್‌ನಲ್ಲಿ ಪ್ರೀತಿ ಜಿಂಟಾ ಮತ್ತು ಜೆನೆ ಗೂಡೆನಫ್‌ ರವರ ಮದುವೆ ನೇರವೇರಿತು.

ಸಪ್ತಪದಿ ತುಳಿದ ಕಾವ್ಯ ಮತ್ತು ದಿಲೀಪ್

ಮಲಯಾಳಂ ನಟ ದಿಲೀಪ್ ಮತ್ತು ನಟಿ ಕಾವ್ಯಾ ಮಾಧವನ್ ಮಾಲಿವುಡ್ ಅಂಗಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೆಲೆಬ್ರಿಟಿಗಳು. ಅಂದಹಾಗೆ ಇವರ ಮದುವೆ ಕೇರಳದ ಕೊಚ್ಚಿಯ ಖಾಸಗಿ ಹೋಟೆಲ್ನಲ್ಲಿ ನವೆಂಬರ್ 25 ರಂದು ನೆರವೇರಿತು. ದಿಲೀಪ್‌ ಮತ್ತು ಕಾವ್ಯಾಗೆ ಇದು ಎರಡನೇ ಮದುವೆ.

ರಾಧಿಕ ಭರತ್‌ ಕುಮಾರ್ ಪುತ್ರಿ ರಯನೆ ಶುಭವಿವಾಹ

ದಕ್ಷಿಣ ಭಾರತದ ಬಹು ಭಾಷಾ ನಟಿ ರಾಧಿಕ ಶರತ್ ಕುಮಾರ್ ಮಗಳು ರಯಣಿ, ಅವಳ ಗೆಳೆಯ ಕ್ರಿಕೆಟರ್ ಅಭಿಮನ್ಯು ಮಿಥುನ್ ಜೊತೆ ವಿವಾಹವಾದರು. ಇವರ ಶುಭವಿವಾಹ ಆಗಸ್ಟ್ 28 2016 ರಂದು ನೆರವೇರಿತು. ಇವರ ವಿವಾಹ ಕಾರ್ಯವು ಮಹಾಬಲಿಪುರಂನಲ್ಲಿ ನಡೆಯಿತು.

ಬ್ಯಾಚುಲರ್ ಲೈಫ್‌ಗೆ ಬಾಯ್‌ ಹೇಳಿದ ನಟ ವರುಣ್ ಸಂದೇಶ್

ಟಾಲಿವುಡ್ ಅಂಗಳದಲ್ಲಿ ಖ್ಯಾತ ನಟ ವರುಣ್ ಸಂದೇಶ್ ಮತ್ತು ಕನ್ನಡ 'ಅಂತೂ ಇಂತೂ ಪ್ರೀತಿ ಬಂತು' ಚಿತ್ರದ ಖ್ಯಾತಿಯ ನಟಿ ವಿತಿಕಾ ಶೆರು ನವ ಬಾಳಿಗೆ ಕಾಲಿಟ್ಟರು. ಇವರ ಮದುವೆ ಆಗಸ್ಟ್ 19, 2016 ರಂದು ಹೈದರಾಬಾದ್ ನ ರೆಸಾರ್ಟ್‌ ಒಂದರಲ್ಲಿ ನೇರವೇರಿತು.[ಪ್ರಿಯತಮೆ ಜೊತೆ ಸಪ್ತಪದಿ ತುಳಿದ ನಟ ವರುಣ್ ಸಂದೇಶ್]

ಗುಟ್ಟಾಗಿ ಮದುವೆಯಾದ ನಟ ಜೆಡಿ ಚಕ್ರವರ್ತಿ

ತಮಿಳು, ತೆಲುಗು, ಹಿಂದಿ, ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ನಟ ಕಮ್‌ ನಿರ್ದೇಶಕನಾಗಿ ದುಡಿದು ಇದೀಗ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸುತ್ತಿರುವ ನಟ ಜೆಡಿ ಚಕ್ರವರ್ತಿ ರವರು ದೀರ್ಘ ಕಾಲದ ಪ್ರಿಯತಮೆ ನಟಿ ಅನುಕೃತಿ ಗೋವಿಂದ ಶರ್ಮ ಅವರನ್ನು ಮದುವೆ ಆಗಿದ್ದಾರೆ. ಇವರ ಮದುವೆ ಹೈದರಾಬಾದ್‌ ನಲ್ಲಿ ರಹಸ್ಯವಾಗಿ ಆಗಸ್ಟ್ 18 ರಂದು ನೆರವೇರಿತು.[ಗುಟ್ಟು-ಗುಟ್ಟಾಗಿ ಮದುವೆಯಾದ ದಕ್ಷಿಣ ಭಾರತದ ನಟ ಜೆಡಿ ಚಕ್ರವರ್ತಿ]

ನವ ದಾಂಪತ್ಯಕ್ಕೆ ಕಾಲಿಟ್ಟ ದಿವ್ಯಾಂಕ ತ್ರಿಪಾಠಿ

ಬಾಲಿವುಡ್ ಟೆಲಿವಿಷನ್ ಇಂಡಸ್ಟ್ರಿಯಲ್ಲಿ ತಮ್ಮದೇ ಛಾಪನ್ನು ಮೂಡಿಸಿರುವ ನಟಿ ದಿವ್ಯಾಂಕ ತ್ರಿಪಾಠಿ ಮತ್ತು ಟೆಲಿವಿಷನ್ ಆಕ್ಟರ್ ವಿವೇಕ್ ರನ್ನು ಜುಲೈ 8 ರಂದು ವರಿಸಿದರು. ಇವರ ವಿವಾಹ ಭೋಪಾಲ್ ಫನ್‌ ಸಿಟಿ ಅಲ್ಲಿ ನೆರವೇರಿತು.

English summary
Here is Which star got married Who in 2016 at Bollywood, Tollywood, Kollywood, Mollywood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada