»   » 'ಟ್ವೀಟ್' ವಿಚಾರಕ್ಕೆ ಬುಲೆಟ್ ಪ್ರಕಾಶ್ ಗೆ ಕಾಲ್ ಮಾಡುತ್ತಿರುವುದು ಯಾರು?

'ಟ್ವೀಟ್' ವಿಚಾರಕ್ಕೆ ಬುಲೆಟ್ ಪ್ರಕಾಶ್ ಗೆ ಕಾಲ್ ಮಾಡುತ್ತಿರುವುದು ಯಾರು?

Posted By:
Subscribe to Filmibeat Kannada

''ಸ್ಯಾಂಡಲ್ ವುಡ್ ನ ದೊಡ್ಡ ರಹಸ್ಯವನ್ನ ಬಯಲು ಮಾಡುತ್ತೇನೆ. 'ದೊಡ್ಡ ನಟನ ಸಣ್ಣತನ'ವನ್ನ ಜಗಜ್ಜಾಹೀರು ಮಾಡುತ್ತೇನೆ'' ಅಂತೆಲ್ಲ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದ ಬುಲೆಟ್ ಪ್ರಕಾಶ್ ಆಮೇಲೆ ಅದು ಯಾರು ಎಂಬುದನ್ನ ಬಹಿರಂಗಪಡಿಸಿಲ್ಲ.

ಕಾರಣ ಕೇಳಿದ್ರೆ, ಚಿತ್ರರಂಗದ ದೊಡ್ಡವರು, ಜೊತೆಯಲ್ಲಿರುವವರು ಫೋನ್ ಮಾಡಿದ್ದರು, ಇದನ್ನ ನಾಲ್ಕು ಗೋಡೆಗಳ ಮಧ್ಯೆ ಕೂತು ಮಾತನಾಡಿಕೊಳ್ಳೋಣ, ಬಹಿರಂಗವಾಗಿ ಬೇಡವೆಂದರು ಎಂಬ ಜವಾಬು ನೀಡಿದ್ದರು. ಆದ್ರೆ, ಯಾರು ಫೋನ್ ಮಾಡಿದ್ದರು ಎಂಬುದನ್ನ ಮಾತ್ರ ಬುಲೆಟ್ ಪ್ರಕಾಶ್ ಹೇಳಲಿಲ್ಲ.[ಬುಲೆಟ್ ಪ್ರಕಾಶ್ ಬೆಟ್ಟು ಮಾಡಿ ತೋರಿಸಿದ 'ಆ' ಪ್ರಖ್ಯಾತ ನಟ ಯಾರು.?]

ಬುಲೆಟ್ ಪ್ರಕಾಶ್ ಗೆ ದೊಡ್ಡವರು ಫೋನ್ ಮಾಡಿದ್ದರೋ ಅಥವಾ ಸಣ್ಣವರು ಫೋನ್ ಮಾಡಿದ್ದರೋ ಗೊತ್ತಿಲ್ಲ. ಆದ್ರೆ ಸುದೀಪ್ ಫ್ಯಾನ್ಸ್ ಮಾಡಿದ್ದರು ಎಂಬುದು ಮಾತ್ರ ಈಗ ಹರಿದಾಡುತ್ತಿರುವ ಫೋನ್ ಕಾಲ್ ಆಡಿಯೋ ಮೂಲಕ ಜಗಜ್ಜಾಹೀರು ಆಗಿದೆ. ಮುಂದೆ ಓದಿ...

ಬುಲೆಟ್ ಗೆ ಕಿಚ್ಚ ಬಾಯ್ಸ್ ಫೋನ್!

''ದೊಡ್ಡ ನಟನ ಸಣ್ಣತನ ಪರಿಚಯ ಮಾಡ್ತಿನಿ'' ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಹಾಸ್ಯ ನಟ ಬುಲೆಟ್ ಪ್ರಕಾಶ್, ಖಾಸಗಿ ಸುದ್ದಿ ವಾಹಿನಿಯಲ್ಲಿ ಸುಳಿವು ಕೊಟ್ಟಾಗಲೇ, ಅವರು ಯಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ಬಹುತೇಕರಿಗೂ ಗೊತ್ತಾಯಿತು. ಈ ಬೆಳವಣಿಗೆ ಆದ ನಂತರ ಕಿಚ್ಚನ ಹುಡುಗ್ರು ಬುಲೆಟ್ ಗೆ ದೂರವಾಣಿ ಕರೆ ಮಾಡಿದ್ದಾರೆ.[ಬುಲೆಟ್ ಪ್ರಕಾಶ್ ಗೆ ಬೆಂಡೆತ್ತಿ ಬ್ರೇಕ್ ಹಾಕುತ್ತಿರುವ ಕಿಚ್ಚ ಸುದೀಪ್ 'ಭಕ್ತ'ರು]

ಫೋನ್ ಮಾಡಿ ಏನು ಮಾತನಾಡಿದ್ರು

ಬುಲೆಟ್ ಪ್ರಕಾಶ್ ಗೆ ಫೋನ್ ಮಾಡಿದ್ದ 'ಕಿಚ್ಚ ಸೇನೆ ಸಮಿತಿ'ಯ ಅಡ್ಮಿನ್ ಒಬ್ಬರು ''ನೀವು ಮಾಡಿದ್ದು ತಪ್ಪು. ಇದು ನಮಗೆಲ್ಲ ಬೇಜಾರಾಗಿದೆ, ನೀವು ಕೂಡ ಅವರ ಜೊತೆ ಆಕ್ಟ್ ಮಾಡಿದ್ದೀರ. ಹೀಗೆಲ್ಲಾ ಮಾಡಬಾರದು ನೀವು'' ಎಂದು ಹೇಳಿದ್ದಾರೆ.[ರಾತ್ರಿ 'ಬಾಂಬ್' ಸಿಡಿಸಿ ಬೆಳಗ್ಗೆ 'ಉಲ್ಟಾ' ಹೊಡೆದ ಬುಲೆಟ್ ಪ್ರಕಾಶ್]

ಬುಲೆಟ್ ಪ್ರಕಾಶ್ ಪ್ರತಿಕ್ರಿಯೆ

''ಸುದೀಪ್ ಮತ್ತು ನಾನು ತುಂಬಾ ವರ್ಷದಿಂದ ಸ್ನೇಹಿತರು. ಹುಚ್ಚ ಸಿನಿಮಾದಿಂದ ನಾನು ನೋಡಿದ್ದೀನಿ. ನಾನು ಯಾರಿಗೂ ನೋವು ಕೊಡಬಾರದು ಅಂತ ಅಂದುಕೊಂಡಿದ್ದೀನಿ. ನನ್ನ ವಿಚಾರ ಬೇರೆ ಇದೆ. ಈಗ ಎಲ್ಲರಿಗೂ ಕ್ಷಮೆ ಕೂಡ ಕೇಳಿದ್ದೀನಿ'' ಎಂದು ಪ್ರತಿಕ್ರಿಯಿಸಿದ್ದಾರೆ.[ದೊಡ್ಡ ನಟನ ಸಣ್ಣತನ ಇಂದು ಬಯಲು: ಬುಲೆಟ್ ಪ್ರಕಾಶ್ ರಿಂದ ಮಹಾ ಸ್ಫೋಟ.!]

ಸುದೀಪ್ ಅವರ ಬಳಿ ಮಾತನಾಡುತ್ತೇನೆ

''ಆಗಿದ್ದು ಆಯ್ತು ಬಿಡಿ, ಎಲ್ಲರಿಗೂ ಹೇಳಿದ್ದೀನಿ, ಪರ್ಸನಲ್ ಆಗಿ ಕಾಲ್ ಮಾಡ್ತಿದ್ದವರಿಗೂ ಹೇಳಿದ್ದೀನಿ, ಸುದೀಪ್ ಅವರ ಜೊತೆಯಲ್ಲಿ ಮಾತನಾಡುತ್ತೇನೆ'' ಎಂದು ಅಭಿಮಾನಿಯನ್ನ ಸಮಾಧಾನ ಪಡಿಸಿದ್ದಾರೆ.[ವಿವಾದಗಳನ್ನ ಹೊರತು ಪಡಿಸಿ ಬುಲೆಟ್ ಪ್ರಕಾಶ್ ಏನ್ಮಾಡ್ತಿದ್ದಾರೆ.?]

English summary
Kannada Comedy Actor Bullet Prakash had Made a Controversial tweet saying that he will reveal who started groupism in kannada cinema industry. Now sudeep fans had called bullet prakash to clarify things.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada