For Quick Alerts
  ALLOW NOTIFICATIONS  
  For Daily Alerts

  'ಕಲಿ' ಹಾಗೆ ಇದು ಕಾಗೆ ಹಾರಿಸೋ ಪ್ರೋಗ್ರಾಂ ಆಗ್ಲಿಲ್ಲಾಂದ್ರೆ ಸಾಕು.!

  By ಹರಾ
  |

  ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್....ಕನ್ನಡದ ಈ ಇಬ್ಬರು ದಿಗ್ಗಜರನ್ನು ತೆರೆ ಮೇಲೆ ಒಂದು ಮಾಡುವ ಪ್ರಯತ್ನಕ್ಕೆ ನಿರ್ದೇಶಕ ಪ್ರೇಮ್ ಕೈ ಹಾಕಿದ್ರು. ಆ ಚಿತ್ರಕ್ಕೆ 'ಕಲಿ' ಅಂತ ಶೀರ್ಷಿಕೆ ಕೂಡ ಗ್ರ್ಯಾಂಡ್ ಆಗಿ ಅನಾವರಣ ಮಾಡಿದ್ರು.

  'ಕಲಿ' ಬಗ್ಗೆ ಗಾಂಧಿನಗರದಲ್ಲಿ ದಿನಕ್ಕೊಂದು 'ಕಂತೆ' ಪುರಾಣ ಶುರು ಆಯ್ತು. ಕಡೆಗೆ 'ಕಲಿ' ಶುರು ಮಾಡಲು ಸದ್ಯಕ್ಕೆ ಆಗಲ್ಲ, ಗ್ರಾಫಿಕ್ಸ್ ಗೆ ಬೇಜಾನ್ ಟೈಮ್ ಬೇಕು, ಅದಕ್ಕೆ 'ಕಲಿ' ಚಿತ್ರವನ್ನ ಪಕ್ಕಕ್ಕೆ ಇಟ್ಟು 'ದಿ ವಿಲನ್' ಸಿನಿಮಾ ಮಾಡ್ತಿದ್ದೀವಿ ಅಂತ 'ಜೋಗಿ' ಪ್ರೇಮ್ ಹೇಳಿದರು. [ಶಾಕಿಂಗ್ ನ್ಯೂಸ್: ಶಿವಣ್ಣ - ಸುದೀಪ್ 'ಕಲಿ' ಸಿನಿಮಾ ನಿಂತುಹೋಯ್ತಾ.?]

  ಅಲ್ಲಿಗೆ 'ಕಲಿ' ಅಧ್ಯಾಯ ಸಂಪೂರ್ಣಂ.! 'ದಿ ವಿಲನ್' ಅಧ್ಯಾಯ ಪ್ರಾರಂಭಂ...

  ಹಾಟ್ ಟಾಪಿಕ್ ಆಗಿದೆ 'ದಿ ವಿಲನ್'

  ಹಾಟ್ ಟಾಪಿಕ್ ಆಗಿದೆ 'ದಿ ವಿಲನ್'

  'ಕಲಿ' ಕೈ ಬಿಟ್ಟು 'ದಿ ವಿಲನ್' ಶುರು ಅಂತ ಪ್ರೇಮ್ ಹೇಳಿದಾಗಿನಿಂದಲೂ, ಗಾಂಧಿನಗರದಲ್ಲಿ ಚಿತ್ರದ ಬಗ್ಗೆ ಊಹಾಪೋಹ ಹೆಜ್ಜಾಗಿದೆ. [ಶಿವರಾಜ್ ಕುಮಾರ್ ಮತ್ತು ಸುದೀಪ್: ಇಬ್ಬರಲ್ಲಿ 'ವಿಲನ್' ಯಾರು.?]

  'ದಿ ವಿಲನ್' ಹೀರೋಯಿನ್ ಯಾರು.?

  'ದಿ ವಿಲನ್' ಹೀರೋಯಿನ್ ಯಾರು.?

  ಸ್ಯಾಂಡಲ್ ವುಡ್ ಅಂಗಳದಿಂದ ಬಂದಿರುವ ಲೇಟೆಸ್ಟ್ ನ್ಯೂಸ್ ಪ್ರಕಾರ, 'ದಿ ವಿಲನ್' ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸಲು 'ಮಿಲ್ಕಿ ಬ್ಯೂಟಿ' ತಮನ್ನಾ ಭಾಟಿಯಾ ಜೊತೆ ಮಾತುಕತೆ ನಡೆದಿದ್ಯಂತೆ.

  ಒಪ್ಪಿಕೊಂಡಿದ್ದಾರಾ ತಮನ್ನಾ.?

  ಒಪ್ಪಿಕೊಂಡಿದ್ದಾರಾ ತಮನ್ನಾ.?

  'ದಿ ವಿಲನ್' ಚಿತ್ರದ ಸ್ಕ್ರಿಪ್ಟ್ ಕೇಳಿ ತಮನ್ನಾ ಇಂಪ್ರೆಸ್ ಆಗಿದ್ದಾರಂತೆ. ತಮ್ಮ ಇತರೆ ಚಿತ್ರಗಳ ಡೇಟ್ ಗಳಿಗೆ ಕ್ಲ್ಯಾಶ್ ಆಗ್ಲಿಲ್ಲ ಅಂದ್ರೆ 'ದಿ ವಿಲನ್' ಸಿನಿಮಾದಲ್ಲಿ ನಟಿಸುವುದಾಗಿ ತಮನ್ನಾ ಹೇಳಿದ್ದಾರಂತೆ.

  ಆಶ್ಚರ್ಯ ಇಲ್ಲ.!

  ಆಶ್ಚರ್ಯ ಇಲ್ಲ.!

  ಸನ್ನಿ ಲಿಯೋನ್, ಮಲ್ಲಿಕಾ ಶೆರಾವತ್, ಯಾನಾ ಗುಪ್ತಾ...ಹೀಗೆ ಪರಭಾಷೆಯ ಲಲನಾಮಣಿಯರಿಗೆ ಕನ್ನಡದಲ್ಲಿ ರೆಡ್ ಕಾರ್ಪೆಟ್ ಹಾಕಿದವರು 'ಜೋಗಿ' ಪ್ರೇಮ್. ಈಗ 'ದಿ ವಿಲನ್' ಚಿತ್ರಕ್ಕಾಗಿ ತಮನ್ನಾ ರನ್ನ ಕರೆತಂದರೂ ಆಶ್ಚರ್ಯ ಇಲ್ಲ.

  'ದಿ ವಿಲನ್' ಚಿತ್ರದಲ್ಲಿ ನಾಲ್ಕು ಪ್ರಮುಖ ಪಾತ್ರಗಳು

  'ದಿ ವಿಲನ್' ಚಿತ್ರದಲ್ಲಿ ನಾಲ್ಕು ಪ್ರಮುಖ ಪಾತ್ರಗಳು

  'ದಿ ವಿಲನ್' ಚಿತ್ರದಲ್ಲಿ ಶಿವಣ್ಣ, ಸುದೀಪ್ ಸೇರಿದಂತೆ ಹೀರೋಯಿನ್ ಮತ್ತು ತಾಯಿಯ ಪಾತ್ರಗಳು ಬಹುಮುಖ್ಯವಂತೆ.

  ತಾಯಿಯ ಪಾತ್ರದ ಆಯ್ಕೆ.?

  ತಾಯಿಯ ಪಾತ್ರದ ಆಯ್ಕೆ.?

  'ದಿ ವಿಲನ್' ಚಿತ್ರದ ತಾಯಿ ಪಾತ್ರದಲ್ಲಿ ಬಾಲಿವುಡ್ ನ ಎವರ್ ಗ್ರೀನ್ ಬ್ಯೂಟಿ ರೇಖಾ ಕಾಣಿಸಿಕೊಂಡರೆ ಹೇಗೆ ಎಂಬ ಐಡಿಯಾ ಪ್ರೇಮ್ ಗೆ ಹೊಳೆದಿದೆ.

  ಶಿವಣ್ಣ ಬಿಜಿಯೋ ಬಿಜಿ

  ಶಿವಣ್ಣ ಬಿಜಿಯೋ ಬಿಜಿ

  'ಶ್ರೀಕಂಠ', 'ಬಂಗಾರ...ಸನ್ ಆಫ್ ಬಂಗಾರದ ಮನುಷ್ಯ', 'ಲೀಡರ್' ಸೇರಿದಂತೆ ಅನೇಕ ಚಿತ್ರಗಳು ಶಿವಣ್ಣನ ಕೈಯಲ್ಲಿವೆ. ಈ ಮಧ್ಯೆ 'ದಿ ವಿಲನ್'ಗೆ ಟೈಮ್ ಯಾವಾಗ ಕೊಡುತ್ತಾರೋ, ಗೊತ್ತಿಲ್ಲ.

  ಸುದೀಪ್ ಗಾಗಿ ಕಾಯಲೇಬೇಕು.!

  ಸುದೀಪ್ ಗಾಗಿ ಕಾಯಲೇಬೇಕು.!

  'ಹೆಬ್ಬುಲಿ' ಚಿತ್ರದ ಶೂಟಿಂಗ್ ನಲ್ಲಿ ಸುದೀಪ್ ಬಿಜಿಯಾಗಿದ್ದಾರೆ. ಅದು ಮುಗಿದ ಕೂಡಲೆ 'ದಿ ವಿಲನ್' ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಬಹುದು. ಆದ್ರೆ, ಅದಕ್ಕೆ ಅವರ ಹೇರ್ ಸ್ಟೈಲ್ ಅಡ್ಡಿಪಡಿಸಲಿದೆ. 'ಹೆಬ್ಬುಲಿ' ಚಿತ್ರಕ್ಕಾಗಿ ಸುದೀಪ್ ಮಾಡಿಕೊಂಡಿರುವ ಹೇರ್ ಸ್ಟೈಲ್ 'ದಿ ವಿಲನ್' ಚಿತ್ರಕ್ಕೆ ಸೂಟ್ ಆಗಲ್ಲ. ಹೀಗಾಗಿ ಕೂದಲು ಬೆಳೆಯುವವರೆಗೆ ಕಾಯಲೇಬೇಕು.

  ಎಲ್ಲರನ್ನ ಒಟ್ಟುಗೂಡಿಸುವುದೇ ದೊಡ್ಡ ತಲೆನೋವು

  ಎಲ್ಲರನ್ನ ಒಟ್ಟುಗೂಡಿಸುವುದೇ ದೊಡ್ಡ ತಲೆನೋವು

  ಸದಾ ಬಿಜಿ ಇರುವ ಸ್ಟಾರ್ ನಟರನ್ನ ಒಟ್ಟುಗೂಡಿಸುವುದೇ ಸದ್ಯ 'ದಿ ವಿಲನ್' ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ. [ಎಕ್ಸ್ ಕ್ಲೂಸಿವ್: 'ಕಲಿ' ಗಾಸಿಪ್ ಬಗ್ಗೆ ಮೌನ ಮುರಿದ ನಿರ್ಮಾಪಕ ಮನೋಹರ್]

  ಆಗಸ್ಟ್ 12ಕ್ಕೆ ಮುಹೂರ್ತ

  ಆಗಸ್ಟ್ 12ಕ್ಕೆ ಮುಹೂರ್ತ

  ಇದೇ ತಿಂಗಳ 12 ರಂದು 'ದಿ ವಿಲನ್' ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ.

  ಅಭಿಮಾನಿಗಳ ಕೂಗು ಒಂದೇ.!

  ಅಭಿಮಾನಿಗಳ ಕೂಗು ಒಂದೇ.!

  ಪ್ರೇಮ್ ಹಾಗೂ ನಿರ್ಮಾಪಕ ಸಿ.ಆರ್.ಮನೋಹರ್ ರವರ ಈ ಪ್ರಯತ್ನಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಆದ್ರೆ, 'ಕಲಿ' ಚಿತ್ರದಂತೆ ಬರೀ ಬಿಲ್ಡಪ್ ಕೊಟ್ಟು ನಂತರ ಖಾಲಿ ಕೈ ನೋಡುವ ಹಾಗೆ ಆಗದೇ ಇದ್ರೆ ಸಾಕು. 'ಕಲಿ' ಹಾಗೆ ಇದು ಕಾಗೆ ಹಾರಿಸುವ ಪ್ರೋಗ್ರಾಂ ಆಗದೆ ಇರಲಿ ಎಂಬುದೇ ಅಭಿಮಾನಿಗಳ ಕೂಗು.

  English summary
  According to the latest buzz, Kannada Actor Shiva Rajkumar and Kiccha Sudeep starrer 'The Villain' movie makers have approached Actress Tamannah Bhatia to play female lead in the film, which is directed by Prem, produced by C.R.Manohar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X