For Quick Alerts
  ALLOW NOTIFICATIONS  
  For Daily Alerts

  ಜೂನ್ 15 ರಂದು ಲಂಡನ್ ಗೆ ಹಾರಲಿದ್ದಾರೆ ಶಿವಣ್ಣ, ಸುದೀಪ್

  By Naveen
  |

  ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ಲಂಡನ್ ಗೆ ಹಾರಲಿದ್ದಾರೆ. 'ದಿ ವಿಲನ್' ಸಿನಿಮಾದ ಚಿತ್ರೀಕರಣಕ್ಕಾಗಿ ಇಬ್ಬರು ನಟರು ಇದೇ ತಿಂಗಳು ವಿಮಾನ ಏರಲಿದ್ದಾರೆ.

  'ದಿ ವಿಲನ್' ಚಿತ್ರದ ಚಿತ್ರೀಕರಣವನ್ನು ಈಗಾಗಲೇ ಬೆಂಗಳೂರು, ಶಿವಮೊಗ್ಗ, ಬೆಳಗಾವಿಯಲ್ಲಿ ಮಾಡಲಾಗಿದೆ. ಇದೀಗ ನಿರ್ದೇಶಕ ಪ್ರೇಮ್ ಅಂಡ್ ಟೀಂ ಚಿತ್ರದ ಉಳಿದ ಭಾಗದ ಚಿತ್ರೀಕರಣವನ್ನು ಲಂಡನ್ ನಲ್ಲಿ ಮಾಡಲು ಪ್ಲಾನ್ ಮಾಡಿದೆ.[ಸುದೀಪ್ 'ವಿಲನ್' ಹೇರ್ ಸ್ಟೈಲ್ ಕಾಪಿ ಮಾಡಿದ್ರಾ ಬಾಲಿವುಡ್ ನಟ?]

  ಲಂಡನ್ ನಲ್ಲಿ ಶಿವಣ್ಣ, ಸುದೀಪ್ ಜೊತೆ ನಟಿ ಆಮಿ ಜಾಕ್ಸನ್ ಸಹ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದು, ಲಂಡನ್, ಬ್ಯಾಂಕಾಕ್ ಮತ್ತು ಆಸ್ಟ್ರೇಲಿಯಾ ದಲ್ಲಿ 'ದಿ ವಿಲನ್' ಚಿತ್ರೀಕರಣಕ್ಕೆ ತಯಾರಿ ನಡೆದಿದೆ. ಮುಂದೆ ಓದಿ...

  ಜೂನ್ 15ಕ್ಕೆ

  ಜೂನ್ 15ಕ್ಕೆ

  'ದಿ ವಿಲನ್' ಸಿನಿಮಾದ ಕೆಲ ಮುಖ್ಯ ದೃಶ್ಯಗಳ ಚಿತ್ರೀಕರಣಕ್ಕಾಗಿ ಜೂನ್ 15ಕ್ಕೆ ಚಿತ್ರತಂಡ ಲಂಡನ್ ಗೆ ಹಾರಲಿದೆ.['ದಿ ವಿಲನ್' ಹೀರೋಯಿನ್ ಬಗ್ಗೆ ಬ್ರೇಕ್ ಆಗಿರುವ ಬ್ಲಾಸ್ಟಿಂಗ್ ನ್ಯೂಸ್ ಇದು.!]

  8 ದಿನಗಳ ಕಾಲ ಚಿತ್ರೀಕರಣ

  8 ದಿನಗಳ ಕಾಲ ಚಿತ್ರೀಕರಣ

  ಜೂನ್ 15ಕ್ಕೆ ಲಂಡನ್ ನಲ್ಲಿ ಶುರುವಾಗುವ 'ದಿ ವಿಲನ್' ಶೂಟಿಂಗ್ ಜೂನ್ 23 ರವರೆಗೆ ಅಂದರೆ 8 ದಿನಗಳ ಕಾಲ ನಡೆಯಲಿದೆಯಂತೆ.

  ಯಾವ ದೃಶ್ಯದ ಚಿತ್ರೀಕರಣ?

  ಯಾವ ದೃಶ್ಯದ ಚಿತ್ರೀಕರಣ?

  ಶಿವರಾಜ್ ಕುಮಾರ್ ಮತ್ತು ಸುದೀಪ್ ಇಬ್ಬರು ಇರುವ ದೃಶ್ಯಗಳ ಚಿತ್ರೀಕರಣ ಲಂಡನ್ ನಲ್ಲಿ ನಡೆಯಬೇಕಿದೆ. ಅಲ್ಲದೆ ಕೆಲ ಹಾಡಿನ ಚಿತ್ರೀಕರಣ ಸಹ ಅಲ್ಲೇ ಮಾಡುವ ಯೋಜನೆ ಇದೆ ಅಂತ ಹೇಳಲಾಗಿದೆ.['ದಿ ವಿಲನ್' ಚಿತ್ರೀಕರಣಕ್ಕಾಗಿ ಲಂಡನ್ ಗೆ ಹಾರಲಿದೆ ಪ್ರೇಮ್ ಅಂಡ್ ಟೀಂ.!]

  ಭರ್ಜರಿ ತಯಾರಿ

  ಭರ್ಜರಿ ತಯಾರಿ

  ನಿರ್ದೇಶಕ ಪ್ರೇಮ್, ನಿರ್ಮಾಪಕ ಸಿ.ಆರ್.ಮನೋಹರ್ ಸೇರಿದಂತೆ 20 ಜನರ ತಂಡ ಲಂಡನ್ ವಿಮಾನವೆರಲಿದೆ.

  'ದಿ ವಿಲನ್' ಜೊತೆ ಆಮಿ ಜಾಕ್ಸನ್

  'ದಿ ವಿಲನ್' ಜೊತೆ ಆಮಿ ಜಾಕ್ಸನ್

  ಲಂಡನ್ ನಲ್ಲಿ ನಡೆಯುವ ಚಿತ್ರೀಕರಣದಲ್ಲಿ ಆಮಿ ಜಾಕ್ಸನ್ ಸಹ ಭಾಗಿಯಾಗಲಿದ್ದಾರೆ. ಅದೇ ಕಾರಣಕ್ಕೆ ಲಂಡನ್ ಗೆ ಹೋಗುವುದಕ್ಕೂ ಮುಂಚೆ ಪ್ರೇಮ್ ನಾಯಕಿಯ ಆಯ್ಕೆಯನ್ನು ಫೈನಲ್ ಮಾಡಿದ್ದಾರೆ.[ಶಿವಣ್ಣನ 'ವಿಲನ್ ಹೇರ್ ಸ್ಟೈಲ್'ಗೆ ಕ್ರೇಜ್ ನೋಡ್ರಪ್ಪಾ!]

  ಮುಂದಿನ ಹಂತದ ಚಿತ್ರೀಕರಣ

  ಮುಂದಿನ ಹಂತದ ಚಿತ್ರೀಕರಣ

  ಲಂಡನ್ ನಲ್ಲಿ 8 ದಿನದ ಶೂಟಿಂಗ್ ಬಳಿಕ ಬ್ಯಾಂಕಾಕ್ ಮತ್ತು ಆಸ್ಟ್ರೇಲಿಯಾ ದಲ್ಲಿ ಮುಂದಿನ ಹಂತದ ಚಿತ್ರೀಕರಣ ನಡೆಯಲಿದೆ.

  ಬಿಗ್ ಬಜೆಟ್ ಮೂವಿ

  ಬಿಗ್ ಬಜೆಟ್ ಮೂವಿ

  'ದಿ ವಿಲನ್' ಕನ್ನಡ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದಾಗಿದೆ. ಮೊದಲ ಬಾರಿಗೆ ಚಿತ್ರದಲ್ಲಿ ಶಿವಣ್ಣ ಮತ್ತು ಸುದೀಪ್ ಒಟ್ಟಿಗೆ ನಟಿಸಿದ್ದು, 'ದಿ ವಿಲನ್' ಬಗ್ಗೆ ಗಾಂಧಿನಗರದಲ್ಲಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇದೆ.['ದಿ ವಿಲನ್' ಚಿತ್ರಕ್ಕಾಗಿ ಸುದೀಪ್ 'ಹಿಂದಿನ' ಅವತಾರ.. ನಿಮ್ಮ ಕಣ್ಣಿಗೆ ಕಂಡಿಲ್ಲದ್ದು.!]

  English summary
  'The Villain' team will be flying to London on June 15th for shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X