twitter
    For Quick Alerts
    ALLOW NOTIFICATIONS  
    For Daily Alerts

    ಒಟಿಟಿಯಲ್ಲೂ ಅಬ್ಬರ ಮುಂದುವರೆಸಿದ ಗರುಡ ಗಮನ ವೃಷಭ ವಾಹನ

    |

    ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಗರುಡ ಗಮನ ವೃಷಭ ವಾಹನ' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತ್ತು. ಇದೀಗ ಕೆಲವು ದಿನಗಳ ಹಿಂದೆ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು ಅಲ್ಲಿಯೂ ಅಬ್ಬರಿಸುತ್ತಿದೆ.

    ಜೀ5 ಕನ್ನಡದಲ್ಲಿ ಜನವರಿ 13 ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ಬಿಡುಗಡೆ ಆಗಿ ಮೂರು ದಿನ ಪೂರ್ಣ ಕಳೆಯುವ ಮುನ್ನವೇ 8 ಕೋಟಿಗೂ ಹೆಚ್ಚು ನಿಮಿಷಗಳಷ್ಟು ಸಿನಿಮಾ ಸ್ಟ್ರೀಮಿಂಗ್ ಆಗಿದೆ. ಇದು ಸಾಮಾನ್ಯದ ದಾಖಲೆಯಲ್ಲ.

    ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಆಧಾರದಲ್ಲಿ ಹಿಟ್-ಫ್ಲಾಪ್ ಲೆಕ್ಕ ಹಾಕಿದಂತೆ ಒಟಿಟಿಗಳಲ್ಲಿ ಸಿನಿಮಾ ಎಷ್ಟು ಬಾರಿ ನೋಡಲ್ಪಟ್ಟಿತೆಂದು ಅಥವಾ ಎಷ್ಟು ನಿಮಿಷಗಳ ಕಾಲ ಅಥವಾ ಗಂಟೆಗಳ ಕಾಲ ಸ್ಟ್ರೀಮ್ ಆಯಿತೆಂದು ಲೆಕ್ಕ ಹಾಕಲಾಗುತ್ತದೆ.

    ಜೀ5 ಒಟಿಟಿಯಲ್ಲಿ ಬಿಡುಗಡೆ ಆಗಿರುವ 'ಗರುಡ ಗಮನ ವೃಷಭ ವಾಹನ' ಸಿನಿಮಾವು ಈವರೆಗೆ 8 ಕೋಟಿ ನಿಮಿಷ ಅಂದರೆ 13.33 ಲಕ್ಷ ಗಂಟೆಗೂ ಹೆಚ್ಚು ಕಾಲ ಸ್ಟ್ರೀಮ್ ಆಗಿದೆ. ದೇಶ ಮಾತ್ರವೇ ಅಲ್ಲದೆ ವಿದೇಶಗಳಲ್ಲಿಯೂ ಸಿನಿಮಾವನ್ನು ಜನ ಮುಗಿಬಿದ್ದು ನೋಡಿದ್ದಾರೆ, ನೋಡುತ್ತಿದ್ದಾರೆ.

    Garuda Gamana Vrishaba Vahana Streams 8 Crore Minutes In Three Days On OTT

    ಜೀ5 ಒಟಿಟಿಯಲ್ಲಿಯೇ ಬಿಡುಗಡೆ ಆಗಿದ್ದ ಮತ್ತೊಂದು ಕನ್ನಡದ ಸಿನಿಮಾ 'ಭಜರಂಗಿ 2' ಸಹ ಬಹಳ ಚೆನ್ನಾಗಿ ಸ್ಟ್ರೀಮ್ ಆಗಿತ್ತು. 16 ದಿನಗಳಲ್ಲಿ 10 ಕೋಟಿ ನಿಮಿಷ ಸ್ಟ್ರೀಮ್ ಆಗಿತ್ತು. ಆದರೆ 'ಗರುಡ ಗಮನ ವೃಷಭ ವಾಹನ' ಸಿನಿಮಾ ಕೇವಲ ಮೂರು ದಿನಗಳಲ್ಲಿ 8 ಕೋಟಿ ನಿಮಿಷ ಸ್ಟ್ರೀಮ್ ಆಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.

    ಒಟಿಟಿಯಲ್ಲಿ 'ಗರುಡ ಗಮನ ವೃಷಭ ವಾಹನ' ಸಿನಿಮಾ ನೋಡಿದ ತೆಲುಗು ಹಾಗೂ ಬಾಲಿವುಡ್ ಸಿನಿಮಾಗಳನ್ನು ನಿರ್ದೇಶಿಸಿರುವ ದೇವಕಟ್ಟ ಸಿನಿಮಾದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, "2021ರಲ್ಲಿ ತೆರೆಕಂಡ ಭಾರತೀಯ ಸಿನಿಮಾಗಳ ಪೈಕಿ ಅತ್ಯುತ್ತಮ ಚಲನಚಿತ್ರ 'ಗರುಡ ಗಮನ ವೃಷಭ ವಾಹನ'. ನನಗೆ ಪವರ್ ಇದ್ದಿದ್ದರೆ ಆಸ್ಕರ್‌ಗೆ ಈ ಸಿನಿಮಾವನ್ನು ಆಯ್ಕೆ ಮಾಡುತ್ತಿದ್ದೆ. 'ಗರುಡ ಗಮನ ವೃಷಭ ವಾಹನ' ಚಿತ್ರ‌ವನ್ನು ನನ್ನ ಗೆಳಯರೊಂದಿಗೆ ನೋಡಿದ್ದೆ. ಸಿನಿಮಾ ಚಿತ್ರೀಕರಿಸಿದ ರೀತಿ ಅದ್ಭುತವಾಗಿದೆ. ಸಿನಿಮಾ‌ ಸಿಕ್ಕಾಪಟ್ಟೆ ಇಷ್ಟ ಆಗಿದ್ದರಿಂದ ಥಿಯೇಟರ್‌ಗೆ ಮತ್ತೆ ಹೋಗಿ ನೋಡಿದಾಗ ಇರಲಿಲ್ಲ. ಈ ಕಾರಣಕ್ಕೆ ಬೇಸರ ಆಗಿತ್ತು" ಎಂದಿದ್ದಾರೆ.

    'ಗರುಡ ಗಮನ ವೃಷಭ ವಾಹನ' ಸಿನಿಮಾವನ್ನು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹರಿಯಾಗಿಯೂ, ರಾಜ್ ಬಿ ಶೆಟ್ಟಿ ಶಿವನಾಗಿಯೂ ನಟಿಸಿದ್ದಾರೆ. ಮಂಗಳಾದೇವಿಯಲ್ಲಿ ನಡೆವ ಒಂದು ಗ್ಯಾಂಗ್‌ಸ್ಟರ್‌ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ರಕ್ಷಿತ್ ಶೆಟ್ಟಿ ಪ್ರೆಸೆಂಟ್ ಮಾಡಿದ್ದಾರೆ.

    English summary
    Kannada movie Garuda Gamana Vrishabha Vahana movie streams 8 crore plus minutes in just three days on Zee5 OTT platform.
    Saturday, January 15, 2022, 21:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X