twitter
    For Quick Alerts
    ALLOW NOTIFICATIONS  
    For Daily Alerts

    ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ಜನ ನೋಡಿದ ವೆಬ್ ಸರಣಿ ಇದು

    |

    ನೆಟ್‌ಫ್ಲಿಕ್ಸ್‌ ನೀಡುತ್ತಿರುವ ಗುಣಮಟ್ಟದ ವೆಬ್ ಸರಣಿ, ಸಿನಿಮಾಗಳು, ಡಾಕ್ಯುಮೆಂಟರಿಗಳನ್ನು ಇನ್ಯಾವುದೇ ಒಟಿಟಿಗಳು ನೀಡುತ್ತಿಲ್ಲ. ಬೇರೆ ಒಟಿಟಿಗಳಿಗೆ ಹೋಲಿಸಿದರೆ ಬಹಳ ದುಬಾರಿಯಾದರೂ ಗುಣಮಟ್ಟದ ಕಾರಣದಿಂದಾಗಿ ನೆಟ್‌ಫ್ಲಿಕ್ಸ್‌ ಈಗಲೂ ನಂಬರ್ 1 ಒಟಿಟಿ.

    ನೆಟ್‌ಫ್ಲಿಕ್ಸ್‌ನ ವೆಬ್ ಸರಣಿಗಳೆ ಪ್ರತ್ಯೇಕವಾದ ವೀಕ್ಷಕ ಬಳಗ, ಅಭಿಮಾನಿ ಬಳಗವೇ ಇದೆ. ಹಲವು ಅತ್ಯುತ್ತಮ ವೆಬ್ ಸರಣಿಗಳನ್ನು ನೆಟ್‌ಫ್ಲಿಕ್ಸ್‌ ಹೊಂದಿದ್ದು, ವೆಬ್ ಸರಣಿಯಿಂದಲೇ ಕೋಟ್ಯಂತರ ವೀಕ್ಷಕರನ್ನು ನೆಟ್‌ಫ್ಲಿಕ್ಸ್ ಸೆಳೆದಿದೆ.

    ಕೆಲವು ದಿನಗಳ ಹಿಂದಷ್ಟೆ ಕೊರಿಯನ್‌ನ 'ಸ್ಕ್ವಿಡ್ ಗೇಮ್' ವೆಬ್ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದ್ದು, ಈ ವರೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆದ ವೆಬ್ ಸರಣಿಗಳಲ್ಲಿಯೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವೆಬ್ ಸರಣಿ ಇದಾಗಿದೆ.

    Netflixs Most Watched Web Series Squid Game

    ಹಂಗ್ ಡುಂಗ್ ಯಾಕ್ ನಿರ್ದೇಶನ ಮಾಡಿರುವ ಸ್ಕ್ವಿಡ್ ಗೇಮ್ ಅನ್ನು ಈವರೆಗೆ ವಿಶ್ವದಾದ್ಯಂತ 11 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿ ಒಂದು ತಿಂಗಳು ಸಹ ಆಗಿಲ್ಲ. ಸೆಪ್ಟೆಂಬರ್ 17 ರಂದು ಸ್ಕ್ವಿಡ್ ಗೇಮ್ ಬಿಡುಗಡೆ ಆಗಿದೆ.

    ಬಿಡುಗಡೆ ಆದ ಕೇವಲ 27 ದಿನಗಳಲ್ಲಿ 11.10 ಕೋಟಿಗೂ ಹೆಚ್ಚು ನೆಟ್‌ಫ್ಲಿಕ್ಸ್‌ ಖಾತೆಗಳಲ್ಲಿ 'ಸ್ಕ್ವಿಡ್ ಗೇಮ್' ಅನ್ನು ನೋಡಲಾಗಿದೆ. ಈ ಹಿಂದೆ 'ಬ್ರಿಡ್‌ಜರ್ಟನ್' ವೆಬ್ ಸರಣಿಯಲ್ಲಿ ಬಿಡುಗಡೆ ಆದ 27 ದಿನಗಳಲ್ಲಿ 8.20 ಕೋಟಿ ನೆಟ್‌ಫ್ಲಿಕ್ಸ್‌ ಖಾತೆಗಳ ಮೂಲಕ ನೋಡಲಾಗಿತ್ತು. 'ಬ್ರಿಡ್‌ಜರ್ಟನ್' ವೆಬ್ ಸರಣಿಯನ್ನು ಎರಡನೇ ಸ್ಥಾನಕ್ಕೆ ತಳ್ಳಿದೆ 'ಸ್ಕ್ವಿಡ್ ಗೇಮ್'.

    ಯಾವುದೇ ವೆಬ್ ಸರಣಿಯನ್ನು ಎರಡು ನಿಮಿಷ ನೋಡಿದರೆ ಅದನ್ನು ಒಂದು ವೀಕ್ಷಣೆ ಎಂದು ನೆಟ್‌ಫ್ಲಿಕ್ಸ್‌ ಪರಿಗಣಿಸುತ್ತದೆ. ಒಂದು ಖಾತೆಯಿಂದ ಗರಿಷ್ಟ ನಾಲ್ಕು ಮಂದಿ ನೆಟ್‌ಫ್ಲಿಕ್ಸ್‌ನ ಯಾವುದೇ ಕಂಟೆಂಟ್ ಅನ್ನು ನೋಡುವ ಅವಕಾಶವಿದೆ. ಆದರೆ ನೆಟ್‌ಫ್ಲಿಕ್ಸ್‌ ಒಂದು ಖಾತೆಯ ಲೆಕ್ಕವನ್ನು ಮಾತ್ರವೇ ವೀವಿಂಗ್ ಲೆಕ್ಕ ಹಾಕಲು ಬಳಸುತ್ತದೆ. ಆ ಲೆಕ್ಕದಲ್ಲಿ 'ಸ್ಕ್ವಿಡ್ ಗೇಮ್' ಅನ್ನು ಇನ್ನೂ ಹಚ್ಚಿನ ಜನ ವೀಕ್ಷಿಸಿದ್ದಾರೆ.

    'ಸ್ಕ್ವಿಡ್‌ ಗೇಮ್‌'ನ ಮೊದಲ ಸೀಸನ್ ಇದೀಗ ಬಿಡುಗಡೆ ಆಗಿದ್ದು, ಮೊದಲ ಸೀಸನ್‌ನಲ್ಲಿ ಎಂಟು ಎಪಿಸೋಡ್‌ಗಳಿವೆ. ಎಲ್ಲ ಎಪಿಸೋಡ್‌ಗಳು ಒಟ್ಟಾಗಿ ಎಂಟು ಗಂಟೆ 12 ನಿಮಿಷ ಉದ್ದವಿದೆ. ನೆಟ್‌ಫ್ಲಿಕ್ಸ್‌ನಲ್ಲಿ 'ಸ್ಕ್ವಿಡ್ ಗೇಮ್‌' ಹೊರತಾಗಿ 'ಮನಿ ಹೈಸ್ಟ್', 'ಸ್ಟ್ರೇಂಜರ್ ಥಿಂಗ್ಸ್', 'ದಿ ವಿಚ್ಚರ್', 'ಬ್ರೇಕಿಂಗ್ ಬ್ಯಾಡ್', 'ಲುಸೀಫರ್', 'ಡಾರ್ಕ್' ಇನ್ನೂ ಹಲವು ವೆಬ್ ಸೀರೀಸ್‌ಗಳು ಜನಪ್ರಿಯವಾಗಿದ್ದು ಈ ವೆಬ್ ಸರಣಿಗಳನ್ನು ಸಹ ಕೋಟ್ಯಂತರ ಮಂದಿ ವೀಕ್ಷಿಸಿದ್ದಾರೆ. ಆದರೆ ಬಿಡುಗಡೆ ಆದ ಕೇವಲ 27 ದಿನಗಳಲ್ಲಿ 11 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿರುವ ಮೊದಲ ವೆಬ್ ಸರಣಿ ಎಂಬ ಖ್ಯಾತಿ 'ಸ್ಕ್ವಿಡ್ ಗೇಮ್' ಪಾಲಾಗಿದೆ.

    ಸಾಲಗಳನ್ನು ಮಾಡಿ ಹಣಕ್ಕಾಗಿ ಪರದಾಡುತ್ತಿರುವ ಕೆಲವರನ್ನು ಕರೆದುಕೊಂಡು ಬಂದು ಮಕ್ಕಳು ಆಡುವ ಸರಳ ಆಟಗಳನ್ನು ಆಡಿಸುವ ಮುಸುಕುಧಾರಿ ಬಳಗ ಸೋತವರನ್ನು ಕೊಲ್ಲುವ ಗೆದ್ದವರಿಗೆ ದೊಡ್ಡ ಮೊತ್ತದ ಬಹುಮಾನ ನೀಡುವ ಕತೆಯನ್ನು 'ಸ್ಕ್ವಿಡ್ ಗೇಮ್' ಹೊಂದಿದೆ.

    English summary
    Netflix's most watched web series in squid game. This web series watched by 11.10 crore people across the world in just 27 days.
    Thursday, October 14, 2021, 9:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X