For Quick Alerts
  ALLOW NOTIFICATIONS  
  For Daily Alerts

  ಪಶು ವೈದ್ಯೆ ಅತ್ಯಾಚಾರ: ದುಷ್ಟರಿಗೆ ಕಠಿಣ ಶಿಕ್ಷೆ ಆಗಬೇಕು ಎಂದ ಚಿರಂಜೀವಿ

  |

  ನವೆಂಬರ್ 29 ರಂದು ಹೈದರಾಬಾದ್ ನಲ್ಲಿ ನಡೆದ ಅತ್ಯಾಚಾರ ಘಟನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ತೆಲಂಗಾಣ ಪಶು ವೈದ್ಯೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಬಗ್ಗೆ ತೆಲುಗು ಚಿತ್ರರಂಗದ ಅನೇಕ ಸ್ಟಾರ್ ಗಳು ಮಾತನಾಡಿದ್ದಾರೆ.

  ನಟ ಚಿರಂಜೀವಿ ಈ ಬಗ್ಗೆ ಮಾತನಾಡಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ತಿಳಿಸಿದ್ದಾರೆ. ಒಬ್ಬ ಅಣ್ಣನಾಗಿ ಒಬ್ಬ ತಂದೆಯಾಗಿ ಹೇಳುತ್ತಿದ್ದೇನೆ ಇಂತಹ ಘಟನೆಗಳು ಆಗದೆ ಇರುವ ಹಾಗೆ ಭಯ ಹುಟ್ಟಿಸಬೇಕು ಎಂದಿದ್ದಾರೆ. ಕಷ್ಟದ ಸಂದರ್ಭದಲ್ಲಿ ಯುವತಿಯರು ತಂತ್ರಜ್ಙಾನದ ಮೂಲಕ ಪೊಲೀಸರನ್ನು ಹೇಗೆ ಸಂಪರ್ಕ ಮಾಡಬಹುದು ಎಂದು ತಿಳಿಸಿದ್ದಾರೆ.

  ಪ್ರಿಯಾಂಕಾ ರೆಡ್ಡಿ ಅತ್ಯಾಚಾರ, ಹತ್ಯೆ: ಆ ಕರಾಳ ರಾತ್ರಿ ನಡೆದಿದ್ದೇನು?

  ನಟ ಚಿರಂಜೀವಿ ಮಾತ್ರದಲ್ಲದೆ ನಿರ್ದೇಶಕ ರಾಮ್ ಗೋಪಾಲ್ ವರ್ಮ, ಸುಕುಮಾರ್, ಪ್ರಿನ್ಸ್ ಮಹೇಶ್ ಬಾಬು, ಅನುಷ್ಕಾ ಶೆಟ್ಟಿ, ಕೀರ್ತಿ ಸುರೇಶ್, ರಶ್ಮಿಕಾ ಮಂದಣ್ಣ, ಡೈಸಿ ಶಾ, ಹನ್ಸಿಕಾ, ಜಗ್ಗೇಶ್, ಅನಿರುದ್ಧ, ಸೋನು ಸೂದ್, ಸೇರಿದಂತೆ ಅನೇಕರು ಧ್ವನಿ ಎತ್ತಿ ನ್ಯಾಯ ಬೇಕು ಎಂದು ಕೇಳಿದ್ದಾರೆ.

  ಪ್ರಿಯಾಂಕಾ ಹತ್ಯೆ: ಮಾನವ ವೇಷ ಧರಿಸಿದ ಕೆಟ್ಟ ಶೈತಾನರನ್ನು ಸುಮ್ಮನೆ ಬಿಡಬಾರದು ಎಂದ ಸಲ್ಮಾನ್ ಖಾನ್ಪ್ರಿಯಾಂಕಾ ಹತ್ಯೆ: ಮಾನವ ವೇಷ ಧರಿಸಿದ ಕೆಟ್ಟ ಶೈತಾನರನ್ನು ಸುಮ್ಮನೆ ಬಿಡಬಾರದು ಎಂದ ಸಲ್ಮಾನ್ ಖಾನ್

  26 ವರ್ಷದ ಯುವತಿ ಗುರುವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಸಮಯದಲ್ಲಿ ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿ, ಜೀವಂತವಾಗಿ ಸುಟ್ಟು ಹಾಕಿದ್ದಾರೆ. ಯುವತಿಯ ಹತ್ಯೆಗೆ ಕಾರಣರಾದ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ. ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

  English summary
  Tollywood actor Chiranjeevi react to hyderabad girl rap and murder.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X