ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಿರ್ಮಾಣದಲ್ಲಿ ಮೂಡಿಬಂದ ಲವ್ ಮಾಕ್ಟೇಲ್ ಚಿತ್ರ ಸಿಂಪಲ್ ಕಥೆಯೊಂದಿಗೆ ತಾಜಾ ನಿರೂಪಣೆಯಿಂದ ಸಿನಿ ರಸಿಕರ ಗಮನ ಸೆಳೆಯಿತು.ಕೃಷ್ಣ,ಮಿಲನಾ, ಅಮೃತಾ, ರಚನಾ ತಮ್ಮ ಪಾತ್ರಗಳ ಮುಖಾಂತರ ಪ್ರೇಕ್ಷಕರಿಗೆ ಮೋಡಿ ಮಾಡಿದರು. ಈ ಚಿತ್ರ ಒಬ್ಬ ಯುವಕನ ಜೀವನದ ಮೂರು ಹಂತಗಳಲ್ಲಿ ಮೂರು ಪ್ರೇಮ ಪ್ರಕರಣಗಳನ್ನು ಹಾಸ್ಯ ಮತ್ತು ಲವ್ಲಿಯಾಗಿ ಕಟ್ಟಿಕೊಟ್ಟಿತು.