For Quick Alerts
  ALLOW NOTIFICATIONS  
  For Daily Alerts

  BBK 9: ವಾರದ ಅತ್ಯುತ್ತಮ ಯಾರು? ವಾರದ ಕಳಪೆ ಯಾರು? ರೂಪೇಶ್ ರಾಜಣ್ಣಗೆ ಸಿಟ್ಟೇಕೆ ಬಂತು?

  |

  ಬಿಗ್‌ಬಾಸ್ ಸೀಸನ್ 09 ರ ಅಸಲಿ ಆಟ ಆರನೇ ದಿನದಂದು ಶುರುವಾಗಿದೆ. ಇಷ್ಟು ದಿನ ಪರಸ್ಪರ ಅರ್ಥ ಮಾಡಿಕೊಳ್ಳುವ ಸಮಯ ಮುಗಿದು ಈಗ ಪರಸ್ಪರರ ಬಗ್ಗೆ ವಿಮರ್ಶೆಗಳು ಆರಂಭವಾಗಿವೆ.

  ವಾರದ ಟಾಸ್ಕ್‌ಗಳು ಬಹುತೇಕ ಮುಗಿದಿದ್ದು, ಮನೆಯ ಮೊದಲ ಕ್ಯಾಪ್ಟನ್ ಆಗಿ ವಿನೋದ್ ಗೊಬ್ರಗಾಲ ಆಯ್ಕೆ ಆಗಿದ್ದಾರೆ. ಕ್ಯಾಪ್ಟೆನ್ಸಿ ಟಾಸ್ಕ್‌ನಲ್ಲಿ ವಿನೋದ್‌ಗೆ ದಿವ್ಯಾ ಉರುಡುಗ ಭಾರಿ ಪೈಪೋಟಿಯನ್ನೇ ನೀಡಿದ್ದರು. ಆದರೆ ಗೆಲ್ಲಲು ಯಶಸ್ವಿಯಾಗಲಿಲ್ಲ.

  ಕ್ಯಾಪ್ಟೆನ್ಸಿ ಆಯ್ಕೆಯ ಬಳಿಕ ಶುರುವಾಯಿತು ವಾರದ ಅತ್ಯುತ್ತಮ ಹಾಗೂ ಕಳಪೆ ಸ್ಪರ್ಧಿಯನ್ನು ಆರಿಸುವ ಟಾಸ್ಕ್. ಇದರಿಂದಾಗಿ ಮನೆಯವರ ನಡುವೆ ತುಸು ಬಿಸಿ-ಬಿಸಿ ಚರ್ಚೆಗಳು ಸಹ ಏರ್ಪಟ್ಟವು. ಹಾಗಿದ್ದರೆ ಯಾರು ಯಾರನ್ನು ಕಳಪೆ ಎಂದರು, ಯಾರು ಯಾರನ್ನು ಉತ್ತಮ ಎಂದರು?

  ರಾಕೇಶ್ ಅಡಿಗೆ ಕಳಪೆ ಎಂದಿದ್ದು ಯಾರನ್ನು?

  ರಾಕೇಶ್ ಅಡಿಗೆ ಕಳಪೆ ಎಂದಿದ್ದು ಯಾರನ್ನು?

  ಮೊದಲು ಆರಂಭಿಸಿದ್ದು ರಾಕೇಶ್ ಅಡಿಗ, ಬಿಗ್‌ಬಾಸ್‌ನ ಕೆಲವು ನಿಯಮಗಳನ್ನು ಸರಿಯಾಗಿ ಪಾಲಿಸಲಿಲ್ಲ ಎಂಬ ಕಾರಣಕ್ಕೆ ರಾಕೇಶ್ ಅರುಣ್ ಸಾಗರ್ ಅನ್ನು ಕಳಪೆ ಎಂದರು ಆದರೆ ಅವರಿಂದಾಗಿಯೇ ಸಾಕಷ್ಟು ಉತ್ತಮನಾಗಿ ಹೊರಹೊಮ್ಮುತ್ತಿರುವ ನವಾಜ್ ಅನ್ನು ಉತ್ತಮ ಎಂದರು. ದೀಪಿಕಾ ದಾಸ್, ಅರುಣ್ ಅವರಿಗೆ ಅತ್ಯುತ್ತಮ ಕೊಟ್ಟರು, ಕಾವ್ಯಾಶ್ರೀಗೆ ಕಳಪೆ ಕೊಟ್ಟರು. ದಿವ್ಯಾ ಉರುಡುಗ, ನವಾಜ್‌ಗೆ ಕಳಪೆ ಕೊಟ್ಟರು, ಆರ್ಯವರ್ಧನ್‌ಗೆ ಅತ್ಯುತ್ತಮ ಬಿರುದು ಕೊಟ್ಟರು.

  ಪ್ರಶಾಂತ್ ಸಂಬರ್ಗಿ ಕಳಪೆ ಎಂದಿದ್ದು ಯಾರನ್ನು?

  ಪ್ರಶಾಂತ್ ಸಂಬರ್ಗಿ ಕಳಪೆ ಎಂದಿದ್ದು ಯಾರನ್ನು?

  ಬಳಿಕ ಬಂದ ಸಾನ್ಯಾ ಐಯ್ಯರ್, ಅನುಪಮಾ ಅವರಿಗೆ ಅತ್ಯುತ್ತಮ ನೀಡಿದರು. ಬಿಗ್‌ಬಾಸ್ ನಿಯಮಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅರುಣ್ ಅವರಿಗೆ ಕಳಪೆ ಕೊಟ್ಟರು. ಬಳಿಕ ಬಂದ ರೂಪೇಶ್, ಆರ್ಯವರ್ಧನ್‌ಗೆ ಅತ್ಯುತ್ತಮ ಹಾಗೂ ಅರುಣ್‌ಗೆ ಕಳಪೆ ನೀಡಿದರು. ಬಳಿಕ ಬಂದ ಅನುಪಮಾ, ಆರ್ಯವರ್ಧನ್‌ ಜೊತೆಗಾರ ದರ್ಶ್ ಅವರಿಗೆ ಅತ್ಯುತ್ತಮ ನೀಡಿದರು. ಕಳಪೆಯನ್ನು ರೂಪೇಶ್ ರಾಜಣ್ಣ ಅವರಿಗೆ ನೀಡಿದರು. ಮನೆ ಗೆಲಸ ಮಾಡದ ನವಾಜ್‌ಗೆ ಪ್ರಶಾಂತ್ ಸಂಬರ್ಗಿ ಕಳಪೆ ಕೊಟ್ಟರು ಬಳಿಕ ಅರುಣ್ ಸಾಗರ್‌ಗೆ ಅತ್ಯುತ್ತಮ ನೀಡಿದರು.

  ನವಾಜ್ ಕಳಪೆ ಎಂದಿದ್ದು ಯಾರನ್ನು?

  ನವಾಜ್ ಕಳಪೆ ಎಂದಿದ್ದು ಯಾರನ್ನು?

  ನಟಿ ಅಮೂಲ್ಯಾ ಆರ್ಯವರ್ಧನ್ ಅವರಿಗೆ ಉತ್ತಮ ಹಾಗೂ ನವಾಜ್‌ಗೆ ಕಳಪೆ ನೀಡಿದರು. ನಟಿ ಮಯೂರಿ ಅತ್ಯುತ್ತಮವನ್ನು ಅರುಣ್ ಸಾಗರ್‌ಗೂ, ಕಳಪೆಯನ್ನು ನವಾಜ್‌ಗೂ ನೀಡಿದರು. ನವಾಜ್‌, ತಮ್ಮ ಗುರು ಅರುಣ್ ಸಾಗರ್‌ಗೆ ಉತ್ತಮ ಹಾಗೂ ತಮಗೆ ತಾವೇ ಕಳಪೆ ಕೊಟ್ಟುಕೊಂಡರು. ಬಳಿಕ ಕಳಪೆಯನ್ನು ರೂಪೇಶ್ ರಾಜಣ್ಣಗೆ ನೀಡಿದರು. ನೇಹಾ ಗೌಡ ಅವರು ಅರುಣ್ ಸಾಗರ್‌ಗೆ ಉತ್ತಮ ಹಾಗೂ ರೂಪೇಶ್ ರಾಜಣ್ಣಗೆ ಕಳಪೆ ನೀಡಿದರು. ಬಳಿಕ ಬಂದ ಕಾವ್ಯಾಶ್ರೀ ಸಹ ರೂಪೇಶ್ ರಾಜಣ್ಣಗೆ ಕಳಪೆ ಪಟ್ಟ ನೀಡಿದರು. ಅರುಣ್ ಸಾಗರ್‌ಗೆ ಉತ್ತಮ ನೀಡಿದರು. ಬಳಿಕ ಐಶ್ವರ್ಯಾ ಪಿಸೆ ಸಹ ಉತ್ತಮವನ್ನು ಅರುಣ್ ಸಾಗರ್‌ಗೆ ಹಾಗೂ ಕಳಪೆ ರೂಪೇಶ್ ರಾಜಣ್ಣಗೆ ನೀಡಿದರು.

  ಸಿಟ್ಟು ಮಾಡಿಕೊಂಡು ಹೊರಟ ರೂಪೇಶ್ ರಾಜಣ್ಣ

  ಸಿಟ್ಟು ಮಾಡಿಕೊಂಡು ಹೊರಟ ರೂಪೇಶ್ ರಾಜಣ್ಣ

  ನಂತರ ಬಂದ ದರ್ಶ್ ಚಂದಪ್ಪ, ಕಳಪೆ ಪಟ್ಟವನ್ನು ನಿಯಮ ಪಾಲಿಸದ ಅರುಣ್ ಸಾಗರ್‌ಗೆ ನೀಡಿದರು. ಉತ್ತಮವನ್ನು ಗುರೂಜಿ ಅವರಿಗೆ ನೀಡಿದರು. ನಂತರ ಬಂದ ಅರುಣ್ ಸಾಗರ್, ಆರ್ಯವರ್ಧನ್ ಅನ್ನು ಅತ್ಯುತ್ತಮ ಎಂದರು, ರೂಪೇಶ್ ಶೆಟ್ಟಿಯನ್ನು ಕಳಪೆ ಎಂದರು ಮಾತ್ರವಲ್ಲ ಅತ್ಯಂತ ಕಳಪೆ ಎಂದು ಸಹ ಹೇಳಿದರು. ಅವರಿಗೆ ಎಲ್ಲರೊಟ್ಟಿಗೆ ಬೆರೆಯುವ ಗುಣವಿಲ್ಲವೆಂದರು. ಆರ್ಯವರ್ಧನ್ ಅವರು ದಿವ್ಯಾ ಉರುಡುಗ ಅವರಿಗೆ ಉತ್ತಮ ಹಾಗೂ ರೂಪೇಶ್ ರಾಜಣ್ಣಗೆ ಕಳಪೆ ನೀಡಿದರು. ಬಳಿಕ ಬಂದ ರೂಪೇಶ್ ರಾಜಣ್ಣ, ತಮ್ಮನ್ನು ತಾವು ವಿವರಿಸಿಕೊಳ್ಳಲು ಯತ್ನಿಸಿದರು. ಆದರೆ ದೀಪಿಕಾ ದಾಸ್ ಮಧ್ಯದಲ್ಲಿ ಮಾತನಾಡಿದ್ದರಿಂದ ಸಿಟ್ಟಾಗಿ ಹೊರಗೆ ಹೋಗಲು ಯತ್ನಿಸಿದರು. ಬಳಿಕ ಅವರನ್ನು ರಾಕೇಶ್, ಅರುಣ್ ಅವರುಗಳು ಸಮಾಧಾನ ಮಾಡಿ ಕರೆತಂದರು. ಕೊನೆಗೆ ಅವರು ತಮ್ಮ ವಿರೋಧಿ ಪ್ರಶಾಂತ್ ಸಂಬರ್ಗಿಗೆ ಅತ್ಯುತ್ತಮ ನೀಡಿದರು. ಕಳಪೆಯನ್ನು ಐಶ್ವರ್ಯಾ ಪಿಸೆಗೆ ನೀಡಿದರು. ಕೊನೆಗೆ ಹೆಚ್ಚು ಕಳಪೆ ಪಡೆದಿದ್ದ ರೂಪೇಶ್ ರಾಜಣ್ಣ ಜೈಲು ಪಾಲಾದರು. ಅರುಣ್ ಸಾಗರ್ ಮೆಡಲ್ ಪಡೆದುಕೊಂಡರು.

  English summary
  Bigg Boss season 09: house members pick best and worst member of the week. Finaly Arun Sagar awarded as best and Roopesh Rajanna decided as worst.
  Saturday, October 1, 2022, 10:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X