twitter
    For Quick Alerts
    ALLOW NOTIFICATIONS  
    For Daily Alerts

    ಕಾಶೀ ಗುರುಗಳನ್ನ ಗುಣಗಾನ ಮಾಡಿದ ಶಿಷ್ಯವೃಂದ: ಯಾರು ಏನು ಹೇಳಿದರು?

    By Bharath Kumar
    |

    Recommended Video

    ಗುರುಗಳಾದ ಕಾಶೀನಾಥ್ ರ ಅಗಲಿಕೆಗೆ ಕಣ್ಣೀರಿಟ್ಟ ನಟ ಉಪೇಂದ್ರ | Filmibeat Kannada

    ಕಾಶೀನಾಥ್ ಕನ್ನಡ ಚಿತ್ರರಂಗದಲ್ಲಿ ಅನೇಕರಿಗೆ ಗಾಡ್ ಫಾದರ್ ಆಗಿದ್ದಾರೆ. ಅವರ ಜೊತೆಯಲ್ಲಿ ಕೆಲಸ ಮಾಡಿದ ಹಲವು ಪ್ರತಿಭೆಗಳು ಇಂದು ಸ್ಯಾಂಡಲ್ ವುಡ್ ನಲ್ಲಿ ಅತ್ಯುನ್ನುತ ಸ್ಥಾನದಲ್ಲಿದ್ದಾರೆ.

    ರಿಯಲ್ ಸ್ಟಾರ್ ಉಪೇಂದ್ರ, ಮುರುಳಿ ಮೋಹನ್, ವಿ.ಮನೋಹರ್, ಬ್ಯಾಂಕ್ ಜನಾರ್ಧನ್, ಸತ್ಯಭಾಮಾ, ಹೀಗೆ ಇನ್ನು ಹಲವರು ಕಾಶೀನಾಥ್ ಅವರ ಶಿಷ್ಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.[ಕಾಶೀನಾಥ್ ಅವರು ತಮ್ಮ ವಯಸ್ಸು ಹೇಳೋದಿಲ್ಲ ಯಾಕೆ?]

    ತೆರೆ ಮೇಲೆ ಕಾಶೀನಾಥ್ ಹೇಗಿದ್ದರು ಎಂಬುದು ಅವರ ಸಿನಿಮಾಗಳಲ್ಲಿ ನೋಡಿದ್ದೀರಿ. ಆದ್ರೆ, ತೆರೆ ಹಿಂದೆ ಕಾಶೀನಾಥ್ ಹೇಗಿದ್ದರು ಎಂದು ಯಾರಿಗೂ ಗೊತ್ತಿಲ್ಲ. ಈ ವಿಷ್ಯವನ್ನ ಕಾಶೀನಾಥ್ ಶಿಷ್ಯರು 'ವೀಕೆಂಡ್ ಚಿತ್ ರಮೇಶ್' ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಹಾಗಾದ್ರೆ, ಕಾಶೀನಾಥ್ ಬಗ್ಗೆ ಯಾರು ಏನು ಹೇಳಿದರು ಅಂತ ಮುಂದೆ ಓದಿ.........

    ವಿ.ಮನೋಹರ್

    ವಿ.ಮನೋಹರ್

    ''ಬೆಂಗಳೂರು ಅಂತಹ ಊರಿನಲ್ಲಿ ಊಟ, ತಿಂಡಿ, ಮಲಗೊದಕ್ಕೆ ಜಾಗ ಯಾರು ಕೊಡಲ್ಲ. ಆದ್ರೆ, ನೀವು ಎಲ್ಲ ನಮಗೆ ಮಾಡಿಕೊಟ್ರಿ. ನಿಮ್ಮ ಖುಣವನ್ನ ತೀರಿಸುವುದಕ್ಕೆ ಸಾಧ್ಯವಿಲ್ಲ. ಟೈಮಿಂಗ್ಸ್ ಹೇಳಿಕೊಟ್ಟಿದ್ದೀರ. ಎಲ್ಲ ಪ್ರತಿಭೆಗಳ ಕಾಶೀರಾಮೇಶ್ವರ ಈ ಕಾಶೀ ಸರ್. ಎಲ್ಲರು ಕಾಯುತ್ತಿರುತ್ತಾರೆ ಇವರ ಗುರುಕುಲ ಸೇರಬೇಕು ಎಂದು. ನಮಗೆ ಆ ಅವಕಾಶ ಸಿಕ್ಕಿದೆ''- ವಿ.ಮನೋಹರ್, ಸಂಗೀತ ನಿರ್ದೇಶಕ['ಅನುಭವ' ಚಿತ್ರದಿಂದ ಕಾಶೀನಾಥ್ ಅವರಿಗಾದ 'ಅನುಭವ' ಎಂತಹದ್ದು ಅಂತೀರಾ?]

    ಮುರುಳಿ ಮೋಹನ್

    ಮುರುಳಿ ಮೋಹನ್

    ''ಕಾಶೀನಾಥ್ ಅವರ ಜೊತೆಯಲ್ಲಿ ಕೆಲಸ ಮಾಡಬೇಕಾದರೆ, ಅದು ಸಿನಿಮಾ ರೀತಿ ಇರಲಿಲ್ಲ. ಅದು ನಮಗೆ ಮನೆಯಾಗಿತ್ತು. ಕನಸುಗಳನ್ನ ಬಹಳ ಚೆನ್ನಾಗಿ ಪ್ರೋತ್ಸಾಗಿಸುತ್ತಿದ್ದರು. ಸ್ವಂತಂತ್ರವಾಗಿ ಒಂದು ಸಿನಿಮಾ ನಿರ್ದೇಶನ ಮಾಡ್ತಿನಿ ಸರ್ ಅಂದೆ. ಒಳ್ಳೆಯದಾಗಲಿ ಮಾಡು ಅಂದ್ರು'' - ಮುರುಳಿ ಮೋಹನ್, ನಿರ್ದೇಶಕ

    ಸತ್ಯ ಭಾಮಾ

    ಸತ್ಯ ಭಾಮಾ

    ''ನಿಮ್ಮ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಿಂದ ಹಿಡಿದು, ಎಲ್ಲ ಪಾತ್ರಗಳಿಗೂ ನೀವೇ ಆಕ್ಷನ್ ಮಾಡಿ ಹೇಳಿಕೊಡ್ತಿದ್ರಿ. ಅದೇ ನಿಮ್ಮ ದೊಡ್ಡತನ. ನಿಮ್ಮ ಗರಡಿಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಎಂದುಕೊಳ್ಳುತ್ತೇನೆ. ಕಾಶೀನಾಥ್ ಅವರ ಬಗ್ಗೆ ಬಹಳ ದೊಡ್ಡ ಅಭಿಮಾನ, ಯಾರ ಬಳಿಯೂ ಸಿಟ್ಟು ಮಾಡಿಕೊಂಡಿಲ್ಲ. ಅವರಿಗೆ ಈ ಸ್ಥಾನ ಸಿಕ್ಕಿದ್ದು ನನಗೆ ಸಿಕ್ಕಂತೆ ಆಗಿದೆ''- ಸತ್ಯ ಭಾಮಾ, ನಟಿ['ರಿಯಲ್ ಗುರು' ಕಾಶೀನಾಥ್ ಗೆ ರಿಯಲ್ ಸ್ಟಾರ್ ಉಪೇಂದ್ರ ಕ್ಷಮೆ ಕೇಳಿದ್ಯಾಕೆ?]

    ಸುನೀಲ್ ಕುಮಾರ್ ದೇಸಾಯಿ

    ಸುನೀಲ್ ಕುಮಾರ್ ದೇಸಾಯಿ

    ''ಅನುಭವ' ಸಾಧಾರಣವಾದ ಸಿನಿಮಾವಲ್ಲ. ತುಂಬಾ ಹಾಸ್ಯಮಯವಾಗಿ ಕೊಟ್ಟಿದ್ದೀರ. ಅಂತಹದ್ದೇ ಅದನ್ನ ಮೀರಿಸುವಂತಹದ್ದೇ ಇನ್ನೊಂದು ಸಿನಿಮಾ ಮಾಡ್ಬೇಕು ಎನ್ನುವುದೇ ನನ್ನ ಅಭಿಲಾಷೆ. ಆ ಚಿತ್ರದಲ್ಲಿ ನಾನು ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡ್ತಿನಿ''- ಸುನೀಲ್ ಕುಮಾರ್ ದೇಸಾಯಿ, ನಿರ್ದೇಶಕ['ಪುಟ್ಟಣ್ಣ ಕಣಗಾಲ್' ಬಳಿ ಅಸಿಸ್ಟಂಟ್ ಆಗಲು ಕಾಶೀನಾಥ್ ನಿರಾಕರಿಸಿದ್ದೇಕೆ?]

    ಬ್ಯಾಂಕ್ ಜನಾರ್ಧನ್

    ಬ್ಯಾಂಕ್ ಜನಾರ್ಧನ್

    ''ನಾನು ಚಿತ್ರರಂಗದಲ್ಲಿ ಆಸೆನೇ ಬಿಟ್ಟುಬಿಟ್ಟಿದ್ದೆ. ಯಾಕಂದ್ರೆ, ಸಣ್ಣ ಸಣ್ಣ ಪಾತ್ರಗಳು ಮಾಡ್ತಿದ್ದೆ. ಯಾಕೋ ಬೇಜಾರಾಗಿ ಸಿನಿಮಾ ಬಿಟ್ಟು, ಮತ್ತೆ ಬ್ಯಾಂಕಿಗೆ ಹೋಗು ಬಿಡೋಣ ಅಂತ ನಿರ್ಧರಿಸಿದ್ದೆ. ಆಗ ನನಗೆ ಒಂದು ಕರೆ ಬಂತು ಕಾಶೀನಾಥ್ ಅವರು ಕರೆತಿದ್ದಾರೆ ಎಂದು. ಹೋದೆ, ಮೇಕಪ್ ಮಾಡಿಸಿದ್ರು, ಡೈಲಾಗ್ ಕೊಟ್ರು ಹೇಳದೆ. ಈ ಸಿನಿಮಾಗೆ ನಾನು ಹೀರೋ ಅಲ್ಲ, ನೀನೇ ನಿಜವಾದ ಹೀರೋ ಅಂದ್ರು. ನನಗೆ ಚಿತ್ರರಂಗದಲ್ಲಿ ಒಂದು ವಿಶಿಷ್ಟ ಸ್ಥಾನ ಕೊಟ್ಟಿದ್ದು ಅಂದ್ರೆ ಕಾಶೀನಾಥ್ ಅವರು. ಪ್ರತಿಯೊಂದು ಸಿನಿಮಾ ಮಾಡಬೇಕಾದರೂ ಗುರುಗಳನ್ನ ನೆನಸಿಕೊಳ್ಳುತ್ತೇನೆ''- ಬ್ಯಾಂಕ್ ಜನಾರ್ಧನ್,ನಟ[ಶಿಷ್ಯ ಉಪೇಂದ್ರ ಆಡಿದ ಮಾತಿಗೆ ಕಣ್ಣೀರಿಟ್ಟ ಗುರು ಕಾಶೀನಾಥ್!]

    ಟೆನ್ನಿಸ್ ಕೃಷ್ಣ

    ಟೆನ್ನಿಸ್ ಕೃಷ್ಣ

    ''ಪಾತ್ರಗಳಿಗೆ ಏನಾದರೂ ವಿಶೇಷವಾದ ಗೆಟಪ್ ಗಳನ್ನ ಕೊಡ್ತಿದ್ರು, ನನಗೆ ತುಂಬಾ ಚೆನ್ನಾಗಿ ಮೇಕಪ್ ಮಾಡಿಸುತ್ತಿದ್ದರು''- ಟೆನ್ನಿಸ್ ಕೃಷ್ಣ, ನಟ['ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಿನಲ್ಲಿ 'ಮನ್ಮಥ ರಾಜ' ಕಾಶೀನಾಥ್]

    ಉಪೇಂದ್ರ

    ಉಪೇಂದ್ರ

    ''ನನಗೆ ತುಂಬ ಸಂತೋಷ ಆಗುತ್ತಿದೆ... ನೀವು ಆ ಸೀಟ್ ನಲ್ಲಿ ಕೂರಲು ನಿಜವಾದ ಅರ್ಹವಾದ ವ್ಯಕ್ತಿ. ತುಂಬ ಖುಷಿ ಅನಿಸುತ್ತಿದೆ ಸರ್. ಎಲ್ಲ ನೋಡಿ ಬೆನ್ನು ತಟ್ಟಿದರು. ಪ್ರತಿಭೆಯನ್ನ ಗುರುತಿಸುವುದು ದೊಡ್ಡ ಪ್ರತಿಭೆ. ಅದು ನಮ್ಮ ಕಾಶೀ ಸರ್ ಬಳಿ ಜಾಸ್ತಿನೆ ಇದೆ. ನಿಮ್ಮ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಆದರೆ ಈಗ ಮಾತಾಡುವುದಕ್ಕೆ ಒಂದು ಚಾನ್ಸ್ ಸಿಕ್ಕಿದೆ. ಅಕಸ್ಮತ್ ನಾನು ಏನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ ಬಿಡಿ ಸರ್''- ಉಪೇಂದ್ರ, ನಟ-ನಿರ್ದೇಶಕ

    English summary
    Kannada Stars Upendra, Sunil kumar Desai, V.Manohar, Bank Janardha And Some Others Appreciate To Kashinath in Weekend With Ramesh 3.
    Wednesday, May 17, 2017, 14:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X