For Quick Alerts
  ALLOW NOTIFICATIONS  
  For Daily Alerts

  ಮೂರು ವರ್ಷದ ಬಳಿಕ ಬರುತ್ತಿದ್ದಾರೆ ಅಮೀರ್ ಖಾನ್: ದಿನಾಂಕ ಫಿಕ್ಸ್

  |

  ನಟ ಅಮೀರ್ ಖಾನ್‌ ನಾಯಕನಾಗಿ ನಟಿಸಿದ ಸಿನಿಮಾ ಬಿಡುಗಡೆ ಆಗಿ ಇದೇ ವರ್ಷದ ನವೆಂಬರ್‌ಗೆ ಮೂರು ವರ್ಷ ಆಗಲಿದೆ. ಅಮೀರ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ಥಗ್ಸ್ ಆಫ್ ಹಿಂದೂಸ್ತಾನ್' ಸಿನಿಮಾ 2018ರ ನವೆಂಬರ್‌ನಲ್ಲಿ ಬಿಡುಗಡೆ ಆಗಿತ್ತು.

  ಇದೀಗ ಮೂರು ವರ್ಷಗಳ ಬಳಿಕ ಅಮೀರ್ ಖಾನ್ ಸಿನಿಮಾ ಮತ್ತೆ ತೆರೆಗೆ ಬರುತ್ತಿದೆ. ಅಮೀರ್ ಖಾನ್ ಕಳೆದ ಮೂರು ವರ್ಷಗಳಿಂದಲೂ ಸಿನಿಮಾವೊಂದರ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸಿನಿಮಾ ಬಿಡುಗಡೆ ಮಾಡಲಿರುವ ದಿನಾಂಕವನ್ನು ಘೋಷಿಸಿದ್ದಾರೆ.

  ಅಮೀರ್ ಖಾನ್ 'ಲಾಲ್ ಸಿಂಗ್ ಛಡ್ಡಾ' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾವನ್ನು ಅದ್ವೈತ ಚಂದನ್ ನಿರ್ದೇಶನ ಮಾಡುತ್ತಿದ್ದಾರೆ. ಇಂಗ್ಲೀಷ್ ಪುಸ್ತಕವನ್ನು ಆಧರಿಸಿ ನಿರ್ಮಾಣ ಮಾಡಲಾಗಿರುವ ಈ ಸಿನಿಮಾ ಇದೇ ವರ್ಷಾಂತ್ಯಕ್ಕೆ ತೆರೆಗೆ ಬರಲಿದೆ.

  ಅಮೀರ್ ಖಾನ್, ಕರೀನಾ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಲಾಲ್ ಸಿಂಗ್ ಛಡ್ಡಾ' ಸಿನಿಮಾವು ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಕ್ರಿಸ್‌ಮಸ್‌ ದಿನದಂದು ಸಿನಿಮಾ ಬಿಡುಗಡೆ ಆಗಲಿದ್ದು, ಕ್ರಿಸ್‌ಮಸ್‌ ರಜೆಯ ದಿನಗಳಲ್ಲಿ ಜನರು ಚಿತ್ರಮಂದಿರದ ಕಡೆಗೆ ಬರುವ ನಿರೀಕ್ಷೆಯಿಂದ ಚಿತ್ರತಂಡವು ಕ್ರಿಸ್‌ಮಸ್‌ನಲ್ಲಿ ಸಿನಿಮಾ ಬಿಡುಗಡೆಯ ಯೋಜನೆ ಹಾಕಿದೆ.

  1994ರಲ್ಲಿ 'ಫಾರೆಸ್ಟ್ ಗಂಪ್' ಸಿನಿಮಾ ಬಂದಿತ್ತು

  1994ರಲ್ಲಿ 'ಫಾರೆಸ್ಟ್ ಗಂಪ್' ಸಿನಿಮಾ ಬಂದಿತ್ತು

  'ಲಾಲ್ ಸಿಂಗ್ ಛಡ್ಡಾ' ಸಿನಿಮಾವು ಫಾರೆಸ್ಟ್ ಗಂಪ್ ಹೆಸರಿನ ಪುಸ್ತಕ ಆಧರಿಸಿ ಮಾಡುತ್ತಿರುವ ಸಿನಿಮಾ ಆಗಿದೆ. ಅದೇ ಪುಸ್ತಕ ಆಧರಿಸಿ 'ಫಾರೆಸ್ಟ್ ಗಂಪ್' ಹೆಸರಿನಲ್ಲಿ 1994ರಲ್ಲಿಯೇ ಹಾಲಿವುಡ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಆ ಸಿನಿಮಾಕ್ಕೆ ಅತ್ಯುತ್ತನ ನಟ, ನಿರ್ದೇಶಕ, ಅತ್ಯುತ್ತಮ ಸಿನಿಮಾ ವಿಭಾಗ ಸೇರಿ ಒಟ್ಟು ಆರು ಆಸ್ಕರ್ ಪ್ರಶಸ್ತಿಗಳು ದೊರೆತಿದ್ದವು. ಈ ಸಿನಿಮಾವು ವಿಶ್ವದ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

  ಚಿತ್ರಕತೆ ಬರೆದಿರುವುದು ಅತುಲ್ ಕುಲಕರ್ಣಿ

  ಚಿತ್ರಕತೆ ಬರೆದಿರುವುದು ಅತುಲ್ ಕುಲಕರ್ಣಿ

  ವಿನ್ಸ್ಟನ್ ಗ್ರೂಮ್‌ ಬರೆದಿರುವ 'ಫಾರೆಸ್ಟ್ ಗಂಪ್' ಕತೆಯನ್ನು ಭಾರತದ ಸಂಸ್ಕೃತಿ, ಪರಿಸರಕ್ಕೆ ತಕ್ಕಂತೆ ಬದಲಾಯಿಸಿ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದ ಚಿತ್ರಕತೆಯನ್ನು ಹೆಣೆಯಲಾಗಿದೆ. ಹಿಂದಿಯಲ್ಲಿ ಚಿತ್ರಕತೆ ಬರೆದಿರುವುದು ಕನ್ನಡದ 'ಆ ದಿನಗಳು' ಸಿನಿಮಾದಲ್ಲಿ ಶ್ರೀಧರ್ ಪಾತ್ರದಲ್ಲಿ ನಟಿಸಿರುವ ಅತುಲ್ ಕುಲಕರ್ಣಿ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸ್ವತಃ ಅಮೀರ್ ಖಾನ್ ಮತ್ತು ಮುಖೇಶ್ ಅಂಬಾನಿ ಒಡೆತನದ ವಯಾಕಾಮ್ 18.

  ಶಾರುಖ್, ಸಲ್ಮಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

  ಶಾರುಖ್, ಸಲ್ಮಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

  'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ಅಮೀರ್ ಖಾನ್ ಜೊತೆಗೆ ಕರೀನಾ ಕಪೂರ್ ನಟಿಸಿದ್ದಾರೆ. ತೆಲುಗಿನ ಖ್ಯಾತ ನಟ ನಾಗ್ ಚೈತನ್ಯ ಸಹ ಅಮಿರ್ ಖಾನ್ ಗೆಳೆಯನ ಪಾತ್ರದಲ್ಲಿ ನಟಿಸಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಅವರುಗಳು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾರುಖ್ 'ಡಿಡಿಎಲ್‌ಜೆ' ಸಿನಿಮಾದ ರಾಜ್ ಆಗಿ ಸಲ್ಮಾನ್ ಖಾನ್ 'ಮೈನೆ ಪ್ಯಾರ್ ಕಿಯಾ' ಸಿನಿಮಾದ ಪ್ರೇಮ್ ಆಗಿ ಕಾಣಿಸಿಕೊಳ್ಳಲಿರುವುದು ವಿಶೇಷ.

  ಕರೊನಾ ಹಾಗೂ ಕರೀನಾ ಕಾರಣಕ್ಕೆ ಚಿತ್ರೀಕರಣ ತಡ

  ಕರೊನಾ ಹಾಗೂ ಕರೀನಾ ಕಾರಣಕ್ಕೆ ಚಿತ್ರೀಕರಣ ತಡ

  'ಲಾಲ್ ಸಿಂಗ್ ಛಡ್ಡಾ' ಸಿನಿಮಾವು ಈ ವೇಳೆಗಾಗಲೆ ಚಿತ್ರೀಕರಣ ಮುಗಿಸಬೇಕಿತ್ತು. ಆದರೆ ಕೊರೊನಾ ಮತ್ತು ಕರೀನಾ ಕಾರಣಕ್ಕೆ ಚಿತ್ರೀಕರಣ ತಡವಾಯ್ತು. ಹೀಗೆಂದು ಸ್ವತಃ ಅಮೀರ್ ಖಾನ್ ಹೇಳಿದ್ದರು. ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿಯೇ ಕರೀನಾ ಗರ್ಭಿಣಿ ಆಗಿ ಎರಡನೇ ಮಗುವಿಗೆ ಜನ್ಮ ನೀಡಿದರಾದ್ದರಿಂದ ಚಿತ್ರೀಕರಣ ತಡವಾಯ್ತು. ಜೊತೆಗೆ ಸಿನಿಮಾದಲ್ಲಿ ನಟಿಸುತ್ತೇನೆ ಎಂದಿದ್ದ ವಿಜಯ್ ಸೇತುಪತಿ ಕೊನೆಯ ಕ್ಷಣದಲ್ಲಿ ಸಿನಿಮಾದಿಂದ ದೂರ ಉಳಿದರು. ಇದರಿಂದಲೂ ಚಿತ್ರತಂಡಕ್ಕೆ ಹಿನ್ನಡೆ ಆಯಿತು.

  ಪುಷ್ಪ v/s ಲಾಲ್ ಸಿಂಗ್ ಛಡ್ಡಾ v/s ಕೆಜಿಎಫ್ 2

  ಪುಷ್ಪ v/s ಲಾಲ್ ಸಿಂಗ್ ಛಡ್ಡಾ v/s ಕೆಜಿಎಫ್ 2

  ಇದೀಗ ಡಿಸೆಂಬರ್ 25ಕ್ಕೆ ಚಿತ್ರಮಂದಿರಕ್ಕೆ ಬರಲು 'ಲಾಲ್ ಸಿಂಗ್ ಛಡ್ಡಾ' ರೆಡಿಯಾಗಿದೆ. ಅದೇ ದಿನ ತೆಲುಗಿನ 'ಪುಷ್ಪ' ಸಿನಿಮಾ ಸಹ ಚಿತ್ರಮಂದಿರಕ್ಕೆ ಬರಲಿದೆ. ಎರಡೂ ಸಿನಿಮಾಗಳು ಚಿತ್ರಮಂದಿರದಲ್ಲಿ ಪರಸ್ಪರ ಎದುರು ಬದುರಾಗಲಿದೆ. ಇದರ ಮಧ್ಯೆ ಕನ್ನಡದ 'ಕೆಜಿಎಫ್ 2' ಸಿನಿಮಾ ಸಹ ಅದೇ ಸಮಯಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಹಾಗಾಗಿ ಮೂರು ಗುಣಮಟ್ಟದ ಸಿನಿಮಾಗಳು ಪರಸ್ಪರ ಪೈಪೋಟಿ ನಡೆಸಲಿವೆ.

  English summary
  Aamir Khan's Lal Singh Chaddha movie will release on December 25. Movie is adaptation of book Forest Gump.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X