For Quick Alerts
  ALLOW NOTIFICATIONS  
  For Daily Alerts

  ವಿರೋಧಿಗಳಿಗೆ ಮಾತಲ್ಲೇ ಪೆಟ್ಟು ಕೊಟ್ಟ ನಟಿ ದೀಪಿಕಾ ಪಡುಕೋಣೆ

  |
  ಕೊನೆಗೂ ಮೌನ ಮುರಿದ ದೀಪಿಕಾ ಪಡುಕೋಣೆ | Deepika Padukone | JNU | CAA | Filmibeat kannada

  ಜೆ.ಎನ್.ಯು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಗಳೂರು ಬೆಡಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬೆಂಬಲ ನೀಡಿದ್ದರು. ಇದು ಹಲವರಲ್ಲಿ ಅಸಮಾಧಾನ ಉಂಟು ಮಾಡಿತ್ತು. ಪರಿಣಾಮ, ದೀಪಿಕಾ ಪಡುಕೋಣೆ ನಟಿಸಿ, ನಿರ್ಮಿಸಿದ 'ಚಪಾಕ್' ರೇಟಿಂಗ್ ಮತ್ತು ಕಲೆಕ್ಷನ್ ಮೇಲೆ ಹೊಡೆತ ಬಿತ್ತು.

  ಜೆ.ಎನ್.ಯುಗೆ ದೀಪಿಕಾ ಪಡುಕೋಣೆ ಭೇಟಿ ನೀಡಿದ ನಂತರ ಬಿಡುಗಡೆ ಆದ 'ಚಪಾಕ್' ಚಿತ್ರಕ್ಕೆ ಐಎಂಡಿಬಿಯಲ್ಲಿ ವಿರೋಧಿಗಳು ಮತ್ತು ಟ್ರೋಲಿಗರು ಉದ್ದೇಶಪೂರ್ವಕವಾಗಿ ಕಡಿಮೆ ರೇಟಿಂಗ್ ನೀಡಿದ್ದರು.

  ಇಷ್ಟು ದಿನ ಈ ಬಗ್ಗೆ ಮೌನ ವಹಿಸಿದ್ದ ನಟಿ ದೀಪಿಕಾ ಪಡುಕೋಣೆ, ಇದೀಗ ರೇಡಿಯೋ ಸಂದರ್ಶನವೊಂದರಲ್ಲಿ ಟ್ರೋಲಿಗರಿಗೆ, ವಿರೋಧಿಗಳಿಗೆ ತಮ್ಮ ಮಾತಲ್ಲೇ ಪೆಟ್ಟು ಕೊಟ್ಟಿದ್ದಾರೆ.

  JNU ಎಂಟ್ರಿ ಎಫೆಕ್ಟ್: ದೀಪಿಕಾ ನಟಿಸಿದ ಜಾಹೀರಾತುಗಳ ಮೇಲೆ ಹೊಡೆತJNU ಎಂಟ್ರಿ ಎಫೆಕ್ಟ್: ದೀಪಿಕಾ ನಟಿಸಿದ ಜಾಹೀರಾತುಗಳ ಮೇಲೆ ಹೊಡೆತ

  ಸಂದರ್ಶನದಲ್ಲಿ, ''ನಿಮಗೆ ವಾಸ್ತವ ಗೊತ್ತಿದೆ. ಜೊತೆಗೆ ಬೇರೊಂದು ವಾಸ್ತವವೂ ಗೊತ್ತಿದೆ'' ಎಂದು 'ಚಪಾಕ್' ಚಿತ್ರದ ರೇಟಿಂಗ್ ವಿಷಯದಲ್ಲಿ ಬಿಜೆಪಿ ಬೆಂಬಲಿಗರ ಪಿತೂರಿ ಬಗ್ಗೆ ಸಂದರ್ಶಕಿ ಪ್ರಶ್ನೆ ಮಾಡಿದಾಗ, ''ಅವರು ನನ್ನ ಐಎಂಡಿಬಿ ರೇಟಿಂಗ್ ಬದಲಾಯಿಸಬಹುದು. ಆದರೆ ನನ್ನ ಮನಸನ್ನಲ್ಲ'' ಎನ್ನುವ ಮೂಲಕ ವಿರೋಧಿಗಳಿಗೆ ದೀಪಿಕಾ ಪಡುಕೋಣೆ ಖಡಕ್ ಸಂದೇಶ ರವಾನಿಸಿದ್ದಾರೆ.

  ಜೆ.ಎನ್.ಯು ವಿದ್ಯಾರ್ಥಿಗಳ ಮೇಲೆ ನಡೆದ ಹಿಂಸಾಚಾರವನ್ನು ಖಂಡಿಸಿ ಮಾಡುತ್ತಿದ್ದ ಪ್ರತಿಭಟನೆಯಲ್ಲಿ ನಟಿ ದೀಪಿಕಾ ಪಡುಕೋಣೆ ಭಾಗವಹಿಸಿ ಬೆಂಬಲ ನೀಡಿದ್ದರು. ಇದರಿಂದ ದೇಶದಾದ್ಯಂತ ದೀಪಿಕಾ ಪಡುಕೋಣೆ ಸುದ್ದಿಗೆ ಗ್ರಾಸವಾಗಿದ್ದರು.

  English summary
  Bollywood Actress Deepika Padukone has reacted on Chhapaak's low IMDB Rating due to her JNU visit.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X