Don't Miss!
- News
ಬಿಹಾರ ರಾಜಕೀಯ ಬಿಕ್ಕಟ್ಟು: ಇಂದು ನಿತೀಶ್ ಕುಮಾರ್ ಮಹತ್ವದ ಸಭೆ, ಇಂದೇ ಮೈತ್ರಿ ಅಂತ್ಯ?
- Lifestyle
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಕರ್ಕ, ತುಲಾ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾ
- Sports
Asia Cup 2022: ಏಷ್ಯಾಕಪ್ಗೆ ಪ್ರಕಟವಾದ ತಂಡದಲ್ಲಿ ಬೌಲಿಂಗ್ ಅಸ್ತ್ರ ಬುಮ್ರಾ ಇಲ್ಲದಿರಲು ಇದೇ ಕಾರಣ
- Automobiles
ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್ಫೈಟರ್ ಬೈಕ್ ಬಿಡುಗಡೆ
- Finance
ಕೇರಳ ಲಾಟರಿ: 'ವಿನ್ ವಿನ್ W-680' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Technology
ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್ಟಿವಿ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಂಗನಾ ರನೌತ್ರಿಂದ ನಿರ್ಮಾಪಕ ಅನುಭವಿಸಿದ ನಷ್ಟ ಅಷ್ಟಿಷ್ಟಲ್ಲ!
ಸಿನಿಮಾ ರಂಗದಲ್ಲಿ 15 ವರ್ಷಕ್ಕೂ ಅಧಿಕ ಕಾಲದಿಂದ ಸಕ್ರಿಯರಾಗಿರುವ ಕಂಗನಾಗೆ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಆದರೆ ಇತ್ತೀಚೆಗೆ ಕಂಗನಾ ನಟಿಸಿದ 'ಧಾಕಡ್' ಸಿನಿಮಾವನ್ನು ಉಳಿಸಿಲ್ಲ ಅಭಿಮಾನಿಗಳು.
ಕಂಗನಾ, ಗೂಢಚಾರಿಣಿ ಪಾತ್ರದಲ್ಲಿ ನಟಿಸಿದ್ದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಧಾಕಡ್' ಕಳೆದ ತಿಂಗಳು 20ನೇ ತಾರೀಖಿನಂದು ಬಿಡುಗಡೆ ಆಗಿತ್ತು. ಟ್ರೇಲರ್ ಮೂಲಕ ಬಹುವಾಗಿ ಗಮನ ಸೆಳೆದಿದ್ದ ಈ ಸಿನಿಮಾ ಪಕ್ಕಾ ಸೂಪರ್ ಹಿಟ್ ಆಗುತ್ತದೆ ಎನ್ನಲಾಗಿತ್ತು.
ನಟಿ ಕಂಗನಾ ಸಹ ಭರ್ಜರಿಯಾಗಿ ಪ್ರಚಾರ ಮಾಡಿದ್ದರು. ಹಲವು ದೇವಸ್ಥಾನಗಳನ್ನು ಸುತ್ತಿದರು. ಸಿನಿಮಾ ಬಿಡುಗಡೆ ಹತ್ತಿರ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಇನ್ನೂ ಸಕ್ರಿಯರಾಗಿದ್ದರು. ಆದರೆ ಸಿನಿಮಾ ಬಿಡುಗಡೆ ಆದ ಮೇಲೆ ಆಗಿದ್ದೇ ಬೇರೆ. ತೀರ ಹೀನಾಯ ಸೋಲನ್ನು ಸಿನಿಮಾ ಕಂಡಿತು.

'ಧಾಕಡ್' ಸಿನಿಮಾ ನೋಡಲು ಜನರೇ ಬರಲಿಲ್ಲ
'ಧಾಕಡ್' ಸಿನಿಮಾ ನೋಡಲು ಜನರೇ ಬರಲಿಲ್ಲ. ಸಿನಿಮಾ ಬಿಡುಗಡೆ ಆದ ಒಂದೇ ದಿನದಲ್ಲಿ ಪ್ರೇಕ್ಷಕರ ಕೊರತೆಯಿಂದ ಹಲವೆಡೆ ಸಿನಿಮಾದ ಶೋಗಳು ರದ್ದಾದವು. ಕೆಲವು ಕಡೆ ಇಡೀ ಚಿತ್ರಮಂದಿರಕ್ಕೆ 10-20 ಜನ ಸಹ ಬರಲಿಲ್ಲ. ಅತ್ಯಂತ ಹೀನಾಯ ಸೋಲನ್ನು 'ಧಾಕಡ್' ಕಂಡಿತು. ಬಿಡುಗಡೆ ಆದ ದಿನ 'ಧಾಕಡ್' ಸಿನಿಮಾ ಗಳಿಸಿದ್ದು ಕೇವಲ 50 ಲಕ್ಷ ಆ ನಂತರ ಎರಡೇ ದಿನಕ್ಕೆ ಕಲೆಕ್ಷನ್ ತೀವ್ರವಾಗಿ ಕುಸಿದು ಹೋಯಿತು. ಈವರೆಗೆ 3 ಕೋಟಿ ರುಪಾಯಿ ಸಹ ಗಳಿಸಿಲ್ಲ ಈ ಸಿನಿಮಾ.

ಭಾರಿ ನಷ್ಟ ಅನುಭವಿಸಿದ ನಿರ್ಮಾಪಕ
ಕಂಗನಾ ರನೌತ್ರನ್ನು ನಂಬಿಕೊಂಡು ಸಿನಿಮಾಕ್ಕೆ ದೀಪಕ್ ಮುಕುಟ್ ಮತ್ತು ಸೋಹೆಲ್ ಮಕ್ಲಾಯಿ ಬಂಡವಾಳ ಹೂಡಿದ್ದರು. 'ಧಾಕಡ್' ಸಿನಿಮಾದಿಂದ ನಿರ್ಮಾಪಕರಿಗೆ ಆಗಿರುವ ನಷ್ಟ, ಸಿನಿಮಾ ರಂಗದ ಅನಿಶ್ಚತತೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ಸಿನಿಮಾದಿಂದಾಗಿ ನಿರ್ಮಾಪಕರಿಗೆ 78 ಕೋಟಿ ನಷ್ಟವಾಗಿದೆ ಎನ್ನಲಾಗುತ್ತಿದೆ. ಸಿನಿಮಾದ ಡಿಜಿಟಲ್ ಹಾಗೂ ಟಿವಿ ಸ್ಯಾಟಲೈಟ್ ಹಕ್ಕುಗಳನ್ನು ಸಹ ಯಾರೂ ಕೇಳುತ್ತಿಲ್ಲವಂತೆ. ಕೊನೆಗೆ ತೀರ ಕಡಿಮೆ ದರಕ್ಕೆ ಡಿಜಿಟಲ್, ಟಿವಿ ಸ್ಯಾಟಲೈಟ್, ಆಡಿಯೋ ಹಕ್ಕುಗಳನ್ನು ಮಾರಾಟ ಮಾಡಿದ್ದು ಅದರಿಂದ ಬಂದ ಹಣವನ್ನು ಕಳೆದರೂ ನಿರ್ಮಾಪಕರಿಗೆ 78 ಕೋಟಿ ನಷ್ಟವಾಗಿದೆ.

'ಧಾಕಡ್'ಗೆ ಹೂಡಿದ್ದ ಬಂಡವಾಳ ಎಷ್ಟು
'ಧಾಕಡ್' ಸಿನಿಮಾಕ್ಕೆ 95 ಕೋಟಿ ಬಂಡವಾಳ ಹೂಡಲಾಗಿತ್ತು. ಅದ್ಧೂರಿಯಾಗಿಯೇ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಸಿನಿಮಾದ ನಿರ್ದೇಶನ ಮಾಡಿದ್ದು ರಜನೀಶ್ ಘೈ. ಸಿನಿಮಾದಲ್ಲಿ ವಿಲನ್ ಆಗಿ ಅರ್ಜುನ್ ರಾಮ್ಪಾಲ್ ನಟಿಸಿದ್ದರು. ಸಿನಿಮಾಕ್ಕೆ ಧ್ರುವ್ ಘನೇಕರ್ ಹಿನ್ನೆಲೆ ಸಂಗೀತ ನೀಡಿದ್ದರು. ಸಿನಿಮಾದ ವಿತರಣೆ ಮಾಡಿದ್ದು ಜೀ ಸ್ಟೂಡಿಯೋ ಒಳ್ಳೆಯ ತಂಡವೇ ಇದ್ದರೂ ಸಹ ಸಿನಿಮಾ ತನ್ನ ಕಳಪೆ ಕಂಟೆಂಟ್ನಿಂದಾಗಿ ಹೀನಾಯ ಸೋಲು ಕಂಡಿದೆ.

ಮುಂದಿನ ಸಿನಿಮಾದ ನಿರ್ಮಾಪಕರು ಆತಂಕದಲ್ಲಿ
ಕಂಗನಾ ರನೌತ್, ತಾವು ಬಾಲಿವುಡ್ನ ಯಾವ ಸ್ಟಾರ್ ನಟರಿಗೂ ಕಡಿಮೆ ಇಲ್ಲ ಎಂದು ಕೆಲವು ಸಂದರ್ಶನದಲ್ಲಿ ಹೇಳಿದ್ದರು. ಆದರೆ ಅದರ ಬೆನ್ನಲ್ಲೆ ಅವರ ಸಿನಿಮಾ, ಒಟ್ಟು ಬಂಡವಾಳದ 5% ಗಳಿಕೆಯನ್ನೂ ಮಾಡಲು ವಿಫಲವಾಗಿದೆ. ಕಂಗನಾ ಇದೀಗ 'ತೇಜಸ್' ಹಾಗೂ 'ಟೀಕು ವೆಡ್ಸ್ ಶೇರು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಈ ಸಿನಿಮಾದ ನಿರ್ಮಾಪಕರು ಈಗ ಆತಂಕಕ್ಕೆ ಸಿಲುಕಿದ್ದಾರೆ. ಆ ಬಳಿಕ ಕಂಗನಾ ತಾವೇ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರೆ.