For Quick Alerts
  ALLOW NOTIFICATIONS  
  For Daily Alerts

  ಸೀರೆ ಧರಿಸಿ ವಿದೇಶದಲ್ಲಿ ಸುತ್ತಾಡಿದ ತಾಪ್ಸಿ ಕಾಲೆಳೆದ ಕಂಗನಾ ಸಹೋದರಿ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಸಹೋದರಿ ರಂಗೋಲಿ ಬಹುತೇಕ ಸಹ ಕಲಾವಿದರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಸಹ ಕಲಾವಿದರ ಕಾಲೆಳೆಯಲು ಕಾಯುತ್ತಿರುತ್ತಾರೆ. ಕಂಗನಾ ಸುಮ್ಮನಿದ್ದರೂ ಸಹೋದರಿ ರಂಗೋಲಿ ಸೈಲೆಂಟ್ ಆಗಿರಲ್ಲ. ಸದಾ ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ಕಂಗನಾ ಸಹೋದರಿಯರು ಈಗ ಬಾಲಿವುಡ್ ನಟಿ ತಾಪ್ಸಿ ಪನ್ನು ಅವರನ್ನು ಕೆಣಕಿದ್ದಾರೆ.

  ಕಂಗನಾ ಟ್ವಿಟ್ಟರ್‌ನಿಂದ ಬ್ಯಾನ್ ಆದರೂ ಇನ್ಸ್ಟಾಗ್ರಾಮ್ ಮೂಲಕ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ರಂಗೋಲಿ ಚಾಂಡೆಲ್ ಇನ್ಸ್ಟಾಗ್ರಾಮ್‌ನಲ್ಲಿ ಸಹೋದರಿ ಕಂಗನಾ ರಣಾವತ್ ಫೋಟೋಗಳನ್ನು ಹಂಚಿಕೊಂಡು ಹಾಡಿ ಹೊಗಳಿದ್ದಾರೆ. ಕಂಗನಾ ಸೀರೆ ಧರಿಸಿರುವ ಫೋಟೋಗಳನ್ನು ಶೇರ್ ಮಾಡಿ, "ಗ್ರೇಟ್ ಸ್ಟೈಲ್ ಐಕಾನ್", "ಯುವತಿಯರು ಹೇಗೆ ಸ್ಫೂರ್ತಿ ಪಡೆಯುತ್ತಾರೆ ಮತ್ತು ಅವಳನ್ನು ಅನುಸರಿಸುತ್ತಾರೆ ಎಂದು ನೋಡಲು ತುಂಬಾ ಸಂತೋಷವಾಗುತ್ತೆ", "ಅನೇಕರು ಕಂಗನಾರನ್ನು ಫೋಲೋ ಮಾಡುತ್ತಿದ್ದಾರೆ" ಎಂದೆಲ್ಲ ಬರೆದು ಸಹೋದರಿಯನ್ನು ಹೊಗಳಿದ್ದಾರೆ.

  ಗುಲಾಮರು ನೀಡಿದ 'ಇಂಡಿಯಾ' ಹೆಸರನ್ನು ಬದಲಾಯಿಸಿ; ಕಂಗನಾ ಒತ್ತಾಯಗುಲಾಮರು ನೀಡಿದ 'ಇಂಡಿಯಾ' ಹೆಸರನ್ನು ಬದಲಾಯಿಸಿ; ಕಂಗನಾ ಒತ್ತಾಯ

  ಬಳಿಕ ತಾಪ್ಸಿ ವಿದೇಶದಲ್ಲಿ ಸೀರೆ ಧರಿಸಿ ಓಡಾಡುತ್ತಿರುವ ಫೋಟೋ ಶೇರ್ ಮಾಡಿ ತಾಪ್ಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಂಗನಾರನ್ನು ಕಾಪಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ತಾಪ್ಸಿ ಬಗ್ಗೆ ಮಾತನಾಗಿದ್ದ ಒಂದು ಒಂದು ಪೋಸ್ಟ್ ಅನ್ನು ರಂಗೋಲಿ ಡಿಲೀಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ "ಸ್ವಂತ ಪ್ರತಿಭೆ ಇಲ್ಲದಿರುವುದರಿಂದ ಕಂಗನಾರನ್ನೇ ಕಾಪಿ ಮಾಡಿದ್ದೀರಾ. ಇದು ಚೀಪ್ ಅನುಕರಣೆ" ಎಂದು ಜರೆದಿದ್ದರು.

  ಮತ್ತೊಂದು ಪೋಸ್ಟ್‌ನಲ್ಲಿ "ಪ್ರತಿ ಸಂದರ್ಶನವನ್ನು ಕಾಪಿ ಮಾಡುವುದು ಮಾತ್ರವಲ್ಲದೆ ಲೆಜೆಂಡ್ ಕಂಗನಾ ಸ್ಟೈಲ್ ಮತ್ತು ಕೆಲಸದ ಮಾದರಿಯನ್ನು ನಕಲು ಮಾಡುತ್ತಾರೆ. ಇದನ್ನು ನೋಡಿದಾಗ ನಾನು ಆಶ್ವರ್ಯ ಪಡುತ್ತೇನೆ, ಆದರೆ ನಕಲು ಉತ್ತಮವಾಗಿದೆ." ಎಂದಿದ್ದಾರೆ.

  Sanchari Vijay ಬಗ್ಗೆ ಅವರ ಸಹೋದರ ಹೇಳೋದೇನು | Filmibeat Kannada

  ತಾಪ್ಸಿ ಸದ್ಯ ರಷ್ಯಾದಲ್ಲಿದ್ದಾರೆ. ಸಹೋದರಿ ಜೊತೆ ರಷ್ಯಾ ಪ್ರವಾಸಕ್ಕೆ ತೆರಳಿರುವ ತಾಪ್ಸಿ ಸೀರೆ ಧರಿಸಿ ರಷ್ಯಾ ಬೀದಿಗಳಲ್ಲಿ ಓಡಾಡಿದ್ದಾರೆ. ಫೋಟೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಈ ಪೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

  English summary
  Kangana Ranaut sister Rangoli Chandel calls Taapse Pannu has no talent, copying Legend Kangana Ranaut.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X