»   » 'ಭಜರಂಗಿ...' ಶೂಟಿಂಗ್ ಕ್ಯಾನ್ಸಲ್; ಸಲ್ಲುಗೆ ಏನಾಯ್ತು?

'ಭಜರಂಗಿ...' ಶೂಟಿಂಗ್ ಕ್ಯಾನ್ಸಲ್; ಸಲ್ಲುಗೆ ಏನಾಯ್ತು?

Posted By:
Subscribe to Filmibeat Kannada

ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಅನಾರೋಗ್ಯಕ್ಕೀಡಾಗಿದ್ದಾರೆ. ಕಿವಿ ಸೋಂಕು ಮತ್ತು ಸೈನಸೈಟಿಸ್ ನಿಂದ ಸಲ್ಲು ಬಳಲುತ್ತಿದ್ದಾರೆ. ನೋವು ಅತಿಯಾಗಿರುವ ಕಾರಣ ಸಲ್ಲು ಭಾಯ್ ಬಣ್ಣ ಹಚ್ಚುವ ಪರಿಸ್ಥಿತಿಯಲ್ಲಿಲ್ಲ. ಆದ ಕಾರಣ 'ಭಜರಂಗಿ ಭಾಯ್ ಜಾನ್' ಶೂಟಿಂಗ್ ನಿಂತುಹೋಗಿದೆ.

ಹೌದು, ಕಳೆದ ಎರಡು ದಿನಗಳಿಂದ ಸಲ್ಮಾನ್ ಖಾನ್ ಕಿವಿ ಸೋಂಕಿನಿಂದ ಬಳಲುತ್ತಿದ್ದಾರೆ. ಇದರ ಬೆನ್ನಲ್ಲೇ ಸಲ್ಲುಗೆ ಕೋರ್ಟ್ ನಿಂದ ಶಾಕಿಂಗ್ ನ್ಯೂಸ್ ಕೂಡ ಹೊರ ಬಿದ್ದಿದೆ. ಸಲ್ಮಾನ್ ಆರೋಪಿ ಎನ್ನಲಾಗಿರುವ ಹಿಟ್ ಅಂಡ್ ರನ್ ಕೇಸ್ ನ ಅಂತಿಮ ತೀರ್ಪು ಹೊರಬೀಳುವ ದಿನಾಂಕ ನಿಗದಿಯಾಗಿದೆ.[ಹಿಟ್ ಅಂಡ್ ರನ್ ಕೇಸ್ : ಸಲ್ಮಾನ್ 10 ವರ್ಷ ಜೈಲು ಶಿಕ್ಷೆ ಭೀತಿ]

Salman Khan unwell; Bajrangi Bhaijaan shooting stopped

ಜೈಲು ಶಿಕ್ಷೆಯ ಭೀತಿಯಲ್ಲಿರುವ ಸಲ್ಮಾನ್ ಈಗ ಏಕಾಏಕಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಎರಡು ದಿನಗಳಿಂದ ನೋವು ನಿವಾರಕ ಗುಳಿಗೆಗಳನ್ನ ನುಂಗಿದರೂ, ಸಲ್ಲು ಆರೋಗ್ಯ ಸ್ಥಿತಿ ಸುಧಾರಿಸಿಲ್ಲ. ಆದ್ದರಿಂದ ಈಗ ಶೂಟಿಂಗ್ ಗೆ ಬ್ರೇಕ್ ಹಾಕಿದ್ದಾರೆ.

ಕಾಶೀರದಲ್ಲಿ 40 ದಿನಗಳ ಕಾಲ 'ಭಜರಂಗಿ ಭಾಯಿ ಜಾನ್' ಚಿತ್ರೀಕರಣ ಇತ್ತು. ಕಬೀರ್ ಖಾನ್ ನಿರ್ದೇಶನದಲ್ಲಿ ಕರೀನಾ ಕಪೂರ್ ಮತ್ತು ನವಾಜುದ್ದೀನ್ ಸಿದ್ದೀಖಿ ಅಭಿನಯಿಸುತ್ತಿರುವ ಚಿತ್ರ 'ಭಜರಂಗಿ ಭಾಯ್ ಜಾನ್'. [ಪಿತ್ತ ನೆತ್ತಿಗೇರಿಸಿಕೊಂಡ ಸಲ್ಮಾನ್ ಖಾನ್ ಮಾಡಿದ್ದೇನು..?]

ಸಲ್ಲು ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವವರೆಗೂ ಶೂಟಿಂಗ್ ಮಾಡೋದಿಲ್ಲ ಅಂತ ನಿರ್ದೇಶಕ ಕಬೀರ್ ಖಾನ್ ಹೇಳಿದ್ದಾರೆ. ಆದಷ್ಟು ಬೇಗ ಸಲ್ಲು ಗುಣಮುಖರಾಗಲಿ ಅನ್ನೋದು ಸಲ್ಲು ಅಭಿಮಾನಿಗಳ ಹಾರೈಕೆ.

English summary
Bollywood Actor Salman Khan is suffering from severe ear infection and sinusitis. Hence, the shooting of 'Bajrangi Bhaijaan' is stopped.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada