For Quick Alerts
  ALLOW NOTIFICATIONS  
  For Daily Alerts

  'ಕುರುಕ್ಷೇತ್ರ'ದಲ್ಲಿ ದರ್ಶನ್ ಸಂಭಾವನೆ ಕೇಳಿ ಬೆಚ್ಚಿಬಿದ್ದ ಗಾಂಧಿನಗರ.!

  By Bharath Kumar
  |

  ಕನ್ನಡ ಚಿತ್ರರಂಗದಲ್ಲಿ ಸದ್ಯ 'ಕುರುಕ್ಷೇತ್ರ' ಚಿತ್ರದ್ದೇ ಕಾರುಬಾರು. ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50 ಸಿನಿಮಾ, ಈ ಚಿತ್ರದಲ್ಲಿ ಕನ್ನಡದ ಟಾಪ್ ಸ್ಟಾರ್ ನಟರು ಅಭಿನಯಿಸ್ತಾರೆ ಇದೆಲ್ಲಾ ಹಳೆ ಸುದ್ದಿ. ಈಗ ಹೊಸ ಸುದ್ದಿ ಏನಪ್ಪಾ ಅಂದ್ರೆ, ದರ್ಶನ್ ಅವರು ಸಂಭಾವನೆ.

  ಹೌದು, 'ಕುರುಕ್ಷೇತ್ರ' ಚಿತ್ರಕ್ಕಾಗಿ ದರ್ಶನ್ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರಂತೆ. ಇದುವರೆಗೂ ಈ ಸಂಭಾವನೆಯನ್ನ ಕನ್ನಡದಲ್ಲಿ ಬೇರೆ ಯಾರು ಪಡೆದಿಲ್ಲವಂತೆ. ಹೀಗಾಗಿ ಕನ್ನಡದಲ್ಲಿ ಇದು ದೊಡ್ಡ ಸಂಭಾವನೆಯಂತೆ. ಈ ಸುದ್ದಿ ಕೇಳಿ ಇಡೀ ಗಾಂಧಿನಗರ ಬೆಚ್ಚಿಬಿದ್ದಿದೆ. ಮುಂದೆ ದರ್ಶನ್ ಅವರ ಕಾಲ್ ಶೀಟ್ ಕೇಳೋದು ಹೇಗಾಪ್ಪ ಅಂತ ನಿರ್ಮಾಪಕರು ತಲೆ ಕೆಡಿಸಿಕೊಂಡಿದ್ದಾರಂತೆ.[ದರ್ಶನ್ '50'ನೇ ಚಿತ್ರದಲ್ಲಿ ಮತ್ತೊಂದು ಮೆಗಾ ಟ್ವಿಸ್ಟ್!]

  'ಕುರುಕ್ಷೇತ್ರ' ಎಂಬ ಮಹಾಚಿತ್ರಕ್ಕಾಗಿ ದಾಸ ಪಡೆಯುತ್ತಿರುವ ಸಂಭಾವನೆ ಮೊತ್ತ ಎಷ್ಟು ಎಂದು ತಿಳಿದುಕೊಳ್ಳಲು ಮುಂದೆ ಓದಿ.....

  ಕನ್ನಡದಲ್ಲಿ ಇದು ಅತಿ ಹೆಚ್ಚು.!

  ಕನ್ನಡದಲ್ಲಿ ಇದು ಅತಿ ಹೆಚ್ಚು.!

  ಶಾಸಕ ಹಾಗೂ ನಿರ್ಮಾಪಕ ಮುನಿರತ್ನ ನಿರ್ಮಾಣ ಮಾಡುತ್ತಿರುವ 'ಕುರುಕ್ಷೇತ್ರ' ಚಿತ್ರಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅತಿ ಹೆಚ್ಚು ಸಂಭಾವನೆ ನೀಡುತ್ತಿದ್ದಾರಂತೆ. ಇದು ಕನ್ನಡದಲ್ಲಿ ಹೊಸ ದಾಖಲೆ ಆಗಲಿದೆಯಂತೆ.['ಕುರುಕ್ಷೇತ್ರ'ದ ಬಗ್ಗೆ ಮಹತ್ವದ ರಹಸ್ಯ ಬಿಚ್ಚಿಟ್ಟ ನಿರ್ದೇಶಕ ನಾಗಣ್ಣ]

  ದರ್ಶನ್ ಸಂಭಾವನೆ ಎಷ್ಟು ಗೊತ್ತಾ?

  ದರ್ಶನ್ ಸಂಭಾವನೆ ಎಷ್ಟು ಗೊತ್ತಾ?

  ಮೂಲಗಳ ಪ್ರಕಾರ 'ಕುರುಕ್ಷೇತ್ರ' ಚಿತ್ರಕ್ಕಾಗಿ ದರ್ಶನ್ ಪಡೆಯುತ್ತಿರುವ ಸಂಭಾವನೆ ಮೊತ್ತ ಬರೋಬ್ಬರಿ 10 ಕೋಟಿಯಂತೆ. ಈ ಸುದ್ದಿ ಈಗ ಟಾಕ್ ಆಫ್ ದಿ ಟೌನ್ ಆಗಿದೆ.

  ಹೈ ಬಜೆಟ್ ಸಿನಿಮಾ!

  ಹೈ ಬಜೆಟ್ ಸಿನಿಮಾ!

  'ಕುರುಕ್ಷೇತ್ರ' ಸಿನಿಮಾ ಅಂದ್ಮೇಲೆ ಕಾಸ್ಟ್ಯೂಮ್ಸ್, ಮತ್ತು ಸೆಟ್ ನಿರ್ಮಾಣ ಮಾಡುವುದಕ್ಕೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತೆ. ಈ ಬಗ್ಗೆ ನಿರ್ಮಾಪಕರು ಮೊದಲೇ ಮಾತನಾಡಿದ್ದು, ಚಿತ್ರದ ಬಜೆಟ್ ಎಷ್ಟೇ ಆದರೂ ಪರವಾಗಿಲ್ಲ, ಇದಕ್ಕೆ ಇಷ್ಟೇ ಎನ್ನುವ ಲಿಮಿಟ್ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.['ಕುರುಕ್ಷೇತ್ರ' ಯುದ್ಧಕ್ಕೆ ಬಜೆಟ್ ಮಿತಿ ಇಲ್ಲ! ಎಷ್ಟು ಕೋಟಿ ಖರ್ಚಾಗುತ್ತೋ ದೇವರೇ ಬಲ್ಲ!]

  ಜುಲೈ 23ಕ್ಕೆ ಸಿನಿಮಾ ಮುಹೂರ್ತ!

  ಜುಲೈ 23ಕ್ಕೆ ಸಿನಿಮಾ ಮುಹೂರ್ತ!

  ಜುಲೈ 23 ರಂದು ನಿರ್ಮಾಪಕ ಮುನಿರತ್ನ ಅವರ ಹುಟ್ಟುಹಬ್ಬವಿದೆ. ಹೀಗಾಗಿ, ಅದೇ ದಿನ 'ಕುರುಕ್ಷೇತ್'ರ ಚಿತ್ರಕ್ಕೆ ಚಾಲನೆ ನೀಡಲಿದ್ದಾರಂತೆ.[ಕನ್ನಡದ 'ಕುರುಕ್ಷೇತ್ರ'ಕ್ಕೆ ಮುಹೂರ್ತ ಫಿಕ್ಸ್! ]

  ದರ್ಶನ್ 'ದುರ್ಯೋಧನ'

  ದರ್ಶನ್ 'ದುರ್ಯೋಧನ'

  ಅಂದ್ಹಾಗೆ, 'ಕುರುಕ್ಷೇತ್'ರದಲ್ಲಿ ಚಿತ್ರದಲ್ಲಿ ನಟ ದರ್ಶನ್ ದುರ್ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪಾತ್ರಕ್ಕಾಗಿ ಟ್ರಯಲ್ ಫೋಟೋಶೂಟ್ ಕೂಡ ನೆರವೇರಿದೆ.[ನಟ ದರ್ಶನ್ ಸದ್ದಿಲ್ಲದೇ ಹೈದರಾಬಾದ್ ಗೆ ಹಾರಿದ್ದು ಯಾಕೆ.?]

  ರವಿಚಂದ್ರನ್ 'ಕೃಷ್ಣ'

  ರವಿಚಂದ್ರನ್ 'ಕೃಷ್ಣ'

  ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ 'ಕುರುಕ್ಷೇತ್ರ'ದಲ್ಲಿ ಅಭಿನಯಿಸುತ್ತಿದ್ದು, 'ಶ್ರೀಕೃಷ್ಣ'ನ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರಂತೆ.[ಯಾರು ಏನೇ ಹೇಳಿದ್ರೂ, ಕುರುಕ್ಷೇತ್ರದಲ್ಲಿ 'ನಾನೇ' ಕೃಷ್ಣ.!]

  ಉಳಿದವರ ಕಥೆ ಏನು?

  ಉಳಿದವರ ಕಥೆ ಏನು?

  ಉಳಿದಂತೆ ಧೃತರಾಷ್ಟ್ರನಾಗಿ ಹಿರಿಯ ನಟ ಶ್ರೀನಾಥ್, ದ್ರೋಣಚಾರ್ಯರಾಗಿ ಹಿರಿಯ ನಟ ಶ್ರೀನಿವಾಸ ಮೂರ್ತಿ ಕಾಣಿಸಿಕೊಳ್ಳಲಿದ್ದಾರಂತೆ. ಇವರ ಜೊತೆ ನಟ ಸಾಯಿಕುಮಾರ್, ಅರ್ಜುನ್ ಸರ್ಜಾ, ಅಂಬರೀಶ್ ಅವರು ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಆದ್ರೆ, ಇದು ಖಚಿತವಾಗಿಲ್ಲ.[ದರ್ಶನ್ 'ಕುರುಕ್ಷೇತ್ರ'ಕ್ಕೆ ಮಹಾಗುರು ದ್ರೋಣಾಚಾರ್ಯ ಸಿಕ್ಕಾಯ್ತು.!]

  English summary
  According to Source, Challenging Star Darshan is charging Rs 10 crore for his 50th mythological movie Kurukshetra, which will be helmed by Naganna and produced by Munirathna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X