»   » ಸೂಪರ್ ಸ್ಟಾರ್ ರಜನಿ ಕಾಂತ್ ಚಿತ್ರರಂಗಕ್ಕೆ ಗುಡ್ ಬೈ!

ಸೂಪರ್ ಸ್ಟಾರ್ ರಜನಿ ಕಾಂತ್ ಚಿತ್ರರಂಗಕ್ಕೆ ಗುಡ್ ಬೈ!

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸುಮಾರು 39 ವರ್ಷಗಳ ಕಾಲ ಚಿತ್ರರಂಗದಲ್ಲಿ ಏಳು ಬೀಳುಗಳನ್ನು ಕಂಡಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೊನೆಗೂ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾರೆ. ಕಳೆದ ರಾತ್ರಿ ಇಡೀ ತಮ್ಮ ಆಪ್ತ ವಲಯದೊಡನೆ ಚರ್ಚಿಸಿ ಈ ನಿರ್ಧಾರ ಪ್ರಕಟಿಸಿದ್ದಾರೆ.

ಲಿಂಗಾ ಚಿತ್ರದ ಸುತ್ತ ಹುಟ್ಟಿಕೊಂಡ ವಿವಾದದ ಹುತ್ತದಲ್ಲಿ ಧಾನ್ಯಸ್ಥನಾಗಿ ಕುಳಿತಿದ್ದ 'ಬಾಬಾ' ರಜನಿ ಈಗ ಆಧ್ಯಾತ್ಮದತ್ತ ಮುಖ ಮಾಡಿದ್ದಾರೆ. ಕೈಲಿರುವ ಪ್ರಾಜೆಕ್ಟ್ ಮುಗಿಸಿ ದೀರ್ಘಕಾಲ ಹಿಮಾಲಯದಲ್ಲಿ ನೆಲೆಸಲು ನಮ್ಮ 'ಬಾಷಾ' ನಿರ್ಧರಿಸಿದ್ದಾರಂತೆ. [ರಜನಿ-ಇಳಯರಾಜ ಕುಡಿತ ಚಟ ಬಿಡಿಸಿದ 'ಕನ್ನಡ' ತಾಯಿ]

'ಲಿಂಗಾ ಚಿತ್ರ ಹಿಟ್ ಆಗಿದೆ ಆದರೆ, ಕೈಗೆ ಕಾಸು ಸಿಕ್ಕಿಲ್ಲ' ಎಂಬಂಥ ಪರಿಸ್ಥಿತಿ ಎದುರಾಗಿರುವುದರಿಂದ ಸ್ವಯಂ ಪ್ರೇರಿತರಾಗಿ ರಜನಿ ಅವರು ಎಲ್ಲಾ ಹೊಣೆ ಹೊತ್ತುಕೊಂಡು ಥೇಟ್ 'ಮುತ್ತು' ಚಿತ್ರದ ಅಪ್ಪನ ಪಾತ್ರಧಾರಿಯಂತೆ ಎಲ್ಲವನ್ನು ಹಂಚತೊಡಗಿದ್ದಾರೆ. ಪತ್ನಿ ಲತಾ ಅವರ ಮೇಲೆ ಕಳೆದ ವಾರ ವಂಚನೆ ಪ್ರಕರಣ ದಾಖಲಾಗಿರುವುದು ಮಗುವಿನಂಥ ಮನಸ್ಸಿನ ರಜನಿಗೆ ಸಕತ್ ನೋವು ತಂದಿದೆಯಂತೆ. ['ರಾಜಕೀಯಕ್ಕೆ ರಜನಿಕಾಂತ್ ಬರುವುದು ಬೇಡ']

ಮಗಳ ಆಗ್ರಹದಿಂದ ಚಿತ್ರಕ್ಕೆ ಸಹಿ: ಮಕ್ಕಳ ಒತ್ತಾಯಕ್ಕೆ ಮಣಿದು 'ಕೋಚಾಡಿಯನ್ ' ಚಿತ್ರ ಒಪ್ಪಿಕೊಂಡ ರಜನಿ ಸೋಲಿನ ರುಚಿ ಕಾಣಬೇಕಾಯಿತು. ಇದರ ಬೆನ್ನಲ್ಲೇ ಕೆಎಸ್ ರವಿಕುಮಾರ್ ಅವರ ನಿರ್ದೇಶನದ ಲಿಂಗಾ ಚಿತ್ರ ಭರ್ಜರಿ ಓಪನಿಂಗ್ ಪಡೆದರೂ ಕರ್ನಾಟಕ ಮೂಲದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೇಬು ತುಂಬಿಸಲಿಲ್ಲ. [ವಿಮರ್ಶೆ: ತೆರೆಯ ಮೇಲೆ ರಜನಿ ರಿಂಗರಿಂಗಾ]

 April Fools Day Special: Superstar Rajinikanth gracefully retires

ಇದೇ ಮೊದಲಲ್ಲ: ಈ ಎರಡು ಚಿತ್ರಗಳು ನೀಡಿದ ಹೊಡೆತದಿಂದ ಜರ್ಝರಿತವಾಗಿರುವ ರಜನಿ ಮನಸು ಈಗ ಮತ್ತೊಮ್ಮೆ ಆಧ್ಯಾತ್ಮದತ್ತ ಮುಖ ಮಾಡಿದೆ. ಕಳೆದ ಕೆಲ ದಿನಗಳಿಂದ ಹೆಚ್ಚೆಚ್ಚು ಧ್ಯಾನ ಸ್ಥಿತಿಯಲ್ಲೇ ರಜನಿ ಕಂಡು ಬಂದಿದ್ದಾರೆ. ಮನೆಯವರ ಮಾರುದ್ದದ ಮಾತುಕತೆಗೆ ರಜನಿಯ ಎವರ್ ಗ್ರೀನ್ ಮಂದಹಾಸವೇ ಉತ್ತರವಾಗಿದೆ.[ವಿತರಕರಿಗೆ ರಜನಿಕಾಂತ್ ಪುನರ್ಜನ್ಮ ಪ್ರಾಪ್ತಿ ]

'ನಿಮ್ಮನ್ನು ನಂಬಿಕೊಂಡು ಕೋಟಿಗಟ್ಟಲೇ ದುಡ್ಡು ನಷ್ಟವಾಗಿದೆ' ಎಂದು ವಿತರಕರು ರಜನಿ ಮನೆ ಬಾಗಿಲು ಬಡಿದಾಗ ಕಸ್ತೂರಿ ನಿವಾಸ ಚಿತ್ರದ 'ಅಣ್ಣಾವ್ರು' ಮೈಮೇಲೆ ಬಂದಂತೆ ರಜನಿ ತಾವೇ ಎಲ್ಲ ದುಡ್ಡು ಕೊಡುವುದಾಗಿ ಭರವಸೆ ನೀಡಿದ್ದು, ಇದಕ್ಕೆ ಕುಟುಂಬದಲ್ಲಿ ಉಂಟಾದ ಮನಸ್ತಾಪ ಎಲ್ಲವೂ ಗುಪ್ತಗಾಮಿನಿಯಂತೆ ಹರಿದು ರಜನಿಯ ತಲೆ ಕೊರೆದಿದೆ. [ರಜನಿಕಾಂತ್ ಬಿಜೆಪಿಗೆ ಕರೆ ತರಲು ಇದೇ ಸಕಾಲ]

ಈ ಹಿಂದೆ ಬಾಬಾ(2002) ಹಾಗೂ ಕುಚೇಲನ್ (2008) ಚಿತ್ರಗಳು ಸೋತಾಗಲೂ ರಜನಿ ಅವರು ವಿತಕರು, ನಿರ್ಮಾಪಕರ ಕೈ ಹಿಡಿದಿದ್ದರು. ಕೈಯಲ್ಲಿದ್ದ ಹಣವನ್ನೆಲ್ಲ ದಾನ ಮಾಡಿದ್ದರು. ಅದೇ ನಿರ್ಮಾಪಕರಿಗಾಗಿ ಮುಂದಿನ ಚಿತ್ರಗಳನ್ನು ನಯಾ ಪೈಸೆ ಪಡೆಯದೆ ನಟಿಸಿದ್ದರು. ತಮಿಳಿನ ಮೇರುನಟ ಎಂಜಿಆರ್ ಅವರು ಇದೇ ರೀತಿ ನಡೆದುಕೊಳ್ಳುತ್ತಿದ್ದನ್ನು ತಮಿಳು ಸಿನಿಪ್ರಿಯರು ಮರೆತಿಲ್ಲ. [ರಜನಿಗೆ ದೇವರು ಕೊಟ್ಟ ದೊಡ್ಡ ಶಾಪ!]

Superstar Rajinikanth gracefully retire

ಒಂದೆಡೆ ವಿತರಕರನ್ನು ಕಾಪಾಡಲು ರಜನಿ ಮುಂದಾದರೆ ನಿರ್ಮಾಪಕ ರಾಕ್ ಲೈನ್ ಅವರು ಲಿಂಗಾ ಹಕ್ಕುಗಳನ್ನು ಎರೋಸ್ ಎಂಟರ್ ಟೇನ್ಮೇಂಟ್ ಗೆ ಮಾರಿದರು ನಂತರ ವೆಂಧರ್ ಮೂವೀಸ್ ಹಕ್ಕು ಪಡೆಯಿತು. ಆದರೆ, ಏನು ಪ್ರಯೋಜನವಾಗಲಿಲ್ಲ.

ಒಟ್ಟಾರೆ, ಈ ಪ್ರಕರಣ ರಾಜಕೀಯ ಬಣ್ಣ ಬಳಿದುಕೊಂಡು ಯಾವಾಗ ರಜನಿ ಮನೆ ಮುಂದೆ 'ಕರಡಿ ಕುಣಿತ' ಹಾಕಲು ಶುರುವಾಯಿತೋ ಅಲ್ಲಿಗೆ ಸಕತ್ ಬೇಸತ್ತ ರಜನಿ ತಮ್ಮ ವೃತ್ತಿ ಬದುಕಿಗೆ ಅಂತ್ಯ ಹಾಡಲು ನಿರ್ಧರಿಸಿದರು ಎಂಬ ಸುದ್ದಿಯಿದೆ. [ಸ್ಟೈಲ್ ಕಿಂಗ್ 'ರಜನಿ'ಯಿಂದ ಮಾತ್ರ ಸಾಧ್ಯ!]

ರಜನಿ ಬೇಕಾದರೆ ಒಂದು ವರ್ಷ ಚಿತ್ರರಂಗಕ್ಕೆ ರಜೆ ಹಾಕಿ ಹಿಮಾಲಯಕ್ಕೆ ಹೋಗಿ ಬರಲಿ, ಅಥವಾ ಅವರ ಅಭಿಮಾನಿಗಳನ್ನು ಕಾಣಲು ಜಪಾನಿಗೆ ಹೋಗಲಿ ಅದರೆ, ಚಿತ್ರರಂಗಕ್ಕೆ ಈ ರೀತಿ ಗುಡ್ ಬೈ ಹೇಳುತ್ತಾರೆ ಎಂದರೆ ನಂಬಲು ಸಾಧ್ಯವೇ? ಅಂತೆ-ಕಂತೆ ಸುದ್ದಿ ಮುಂದೊಂದು ದಿನ ನಿಜವಾಗಲೂಬಹುದು, ಅದರೆ, ಇಂದು ಮಾತ್ರ ಈ ಸುದ್ದಿ ನಿಜವಲ್ಲ. ಇದು 'ಮೂರ್ಖರ ದಿನಾಚರಣೆ' ಗಾಗಿ ಬರೆದ ಕಲ್ಪಿತ ವರದಿ ...ದಯವಿಟ್ಟು ಗಮನಿಸಿ!

English summary
It has been 39 years since superstar Rajinikanth entered the film industry, he has come to a stage where he must gracefully retire and call it a day.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada