»   » ಕನ್ನಡತಿ ಮೇಘನಾ, ಮಲಯಾಳಂ ಅನೂಪ್ ಬಗ್ಗೆ ಗುಸುಗುಸು

ಕನ್ನಡತಿ ಮೇಘನಾ, ಮಲಯಾಳಂ ಅನೂಪ್ ಬಗ್ಗೆ ಗುಸುಗುಸು

Posted By:
Subscribe to Filmibeat Kannada
ಇದೊಂದು ಮಲೆಯಾಳಂ ಚಿತ್ರರಂಗದಲ್ಲಿ ಹಬ್ಬಿರುವ ಗಾಳಿಸುದ್ದಿ. ಆದರೆ ಅದು ಕನ್ನಡದ ನೆಲಕ್ಕೂ ಕಾಲಿಟ್ಟಿದೆ. ಏಕೆಂದರೆ ಈ ಗಾಸಿಪ್ ನಾಯಕಿ ಕನ್ನಡದ ತಾರಾದಂಪತಿ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಶಾಯ್ ಮಗಳು ಮೆಘನಾ ರಾಜ್. ಏನದು ಗಾಸಿಪ್? ಯಾಕೆ ಹೀಗೆ?

ಕನ್ನಡತಿ ಮೆಘನಾ ಮಿಂಚುತ್ತಿರುವುದೇ ಮಲಯಾಳಂ ಚಿತ್ರರಂಗದಲ್ಲಿ. ಅದ್ಯಾಕೋ ಸ್ಯಾಂಡಲ್ ವುಡ್ ಮೆಘನಾಗೆ ಭರವಸೆಯ ಬಾಗಿಲು ತೆರೆಯಲೇ ಇಲ್ಲ. ಮೇಘನಾರೂ ಅಷ್ಟೇ ಚಿಂತಿಸುತ್ತಾ ಮನೆಯಲ್ಲಿ ಕೂಡಲಿಲ್ಲ. ಮಲಯಾಳಂ ಚಿತ್ರರಂಗದತ್ತ ಮುಖಮಾಡಿದರು, ಅಲ್ಲಿ ಯಶಸ್ವಿ ನಟಿ ಎನಿಸಿ ಕನ್ನಡ ಬಾವುಟ ಹಾರಿಸಿದರು.

ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಭೇಷ್ ಅನ್ನಬಹುದಿತ್ತು. ಆದರೆ ಅಲ್ಲಿ ಗಾಸಿಪ್ ಗಳಿಗೆ ಆಹಾರವಾಗಿದ್ದಾರೆ ಮೇಘನಾ ರಾಜ್. ನಟ ಅನೂಪ್ ಮೆನನ್ ಹಾಗೂ ಮೇಘನಾ ನಡುವೆ ಗೆಳೆತನವನ್ನು ಮೀರಿದ ಏನೋ ಇದೆ ಎಂಬುದು ಮಲಯಾಳಂ ಚಿತ್ರರಂಗದಲ್ಲಿ ಹುಟ್ಟಿದ್ದ ಸಂಶಯದ ಬೀಜ. ಅದೀಗ ಮೊಳೆತು ಮರವಾಗಲು ಪ್ರಾರಂಭಸಿದೆ.

ಆದರೆ ಈ ಬಗ್ಗೆ ಈ ಜೋಡಿ ಹೇಳುವುದೇ ಬೇರೆ. "ನಮ್ಮ ನಡುವೆ ಅಂಥದ್ದೇನಿಲ್ಲ. ನಾವಿಬ್ಬರು ಒಟ್ಟಿಗೆ ನಟಿಸುತ್ತಿರುವುದು ಬಿಟ್ಟರೆ ನಾವು ಪ್ರೇಮ ಪಕ್ಷಿಗಳೇನಲ್ಲ. ಕಳೆದ ಎರಡು ಮೂರು ತಿಂಗಳುಗಳಿಂದ ಮಲಯಾಳಂ ಚಿತ್ರರಂಗದಲ್ಲಿ ಹಬ್ಬಿರುವ ಈ ಸುದ್ದಿ ಶುದ್ಧ ಸುಳ್ಳು" ಎಂಬುದು ಇಬ್ಬರೂ ನೀಡುವ ಸ್ಪಷ್ಟನೆ.

ಮೇಘನಾ ರಾಜ್-ಅನೂಪ್ ಮೆನನ್ ಮೇಲೆ ಇಂತಹ ಆಪಾದನೆಗಳು ಬರಲು ಕಾರಣ, ಬರೋಬ್ಬರಿ ನಾಲ್ಕು ಚಿತ್ರಗಳಲ್ಲಿ ಮೇಘನಾಗೆ ಅನೂಪ್ ನಾಯಕನಾಗಿರುವುದು. ತೆರೆಯ ಮೇಲಿನ ಬೊಂಬಾಟ್ ಕೆಮೆಸ್ಟ್ರಿಯೇನೋ ಸರಿ, ಆದರೆ ಇದರ ಹೊರತಾಗಿಯೂ ಇವರಿಬ್ಬರ ನಡುವೆ ಖಂಡಿತ ಏನೋ ಇದೆ ಎನ್ನುತ್ತಿದೆ ಮಲಯಾಳಂ ಚಿತ್ರರಂಗ.

ಈ ಬಗ್ಗೆ ಅನೂಪ್ ನೀಡಿರುವ ಉತ್ತರ ಕತೂಹಲಕಾರಿಯಾಗಿದೆ. "ಬಣ್ಣದ ಲೋಕದಲ್ಲಿ ಗಾಸಿಪ್ ಗಳು ಮಾಮೂಲಿ ಬಿಡಿ. ಆದರೆ ನಮ್ಮಿಬ್ಬರ ನಡುವೆ ಮಾಡಲಾಗಿರುವ ಈ ಆರೋಪದಲ್ಲಿ ಹುರುಳಿಲ್ಲ. ಹಾಗೇ ಇದರಿಂದ ನಮ್ಮಿಬ್ಬರಿಗೂ ನಷ್ಟವೂ ಇಲ್ಲ. ನಾವಿಬ್ಬರೂ ತೆರೆಯ ಮೇಲೆ ಒಳ್ಳೆ ಜೋಡಿ ಎನ್ನಿಸಿಕೊಂಡಿದ್ದೇವೆ. ಹೀಗಾಗಿ, ನಿರ್ಮಾಪಕರು ಹಾಗೂ ನಿರ್ದೇಶಕರು ನಮ್ಮಿಬ್ಬರನ್ನೇ ಹಾಕಿಕೊಂಡು ಮತ್ತೆ ಮತ್ತೆ ಚಿತ್ರ ಮಾಡುತ್ತಿದ್ದಾರೆ ಅಷ್ಟೇ. .

ಮುಂದುವರಿದ ಅನೂಪ್ ಹೇಳಿರುವುದು ಈ ಕಥೆ..."ಇತ್ತೀಚೆಗಷ್ಟೇ ನನಗೆ ದೂರವಾಣಿ ಕರೆ ಮಾಡಿದ್ದ ಟಿವಿ ಪತ್ರಕರ್ತರೊಬ್ಬರು, ಮೇಘನಾ ಫೋನ್ ನಂಬರ್ ಕೇಳಿದ್ದರು. ಆದರೆ ಆಕೆಯ ನಂಬರ್ ನನ್ನಲ್ಲಿರಲಿಲ್ಲ. ನಂತರ ಯಾರ್ಯಾರನ್ನೋ ಕೇಳೀ ನಂಬರ್ ಪಡೆದು ಪತ್ರಕರ್ತರಿಗೆ ಕೊಟ್ಟೆ.

ಗಾಸಿಪ್ ಪ್ರಕಾರ ನಾನು ಸಂಬಂಧ ಹೊಂದಿದ್ದೇನೆ ಎನ್ನಲಾಗಿರುವ ನಟಿಯ ಮೊಬೈಲ್ ನಂಬರೇ ನನ್ನಲ್ಲಿರಬೇಕಿತ್ತಲ್ಲವೇ?" ಎಂದು ಪ್ರಶ್ನಿಸಿ ಜೋರಾಗಿ ನಕ್ಕಿದ್ದಾರೆ ಅನೂಪ್. ಇನ್ನು ಮೇಘನಾರೂ ಅಷ್ಟೇ, ಅನೂಪ್ ಜತೆಗಿನ ಕುಚ್ ಕುಚ್ ಬಗ್ಗೆ ನಕಾರಾತ್ಮಕ ಉತ್ತರ ನೀಡುತ್ತಾ ಬಂದಿದ್ದಾರೆ.

"ನಮ್ಮ ಸಂಬಂಧ ಗೆಳೆತನವನ್ನು ಮೀರಿಲ್ಲ, ಅದಕ್ಕಿಂತ ಕೆಳಗೂ ಇಲ್ಲ. ಆದರೆ ನಾವು ಪ್ರೇಮಿಗಳಂತೂ ಅಲ್ಲವೇ ಅಲ್ಲ" ಎಂದು ಇತ್ತೀಚಿಗಷ್ಟೇ ಹೇಳುವ ಮೂಲಕ ಮೇಘನಾ, ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಅದರಿಂದ ಯಾವ ಪ್ರಯೋಜನವೂ ಆಗಿಲ್ಲ. ಗಾಸಿಪ್ ಇನ್ನೂ ಜೋರಾಗಿಯೇ ಹಬ್ಬುತ್ತಿದೆ.

ಅನೂಪ್‌ರಿಂದಾಗಿಯೇ ಮೇಘನಾಗೆ ಮಲಯಾಳದಲ್ಲಿ ಅವಕಾಶಗಳು ಸಿಗುತ್ತಿವೆ ಎಂಬುದು ಹಲವರ ಆರೋಪ. ಆದರೆ ಇದನ್ನು ಅನೂಪ್ ಒಪ್ಪುತ್ತಿಲ್ಲ. "ನಾನು ಯಾರ ಮೇಲೂ ಪ್ರಭಾವ ಬೀರಿಲ್ಲ. ಆಕೆಯೇ ನಾಯಕಿ ಎನ್ನುವುದು ನನಗೆ ಗೊತ್ತಾಗುವುದು ಮುಹೂರ್ತಕ್ಕೆ ಬಂದಾಗ. ನಾನೇ ಮುಂದೆ ನಿಂತು ಮೆಘನಾರನ್ನೇ ನಾಯಕಿಯನ್ನಾಗಿ ಆರಿಸಿದ ಚಿತ್ರ 'ಒರು ನ್ಯೂಯಾರ್ಕ್ ಸಯಹ್ನಂ' ಮಾತ್ರ" ಎಂದಿದ್ದಾರೆ ಅನೂಪ್.

ಇಷ್ಟೆಲ್ಲಾ ಸ್ಪಷ್ಟೀಕರಣ ಕೊಟ್ಟಮೇಲೂ ಈ ಗಾಸಿಪ್ ಹರಿದಾಡುತ್ತಲೇ ಇದೆ. ಮೇಘನಾ ಹಾಗೂ ಅನೂಫ್ ಹಾಗೇನಿಲ್ಲ ಎನ್ನುತ್ತಲೇ ಇದ್ದಾರೆ. ಅದು ಎಲ್ಲಿಯವರೆಗೆ ಮುಂದುವರಿಯುವುದೋ ಗೊತ್ತಿಲ್ಲ. ಕನ್ನಡದ ಹುಡುಗಿ ಮೇಘನಾ ರಾಜ್ ಮೇಲಿನ ಆರೋಪವೀಗ ಕರ್ನಾಟಕಕ್ಕೂ ಕಾಲಿಟ್ಟಿದೆ, ಮುಂದೇನಾಗುವುದೋ...! (ಒನ್ ಇಂಡಿಯಾ ಕನ್ನಡ)

English summary
If reports are to be believed, actor Anoop Menon off-screen link up with Meghana Raj is doing rounds. However Anoop also denies that he has influenced casting her in some of the recent flicks.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada