For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ ಬಿಟ್ಟು ತಮಿಳು ನಿರ್ದೇಶಕನ ಜೊತೆ ಕೈಜೋಡಿಸಿದ ಮಹೇಶ್ ಬಾಬು?

  |

  ತೆಲುಗು ನಟ ಮಹೇಶ್ ಬಾಬು 'ಸರ್ಕಾರು ವಾರಿ ಪಾಟ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಕಾರಣಕ್ಕೆ ಸಿನಿಮಾದ ಚಿತ್ರೀಕರಣ ಕುಂಟುತ್ತಾ ಸಾಗುತ್ತಿದೆ.

  'ಸರ್ಕಾರು ವಾರಿ ಪಾಟ' ಸಿನಿಮಾದ ಬಳಿಕ ಮಹೇಶ್ ಬಾಬು ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಹೊಸದಾಗಿ ಬಂದಿರುವ ಸುದ್ದಿಯೆಂದರೆ ಮಹೇಶ್ ಬಾಬು ಅವರು ತಮಿಳು ನಿರ್ದೇಶಕನ ಸಿನಿಮಾದಲ್ಲಿ ನಟಿಸಲು ತಯಾರಾಗಿದ್ದಾರಂತೆ.

  ಸೂಕ್ಷ್ಮ ವಿಷಯಕ್ಕೆ ಕಮರ್ಷಿಯಲ್ ಹೊದಿಕೆ ಹೊದಿಸಿ ಸಿನಿಮಾಗಳನ್ನು ಪ್ರೆಸೆಂಟ್‌ ಮಾಡುವುದರಲ್ಲಿ ನಿಸ್ಸೀಮರಾಗಿರುವ ನಿರ್ದೇಶಕ ಲೋಕೇಶ್ ಕನಕರಾಜ್ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ.

  ಲೋಕೇಶ್ ಕನಕರಾಜ್ ಈಗಾಗಲೇ ಮಹೇಶ್ ಬಾಬುಗೆ ಕತೆ ಹೇಳಿದ್ದು, ಕತೆ ಮಹೇಶ್‌ಗೆ ಬಹಳ ಹಿಡಿಸಿದೆಯಂತೆ. ಸಿನಿಮಾಕ್ಕೆ ಮಹೇಶ್‌ ಈಗಾಗಲೇ ಯೆಸ್ ಅಂದಿದ್ದು, 'ಸರ್ಕಾರು ವಾರಿ ಪಾಟ' ಸಿನಿಮಾ ಮುಗಿಯುತ್ತಿದ್ದಂತೆ ಲೋಕೇಶ್-ಮಹೇಶ್ ಜೋಡಿಯ ಸಿನಿಮಾ ಪ್ರಾರಂಭವಾಗಲಿದೆ.

  ಕಾಡಿನಲ್ಲಿ ನಡೆವ ಥ್ರಿಲ್ಲರ್ ಕತೆಯನ್ನು ಮಹೇಶ್ ನಾಯಕ, ರಾಜಮೌಳಿ ನಿರ್ದೇಶಕ

  ಕಾಡಿನಲ್ಲಿ ನಡೆವ ಥ್ರಿಲ್ಲರ್ ಕತೆಯನ್ನು ಮಹೇಶ್ ನಾಯಕ, ರಾಜಮೌಳಿ ನಿರ್ದೇಶಕ

  ರಾಜಮೌಳಿ ಜೊತೆಗೆ ಮಹೇಶ್ ಬಾಬು ಮುಂದಿನ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಕಾಡಿನ ಒಳಗೆ ನಡೆಯುವ ಆಕ್ಷನ್ ಥ್ರಿಲ್ಲರ್ ಕತೆ ಇದಾಗಿರಲಿದ್ದು, ರಾಜಮೌಳಿ ತಂದೆ ವಿಜಯೇಂದ್ರ ಸಿನಿಮಾಕ್ಕೆ ಕತೆ ಬರೆದಿದ್ದಾರೆ. ಆದರೆ ಲೋಕೇಶ್ ಕನಕರಾಜನ್ ಸಿನಿಮಾದ ನಂತರ ರಾಜಮೌಳಿ ಜೊತೆಗಿನ ಮಹೇಶ್ ಬಾಬು ಸಿನಿಮಾ ಆರಂಭವಾಗಲಿದೆ.

  ತ್ರಿವಿಕ್ರಮ್ ಕತೆಗೆ ನೋ ಎಂಬ ಮಹೇಶ್ ಬಾಬು

  ತ್ರಿವಿಕ್ರಮ್ ಕತೆಗೆ ನೋ ಎಂಬ ಮಹೇಶ್ ಬಾಬು

  ತೆಲುಗಿನ ಮತ್ತೊಬ್ಬ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಸಹ ಮಹೇಶ್ ಬಾಬು ಅವರಿಗೆ ಕತೆ ಹೇಳಿದ್ದರು. ಆದರೆ ಲೋಕೇಶ್ ಕನಕರಾಜನ್ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದ ಕಾರಣ ತ್ರಿವಿಕ್ರಮ್ ಕತೆಯನ್ನು ಮಹೇಶ್ ನಿರಾಕರಿಸಿದ್ದಾರಂತೆ.

  ಕಮಲ್‌ ಜೊತೆ ಸಿನಿಮಾ ಮಾಡುತ್ತಿರುವ ಲೋಕೇಶ್

  ಕಮಲ್‌ ಜೊತೆ ಸಿನಿಮಾ ಮಾಡುತ್ತಿರುವ ಲೋಕೇಶ್

  ಇನ್ನು ಲೋಕೇಶ್ ಕನಕರಾಜನ್ ಪ್ರಸ್ತುತ ಕಮಲ್ ಹಾಸನ್ ಜೊತೆಗೆ 'ವಿಕ್ರಂ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಮುನ್ನ ಅವರು ಸೂಪರ್ ಹಿಟ್ ಸಿನಿಮಾಗಳಾದ 'ಮಾನಗರಂ', 'ಖೈದಿ' ವಿಜಯ್ ನಟನೆಯ 'ಮಾಸ್ಟರ್' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

  English summary
  Tamil movie director Lokesh Kanagaraj will direct a movie for Telugu star Mahesh Babu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X