X
ಕವಚ

ಕವಚ

Crime | 05 Apr 2019 | U/A |
Kannada

2.5 /5 Users

4 /5 Filmibeat

ಕವಚ ಕಥೆ

ಶಿವ ರಾಜಕುಮಾರ್   ಮತ್ತು  ಇಶಾ ಕೊಪ್ಪಿಕರ್   ಮುಖ್ಯ ತಾರಾಗಣದಲ್ಲಿರುವ ಕವಚ  ಚಿತ್ರವನ್ನು  ಜಿ ವಿ ಆರ್  ನಿರ್ದೇಶಿಸಿದ್ದಾರೆ .ಸತ್ಯನಾರಾಯಣ ಅವರು  ಬಂಡವಾಳ ಹೂಡಿದ್ದು , ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ.   ಚಿತ್ರಕಥೆ ಜಯರಾಮ (ಶಿವರಾಜ್ ಕುಮಾರ್) ಒಬ್ಬ ಅಂಧ ಹುಡುಗ. ತಂಗಿ ಮದುವೆಗೆ ಹಣ ಹೊಂದಿಸಲು ಸಾಕಷ್ಟು ಕಷ್ಟ ಪಡುತ್ತಿರುತ್ತಾನೆ. ಬೆಂಗಳೂರಿನ ಅಪಾರ್ಟ್ ಮೆಂಟಿನಲ್ಲಿ ಕೆಲಸ ಮಾಡುವ ಜಯರಾಮ ಅದೇ ಅಪಾರ್ಟ್ ಮೆಂಟಿನ ಒಬ್ಬ ಜಡ್ಜ್ ಪ್ರಾಣಕ್ಕೆ ಆಪತ್ತು ಬಂದಾಗ ಕಾಪಾಡಲು ಮುಂದಾಗುತ್ತಾನೆ. ಜಡ್ಜ್ ಮಗಳಿಗೆ 'ಕವಚ' ರೀತಿ ಇರುತ್ತಾನೆ.   ಜಯರಾಮ ಅಂಧನಾಗಿದ್ದರೂ ವಿಶೇಷ ಗ್ರಹಣ ಶಕ್ತಿ ಹೊಂದಿರುತ್ತಾನೆ. ವಾಸನೆ, ಶಬ್ಧದ ಮೂಲಕ ಎದುರುಗಡೆ ಇರುವ ವ್ಯಕ್ತಿಯನ್ನು ಗುರುತಿಸುತ್ತಾನೆ. ಹೀಗಿರುವಾಗ, ಜಯರಾಮ ಹೇಗೆ ಒಬ್ಬ ಸೀರಿಯಲ್ ಕಿಲ್ಲರ್ ನಿಂದ ಜಡ್ಜ್ ಮಗಳನ್ನು ಕಾಪಾಡುತ್ತಾನೆ ಎನ್ನುವುದೇ ಚಿತ್ರದ ಕಥೆ. ಚಿತ್ರಕ್ಕೆ ಅನಂತನಾಗ್ ಹಿನ್ನಲೆ ಧ್ವನಿ ನೀಡಿದ್ದಾರೆ. ಚಿತ್ರದ ಪ್ರಮುಖ ಅಂಶಗಳನ್ನು ಮತ್ತು ಕ್ಲೈಮಾಕ್ಸ್ ನ್ನು ಅನಂತ್ ಧ್ವನಿಯಲ್ಲಿ ಕೇಳಬಹುದು. ಈ ಚಿತ್ರವು ಮಲಯಾಳಂ ಸೂಪರ್ ಹಿಟ್  ಚಿತ್ರ ` ಒಪ್ಪಂ' ದ ಅಧಿಕೃತ ರೀಮೇಕ್ ಆಗಿದೆ.ಮೂಲ ಚಿತ್ರದಲ್ಲಿ ಮೋಹನಲಾಲ್ ನಟಿಸಿದ್ದಾರೆ.   MOVIE TRIVIA   1. ಶಿವರಾಜ್ ಕುಮಾರ್ ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಅಂಧನ ಪಾತ್ರ ಮಾಡುತ್ತಿದ್ದಾರೆ.ಶಿವರಾಜ್ ಕುಮಾರ್ 14 ವರ್ಷದ ಬಳಿಕ ರಿಮೇಕ್ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ.   2. ಚಿತ್ರದ  ಟೀಸರ್  ನ್ನು  ಬೆಂಗಳೂರಿನ ಜಿ ಪಿ ನಗರದ ರಮಣ ಮಹರ್ಷಿ ಅಂಧ ಶಾಲೆಯಲ್ಲಿ ಅನಾವರಣ ಮಾಡಲಾಗಿದೆ. ಶಿವಣ್ಣ ತಮ್ಮ ಶಾಲೆಗೆ ಬಂದಿದ್ದು, ಅಲ್ಲಿನ ಅಂಧ ಮಕ್ಕಳಿಗೆ ಬಹಳ ಖುಷಿ ನೀಡಿತ್ತು. ಶಿವರಾಜ್ ಕುಮಾರ್ ಅವರಿಗೆ ಅವರ ನಟನೆಯ 'ವಜ್ರಕಾಯ' ಸಿನಿಮಾದ 'ಉಸಿರೇ ಉಸಿರೇ...' ಹಾಡು ಹಾಡುವ ಮೂಲಕ ಶುಭಾಶಯ ತಿಳಿಸಿದರು. ಮಕ್ಕಳ ಹಾಡು ಶಿವಣ್ಣನಿಗೆ ಸಂತೋಷ ನೀಡಿತು.   3. ಕವಚ ಚಿತ್ರದ ಆಡಿಯೋ ಹಕ್ಕುಗಳನ್ನು ಜೀ ಮ್ಯೂಸಿಕ್ ಕಂಪನಿ 43 ಲಕ್ಷಕ್ಕೆ ಪಡೆದಿದೆ.   4. ಚಿತ್ರದ `ರೆಕ್ಕೆಯ ಕುದುರೆ ಏರಿ' ಗೀತೆಯನ್ನು 2019, ಮಾರ್ಚ್ 15 ರಂದು ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು.  
Read More

ಕವಚ ಕಲಾವಿದರು ಮತ್ತು ಸಿಬ್ಬಂದಿ

ಕವಚ ಕ್ರೂ ಮಾಹಿತಿ

ನಿರ್ದೇಶಕ ಜಿ ವಿ ಆರ್ ವಾಸು
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ಎಮ್.ಎಮ್.ವಿ. ಸತ್ಯನಾರಾಯಣ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕವಚ ವಿಮರ್ಶಕರ ವಿಮರ್ಶೆ

kannada.filmibeat.com
'ಕವಚ' ಚಿತ್ರದ ಬಗ್ಗೆ ಒಂದೇ ಸಾಲಿನಲ್ಲಿ ಹೇಳಬೇಕು ಅಂದರೆ ಇದು ಅಂಧನ ಅಂದವಾದ ಸಿನಿಮಾ. ಮಲೆಯಾಳಂ 'ಒಪ್ಪಂ' ಸಿನಿಮಾವನ್ನು ಕನ್ನಡಿಗರು ಒಪ್ಪುವ ಹಾಗೆ ಮಾಡಿದ್ದಾರೆ. ಶಿವಣ್ಣ ನಟನ ಸಾಮರ್ಥ್ಯ ತೋರಿಸುವ ಅದ್ಭುತ ಸಿನಿಮಾ ಇದು. ಕ್ರೌರ್ಯ ಹಾಗೂ ಕರುಣೆಯ ಮಿಶ್ರಣವೇ 'ಕವಚ'.ಲಾಂಗು, ಲವ್ವು ಎಲ್ಲರದಿಂದ ಹೊರಬಂದು ಮಾಡಿರುವ ಸುಂದರ ಸಿನಿಮಾ ಇದು. ಕಮರ್ಷಿಯಲ್ ಅಂಶಗಳನ್ನು ಕಟ್ಟಿಟ್ಟು ಚಿತ್ರವನ್ನು ನೋಡಬೇಕಿದೆ.

ಕವಚ ಪಾಟ್ಲುಗಳು

ಕವಚ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕವಚ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+