»   » ದರ್ಶನ್ ಗೆ ಕೃತಜ್ಞತೆ ಅನ್ನೋದೇ ಇಲ್ಲಾ, ಗಣೇಶ್

ದರ್ಶನ್ ಗೆ ಕೃತಜ್ಞತೆ ಅನ್ನೋದೇ ಇಲ್ಲಾ, ಗಣೇಶ್

Posted By:
Subscribe to Filmibeat Kannada
Actor Darshan & Producer Ganesh
ನಮ್ಮ ನಟರು ಸ್ಟಾರ್ ಆದಮೇಲೆ ಸಹಾಯ ಮಾಡಿದವರನ್ನಾ ನೆನಪಿಟ್ಟು ಕೊಳ್ಳುವುದಿಲ್ಲ. ಇದು ನನ್ನ ಒಬ್ಬನ ತೊಂದರೆಯಲ್ಲ, ಕಷ್ಟ ಕಾಲದಲ್ಲಿ ಕೈ ಹಿಡಿದಂತ ಒಂದಷ್ಟು ಜನ ನಿರ್ಮಾಪಕರನ್ನು ಸೇರಿಸಿ ಎಲ್ಲರಿಗೂ ಸೇರಿ ಒಂದು ಸಿನಿಮಾ ಮಾಡಿಕೊಡಲಿ, ಅದೂ ಆಗಲ್ಲ ಅಂದ್ರೆ ಹೇಗೆ? ಕಾಲ್ ಶೀಟ್ ಕೇಳಿದ್ರೆ ಕೊಡಕ್ಕಾಗಲ್ಲಾ ಅಂತಾರೆ. ದರ್ಶನ್ ಗೆ ಕೃತಜ್ಞತೆ ಅನ್ನೋದು ಬೇಡ್ವಾ? ಎಂದು ನಿರ್ಮಾಪಕ ಗಣೇಶ್ ಬೇಸರ ವ್ಯಕ್ತ ಪಡಿಸಿದ್ದಾರೆ.

ನಾನು ನಿರ್ಮಿಸಿದ ದೇವರಮಗ ಚಿತ್ರದಲ್ಲಿ ದರ್ಶನ್ ಆವರಿಗೆ ಅವಕಾಶ ಕೊಡಲು ಕಷ್ಟಪಟ್ಟೆ. ದರ್ಶನ್ ಗೆ ಮೊದಲ ಬಾರಿ ದೊಡ್ಡ ಬ್ಯಾನರ್ ನಲ್ಲಿ ಅವಕಾಶ ಕೊಡಿಸಿದವನು ನಾನು. ದೇವರಮಗ ಚಿತ್ರ ಮಾಡುವಾಗ ವಿಲನ್ ಪಾತ್ರಕ್ಕೆ ದರ್ಶನ್ ಆಯ್ಕೆ ಮಾಡಿದೆ. ನಿರ್ದೇಶಕ ಡಿ ರಾಜೇಂದ್ರ ಸಿಂಗ್ ಬಾಬು ಇವರೆಲ್ಲಾ ಆಗಲ್ಲ, ಬಾಂಬೆಯವರೇ ಬೇಕಂದ್ರು. ಅವರನ್ನು ಹೇಗೋ ಕನ್ವಿನ್ಸ್ ಮಾಡಿಸಿ ದರ್ಶನ್ ಗೆ ಅವಕಾಶ ಕೊಡಿಸಿದೆ.

ಎಂಜಿ ರೋಡಲ್ಲಿ ನಲವತ್ತು ಸಾವಿರ ನನ್ನ ಸ್ವಂತ ಜೇಬಿನಿಂದ ಖರ್ಚು ಮಾಡಿ ಒಳ್ಳೊಳ್ಳೆ ಬಟ್ಟೆ ಕೊಡಿಸಿದೆ. ಆದರೆ ದರ್ಶನ್ ಮಾಡುತ್ತಿರುವುದು ಏನು? ಯಾರು ಎಷ್ಟು ದುಡ್ಡು ಕೊಡ್ತಾರೆ ಅವರಿಗೆ ಮಾತ್ರ ಕಾಲ್ ಶೀಟ್ ನೀಡುತ್ತಿದ್ದಾರೆ.ಅವತ್ತು ಅವಕಾಶ ಕೊಟ್ಟ ನನಗೆ ಇಂದು ಒಂದು ಕಾಲ್ ಶೀಟ್ ಕೇಳಿದ್ರೆ ಕೊಡ್ತಾ ಇಲ್ಲಾ ಎಂದು ಹೇಳಿಕೆ ನೀಡಿದ್ದಾರೆ.

ಹೊಸ ಹೊಸ ನಿರ್ಮಾಪಕರು ಎಲ್ಲಿಂದಲೋ ದುಡ್ಡು ಹೊಂದಿಸಿ ಚಿತ್ರ ತೆಗೆಯುತ್ತಾರೆ. ನಾವು ಕಷ್ಟಪಟ್ಟು ಇಷ್ಟು ಸಂಭಾವನೆ ಅಂತಾ ಫಿಕ್ಸ್ ಮಾಡ್ಸಿರ್ತೀವಿ. ಹತ್ತು ಲಕ್ಷ ಜಾಸ್ತಿ ಕೊಟ್ಟು ನಮ್ಮ ಕೂಳಿಗೆ ಹೊಸ ನಿರ್ಮಾಪಕರು ಕಲ್ಲು ಹಾಕುತ್ತಿದ್ದಾರೆ.

ನಮಗೆ ಸಿನಿಮಾ ಒಂದೇ ಗೊತ್ತಿರುವುದು. ಅದನ್ನು ಬಿಟ್ಟು ಬೇರೇನೂ ಬರಲ್ಲ. ಇಲ್ಲೀ ದುಡೀತೀವಿ, ಇಲ್ಲೀ ಹಾಕ್ತೀವಿ. ಆದರೆ ಕಷ್ಟ ಕಾಲದಲ್ಲಿ ಕೈಹಿಡಿದ ನಿರ್ಮಾಪಕರನ್ನು ಕಡೆಗಣಿಸುವುದು ಸರಿಯಲ್ಲ ಎಂದು ನಿರ್ಮಾಪಕ ಗಣೇಶ್ ಹೇಳಿದ್ದಾರೆ.

English summary
Kannada actor Darshan Toogudeepa refuse to give call sheet to producer Ganesh. It was Ganesh who gave Darshan a break through big banner movies but the actor is not in ' return the favor' mood.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X