»   » ಹಿಡಿ ನಿದ್ದೆ ಮಾತ್ರೆ ನುಂಗಿದ ನಂತರವೂ ಬದುಕುಳಿದಿರುವ ಋತು

ಹಿಡಿ ನಿದ್ದೆ ಮಾತ್ರೆ ನುಂಗಿದ ನಂತರವೂ ಬದುಕುಳಿದಿರುವ ಋತು

Posted By: Staff
Subscribe to Filmibeat Kannada

ನಾನೀಗ ಹೊಸ ಋತು. ಆದದ್ದಾಗಿಹೋಯಿತು. ಅದರಿಂದ ಕಲಿತ ಪಾಠ ಸಾಕಷ್ಟು : ಶಬಾನ ಉರುಫ್‌ ಋತು.

ಕಾವ್ಯಾಂಜಲಿ ಫೇಮ್‌ನ, ಅಂಜಲಿ ಎಂದೇ ಮನೆಮಾತಾಗಿರುವ ಋತು ನಾಡಿ ಕತ್ತರಿಸಿಕೊಂಡು, ಹೊಟ್ಟೆ ತುಂಬಾ ನಿದ್ದೆ ಮಾತ್ರೆ ನುಂಗಿದ್ದರೂ ಕೂಡ ಅವರೇ ಹೇಳಿಕೊಳ್ಳುತ್ತಿರುವಂತೆ ಅದು ಆತ್ಮಹತ್ಯೆಯಲ್ಲ. ಬೇಜಾರಾಗಿದ್ದಕ್ಕೆ ದಿಕ್ಕೇ ತೋಚದೆ ಏನೋ ಮಾಡಿಕೊಂಡದ್ದು.

ಅವರೇ ಹೇಳಿಕೊಳ್ಳುವಂತೆ ಅವರೀಗ ಸಂಪೂರ್ಣ ಬದಲಾಗಿದ್ದಾರೆ. ಅಂದರೆ, ಮೊದಲು ಏನೋ ಹುಳುಕಿತ್ತು ಅನ್ನೋದು ದಿಟವಾಯಿತು. ಆದರೆ ಅದೇನನ್ನೂ ಅವರು ಕೆದಕೋಕೆ ಇಷ್ಟಪಡುವುದಿಲ್ಲ. ಈಗವರು ಬಾಯಿಬಿಟ್ಟರೆ ಹೊರಡುವ ಮಾತುಗಳು ಫಿಲಾಸಫಿಕಲ್‌ ಆಗಿರುತ್ತವೆ. ಬದುಕು- ಒತ್ತಡ- ಗುರಿ ಹೀಗೆ ಮಾತು ಜೀವನ ದರ್ಶನದ ಕಡೆಗೆ ವಾಲುತ್ತದೆ.

ಸ್ಯಾಂಪಲ್‌ ನೋಡಿ...
ನಾನು ಒಂಥರಾ ಹುಡುಗಿ. ಮೊದಲು ಸರಿಯಾಗಿ ಡ್ರೆಸ್ಸೇ ಮಾಡಿಕೊಳ್ಳುತ್ತಿರಲಿಲ್ಲ. ತಲೆ ಕೂಡ ಬಾಚಿಕೊಳ್ಳುತ್ತಿರಲಿಲ್ಲ. ಸೋದರಿ ಸಬೀನಾ ಬಯ್ದು ಬಯ್ದು ಸರಿ ಮಾಡಿದಳು. ಈಗ ನನಗೆ ಜೀವನದ ಮೇಲೆ ತುಂಬಾ ಪ್ರೀತಿಯಿದೆ. ಜೀವನ ಅಂದಮೇಲೆ ಕಷ್ಟ, ಜಗಳ, ನೋವು ಇದ್ದದ್ದೇ. ಆದರೆ ನಾನು ಅವನ್ನ ಸರಿಯಾಗಿ ಹ್ಯಾಂಡಲ್‌ ಮಾಡಲಿಲ್ಲ ಅನಿಸುತ್ತೆ. ಅದು ಯಾಕೆ ಹಾಗೆ ಮಾಡಿಕೊಂಡೆನೋ ನನಗೇ ಗೊತ್ತಿಲ್ಲ. ಸಾಯಬೇಕು ಅಂತ ಖಂಡಿತ ಹಾಗೆ ಮಾಡಲಿಲ್ಲ. ಸದ್ಯ, ಸ್ನೇಹಿತರೆಲ್ಲರ ಸಹಾಯದಿಂದ ಬದುಕಿದೆ. ಇನ್ನು ನಾನು ಕ್ಷುಲ್ಲಕ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಗುರಿ ದೊಡ್ಡದಿದೆ. ಸಾಧನೆಯ ಹಾದಿಯಲ್ಲಿನ್ನು ನನ್ನ ಪ್ರಯಾಣ. ನೌ ಐ ಆ್ಯಮ್‌ ನ್ಯೂ ಋತು!ವಾರ್ತಾ ಸಂಚಯ

English summary
I didnt try to commit suicide: Rutu

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada