»   » ಶಿವಣ್ಣ ಚಿತ್ರಕ್ಕೆ ಬಾಲಿವುಡ್ ನಾಯಕಿ: ದರ್ಶನ್ ಜೊತೆಯೂ ನಟಿಸುವ ಆಸೆಯಂತೆ.!

ಶಿವಣ್ಣ ಚಿತ್ರಕ್ಕೆ ಬಾಲಿವುಡ್ ನಾಯಕಿ: ದರ್ಶನ್ ಜೊತೆಯೂ ನಟಿಸುವ ಆಸೆಯಂತೆ.!

Posted By:
Subscribe to Filmibeat Kannada

ಕನ್ನಡ ನಟಿಯರು ಬಾಲಿವುಡ್ ನಲ್ಲಿ ನಟಿಸುವುದು ಹೊಸತೇನಲ್ಲ. ದೀಪಿಕಾ ಪಡುಕೋಣೆ ಸೇರಿದಂತೆ ಹಲವು ನಟಿಯರು ಸ್ಯಾಂಡಲ್ ವುಡ್ ಇಂಡಸ್ಟ್ರಿಯಿಂದ ಬಿ-ಟೌನ್ ನಲ್ಲಿ ಮಿಂಚಿ ಬಂದಿದ್ದಾರೆ. ಅದೇ ತರ ಬಾಲಿವುಡ್ ನಟಿಯರು ಕೂಡ ಕನ್ನಡ ಇಂಡಸ್ಟ್ರಿಯಲ್ಲಿ ನಟಿಸಿರುವ ಉದಾಹರಣೆಗಳಿವೆ.

ಇದೀಗ, ಲೇಟೆಸ್ಟ್ ವಿಷ್ಯ ಏನಪ್ಪಾ ಅಂದ್ರೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರಕ್ಕೆ ಬಾಲಿವುಡ್ ನಟಿಯೊಬ್ಬಳು ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಸೆಂಚುರಿ ಸ್ಟಾರ್ ಅಭಿನಯಿಸಲಿರುವ ಹೊಸ ಚಿತ್ರದಲ್ಲಿ ಬಾಲಿವುಡ್ ನ ಹಾಟ್ ಬ್ಯೂಟಿಯನ್ನ ನಾಯಕಿಯನ್ನಾಗಿಸಲು ಸಂಪರ್ಕಿಸಲಾಗಿದೆಯಂತೆ. ಎಲ್ಲ ಅಂದುಕೊಂಡಂತೆ ಆದ್ರೆ, ಈ ನಟಿ ಹ್ಯಾಟ್ರಿಕ್ ಹೀರೋಗೆ ಜೋಡಿಯಾಗಲಿದ್ದಾರೆ.

ಇನ್ನು ಈ ನಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಯಲ್ಲೂ ಅಭಿನಯಿಸುವ ಆಸೆ ಇದೆಯಂತೆ. ಅಷ್ಟಕ್ಕೂ ಈ ನಟಿ ಯಾರು.? ಮುಂದೆ ಓದಿ....

ಇಹಾನ ಡಿಲ್ಲೋನ್

ಹ್ಯಾಟ್ರಿಕ್ ಹೀರೋಗೆ ನಾಯಕಿಯಾಗಲಿರುವ ನಟಿ ಪಂಜಾಬಿ ಬೆಡಗಿ ಇಹಾನ ಡಿಲ್ಲೋನ್. ಸದ್ಯ 'ಹೇಟ್ ಸ್ಟೋರಿ-4' ಚಿತ್ರದಲ್ಲಿ ನಟಿಸಿರುವ ಇಹಾನ ಇತ್ತೀಚಿಗಷ್ಟೆ ಬೆಂಗಳೂರಿಗೆ ಚಿತ್ರದ ಪ್ರಚಾರಕ್ಕೆ ಬಂದಿದ್ದರು. ಈ ವೇಳೆ ಮಾತನಾಡಿದ ಡಿಲ್ಲೋನ್ ಕನ್ನಡ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದಾರೆ.

ಅವಕಾಶ ಬಂದಿವೆ

ಕನ್ನಡ ಸಿನಿಮಾಗಳಲ್ಲಿ ನಟಿಸುವಂತೆ ಕನ್ನಡ ನಿರ್ಮಾಪಕರು ಅವಕಾಶಗಳನ್ನ ನೀಡುತ್ತಿದ್ದಾರೆ. ಸದ್ಯ, ಮೂರ್ನಾಲ್ಕು ಚಿತ್ರಗಳ ಬಗ್ಗೆ ಮಾತುಕಥೆ ನಡೆಯುತ್ತಿದೆ. ಇದರಲ್ಲಿ ಶಿವರಾಜ್ ಕುಮಾರ್ ಅವರ ಸಿನಿಮಾ ಕೂಡ ಇದೆ ಎಂದಿದ್ದಾರೆ. ಹೀಗಾಗಿ, ಡಿಲ್ಲೋನ್ ಒಪ್ಪಿಕೊಂಡರೇ ಶಿವಣ್ಣಗೆ ನಾಯಕಿಯಾಗುವ ಛಾನ್ಸ್ ಪಡೆದುಕೊಳ್ಳಲಿದ್ದಾರೆ.

ಚಿತ್ರಮಂದಿರದಿಂದ ಹೊರ ಬಂದ ಮೇಲೆಯೂ ಕಾಡುತ್ತಿರುವ 'ಟಗರು' ಪಾತ್ರಗಳು

ದರ್ಶನ್ ಅಂದ್ರೆ ಇಷ್ಟ

ಸೌತ್ ಇಂಡಿಯಾ ಕಡೆ ಮುಖ ಮಾಡಿರುವ ಇಹಾನಗೆ ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಹೆಚ್ಚು ಇಷ್ಟವಂತೆ. ಅವರ ಜೊತೆ ಸ್ಕ್ರೀನ್ ಶೇರ್ ಮಾಡಬೇಕು ಎನ್ನುವ ಆಸೆ ಇದೆಯಂತೆ.

ದರ್ಶನ್ ಮತ್ತು ಪವಿತ್ರ ಗೌಡ ಬಗ್ಗೆ ಅಚ್ಚರಿ ಬೆಳವಣಿಗೆ.! ಯಾಕ್ಹೀಗಾಯ್ತು.?

ದರ್ಶನ್ ನಾಯಕಿಯ 'ಹೇಟ್ ಸ್ಟೋರಿ'

ಬಾಲಿವುಡ್ ಯಶಸ್ವಿ ಸರಣಿ ಸಿನಿಮಾ 'ಹೇಟ್ ಸ್ಟೋರಿ-4' ಇದೇ ಮಾರ್ಚ್ 9 ರಂದು ತೆರೆಕಾಣುತ್ತಿದೆ. ದರ್ಶನ್ ಜೊತೆ 'ಮಿ.ಐರಾವತ' ಸಿನಿಮಾ ಮಾಡಿದ್ದ ನಟಿ ಊರ್ವಿಶಿ ರೌಟೇಲಾ ಈ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ.

English summary
Actress ihana dhillon is all set to making her debut with Bollywood film in the upcoming venture of Hate Story, that is Hate story 4, which is releasing on 9th of March. now, Actress ihana dhillon showing interest to act in kannada films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada