For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ಜೊತೆ ಟೂ ಬಿಟ್ಟ ರಮಣೀಯ ತಾರೆ ಸಮಂತಾ

  By Rajendra
  |

  ಒಂದು ಸಂದರ್ಭದಲ್ಲಿ ಸಿನಿಮಾ ತಾರೆಗಳು ಟ್ವಿಟ್ಟರ್ ಖಾತೆ ತೆರೆಯುವುದೇ ದೊಡ್ಡ ಸುದ್ದಿಯಾಗುತ್ತಿತ್ತು. ಈಗ ಅದೆಲ್ಲಾ ಮಾಮೂಲಿ ವಿಷಯ. ಯಾರು ಬೇಕಾದರೂ ಟ್ವಿಟ್ಟರ್ ಖಾತೆ ತೆರೆದು ತಮ್ಮ ಚಿತ್ರಗಳ ಬಗ್ಗೆ, ತಮ್ಮ ಬಗ್ಗೆ ಆಗಿದಾಗ್ಗೆ ಸುದ್ದಿಗಳನ್ನು ಅಭಿಮಾನಿಗಳ ಗಮನಕ್ಕೆ ತರುತ್ತಿರುತ್ತಾರೆ.

  ದಕ್ಷಿಣದಲ್ಲಿ ತಂಗಾಳಿಯಂತೆ ತೇಲಾಡುತ್ತಿರುವ ನಟಿ ಸಮಂತಾ ಇದೀಗ ಟ್ವಿಟ್ಟರ್ ಜೊತೆಗೆ ಟೂ ಬಿಟ್ಟಿದ್ದಾರೆ. ಕೊಂಚ ಸಮಯ ಟ್ವಿಟ್ಟರ್ ನಿಂದ ದೂರವಿರಲು ನಿರ್ಧರಿಸಿದ್ದಾರೆ. ತನ್ನ ವೈಯಕ್ತಿಕ ಕಾರಣಗಳಿಂದ ಸಮಂತಾ ಈ ನಿರ್ಧಾರಕ್ಕೆ ಬಂದಿದ್ದಾರಂತೆ. [ಬನಿಯನ್ ಜಾಹೀರಾತಿನಲ್ಲಿ ಕಾಣಿಸಲಿರುವ ನಟಿ ಸಮಂತಾ]

  ಆದರೆ ಅಸಲಿ ಕಾರಣ ಏನು ಎಂಬುದು ಮಾತ್ರ ಅವರು ಬಾಯ್ಬಿಟ್ಟು ಹೇಳಿಲ್ಲ. ಹಾಗಾಗಿ ಸಮಂತಾ ಹೀಗೇಕೆ ಮಾಡಿದರು ಎಂಬ ಬಗ್ಗೆ ನಾನಾ ಗಾಳಿಸುದ್ದಿಗಳು ಹರಿದಾಡುತ್ತಿವೆ. "ಸ್ವಲ್ಪ ಸಮಯ ಟ್ವಿಟ್ಟರ್ ನಿಂದ ದೂರ ಉಳಿಯುತ್ತಿದ್ದೇನೆ. ಗಾಡ್ ಬ್ಲೆಸ್ ಯು. ಎಲ್ಲರೂ ಚೆನ್ನಾಗಿರಿ" ಎಂದು ಟ್ವೀಟಿಸಿದ್ದಾರೆ ಶುಭಂ ಹೇಳಿದ್ದಾರೆ.

  ಟ್ವಿಟ್ಟರ್ ನಲ್ಲಿ ಸದಾ ಕ್ರಿಯಾಶೀಲವಾಗಿರುವ ಸಮಂತಾ ಇದ್ದಕ್ಕಿದ್ದಂತೆ ಈ ನಿರ್ಧಾರಕ್ಕೆ ಬಂದಿರುವುದು ಅವರ ಅಭಿಮಾನಿಗಳನ್ನು ನಿರಾಶೆಗೆ ದೂಡಿದೆ. ಬಹಳಷ್ಟು ಅಭಿಮಾನಿಗಳು ವಿನಂತಿಸಿಕೊಂಡರೂ ನಯಾಪೈಸೆ ಪ್ರಯೋಜನವಾಗಿಲ್ಲ.

  ತನ್ನ ಬಾಯ್ ಫ್ರೆಂಡ್ ಸಿದ್ದಾರ್ಥ್ ಜೊತೆಗಿನ ಸಂಬಂಧ ಮುರಿದುಬಿದ್ದ ಕಾರಣ ಸಮಂತಾ ಹೀಗೆ ಮಾಡಿದ್ದಾರೆಂದೂ ರೂಮರ್ಸ್ ಹಬ್ಬಿದೆ. ಈ ಬಗ್ಗೆ ಸಮಂತಾ ಸಾಕಷ್ಟು ಹಿಂದೆಯೇ ಸ್ಪಷ್ಟೀಕರಣ ನೀಡಿದ್ದರೂ ಗಾಳಿಸುದ್ದಿಗಳನ್ನು ತಡೆಯುವವರು ಯಾರು?

  ಇತ್ತೀಚೆಗೆ ಸಮಂತಾ ಆರೋಗ್ಯ ಕೈಕೊಟ್ಟಿತ್ತು. ಅನಾರೋಗ್ಯದ ಕಾರಣ ಸಿನಿಮಾಗಳಿಗೂ ದೂರವಾಗಿದ್ದರು. ಆಗ ಸಾಕಷ್ಟು ಪ್ರಾಜೆಕ್ಟ್ ಗಳು ಅವರ ಕೈತಪ್ಪಿದ್ದವು. ಈಗ ಚೇತರಿಸಿಕೊಂಡಿರುವ ಸಮಂತಾ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಪಡೆಯಲು ವಿದೇಶಕ್ಕೆ ಹೋಗುವ ಆಲೋಚನೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. (ಏಜೆನ್ಸೀಸ್)

  English summary
  "Going off Twitter for a while. God bless. Be good", Samantha tweeted last night, breaking many young hearts of her fans. They are fast enough in requesting her to re think of her decision, but Samantha did not revert.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X