twitter
    For Quick Alerts
    ALLOW NOTIFICATIONS  
    For Daily Alerts

    'ಕಾರ್ಮೋಡ ಸರಿದು' ಈ ವಾರ ತೆರೆಗೆ ಬರ್ತಿವೆ ಮೂರು ಸಿನಿಮಾಗಳು

    |

    ಶುಕ್ರವಾರದ ಸಮೀಪಿಸುತ್ತಿದೆ ಅಂದ್ರೆ ಸಾಕು ಚಿತ್ರಪ್ರಿಯರಲ್ಲಿ ಸಂಭ್ರಮ ಜೋರಾಗಿರುತ್ತೆ. ಈ ವಾರದ ಸಿನಿ ಸಂತಯಲ್ಲಿ ನಾಲ್ಕು ಸಿನಿಮಾಗಳು ತೆರೆಗೆ ಬರುತ್ತಿವೆ. ಪ್ರತಿವಾರ ಏನಿಲ್ಲ ಅಂದರು ಐದಾರು ಸಿನಿಮಾಗಳು ಚಿತ್ರಮಂದಿರದ ಅಂಗಳದಲ್ಲಿ ರಾರಾಗಿಸುತ್ತಿರುತ್ತವೆ. ಆದ್ರೆ ಈ ಬಾರಿ ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತಿವೆ.

    ಈ ಶುಕ್ರವಾರ ಸ್ಟಾರ್ ನಟರ ಸಿನಿಮಾಗಳು ಇಲ್ಲ ಅಂದ್ರು ಕೆಲವು ಚಿತ್ರಗಳು ಚಿತ್ರಾಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿವೆ. ಅಂದ್ಹಾಗೆ ಈ ವಾರ 'ಕಾರ್ಮೋಡ ಸರಿದು', 'ಮೂಕವಿಸ್ಮಿತ', 'ಹೌಲಾ ಹೌಲಾ', 'ರತ್ನಮಂಜರಿ' ಚಿತ್ರಗಳು ಚಿತ್ರಮಂದಿರ ಬಾಗಿಲು ತಟ್ಟುತ್ತಿವೆ.

    ಈಗಾಗಲೆ 'ರತ್ನಮಂಜರಿ' ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಾರದ ನಿರೀಕ್ಷೆಯ ಚಿತ್ರಗಳಲ್ಲಿ 'ರತ್ನಮಂಜರಿ' ಸಿನಿಮಾ ಚಿತ್ರಾಭಿಮಾನಿಗಳ ಗಮನಸೆಳೆಯುತ್ತಿದೆ. ಮುಂದೆ ಓದಿ..

    'ಕಾರ್ಮೋಡ ಸರಿದು' ಚಿತ್ರಮಂದಿರಕ್ಕೆ ಬರುತ್ತಿದೆ ಸಿನಿಮಾ

    'ಕಾರ್ಮೋಡ ಸರಿದು' ಚಿತ್ರಮಂದಿರಕ್ಕೆ ಬರುತ್ತಿದೆ ಸಿನಿಮಾ

    'ಕಾರ್ಮೋಡ ಸರಿದು' ಯಸ್ ಅಭಿನಯದ 'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಚಾರಿ' ಚಿತ್ರದ ಹಾಡಿನ ಅದ್ಭುತ ಸಾಲುಗಳನ್ನೆ ಇಟ್ಟುಕೊಂಡು ಮಾಡಿರುವ ಸಿನಿಮಾ. ವಿಷೇಶ ಅಂದ್ರೆ 'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಚಾರಿ'ಯಲ್ಲಿ ರಾಧಿಕಾ ಸ್ನೇಹಿತೆಯಾಗಿ ಕಾಣಿಸಿಕೊಂಡಿದ್ದ ಅದ್ವಿತಿ ಶೆಟ್ಟಿ 'ಕಾರ್ಮೋಡ ಸರಿದು' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ನಾಯಕನಾಗಿ ಮಂಜು ರಾಜಣ್ಣ ಕಾಣಿಸಿಕೊಂಡಿದ್ದಾರೆ. ನಿರ್ಮಾಣ ಹೊಣೆಯನ್ನು ನಾಯಕ ಮಂಜು ವಹಿಸಿಕೊಂಡಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಜೊತೆ ಕೆಲಸ ಮಾಡಿದ ಉದಯ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಸ್ತುತ ಕಾಲಮಾನದಲ್ಲಿ ಯಾಂತ್ರಿಕವಾಗಿರುವ ಸಂಬಂಧಗಳ ಬಗ್ಗೆ ಇರುವ ಸಿನಿಮಾ ಇದಾಗಿದೆ. ಟ್ರೈಲರ್ ಮೂಲಕ ಗಮನ ಸೆಳೆದಿರುವ 'ಕಾರ್ಮೋಡ ಸರಿದು' ಇದೆ ಶುಕ್ರವಾರ ತೆರೆಗೆ ಬರುತ್ತಿದೆ.

    ಈ ವಾರ ತೆರೆ ಮೇಲೆ 'ಮೂಕವಿಸ್ಮಿತ'

    ಈ ವಾರ ತೆರೆ ಮೇಲೆ 'ಮೂಕವಿಸ್ಮಿತ'

    ಖ್ಯಾತ ಸಾಹಿತಿ ಮತ್ತು ಕಥೆಗಾರ ಟಿ.ಪಿ ಕೈಲಾಸಂ ಅವರ 'ಟೊಳ್ಳುಗಟ್ಟಿ' ನಾಟಕದ ಕಥಾಹಂದರವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಹೊಸಬರೆ ಸೇರಿಕೊಂಡು ಮಾಡಿರುವ ವಿಭಿನ್ನ ಸಿನಿಮಾ 'ಮೂಕವಿಸ್ಮಿತ'. ಗುರುದತ್ ಶ್ರೀಕಾಂತ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ. ಬಹುತೇಕ ರಂಗಭೂಮಿ ಕಲಾವಿದರೆ ಸೇರಿಕೊಂಡೆ 'ಮೂಕವಿಸ್ಮಿತ' ತಯಾರಿಸಿದ್ದಾರೆ. ಸಂದೀಪ್ ಮಲಾನಿ. ಚಂದ್ರಕೀರ್ತಿ, ವಾಣಿಶ್ರೀ ಭಟ್, ಶುಭರಕ್ಷಾ, ಮಾವಳ್ಳಿ ಕಾರ್ತಿಕ್ ಸೇರಿದಂತೆ ಅನೇಕ ಕಲಾವಿದರು ಬಣ್ಣಹಚ್ಚಿದ್ದಾರೆ.

    ವಿಷ್ಣುವರ್ಧನ್ ಅಭಿನಯ ಸಿನಿಮಾವಿದು

    ವಿಷ್ಣುವರ್ಧನ್ ಅಭಿನಯ ಸಿನಿಮಾವಿದು

    'ಹೌಲಾ ಹೌಲಾ' ವಿಷ್ಣುವರ್ಧನ್ ಅಭಿನಯದ ಆಪ್ತರಕ್ಷಕ ಚಿತ್ರದ ಹಾಡಿನ ಸಾಲು ಇದಾಗಿದೆ. ಡಾ. ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ, ಕಾಲೇಜು ವಿದ್ಯಾರ್ಥಿನಿಯೊಬ್ಬಳ ಜೀವನಾಧಾರಿತ ಕತೆ ಇದಾಗಿದೆಯಂತೆ. ವಿದ್ಯಾರ್ಥಿಗಳು ಜೀವನದಲ್ಲಿ ಯಂತಹದೆ ಸನ್ನಿವೇಶ ಬಂದರು ಹೆದರದೆ ಆತ್ಮಹತ್ಯೆ ಮಾಡಿಕೊಳ್ಳಬಾರದು ಎನ್ನುವ ಸಂದೇಶ ಸಾರುವ ಸಿನಿಮಾ ಇದಾಗಿದೆಯಂತೆ. 'ಹೌಲಾ ಹೌಲಾ' ಚಿತ್ರಕ್ಕೆ ಸೋಮನಾಥ್ ಪಿ ಪಟೇಲ್ ಆಕ್ಷನ್ ಕಟ್ ಹೇಳಿದ್ದಾರೆ.

    ಈ ವಾರ ಚಿತ್ರಮಂದಿರಗಳಲ್ಲಿ 'ರತ್ನಮಂಜರಿ'

    ಈ ವಾರ ಚಿತ್ರಮಂದಿರಗಳಲ್ಲಿ 'ರತ್ನಮಂಜರಿ'

    ಈ ವಾರ ತೆರೆಗೆ ಬರುತ್ತಿರುವ ಚಿತ್ರಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ಸಿನಿಮಾ' ರತ್ನಮಂಜರಿ'. ಎನ್ ಆರ್ ಐ ಪ್ರಸಿದ್ಧ್ ನಿರ್ದೇಶನ ಮಾಡಿರುವ ಸಿನಿಮಾ ರತ್ನಮಂಜರಿ. ಚಿತ್ರದಲ್ಲಿ ರಾಜ್ ಚರಣ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಖಿಲಾ, ಪಲ್ಲವಿ ರಾಜು ಮತ್ತು ಶ್ರದ್ಧಾ ನಾಯಕಿಯಾಗಿ ಮಿಂಚಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು ಇದೆ ವಾರ ಚಿತ್ರಾಭಿಮಾನಿಗಳ ಮುಂದೆ ಬರುತ್ತಿದೆ.

    English summary
    Kannada movie Mookahakki, Kaarmoda Saridu, Ratnamanjari and Howla Howla movies are releasing on May 17th.
    Wednesday, May 15, 2019, 17:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X