»   » ಮಲ್ಟಿ ಸ್ಟಾರರ್ ಸಿನಿಮಾದಲ್ಲಿ ನಟಿಸಲ್ಲ ಅಂತ ದರ್ಶನ್ ಯಾಕಂದ್ರು?

ಮಲ್ಟಿ ಸ್ಟಾರರ್ ಸಿನಿಮಾದಲ್ಲಿ ನಟಿಸಲ್ಲ ಅಂತ ದರ್ಶನ್ ಯಾಕಂದ್ರು?

Posted By:
Subscribe to Filmibeat Kannada

ಸುಮಾರು ವರ್ಷಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಜೊತೆಗೆ ಕುಚಿಕು ಗೆಳೆಯರಿಬ್ಬರು 'ಶೋಲೆ' ಚಿತ್ರದ ರಿಮೇಕ್ ನಲ್ಲಿ ನಟಿಸುತ್ತಾರೆ ಎಂದು ಹೇಳಲಾಗಿತ್ತು.

ಆದರೆ ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಲಿಲ್ಲ. ಮಾತ್ರವಲ್ಲದೇ ಆ ಸುದ್ದಿ ಕೂಡ ಅಲ್ಲಿಗೆ ನಿಂತು ಹೋಗಿ ಅಭಿಮಾನಿಗಳು ಕ್ರಮೇಣ ಮರೆತಿದ್ದರು.[ರಾಜ್ಯದ ವಿದ್ಯುತ್ ಸಮಸ್ಯೆಗೆ ಪರಿಹಾರ ನೀಡ್ತಾರಂತೆ, ದರ್ಶನ್]

Kannada Actor Darshan says no to Multi Starrers

ಇನ್ನು ಅವಕಾಶ ಸಿಕ್ಕರೆ ಮಲ್ಟಿ ಸ್ಟಾರರ್ ಸಿನಿಮಾಗಳಲ್ಲಿ ನಟಿಸುತ್ತೀರಾ?, ಎಂದು ದರ್ಶನ್ ಅವರನ್ನು ಕೇಳಿದರೆ ಅವರ ಕಡೆಯಿಂದ ನೋ ಎಂಬ ಉತ್ತರ ಬರುತ್ತೆ.

ಇದೀಗ ಸ್ಯಾಂಡಲ್ ವುಡ್ ನಲ್ಲಿ ಮಲ್ಟಿ ಸ್ಟಾರರ್ ಚಿತ್ರಗಳ ಟ್ರೆಂಡ್ ಶುರುವಾಗಿದೆ. ಅದಕ್ಕೆ ಉತ್ತಮ ಸಾಕ್ಷಿ ಎಂದರೆ ಇತ್ತೀಚೆಗೆ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು 'ಕಲಿ' ಎಂಬ ಚಿತ್ರದಲ್ಲಿ ಒಂದಾಗಿರುವುದು.

'ಸದ್ಯಕ್ಕಂತೂ ನನಗೆ ಯಾವುದೇ ಆಫರ್ ಬಂದಿಲ್ಲ. ಬಂದರೂ ಕೂಡ ನಾನು ಒಪ್ಪಿಕೊಳ್ಳುವುದು ಕಷ್ಟ. ಕನ್ನಡದಲ್ಲಿ ಮಲ್ಟಿ ಸ್ಟಾರರ್ ಚಿತ್ರಗಳಿಗೆ ನ್ಯಾಯ ಒದಗಿಸುವ ನಿರ್ದೇಶಕರು ಯಾರಿದ್ದಾರೆ ಹೇಳಿ. ಸದ್ಯಕ್ಕಂತೂ ಯಾರು ಕಾಣುತ್ತಿಲ್ಲ'.

Kannada Actor Darshan says no to Multi Starrers

'ಒಂದು ಪಕ್ಷ ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ಅವಕಾಶ ಬಂದರೆ, ಅದು ರಿಮೇಕ್ ಸಿನಿಮಾ ಆದರೆ ಒಪ್ಪಿಕೊಳ್ಳುತ್ತೇನೆ. ಏಕೆಂದರೆ ರಿಮೇಕ್ ನಲ್ಲಾದರೆ ಒಂದು ಸ್ಪಷ್ಟತೆ ಇರುತ್ತದೆ. ಯಾರ ಪಾತ್ರವೇನು?, ಹೇಗೆ ಎಂಬುದೆಲ್ಲಾ ಮೊದಲೇ ಗೊತ್ತಾಗಿರುತ್ತದೆ'.[ಜಬರ್ದಸ್ತ್ ಟೀಸರ್ ನಲ್ಲಿ ದರ್ಶನ್ ನ, 'ವಿರಾಟ್' ದರ್ಶನ]

'ಹಾಗಾಗಿ ರಿಮೇಕ್ ಆದರೆ ಪ್ರಾಬ್ಲಂ ಇರುವುದಿಲ್ಲ. ಸ್ವಮೇಕ್ ಆದರೆ ಒಪ್ಪುವುದಿಲ್ಲ' ಎಂದು ದರ್ಶನ್ ಅವರು 'ವಿರಾಟ್' ಚಿತ್ರದ ಟೀಸರ್ ಬಿಡುಗಡೆ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಅಂದಹಾಗೆ ದರ್ಶನ್ ಅವರು ತಮ್ಮ ಸಿನಿ ವೃತ್ತಿ ಜೀವನದಲ್ಲಿ ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ನಟಿಸಿದ್ದು ಬಹಳ ಕಡಿಮೆ. ಮುಂದೆ ನಟಿಸುವುದು ಕೂಡ ಸಂಶಯ ಅಂತೆ. ಅಂತೂ ದರ್ಶನ್ ಅವರು ಮಲ್ಟಿ ಸ್ಟಾರರ್ ಸಿನಿಮಾದಲ್ಲಿ ಯಾಕೆ ನಟಿಸಲ್ಲ ಅನ್ನೋ ನಿಮ್ಮೆಲ್ಲರ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿತಲ್ಚಾ?

English summary
Actor Darshan has said that he is not interested in multi-starrers and if there is remake multi-starrer then he may accept the offer. Darshan was talking to few media persons after the trailer release of his latest film 'Viraat'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada