Don't Miss!
- News Karnataka LS Election 2024 LIVE: ಇಂದು ಮೊದಲ ಹಂತದ ಮತದಾನಕ್ಕೆ ಸಿದ್ಧವಾದ ರಾಜ್ಯದ 14 ಕ್ಷೇತ್ರಗಳು
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಚ್ಚ ಸುದೀಪ್ ಈಗ ಕಟ್ಟು ಮಸ್ತಾದ ಪೈಲ್ವಾನ್
ಹೆಬ್ಬುಲಿ ಸಿನಿಮಾದ ನಂತರ ಕಿಚ್ಚ ಸುದೀಪ್ ಅಭಿನಯದ ಸಿನಿಮಾ ಯಾವುದು ಸೆಟ್ಟೇರಿಲ್ಲ. ಪ್ರತಿ ವಾರದ ಕೊನೆಯಲ್ಲಿ ಕಿರುತೆರೆಯ ಮೂಲಕ ಪ್ರೇಕ್ಷಕರ ಮನೆ ಅಂಗಳಕ್ಕೆ ಬಂದು ಎಲ್ಲರಿಗೂ ಮನೋರಂಜನೆ ನೀಡುತ್ತಿದ್ದ ಕಿಚ್ಚನನ್ನ ತೆರೆ ಮೇಲೆ ನೋಡುವ ಸಮಯ ಹತ್ತಿರವಾಗುತ್ತಿದೆ.
ಹೆಬ್ಬುಲಿಯ ಸಕ್ಸಸ್ ನಂತರ ಕಿಚ್ಚ ಸುದೀಪ್ ಅದೇ ತಂಡದ ಜೊತೆಯಲ್ಲಿ ಸಿನಿಮಾ ಮಾಡುವುದಾಗಿ ತಿಳಿಸಿ ಅನೇಕ ದಿನಗಳು ಕಳೆದಿವೆ. ಪೈಲ್ವಾನ್ ಸಿನಿಮಾ ಮೂಲಕ ಕಿಚ್ಚ ಮತ್ತು ಗಜಕೇಸರಿ ಕೃಷ್ಣ ಒಂದಾಗುತ್ತಿದ್ದಾರೆ.
ಚುನಾವಣೆಗೆ ಮುಂಚೆ ಯುವಕರಿಗೆ ಸಂದೇಶ ನೀಡಿದ ಕಿಚ್ಚ ಸುದೀಪ್
ಸುದೀಪ್ ಅವರೇ ತಿಳಿಸಿರುವಂತೆ ಈ ವರ್ಷ ಮೂರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ಅದರಲ್ಲಿ ಮೊದಲಿಗೆ ಪೈಲ್ವಾನ್ ಸಿನಿಮಾದಲ್ಲಿ ಕಿಚ್ಚ ಆಕ್ಟ್ ಮಾಡಲಿದ್ದಾರೆ. ಈಗಾಗಲೇ ಸಿನಿಮಾಗೆ ಸಖತ್ ತಯಾರಿ ಶುರು ಮಾಡಿದ್ದು ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಜಿಮ್ ಗೆ ಎಂಟ್ರಿ ಕೊಟ್ಟಿದ್ದಾರೆ.ಮುಂದೆ ಓದಿ
ದೇಹ ದಂಡಿಸುವಲ್ಲಿ ಕಿಚ್ಚ ಬ್ಯುಸಿ
ಕಿಚ್ಚ ಸುದೀಪ್ ತಮ್ಮ ಮುಂದಿನ ಸಿನಿಮಾದ ಪಾತ್ರಕ್ಕಾಗಿ ವರ್ಕ್ ಔಟ್ ಶುರು ಮಾಡಿದ್ದಾರೆ.ಇದೇ ಮೊದಲ ಬಾರಿಗೆ ಜಿಮ್ ಗೆ ಹೋಗಿರುವ ಕಿಚ್ಚ ಪ್ರತಿ ನಿತ್ಯ ದೇಹವನ್ನ ದಂಡಿಸುತ್ತಿದ್ದಾರೆ.
ಹೊಸದಾಗಿರುತ್ತೆ ಪೈಲ್ವಾನ್ ಲುಕ್
ಕಿಚ್ಚ ಸುದೀಪ್ ಈ ಬಾರಿ ಪ್ರೇಕ್ಷಕರ ಮುಂದೆ ಬೇರೆಯದ್ದೇ ಸ್ಟೈಲ್ ನಲ್ಲಿ ಬರಲಿದ್ದಾರೆ. ಪೈಲ್ವಾನ್ ಹೆಸರಿಗೆ ತಕ್ಕಂತೆ ಬಾಡಿ ಬಿಲ್ಡ್ ಮಾಡಲಿದ್ದಾರೆ. ಜೆ ಪಿ ನಗರದ ಖಾಸಗಿ ಜಿಮ್ ನಲ್ಲಿ ಕಿಚ್ಚ ವರ್ಕ್ ಮಾಡುತ್ತಿದ್ದು ವಿಕ್ರಂ ಎನ್ನುವವರು ಟ್ರೈನಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.
ವರ್ಕ್ ಔಟ್ ನಲ್ಲಿ ಸುದೀಪ್ ಜೊತೆ ಅರುಗೌಡ
ನಟ ಅರುಗೌಡ ಕೂಡ ಕಿಚ್ಚ ಹೋಗುವ ಜಿಮ್ ನಲ್ಲಿ ಪ್ರತಿ ನಿತ್ಯ ವರ್ಕ್ ಔಟ್ ಮಾಡುತ್ತಿದ್ದಾರೆ. ಇತ್ತಿಚಿಗಷ್ಟೇ ಸುದೀಪ್ ಅವರನ್ನ ಭೇಟಿ ಮಾಡಿರುವ ಅರು ಜೊತೆಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ.
ಶುರುವಾಗಲಿದೆ ಚಿತ್ರೀಕರಣ
ಬಿಗ್ ಬಾಸ್ ಸೋ ಮುಗಿಸಿಕೊಂಡು ಬಂದಿರುವ ಕಿಚ್ಚ ಸುದೀಪ್ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾತಂಡವನ್ನ ಸೇರಿಕೊಳ್ಳಲಿದ್ದಾರೆ. ನಂತರ ಪೈಲ್ವಾನ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆದಲಿದ್ದಾರೆ.