For Quick Alerts
  ALLOW NOTIFICATIONS  
  For Daily Alerts

  ಮಂಗಳೂರಿನ ಶ್ವಾನ ದಳದ ನಾಯಿ ಮರಿಗೆ 'ಚಾರ್ಲಿ' ಎಂದು ನಾಮಕರಣ: '777 ಚಾರ್ಲಿ'ನೇ ಸ್ಫೂರ್ತಿ

  By ಮಂಗಳೂರು ಪ್ರತಿನಿಧಿ
  |

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ '777 ಚಾರ್ಲಿ' ಸಿನಿಮಾ ದೇಶಾದ್ಯಂತ ಬಿಡುಗಡೆಗೊಂಡು ಪ್ರೇಕ್ಷಕರ ಗಮನ ಸೆಳೆದಿದೆ. ಧರ್ಮ ಮತ್ತು ಚಾರ್ಲಿ ನಡುವಿನ ಕಂದಾಹಂದರ ಸಿನಿ ಪ್ರೇಕ್ಷಕರ ಕಣ್ಣಾಲಿಗಳನ್ನು ತೇವಗೊಳಿಸಿದೆ. ಸರ್ವ ಜನರ ಮೆಚ್ಚುಗೆಗೆ ಪಾತ್ರವಾದ '777 ಚಾರ್ಲಿ' ಸಿನಿಮಾ ಮಂಗಳೂರು ಪೊಲೀಸ್ ಇಲಾಖೆಗೂ ಸ್ಫೂರ್ತಿ ತಂದಿದೆ. ಚಾರ್ಲಿಯ ಪ್ರೇರಣೆಯಿಂದ ಮಂಗಳೂರು ಶ್ವಾನ ದಳದ ಮೂರು ತಿಂಗಳ ಶ್ವಾನಕ್ಕೆ 'ಚಾರ್ಲಿ' ಅಂತಾ ನಾಮಕರಣ ಮಾಡಲಾಗಿದೆ.

  ನಿನ್ನೆ (ಜೂನ್ 9) ಮಂಗಳೂರಿನಲ್ಲಿ ರಕ್ಷಿತ್ ಶೆಟ್ಟಿ ಹೊಸ ಸಿನಿಮಾ 'ಚಾರ್ಲಿ 777'ಯ ಪ್ರೀಮಿಯರ್ ಶೋ ನಡೆದಿತ್ತು‌. ಈ ಸಿನಿಮಾದಿಂದ ಸ್ಪೂರ್ತಿ ಪಡೆದು ಮಂಗಳೂರು ಪೊಲೀಸ್ ಶ್ವಾನದಳದ ನಾಯಿಗೆ ನಾಮಕರಣ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿ ಸೇರಿಕೊಂಡು ಕಚೇರಿಯಲ್ಲಿಯೇ ಚಾರ್ಲಿಗಾಗಿ ಕೇಕ್ ಕತ್ತರಿಸಿ, ಸಂಭ್ರಮಿಸಿದ್ದಾರೆ.

  ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಕಲೆಕ್ಷನ್ ಎಷ್ಟು? 'ಕೆಜಿಎಫ್ 2' ಬಳಿಕ ಪಂಡಿತರ ಲೆಕ್ಕಾಚಾರವೇನು?ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಕಲೆಕ್ಷನ್ ಎಷ್ಟು? 'ಕೆಜಿಎಫ್ 2' ಬಳಿಕ ಪಂಡಿತರ ಲೆಕ್ಕಾಚಾರವೇನು?

  ನಿನ್ನೆ (ಜೂನ್ 9) ಮಂಗಳೂರು ಪೊಲೀಸರು 'ಚಾರ್ಲಿ 777' ಸಿನಿಮಾ ಪ್ರೀಮಿಯರ್ ಶೋ ವೀಕ್ಷಣೆ ಮಾಡಿದ್ದಾರೆ. ಈ ಸಿನಿಮಾದಲ್ಲಿಯೂ ಲ್ಯಾಬ್ರಡಾರ್ ತಳಿಯ ನಾಯಿಯೂ ಪಾತ್ರ ವಹಿಸಿದೆ. ಈ ಮೂಲಕ ಮನುಷ್ಯ ಹಾಗೂ ಶ್ವಾನದ ನಡುವಿನ ಸಂಬಂಧವನ್ನು ಸೊಗಸಾಗಿ ಚಿತ್ರೀಕರಿಸಲಾಗಿದೆ. ಇದೇ ಸ್ಪೂರ್ತಿಯಿಂದ ಮಂಗಳೂರು ಪೊಲೀಸ್ ಇಲಾಖೆ ಇಂದು ( ಜೂನ್ 10) ಈ ನಾಯಿ ಮರಿಗೆ ಚಾರ್ಲಿ ಎಂದು ನಾಮಕರಣ ಮಾಡಲಾಗಿದೆ.

  20 ಸಾವಿರಕ್ಕೆ ಚಾರ್ಲಿ ಖರೀದಿ

  20 ಸಾವಿರಕ್ಕೆ ಚಾರ್ಲಿ ಖರೀದಿ

  3 ತಿಂಗಳ ಈ ಲ್ಯಾಬ್ರಡರ್ ಶ್ವಾನವನ್ನು ಬಂಟ್ವಾಳದಿಂದ ಖರೀದಿಸಲಾಗಿದೆ. 2022 ಮಾರ್ಚ್ 16ಗೆ ಹುಟ್ಟಿದ ಈ ಶ್ವಾನವನ್ನು ಪೊಲೀಸ್ ಇಲಾಖೆಗಾಗಿ 20,000 ರೂ. ನೀಡಿ ಖರೀದಿಸಲಾಗಿದೆ‌‌. ಮುಂದೆ 3-4 ತಿಂಗಳ ಬಳಿಕ ಬೆಂಗಳೂರು ಸೌತ್ ಸಿಆರ್‌ನಲ್ಲಿ ಆರು ತಿಂಗಳ ಕಾಲ ಈ ಶ್ವಾನಕ್ಕೆ ತರಬೇತಿ ನೀಡಲಾಗುತ್ತದೆ. ಬಳಿಕ ಈ ಶ್ವಾನವು ಬಾಂಬ್ ನಿಷ್ಕ್ರಿಯ ಹಾಗೂ ಪತ್ತೆ ಮಾಡಲು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುತ್ತದೆ.

  777 Charlie 1st Half Review: ನಾಯಿಯ ತುಂಟಾಟ-ರಕ್ಷಿತ್ ಶೆಟ್ಟಿ ಪರದಾಟ!777 Charlie 1st Half Review: ನಾಯಿಯ ತುಂಟಾಟ-ರಕ್ಷಿತ್ ಶೆಟ್ಟಿ ಪರದಾಟ!

  ಬಾಂಬ್ ನಿಷ್ಕ್ರಿಯ ದಳ ಸೇರಲಿರುವ ಚಾರ್ಲಿ

  ಬಾಂಬ್ ನಿಷ್ಕ್ರಿಯ ದಳ ಸೇರಲಿರುವ ಚಾರ್ಲಿ

  ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮಂಗಳೂರು ಸಿಎಆರ್ ಎಸಿಪಿ ಎಂ.ಎ ಉಪಾಸೆ, 'ಚಾರ್ಲಿ' ಅಂತಾ ನಾಮಕರಣ ಮಾಡುವ ಮೂಲಕ ಶ್ವಾನ ಮರಿಯನ್ನು ಇಲಾಖೆಗೆ ಸೇರಿಸಿದ್ದೇವೆ. ಗುರುವಾರ ರಾತ್ರಿ ಎಲ್ಲರೂ '777 ಚಾರ್ಲಿ' ಚಿತ್ರ ವೀಕ್ಷಣೆ ಮಾಡಿದ್ದೇವೆ. ಹೀಗಾಗಿ ಚಿತ್ರದ ಸ್ಫೂರ್ತಿ ಪಡೆದು 'ಚಾರ್ಲಿ' ಹೆಸರನ್ನು ಇಲಾಖೆಯ ಶ್ವಾನದ ಮರಿಗೆ ಹೆಸರು ಇಟ್ಟಿದ್ದೇವೆ. ಶ್ವಾನದಳದಲ್ಲಿ ಶ್ವಾನವನ್ನು ಮೂರು ವಿಭಾಗಗಳ ತರಬೇತಿ ನೀಡುತ್ತೇವೆ. ಸದ್ಯ ಚಾರ್ಲಿಗೆ ಬಾಂಬ್ ಪತ್ತೆ ದಳದ ತರಬೇತಿಯನ್ನು ನೀಡುತ್ತೇವೆ ಅಂತಾ ಉಪಾಸೆ ಹೇಳಿದ್ದಾರೆ.

  ಸಿಬ್ಬಂದಿ ಆಸೆಯಂತೆ ಚಾರ್ಲಿ ಅಂತ ಹೆಸರು

  ಸಿಬ್ಬಂದಿ ಆಸೆಯಂತೆ ಚಾರ್ಲಿ ಅಂತ ಹೆಸರು

  ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, ಮಂಗಳೂರು ಶ್ವಾನದಳದಲ್ಲಿ ಐದಕ್ಕೂ ಹೆಚ್ಚು ಶ್ವಾನಗಳಿವೆ. ಮೂರು ತಿಂಗಳ ಹಿಂದೆ ಹುಟ್ಟಿದ ಹೆಣ್ಣು ಶ್ವಾನವನ್ನು ಈಗ ಇಲಾಖೆಗೆ ಸೇರಿಸಿದ್ದೇವೆ‌‌. ಶ್ವಾನದಳ ಸಿಬ್ಬಂದಿಯ ಆಸೆಯ ಪ್ರಕಾರ, ಈ ಶ್ವಾನಕ್ಕೆ 'ಚಾರ್ಲಿ' ಅಂತಾ ಹೆಸರಿಟ್ಟಿದ್ದೇವೆ ಅಂತಾ ಹೇಳಿದ್ದಾರೆ.

  '777 ಚಾರ್ಲಿ'ಗೆ ಭಾರಿ ಮೆಚ್ಚುಗೆ

  '777 ಚಾರ್ಲಿ'ಗೆ ಭಾರಿ ಮೆಚ್ಚುಗೆ


  '777 ಚಾರ್ಲಿ' ಸಿನಿಮಾ ಶ್ವಾನ ಪ್ರಿಯರನ್ನಷ್ಟೇ ಕಾಡುತ್ತಿಲ್ಲ. ಪೊಲೀಸರು ಸ್ಪೂರ್ತಿಗೊಳ್ಳುವಂತೆ ಮಾಡಿದೆ. ಇನ್ನು ಇಂದು ಬಿಡುಗಡೆಯಾದ '777 ಚಾರ್ಲಿ' ಸಿನಿಮಾಗೆ ರಾಜ್ಯದ್ಯಾಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾವನ್ನು ವಿಶ್ವದ ಮೂಲೆ ಮೂಲೆಯಲ್ಲಿರುವ ಶ್ವಾನ ಪ್ರಿಯರು ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾಗೆ ಮುಂದಿನ ದಿನಗಳಲ್ಲಿ ಯಾವ ರೀತಿ ರೆಸ್ಪಾನ್ಸ್ ಸಿಗುತ್ತೆ ಅನ್ನೋದನ್ನು ಕುತೂಹಲದಿಂದ ನೋಡುತ್ತಿದ್ದಾರೆ.

  English summary
  Mangaluru Police named 3 Month Old Puppy As Charlie Inspired by Rakshit Shetty Movie, Know More,
  Saturday, June 11, 2022, 8:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X