For Quick Alerts
  ALLOW NOTIFICATIONS  
  For Daily Alerts

  'ಪದ್ಮಾವತಿ' ರಿಲೀಸ್ ಆದ್ರೆ ದೀಪಿಕಾ ಮೂಗು ಕತ್ತರಿಸುತ್ತೇವೆ: ರಜಪೂತರು ಎಚ್ಚರಿಕೆ.!

  By Bharath Kumar
  |

  ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಸಿನಿಮಾ ಬಿಡುಗಡೆಯಾದರೇ ನಟಿ ದೀಪಿಕಾ ಪಡುಕೋಣೆ ಮೂಗು ಕತ್ತರಿಸುತ್ತೇವೆ ಎಂದು ರಜಪೂತ ಕರಣಿ ಸೇನೆ ಕಾರ್ಯಕರ್ತರು ಬೆದರಿಕೆಯೊಡ್ಡಿದ್ದಾರೆ.

  'ರಜಪೂತರು ಮಹಿಳೆಯರ ಮೇಲೆ ಕೈ ಮಾಡಲ್ಲ, ಆದರೆ ಅಗತ್ಯ ಬಿದ್ದರೆ ಮಾಡಬೇಕಾಗುತ್ತದೆ, ಲಕ್ಷ್ಮಣ ಶೂರ್ಪನಖಿಗೆ ಮಾಡಿದಂತೆ ದೀಪಿಕಾಗೆ ಮಾಡಬೇಕಾಗುತ್ತದೆ' ಎಂದು ರಜಪೂತ ಕರಣಿ ಸೇನೆ ಸದಸ್ಯ ಮಹಿಪಾಲ್ ಸಿಂಗ್‌ ಮಕ್ರಾನಾ ವಿಡಿಯೋ ಸಂದೇಶ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

  'ಪದ್ಮಾವತಿ' ಸಿನಿಮಾ ಬಿಡುಗಡೆಗೆ ಜೈಪುರ ರಾಜ ಮನೆತನದ ವಿರೋಧ!

  ಇನ್ನೂ ಬಗ್ಗೆ ಮಾತನಾಡಿದ ರಜಪೂತ್ ಕರಣಿ ಸೇನೆಯ ಲೋಕೇಂದ್ರಾ ಸಿಂಗ್‌ ಕಲ್ವಿ 'ಪ್ರತಿಭಟನೆಯಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತೇವೆ, ನಮ್ಮ ಪೂರ್ವಜರು ರಕ್ತದಲ್ಲಿ ಇತಿಹಾಸ ಬರೆದಿದ್ದಾರೆ, ಅದಕ್ಕೆ ಕಪ್ಪು ಮಸಿ ಬಳಿಯಲು ಯಾರನ್ನೂ ಬಿಡುವುದಿಲ್ಲ, ನಾವು ಡಿಸೆಂಬರ್‌ 1ಕ್ಕೆ ಭಾರತ್‌ ಬಂದ್‌ಗೆ ಕರೆ ನೀಡಿದ್ದೇವೆ' ಎಂದಿದ್ದಾರೆ.

  'ಪದ್ಮಾವತಿ' ಚಿತ್ರದ ವಿವಾದ ಏನಿದು? ವಿರೋಧ ಯಾಕೆ?

  ಪದ್ಮಾವತಿ ಚಿತ್ರದಲ್ಲಿ ರಜಪೂತರ ರಾಣಿ ಪದ್ಮಾವತಿ ಬಗ್ಗೆ ಅವಹೇಳನ ಮಾಡಲಾಗಿದೆ. ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ರಾಷ್ಟ್ರದ್ಯಾಂತ ರಜಪೂತರು ಚಿತ್ರ ಬಿಡುಗಡೆಯಾಗದಂತೆ ವಿರೋಧಿಸುತ್ತಿದ್ದಾರೆ.

  English summary
  ‘Padmavati’: Rajput Karni Sena threatens to chop off Deepika Padukone’s nose. ಪದ್ಮಾವತಿ ಸಿನಿಮಾ ಬಿಡುಗಡೆಯಾದರೇ ದೀಪಿಕಾ ಪಡುಕೋಣೆಯ ಮೂಗು ಕತ್ತರಿಸುತ್ತೇವೆ ಎಂದು ರಜಪೂತ್ ಕರಣಿ ಸೇನೆ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X