twitter
    For Quick Alerts
    ALLOW NOTIFICATIONS  
    For Daily Alerts

    12ನೇ ದಿನ '777 ಚಾರ್ಲಿ' ವಿಶ್ವದಾದ್ಯಂತ ಗಳಿಸಿದ್ದೆಷ್ಟು? 100 ಕೋಟಿ ರೂ.ಗೆ ಇನ್ನೆಷ್ಟು ಬೇಕು?

    |

    ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ದಾಖಲೆ ಬರೆಯುವುದಕ್ಕೆ ತುದಿಗಾಲಲ್ಲಿ ನಿಂತಿದೆ. 'ಕೆಜಿಎಫ್ 2' ದೇಶಾದ್ಯಂತ ಗಮನ ಸೆಳೆದ ಮತ್ತೊಂದು ಸಿನಿಮಾ ಮತ್ಯಾವುದೂ ಅಲ್ಲ '777 ಚಾರ್ಲಿ'. ಬಾಕ್ಸಾಫೀಸ್‌ನಲ್ಲಿ ನಿಧಾನವಾಗಿ ಆರ್ಭಟಿಸಲು ಆರಂಭಿಸಿದ ಚಾರ್ಲಿ ಎರಡನೇ ವಾರದ ಬಳಿಕ ಸಿನಿಪ್ರೇಕ್ಷಕರನ್ನು ನಿರೀಕ್ಷೆಗಿಂತ ಹೆಚ್ಚು ಗಮನ ಸೆಳೆಯುತ್ತಿದೆ.

    'ಕೆಜಿಎಫ್ 2' ಬಳಿಕ ಕನ್ನಡದ ಸಿನಿಮಾವೊಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ '777 ಚಾರ್ಲಿ' ಸಿನಿಮಾ ರಿಲೀಸ್ ಆಗಿದ್ದು, ಬಾಕ್ಸಾಫೀಸ್‌ನಲ್ಲಿ ಕೆಲವು ದಿನಗಳ ಹಿಂದಷ್ಟೇ 50 ಕೋಟಿ ಕ್ಲಬ್ ಸೇರಿತ್ತು.

    ವಿಶ್ವದಾದ್ಯಂತ '777 ಚಾರ್ಲಿ'ಯ 10 ದಿನದ ಕಲೆಕ್ಷನ್ ಎಷ್ಟು? ರಕ್ಷಿತ್ ಶೆಟ್ಟಿಗೆ ಸಿಕ್ಕಿದ್ದು ಗೆಲುವಾ? ಸೋಲಾ?ವಿಶ್ವದಾದ್ಯಂತ '777 ಚಾರ್ಲಿ'ಯ 10 ದಿನದ ಕಲೆಕ್ಷನ್ ಎಷ್ಟು? ರಕ್ಷಿತ್ ಶೆಟ್ಟಿಗೆ ಸಿಕ್ಕಿದ್ದು ಗೆಲುವಾ? ಸೋಲಾ?

    ಕ್ಲಾಸ್ ಸಿನಿಮಾವೊಂದು ಬಾಕ್ಸಾಫೀಸ್‌ನಲ್ಲಿ 50 ಕೋಟಿ ಕ್ಲಬ್ ಸೇರಿದ್ದು ದೊಡ್ಡ ಸಾಧನೆ ಎಂದು ಬಣ್ಣಿಸಲಾಗುತ್ತಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, '777 ಚಾರ್ಲಿ' 2022 ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಈಗ 12ನೇ ದಿನವೂ ಕೂಡ ಸಿನಿಮಾ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಮತ್ತೊಂದು ವೀಕೆಂಡ್‌ಗೆ ಸಜ್ಜಾಗುತ್ತಿದೆ. ಇತ್ತ ಸೆಲೆಬ್ರೆಟಿಗಳು ಚಾರ್ಲಿ ನೋಡಿ ಮನಸಾರೆ ಹೊಗಳುತ್ತಿದ್ದಾರೆ.

    12ನೇ ದಿನ '777 ಚಾರ್ಲಿ' ಗಳಿಸಿದ್ದೆಷ್ಟು?

    12ನೇ ದಿನ '777 ಚಾರ್ಲಿ' ಗಳಿಸಿದ್ದೆಷ್ಟು?

    ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ಕಾಂಬಿನೇಷನ್‌ ಸಿನಿಮಾ ಕಳೆದ 12 ದಿನಗಳಿಂದಲೂ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಕರ್ನಾಟಕದಿಂದಲೇ '777 ಚಾರ್ಲಿ' ಕಲೆಕ್ಷನ್‌ನ ಬಹುಪಾಲು ಬಂದಿದ್ದರೂ, ಉಳಿದೆಡೆಗಳಲ್ಲಿ ಸಿನಿಮಾಗೂ ಸೂಪರ್‌ ರೆಸ್ಪಾನ್ಸ್ ಸಿಕ್ಕಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, 12ನೇ ದಿನ '777 ಚಾರ್ಲಿ' ಸುಮಾರು 1.85 ಕೋಟಿ ರೂ. ಗಳಿಕೆ ಕಂಡಿದೆ. ಕಳೆದ 11 ದಿನಗಳಿಗೆ ಹೋಲಿಕೆ ಮಾಡಿದರೆ, ಶೇ. 15.91ರಷ್ಟು ಇಳಿಕೆ ಕಂಡಿದ್ದರೂ, ಇದು ಉತ್ತಮ ಗಳಿಕೆ ಅಂತಲೇ ಹೇಳಲಾಗಿದೆ.

    '777 ಚಾರ್ಲಿ'ಗೆ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಮಂಸೋರೆ ವಿರೋಧ: ಸಿಎಂ ವಿರುದ್ಧ ಆಕ್ರೋಶ!'777 ಚಾರ್ಲಿ'ಗೆ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಮಂಸೋರೆ ವಿರೋಧ: ಸಿಎಂ ವಿರುದ್ಧ ಆಕ್ರೋಶ!

    12 ದಿನಗಳಲ್ಲಿ ಚಾರ್ಲಿ ಗಳಿಸಿದ್ದೆಷ್ಟು?

    12 ದಿನಗಳಲ್ಲಿ ಚಾರ್ಲಿ ಗಳಿಸಿದ್ದೆಷ್ಟು?

    ಈ 12 ದಿನಗಳಲ್ಲಿ '777 ಚಾರ್ಲಿ' ಗಳಿಕೆ ಸಖತ್ತಾಗಿದೆ. ನಿರೀಕ್ಷೆಯಂತೆ ಸಿನಿಮಾ 100 ಕೋಟಿಯತ್ತ ದಾಪುಗಾಲು ಹಾಕುತ್ತಿದೆ. ಇನ್ನು ಎರಡು ಮೂರು ವಾರಗಳಲ್ಲಿ 100 ಕೋಟಿ ಕ್ಲಬ್ ಗುರಿಯನ್ನು ಆರಾಮಾಗಿ ಸೇರಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಕಳೆದ 12 ದಿನಗಳಲ್ಲಿ ವಿಶ್ವದಾದ್ಯಂತ ಈ ಸಿನಿಮಾ 70.10 ಕೋಟಿ ರೂ, ಗಳಿಕೆ ಕಂಡಿದೆ ಎಂದು ವರದಿಯಾಗಿದೆ.

    ಮೊದಲ ವಾರ 38.75 ಕೋಟಿ ರೂ.
    2ನೇ ವಾರ 18.55 ಕೋಟಿ ರೂ.
    3ನೇ ವಾರ 12.80 ಕೋಟಿ ರೂ.

    ಒಟ್ಟು 70.10 ಕೋಟಿ ರೂ.

    ಯಾವ್ಯಾವ ರಾಜ್ಯದಲ್ಲಿ ಚಾರ್ಲಿ ಅಬ್ಬರ ಎಷ್ಟಿದೆ?

    ಯಾವ್ಯಾವ ರಾಜ್ಯದಲ್ಲಿ ಚಾರ್ಲಿ ಅಬ್ಬರ ಎಷ್ಟಿದೆ?

    '777 ಚಾರ್ಲಿ' ಸಿನಿಮಾ ಕರ್ನಾಟಕದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ. ಉಳಿದ ರಾಜ್ಯದಲ್ಲೂ ಶ್ವಾನ ಪ್ರಿಯರಿಗೆ ಇಷ್ಟ ಆಗಿದ್ದು, ಚಾರ್ಲಿ ಸಿನಿಮಾ ಬಂದು ನೋಡುತ್ತಿದ್ದಾರೆ. ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ, ಉತ್ತರ ಭಾರತದಲ್ಲೂ ಮೆಚ್ಚುಗೆ ಗಳಿಸಿದೆ.

    ಕರ್ನಾಟಕ 52.55 ಕೋಟಿ ರೂ. ( Updated)
    ಆಂಧ್ರ/ತೆಲಂಗಾಣ 4.20 ಕೋಟಿ ರೂ.
    ಕೇರಳ 2.60 ಕೋಟಿ ರೂ.
    ತಮಿಳುನಾಡು 2.15 ಕೋಟಿ ರೂ.
    ಉತ್ತರ ಭಾರತ 4.55 ಕೋಟಿ ರೂ.
    ವಿದೇಶ 4.05 ಕೋಟಿ ರೂ.

    ಒಟ್ಟು 71.10 ಕೋಟಿ ರೂ.

    '777 ಚಾರ್ಲಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದ ಸರ್ಕಾರ'777 ಚಾರ್ಲಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದ ಸರ್ಕಾರ

    100 ಕೋಟಿ ಕ್ಲಬ್ ಸೇರೋದ್ಯಾವಾಗ?

    100 ಕೋಟಿ ಕ್ಲಬ್ ಸೇರೋದ್ಯಾವಾಗ?

    ಟ್ರೇಡ್ ಅನಲಿಸ್ಟ್ ಹಾಗೂ ಕೆಲವು ವಿತರಕರ ಮಾಹಿತಿಯನ್ನು ಆಧರಿಸಿ ಈ 12 ದಿನಗಳಲ್ಲಿ ಸುಮಾರು 71.10 ಕೋಟಿ ಗಳಿಕೆ ಕಂಡಿದೆ ಎಂದು ವರದಿಯಾಗಿದೆ. 100 ಕೋಟಿ ಕ್ಲಬ್ ಸೇರಲು ಈ ಸಿನಿಮಾ ಇನ್ನು 29 ಕೋಟಿ ರೂ. ಗಳಿಸಬೇಕಿದೆ. '777 ಚಾರ್ಲಿ'ಗೆ ಹೀಗೆ ಬೆಂಬಲ ದೊರೆತರೆ 100 ಕೋಟಿ ಕ್ಲಬ್ ಸೇರಿದ ರಕ್ಷಿತ್ ಶೆಟ್ಟಿಯ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಲಿದೆ. ಆದರೆ, ಈ ಸಿನಿಮಾದ ನಿಖರವಾದ ಕಲೆಕ್ಷನ್ ಎಷ್ಟು ಅನ್ನುವುದನ್ನು ಅಧಿಕೃತವಾಗಿ ಚಿತ್ರತಂಡ ಬಹಿರಂಗ ಪಡಿಸಿಲ್ಲ. ಒಂದು ವೇಳೆ ಈ ಸಿನಿಮಾ ಕಲೆಕ್ಷನ್ ಆಸು-ಪಾಸಿನಲ್ಲಿ ಇದ್ದರೂ, 100 ಕೋಟಿ ಕ್ಲಬ್‌ವರೆಗೂ ತಲುಪುತ್ತಾ? ಅನ್ನುವ ಕುತೂಹಲವಂತೂ ಇದ್ದೇ ಇದೆ.

    English summary
    Rakshit Shetty Starrer 777 Charlie Worldwide Boxoffice Collection 12 days Report, Know More.
    Wednesday, June 22, 2022, 14:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X