For Quick Alerts
  ALLOW NOTIFICATIONS  
  For Daily Alerts

  ಕ್ರೇಜಿಸ್ಟಾರ್ 'ದೃಶ್ಯ 2' ರಿಲೀಸ್‌ಗೆ ಮುಹೂರ್ತ ಫಿಕ್ಸ್: ಟ್ರೈಲರ್ ಯಾವಾಗ?

  |

  ದೃಶ್ಯಂ ಅಥವಾ ದೃಶ್ಯ. ಟೈಟಲ್‌ನಲ್ಲಿ ಒಂದು ಅಕ್ಷರ ಹಿಂದೆ ಮುಂದೆ ಅಷ್ಟೆ. ಆದರೆ, ಕಥೆ, ಚಿತ್ರಕತೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಮಲಯಾಳಂ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಯಾಕಂದ್ರೆ, ದೃಶ್ಯಂ ಯಾವ್ಯಾವ ಭಾಷೆಯಲ್ಲಿ ರಿಮೇಕ್ ಆಗಿದೆಯೋ ಆ ಎಲ್ಲಾ ಭಾಷೆಯಲ್ಲೂ ಸೂಪರ್ ಹಿಟ್ ಆಗಿದೆ. ಇದೇ ಸಿನಿಮಾ ಕನ್ನಡದಲ್ಲೂ 'ದೃಶ್ಯ'ವಾಗಿ ರಿಲೀಸ್ ಆಗಿತ್ತು. ಆ ಸಿನಿಮಾ ಕೂಡ ಬಾಕ್ಸಾಫೀಸ್‌ ಚಿಂದಿ ಉಡಾಯಿಸಿತ್ತು.

  ಮಲಯಾಳಂನಲ್ಲಿ 'ದೃಶ್ಯಂ 2' ಸಿನಿಪ್ರಿಯರ ಮನಗೆಲ್ಲುತ್ತಿದ್ದಂತೆ ಕನ್ನಡದಲ್ಲೂ 'ದೃಶ್ಯ 2' ಆಗಿ ಸೆಟ್ಟೇರಿತ್ತು. ಅದೇ ತಂತ್ರಜ್ಞರು, ಅದೇ ಕಲಾವಿದರ ಸೇರಿಕೊಂಡು ಬಹುಬೇಗನೇ ಸಿನಿಮಾ ಮಾಡಿ ಮುಗಿಸಿದ್ದರು. ಮತ್ತೆ ಕ್ರೇಜಿಸ್ಟಾರ್ ದೃಶ್ಯ ಸಿನಿಮಾ ಮೂಲಕ ಜಾದು ಮಾಡಲು ಬರುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ರೆಡಿಯಿದ್ದು, ಚಿತ್ರದ ಟ್ರೈಲರ್ ಹಾಗೂ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ.

  'ದೃಶ್ಯ 2' ಟ್ರೈಲರ್ ರಿಲೀಸ್ ಯಾವಾಗ?

  'ದೃಶ್ಯ 2' ಟ್ರೈಲರ್ ರಿಲೀಸ್ ಯಾವಾಗ?

  ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿನಯದ ‘ದೃಶ್ಯ 2' ಟ್ರೈಲರ್ ರಿಲೀಸ್‌ಗೆ ಮಾಡುವುದಕ್ಕೆ ವೇದಿಕೆ ಸಿದ್ಧವಾಗಿದೆ. ನಿರ್ದೇಶಕ ಪಿ ವಾಸು ಟ್ರೈಲರ್‌ಗೊಂದು ಟೀಸರ್ ಬಿಟ್ಟು ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ. ಕನ್ನಡದಲ್ಲಿ ದೃಶ್ಯ ಮೊದಲ ಚಾಪ್ಟರ್ ಏಳು ವರ್ಷಗಳ ಹಿಂದೆ ರಿಲೀಸ್ ಆಗಿತ್ತು. ಈಗ ಅದೇ ನಂಬಿಕೆ ಮೇಲೆ ರವಿಚಂದ್ರನ್‌ ಮತ್ತೆ ರಾಜೇಂದ್ರ ಪೊನ್ನಪ್ಪನ ಗೆಟಪ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ.

  ಡಿ.10ಕ್ಕೆ ದೃಶ್ಯ 2 ಗ್ರ್ಯಾಂಡ್ ರಿಲೀಸ್

  ಡಿ.10ಕ್ಕೆ ದೃಶ್ಯ 2 ಗ್ರ್ಯಾಂಡ್ ರಿಲೀಸ್

  'ದೃಶ್ಯ 2' ಟ್ರೈ‍ಲರ್ ನವೆಂಬರ್ 26ಕ್ಕೆ ರಿಲೀಸ್ ಆಗುತ್ತಿದೆ. ಆದರೆ, ಸಿನಿಮಾ ಬಿಡುಗಡೆಗೆ ಹೆಚ್ಚು ಸಮಯವೇನು ಇಲ್ಲ. 'ದೃಶ್ಯ 2' ಟ್ರೈಲರ್ ರಿಲೀಸ್ ಆದ ಎರಡು ವಾರಕ್ಕೆ ಸಿನಿಮಾ ಕೂಡ ಬಿಡುಗಡೆಯಾಗಲಿದೆ. ಡಿಸೆಂಬರ್ 10 ರಂದು ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್‌ ಪತ್ನಿಯಾಗಿ ಮಲಯಾಳಂ ನಟಿ ನವ್ಯಾ ನಾಯರ್‌ ಮುಂದುವರೆದ್ದಾರೆ. ಆರೋಹಿ ನಾರಾಯಣ್‌, ಉನ್ನತಿ ಪಾತ್ರಗಳೂ ಚಾಪ್ಟರ್ 2ನಲ್ಲೂ ಇವೆ. ಮಲಯಾಳಂ ರಿಮೇಕ್ ಆಗಿದ್ದರೂ, ಕನ್ನಡಕ್ಕೆ ಹೇಗೆ ಬೇಕೋ ಹಾಗೆ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.

  ರಾಜೇಂದ್ರ ಪೊನ್ನಪ್ಪನ ಮೈಂಡ್ ಗೇಮ್

  ರಾಜೇಂದ್ರ ಪೊನ್ನಪ್ಪನ ಮೈಂಡ್ ಗೇಮ್

  ಮೋಹನ್ ಲಾಲ್ ನಟಿಸಿದ 'ದೃಶ್ಯಂ 2' ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿ ಜನಮೆಚ್ಚುಗೆ ಗಳಿಸಿದೆ. 'ದ್ಯಶ್ಯಂ' ಸಿನಿಮಾದಷ್ಟೇ 'ದೃಶ್ಯಂ 2' ಕೂಡ ಥ್ರಿಲ್ಲಿಂಗ್ ಆಗಿದೆ ಅನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ಕನ್ನಡದಲ್ಲಿ ದೃಶ್ಯ 2 ಯಾವ ಮಟ್ಟಿಗೆ ಜಾದು ಮಾಡುತ್ತೆ. ರಾಜೇಂದ್ರ ಪೊನ್ನಪ್ಪ ಅವತಾರದಲ್ಲಿ ಕ್ರೇಜಿಸ್ಟಾರ್ ಮೈಂಡ್ ಗೇಮ್ ಹೇಗಿರುತ್ತೆ? ಅಂತ ನೋಡುವುದಕ್ಕೆ ಕನ್ನಡ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ.

  ಕೊಟ್ಟ ಮಾತಿಗೆ ತಪ್ಪದ ಕ್ರೇಜಿಸ್ಟಾರ್

  ಕೊಟ್ಟ ಮಾತಿಗೆ ತಪ್ಪದ ಕ್ರೇಜಿಸ್ಟಾರ್

  ದೃಶ್ಯ 2 ಚಿತ್ರೀಕರಣ ಮುಗಿದಾಗ, "ಸಿನಿಮಾ ಯಾವುದೇ ಕಾರಣಕ್ಕೂ ಒಟಿಟಿಯಲ್ಲಿ ರಿಲೀಸ್ ಮಾಡುವುದಿಲ್ಲ. ಥಿಯೇಟರ್‌ನಲ್ಲೇ ಬಿಡುಗಡೆ ಮಾಡುತ್ತೇವೆ. ಇಡೀ ಕುಟುಂಬ ಬಂದು ಸಿನಿಮಾ ನೋಡಿ, ಹೊಟೇಲ್‌ನಲ್ಲಿ ಊಟ ಮಾಡಿ ಮನೆಗೆ ಹೋಗಬೇಕು ಅನ್ನುವುದೇ ನಮ್ಮ ಆಶಯ. ಹಾಗಾಗಿ ಯಾವುದೇ ಕಾರಣಕ್ಕೂ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುವುದೇ ಇಲ್ಲ" ಎಂದು ರವಿಚಂದ್ರನ್ ತಿಳಿಸಿದ್ದರು. ಅಂದು ಆಡಿದ ಮಾತನ್ನು ಉಳಿಸಿಕೊಂಡಿರುವ ಕ್ರೇಜಿಸ್ಟಾರ್ ಡಿಸೆಂಬರ್ 10 ರಂದು ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಅದಕ್ಕೂ ಮುನ್ನ ನವೆಂಬರ್ 26ಕ್ಕೆ ಥ್ರಿಲ್ಲಿಂಗ್ ಟ್ರೈಲರ್ ರಿಲೀಸ್ ಆಗಲಿದೆ.

  ‘ಬೇರೆ ಯಾವ ಚಿತ್ರದ ಶೂಟಿಂಗ್‌ನಲ್ಲೂ ಚಿತ್ರತಂಡದ ಜೊತೆಗೆ ಇಂಥಾ ಬಾಂಧವ್ಯ ಬೆಳೆದಿರಲಿಲ್ಲ. ನಾನಿಲ್ಲಿ ರಾಜೇಂದ್ರ ಪೊನ್ನಪ್ಪನಾಗಿಯೇ ಇದ್ದೆ. ನನ್ನ ಮಗಳ ಪಾತ್ರ ಮಾಡುವ ಹುಡುಗಿಗೆ ದಿನಾ ತಿಂಡಿ ತಂದು ಕೊಡುತ್ತಿದ್ದೆ. ಇತರರಿಗೆ ಬಿರಿಯಾನಿ ಕೊಡಿಸುತ್ತಿದ್ದೆ. ಒಂದು ದಿನ ಖಾಲಿ ಕೈಯಲ್ಲಿ ಬಂದರೆ ಎಲ್ಲಾ ಮುಖ ನೋಡುತ್ತಿದ್ದರು. ಈಗ ಶೂಟಿಂಗ್‌ ಮುಗಿಯುತ್ತಿರೋದಕ್ಕೆ ನಿಜಕ್ಕೂ ಬೇಸರವೆನಿಸುತ್ತಿದೆ. ಕೊಡಗಿನ ಮಳೆ, ಚಳಿಯ ನಡುವೆ ಶೂಟಿಂಗ್‌ ಮುಗಿಸಿದ್ದೇವೆ. ದೃಶ್ಯ 2 ಶೂಟಿಂಗ್‌ ಅವಿಸ್ಮರಣೀಯ ಅನುಭವ. ಈ ಸಲ ಹಾಸ್ಯ ಪಾತ್ರದಲ್ಲಿ ಸಾಧು ಕೋಕಿಲ ಕಾಣಿಸಿಕೊಳ್ಳುತ್ತಿದ್ದಾರೆ' ಎಂದರು.

  English summary
  Crazy star Ravichandran movie 'Drishya 2' trailer release on november 26 and movie will be releasing on december 10th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X