For Quick Alerts
  ALLOW NOTIFICATIONS  
  For Daily Alerts

  ನಿರ್ದೇಶನಕ್ಕೆ ಮರಳಿದ ರಿಯಲ್ ಸ್ಟಾರ್ ಉಪೇಂದ್ರ

  |

  ರಿಯಾಲ್ ಸ್ಟಾರ್ ಉಪೇಂದ್ರ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಉಪೇಂದ್ರ ಯಾವಾಗ ಡೈರೆಕ್ಟರ್ ಕ್ಯಾಪ್ ತೊಡುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೀಗ ಕಾತರ, ಕುತೂಹಲಗಳಿಗೆ ಖುದ್ದು ಉಪೇಂದ್ರ ಅವರೇ ತೆರೆ ಎಳೆದಿದ್ದಾರೆ.

  ಹೌದು, ರಿಯಲ್ ಉಪೇಂದ್ರ ಮತ್ತೆ ನಿರ್ದೇಶನ ಮಾಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ. ಇದೇ ತಿಂಗಳು ಅಂದರೆ ಸೆಪ್ಟಂಬರ್ 18ರಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ. ಈ ಬಾರಿ ಹುಟ್ಟುಹಬ್ಬದ ಆಚರಣೆ ಇರಲ್ಲ, ಯಾರು ಮನೆಯ ಬಳಿ ಬರಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

  ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದ ಕನ್ನಡ ನಟರ ಹೆಸರು ಹೇಳಿದ ಸಂಜನಾ

  ಇದೇ ಸಮಯದಲ್ಲಿ ರಿಯಲ್ ಸ್ಟಾರ್ ಸಿನಿಮಾ ನಿರ್ದೇಶನದ ಬಗ್ಗೆ ಬಹಿರಂಗಪಡಿಸಿದ್ದಾರೆ. ನಿರ್ದೇಶನಕ್ಕೆ ಈಗಾಗಲೇ ಎಲ್ಲಾ ತಯಾರಿ ನಡೆಯುತ್ತಿದೆ. ಕಥೆ ಸಿದ್ಧವಾಗಿದೆ, ಇನ್ನೇನಿದ್ರು ಟೈಟಲ್ ಅನೌನ್ಸ್ ಮಾಡಬೇಕು. ಆದರೆ ಟೈಟಲ್ ಬಹಿರಂಗ ಪಡಿಸಲು ಸ್ವಲ್ಪ ಸಮಯ ಹಿಡಿಯಲಿದೆ ಎಂದು ಹೇಳಿದ್ದಾರೆ.

  ಅಲ್ಲದೆ ಈಗಾಗಲೇ ಕಬ್ಜ, ಹೋಮ್ ಮಿನಿಸ್ಟರ್, ಬುದ್ಧಿವಂತ 2, ಪುಣ್ಯಾತ್ಮ ಸೇರಿದಂತೆ ಸಾಕಷ್ಟು ಸಿನಿಮಾಗಳಿವೆ. ಈ ಎಲ್ಲಾ ಸಿನಿಮಾಗಳ ಬಳಿಕ ಉಪೇಂದ್ರ ನಿರ್ದೇಶನದ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಸೆಪ್ಟಂಬರ್ 18ರಂದು ಉಪೇಂದ್ರ ಹುಟ್ಟುಹಬ್ಬದ ದಿನ ಈ ಸಿನಿಮಾದ ಬಗ್ಗೆ ಹೆಚ್ಚಿನ ಅಪ್ ಡೇಟ್ ಸಿಗುವ ಸಾಧ್ಯತೆ ಇದೆ.

  Upendra ನಿರ್ದೇಶನದ ಹೊಸ ಚಿತ್ರದ ಉಪ್ಪಿ ಖುದ್ದಾಗಿ ಹೇಳಿದ್ದಾರೆ | Oneindia Kannada

  ಇನ್ನೂ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ದಿನ ಎಂದು ಕರೆದಿದ್ದಾರೆ. ಕೊರೊನಾ ಹಾವಳಿಯ ಪರಿಣಾಮ ಒಟ್ಟಿಗೆ ಸೇರುವ ಹಾಗಿಲ್ಲ. ಹಾಗಾಗಿ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಅಲ್ಲದೆ ನಾಲ್ಕೈದು ದಿನ ಮನೆಯಲ್ಲಿ ಇರುವುದಿಲ್ಲ. ಒಂದು ವೇಳೆ ನೆಟ್ ವರ್ಕ್ ಸಿಕ್ಕಿದರೆ ಫೇಸ್ ಬುಕ್ ಲೈವ್ ಬಂದು ಅಭಿಮಾನಿಗಳ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ.

  English summary
  Real star Upendra announces return to Direction. He says not celebrating his birthday due to Corona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X