For Quick Alerts
  ALLOW NOTIFICATIONS  
  For Daily Alerts

  ವಿಜಯ್ 'ಮಾಸ್ಟರ್' ಚಿತ್ರಕ್ಕೆ ಅಮೇಜಾನ್ ಪ್ರೈಮ್ ನೀಡಿದ ಹಣವೆಷ್ಟು?

  |

  ನೇರವಾಗಿ ಚಿತ್ರಮಂದಿರಗಳಲ್ಲಿ ತೆರೆಕಂಡು ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಂಡಿದ್ದ ಮಾಸ್ಟರ್ ಸಿನಿಮಾ ಈಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಶುಕ್ರವಾರ ಅಮೇಜಾನ್ ಪ್ರೈಮ್‌ನಲ್ಲಿ ವಿಜಯ್ 'ಮಾಸ್ಟರ್' ಪ್ರದರ್ಶನ ಕಂಡಿದೆ.

  ಥಿಯೇಟರ್‌ಗೆ ಬಂದು ಎರಡು ವಾರ ಕಳೆದಿಲ್ಲ, ಅಷ್ಟು ಬೇಗ ಒಟಿಟಿಗೆ ಸಿನಿಮಾ ಮಾರಾಟ ಮಾಡಿದ್ದಕ್ಕೆ ಸಹಜವಾಗಿ ವಿಜಯ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದರು. ಒಟಿಟಿಗೆ ಸಿನಿಮಾ ಕೊಟ್ಟ ಮೇಲೆ ಚಿತ್ರಮಂದಿರಕ್ಕೆ ಯಾರು ಬರ್ತಾರೆ ಎಂದು ನಿರಾಸೆಯಾಗಿದ್ದರು. ಆದರೆ, ಅಮೇಜಾನ್ ಪ್ರೈಮ್‌ನಲ್ಲಿ ಮಾಸ್ಟರ್ ನೋಡಿದ ಜನರು ಮಾತ್ರ ಖುಷಿಯಾಗಿದ್ದಾರೆ.

  'ಮಾಸ್ಟರ್' ಸಿನಿಮಾ ಲೀಕ್: 25 ಕೋಟಿ ಪರಿಹಾರ ಕೇಳಿದ ಚಿತ್ರತಂಡ'ಮಾಸ್ಟರ್' ಸಿನಿಮಾ ಲೀಕ್: 25 ಕೋಟಿ ಪರಿಹಾರ ಕೇಳಿದ ಚಿತ್ರತಂಡ

  ಮಾಸ್ಟರ್ ಚಿತ್ರವನ್ನು ಅಮೇಜಾನ್ ಪ್ರೈಮ್ ಭಾರಿ ಬೆಲೆ ಖರೀದಿ ಮಾಡಿದೆ ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ ನಿಗದಿ ಮಾಡಿದ್ದ ಬೆಲೆಯೇ ಒಂದು, ಆದರೆ ಈಗ ಕೊಟ್ಟಿರುವ ಬೆಲೆಯೇ ಇನ್ನೊಂದು ಎನ್ನಲಾಗಿದೆ.

  ಮಾಸ್ಟರ್ ಚಿತ್ರವನ್ನು ಆರಂಭಿಕ ಹಂತದಲ್ಲಿ ಸುಮಾರು 20.5 ಕೋಟಿ ನೀಡಿ ಅಮೇಜಾನ್ ಖರೀದಿ ಮಾಡಿತ್ತು. ಇಷ್ಟು ಬೇಗ ಅಮೇಜಾನ್ ಟೆಲಿಕಾಸ್ಟ್ ಮಾಡುವ ಪ್ಲಾನ್ ಇರಲಿಲ್ಲ. ಮತ್ತೊಂದು ಸುತ್ತಿನ ಒಪ್ಪಂದಕ್ಕೆ ಬಂದ ಅಮೇಜಾನ್ ಎರಡನೇ ಕಂತಿನಲ್ಲಿ ಮತ್ತೆ 15 ಕೋಟಿ ನೀಡಿದೆ. ಹಾಗಾಗಿ, 16 ದಿನಗಳ ಅಂತರದಲ್ಲಿ ಮಾಸ್ಟರ್ ಅಮೇಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಗಿದೆ ಎಂದು ಹೇಳಲಾಗಿದೆ.

  ಒಟ್ಟಾರೆ ಮಾಸ್ಟರ್ ಚಿತ್ರಕ್ಕೆ ಅಮೇಜಾನ್ ಕಡೆಯಿಂದ 36 ಕೋಟಿ ಸಿಕ್ಕಿದೆ. ಇನ್ನು ಚಿತ್ರಮಂದಿರದಿಂದಲೂ ಒಳ್ಳೆಯ ಕಲೆಕ್ಷನ್ ಮಾಡಿದ ಮಾಸ್ಟರ್ ಸಿನಿಮಾ 200 ಕೋಟಿ ಕ್ಲಬ್ ಸೇರಿತ್ತು.

  ಆಘಾತ ತಂದ ನಿರ್ಣಯ: ವಿಜಯ್ ವಿರುದ್ಧ ಚಿತ್ರಮಂದಿರ ಮಾಲೀಕರು ತೀವ್ರ ಅಸಮಾಧಾನಆಘಾತ ತಂದ ನಿರ್ಣಯ: ವಿಜಯ್ ವಿರುದ್ಧ ಚಿತ್ರಮಂದಿರ ಮಾಲೀಕರು ತೀವ್ರ ಅಸಮಾಧಾನ

  ಸದ್ಯದ ಮಾಹಿತಿ ಪ್ರಕಾರ, ಮಾಸ್ಟರ್ ಸಿನಿಮಾ ಜಗತ್ತಿನಾದ್ಯಂತ 239 ಕೋಟಿ ಗಳಿಕೆ ಕಂಡಿದೆ. ಅಮೇಜಾನ್ ಪ್ರೈಮ್ ಕಡೆಯಿಂದ 36 ಕೋಟಿ ಬಾಚಿಕೊಂಡಿದೆ. ಈ ಮೂಲಕ ವಿಜಯ್ ಸಿನಿಮಾಗಳ ಪೈಕಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸಿದ ಚಿತ್ರ ಎನಿಸಿಕೊಂಡಿದೆ.

  ಇನ್ನುಳಿದಂತೆ ಲೋಕೇಶ್ ಕನಕರಾಜ್ ಈ ಚಿತ್ರ ನಿರ್ದೇಶನ ಮಾಡಿದ್ದು, ಜೇವಿಯರ್ ಬ್ರಿಟ್ಟೊ ಬಂಡವಾಳ ಹಾಕಿದ್ದಾರೆ. ವಿಜಯ್ ಸೇತುಪತಿ, ಮಾಳವಿಕಾ ಮೋಹನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Amazon Prime buys Ilayathalapathy Vijay starrer Master movie for 36 Crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X