For Quick Alerts
  ALLOW NOTIFICATIONS  
  For Daily Alerts

  ಕಮಲ್ ಹಾಸನ್ ಆಪ್ತ ನಿರ್ದೇಶಕ ಜಿಎನ್ ರಂಗರಾಜನ್ ನಿಧನ

  |

  ತಮಿಳು ಇಂಡಸ್ಟ್ರಿಯ ದಿಗ್ಗಜ ನಿರ್ದೇಶಕ ಜಿಎನ್ ರಂಗರಾಜನ್ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಂಗರಾಜನ್ ಜೂನ್ 3 ರಂದು ಬೆಳಗ್ಗೆ 8.45 ನಿಮಿಷಕ್ಕೆ ಕೊನೆಯುಸಿರೆಳೆದರು.

  ರಂಗರಾಜನ್ ಮಗ ಜಿಎನ್‌ಆರ್ ಕುಮಾರವೇಲನ್ ತಂದೆ ಸಾವಿಗೆ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಚೆನ್ನೈನಲ್ಲಿ ರಂಗರಾಜನ್ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ.

  ತಮಿಳು ನಟ, ನಿರ್ಮಾಪಕ ವೆಂಕಟ್ ಶುಭ ಕೊರೊನಾದಿಂದ ಸಾವುತಮಿಳು ನಟ, ನಿರ್ಮಾಪಕ ವೆಂಕಟ್ ಶುಭ ಕೊರೊನಾದಿಂದ ಸಾವು

  ರಂಗರಾಜನ್ ನಟ ಕಮಲ ಹಾಸನ್ ಅವರಿಗೆ ಬಹಳ ಆಪ್ತರಾಗಿದ್ದರು. ಮೀಂಡುಮ್ ಕೋಕಿಲಾ (1981), ಮತ್ತು ಮಹಾರಸನ್ (1993) ಅಂತಹ ಹಿಟ್ ಚಿತ್ರಗಳು ಸೇರಿದಂತೆ ಹೆಚ್ಚು ಸಿನಿಮಾಗಳನ್ನು ಕಮಲ್ ಜೊತೆ ಮಾಡಿದ್ದಾರೆ.

  ಕಲ್ಯಾಣ ರಾಮನ್, ಎಲ್ಲಮ್ ಇನ್‌ ಬಮಾಯಂ, ಕಡಲ್ ಮೀನ್‌ಗಲ್, ಮುತ್ತು ಎಂಗಲ್ ಸೋತ್ತು, ಪಲ್ಲವಿ ಮೀಂಡುಮ್ ಪಲ್ಲವಿ, ಆದುಥಾಥು ಆಲ್ಬರ್ಟ್ ಸೇರಿದಂತೆ ಇನ್ನು ಹಲವು ಚಿತ್ರಗಳಿಗೆ ರಂಗರಾಜನ್ ನಿರ್ದೇಶನ ಹೇಳಿದ್ದಾರೆ.

  ರಂಗರಾಜನ್ ಮಗ ಕುಮಾರವೇಲನ್ ಸಹ ತಮಿಳು ಇಂಡಸ್ಟ್ರಿಯಲ್ಲಿ ನಿರ್ದೇಶಕರಾಗಿದ್ದಾರೆ. ಖ್ಯಾತ ನಿರ್ದೇಶಕ ಬಾಲು ಮಹೇಂದರ್ ಬಳಿ 'ಸತಿ ಲೀಲಾವತಿ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದರು.

  ಲೀಲಾವತಿ ಕುಟುಂಬ ನನಿಗೆ ಸಹಾಯ ಮಾಡಿದಾರೆ! | Filmibeat Kannada

  ನೈನೈಥಲೆ ಇನಿಕ್ಕುಮ್, ಯುವನ್ ಯುವತಿ, ಹರಿದಾಸ್, ಮತ್ತು ವಾಗಾ ಚಿತ್ರಗಳನ್ನು ಕುಮಾರವೇಲನ್ ನಿರ್ದೇಶಿಸಿದ್ದಾರೆ. ನಟ ಅರುಣ್ ವಿಜಯ್ ಜೊತೆ ಮುಂದಿನ ಸಿನಿಮಾ ಘೋಷಿಸಿದ್ದಾರೆ.

  English summary
  Legendary Director, producer GN Rangarajan 90, passed away today (June 3rd) around 8.45 am.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X