For Quick Alerts
  ALLOW NOTIFICATIONS  
  For Daily Alerts

  ಹುತಾತ್ಮ ಯೋಧ ಸಂದೀಪ್ ಉನ್ನಿಕೃಷ್ಣನ್ ಸ್ಮರಿಸಿದ 'ಮೇಜರ್' ಚಿತ್ರತಂಡ

  |

  ಭಾರತದ ರಿಯಲ್ ಹೀರೋ ದಿವಂಗತ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನ ಆಧರಿಸಿ ಸಿನಿಮಾ ತಯಾರಾಗುತ್ತಿದೆ. ನವೆಂಬರ್ 28ಕ್ಕೆ ಮೇಜರ್ ಹುತಾತ್ಮರಾದ ದಿನ. ಈ ದಿನದ ವಿಶೇಷವಾಗಿ ಮೇಜರ್ ಚಿತ್ರತಂಡ ಹುತಾತ್ಮ ಯೋಧನನ್ನು ಸ್ಮರಿಸಿಕೊಂಡಿದೆ.

  ಸಂದೀಪ್ ಉನ್ನಿಕೃಷ್ಣನ್ ಪಾತ್ರದಲ್ಲಿ ನಟಿಸುತ್ತಿರುವ ಅದ್ವಿ ಶೇಶಾ ಅವರ ಲುಕ್ ಟೆಸ್ಟ್ ವಿಡಿಯೋ ಮತ್ತು ಫೋಟೋವನ್ನು ಬಿಡುಗಡೆ ಮಾಡಿದ ಚಿತ್ರತಂಡ. ತೆಲುಗು ನಟ ಮಹೇಶ್ ಬಾಬು ಈ ವಿಡಿಯೋ ರಿಲೀಸ್ ಮಾಡಿದ್ದಾರೆ. ಈ ಮೂಲಕ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಲಾಗಿದೆ.

  'ಸೂರರೈ ಪೊಟ್ರು' ಚಿತ್ರವನ್ನು ಹಾಡಿ ಹೊಗಳಿದ ಮಹೇಶ್ ಬಾಬು: ಸೂರ್ಯ ನಟನೆಗೆ ಫಿದಾ ಆದ ಪ್ರಿನ್ಸ್'ಸೂರರೈ ಪೊಟ್ರು' ಚಿತ್ರವನ್ನು ಹಾಡಿ ಹೊಗಳಿದ ಮಹೇಶ್ ಬಾಬು: ಸೂರ್ಯ ನಟನೆಗೆ ಫಿದಾ ಆದ ಪ್ರಿನ್ಸ್

  2008ರಲ್ಲಿ ನಡೆದ ಮುಂಬೈ ದಾಳಿಯಲ್ಲಿ ಎನ್ ಎಸ್ ಜಿ ಕಮಾಂಡೋ ಆಗಿದ್ದ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮರಾಗಿದ್ದರು. ವೀರ ಯೋಧ ಸಂದೀಪ್ ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಹನ್ನೆರಡು ವರ್ಷ ಆಗಿವೆ.

  ಕಳೆದ ವರ್ಷ ತೆಲುಗು ಮತ್ತು ಹಿಂದಿಯಲ್ಲಿ ಸಂದೀಪ್ ಉನ್ನಿಕೃಷ್ಣನ್ ಕುರಿತು, ಅವರ ಜೀವನವನ್ನ ಸ್ಫೂರ್ತಿಯಾಗಿಸಿಕೊಂಡು 'ಮೇಜರ್' ಎಂಬ ಸಿನಿಮಾ ಪ್ರಕಟಣೆ ಆಗಿತ್ತು.

  ಮಹೇಶ್ ಬಾಬು ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ: ವೈರಲ್ ಆದ ಟ್ವೀಟ್‌ನಲ್ಲಿ ಏನಿದೆ?ಮಹೇಶ್ ಬಾಬು ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ: ವೈರಲ್ ಆದ ಟ್ವೀಟ್‌ನಲ್ಲಿ ಏನಿದೆ?

  'ಕ್ಷಣಂ' ಮತ್ತು 'ಗೂಢಚಾರಿ' ಚಿತ್ರಗಳನ್ನ ನಿರ್ದೇಶನ ಮಾಡಿದ್ದ ಅದ್ವಿ ಶೇಶಾ ಈ ಸಿನಿಮಾ ಮಾಡ್ತಿದ್ದು, ಇಂದು ಲುಕ್ ಪರೀಕ್ಷೆಯ ಫೋಟೋ ಮತ್ತು ವಿಡಿಯೋ ಅನಾವರಣ ಮಾಡಿದ್ದಾರೆ.

  Adivi Sesh pays tribute with a video and look test photo of Major Sandeep Unnikrishnan

  ತೆಲುಗು ಮತ್ತು ಹಿಂದಿಯಲ್ಲಿ ಈ ಚಿತ್ರ ಬರ್ತಿದ್ದು, ಸೋನಿ ಪಿಕ್ಚರ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಜೊತೆಗೆ ತೆಲುಗು ನಟ ಮಹೇಶ್ ಬಾಬು ಸಹ ನಿರ್ಮಾಪಕರಾಗಿ ಹಣ ಹೂಡುತ್ತಿದ್ದಾರೆ.

  ಹೋಟೆಲ್ ನಲ್ಲಿ ವೈನ್ ಬಾಟೇಲ್ ಹಿಡಿದು ನಿಂತ ದರ್ಶನ್ | Filmibeat Kannada

  ಕೋಲ್ಕತ್ತಾದಲ್ಲಿ 1977 ಮಾರ್ಚ್ 15 ರಂದು ಜನಿಸಿದ ಸಂದೀಪ್ ಬೆಂಗಳೂರಿನ ಹೆಬ್ಬಾಳ ಸೇನಾ ಕೇಂದ್ರದಲ್ಲಿ ತರಬೇತಿ ಪಡೆದಿದ್ದರು. 31ನೇ ವಯಸ್ಸಿನಲ್ಲಿ ಪ್ರಾಣ ತ್ಯಾಗ ಮಾಡಿದ ಸಂದೀಪ್ 9 ವರ್ಷಗಳ ಕಾಲ ಭಾರತದ ಸೇನೆಯ ಭಾಗವಾಗಿ ದುಡಿದಿದ್ದರು. ಅವರ ಸೇವೆಗೆ ಅಶೋಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

  English summary
  Adivi Sesh, who portrays Major Sandeep Unnikrishnan in Major. pays tribute with a video and look test photo. Directed by Sashi Kiran Tikka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X