For Quick Alerts
  ALLOW NOTIFICATIONS  
  For Daily Alerts

  ಪವರ್ ಸ್ಟಾರ್ ಆರ್ಭಟಕ್ಕೆ 'ಪೋಕಿರಿ' ದಾಖಲೆ ಉಡೀಸ್: ರೀ ರಿಲೀಸ್‌ ಆಗಿದ್ದ 'ಜಲ್ಸಾ' ಕಲೆಕ್ಷನ್ ಎಷ್ಟು ಕೋಟಿ?

  |

  ಸೂಪರ್ ಸ್ಟಾರ್‌ಗಳ ಹುಟ್ಟುಹಬ್ಬಕ್ಕೆ ಹಳೇ ಕ್ಲಾಸಿಕ್ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಟ್ರೆಂಡ್ ಶುರುವಾಗಿದೆ. ಮಹೇಶ್‌ಬಾಬು ಹುಟ್ಟುಹಬ್ಬಕ್ಕೆ 'ಪೋಕಿರಿ' ಸಿನಿಮಾ ಹೊಸ ರೂಪದಲ್ಲಿ ಬಂದು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಮೊನ್ನೆ ಪವನ್ ಕಲ್ಯಾಣ್ ಬರ್ತ್‌ಡೇ ಸ್ಪೆಷಲ್‌ ಆಗಿ ಬಂದ 'ಜಲ್ಸಾ' ಸಿನಿಮಾ ಆ ದಾಖಲೆ ಮುರಿದು ಸಂಚಲನ ಸೃಷ್ಟಿಸಿದೆ.

  ಟಾಲಿವುಡ್‌ನಲ್ಲಿ ಪವನ್ ಕಲ್ಯಾಣ್ ಹಾಗೂ ಮಹೇಶ್ ಬಾಬು ಇಬ್ಬರಿಗೂ ಫ್ಯಾನ್ ಫಾಲೋಯಿಂಗ್ ಯಾವ ರೇಂಜಿಗಿದೆ ಅನ್ನುವುದನ್ನು ಬಿಡಿಸಿ ಹೇಳುವುದು ಬೇಕಾಗಿಲ್ಲ. 16 ವರ್ಷಗಳ ಹಿಂದೆಯೇ 'ಪೋಕಿರಿ' ಸಿನಿಮಾ ಆವರೆಗಿನ ಎಲ್ಲಾ ತೆಲುಗು ಸಿನಿಮಾಗಳ ದಾಖಲೆ ಮುರಿದು 40 ಕೋಟಿ ರೂ. ಶೇರ್‌ ತಂದುಕೊಟ್ಟಿತ್ತು. ಇವತ್ತಿಗೂ ಆ ಸಿನಿಮಾ ಕ್ರೇಜ್ ಕಮ್ಮಿ ಆಗಿಲ್ಲ ಅನ್ನುವುದು ಆಗಸ್ಟ್ 9ರಂದು ಸಿನಿಮಾ ಹೊಸ ತಂತ್ರಜ್ಞಾನದಲ್ಲಿ ರೀ ರಿಲೀಸ್ ಆದಾಗ ಸಾಬೀತಾಗಿತ್ತು. 370 ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. 'ಜಲ್ಸಾ' ಸಿನಿಮಾ 700ಕ್ಕೂ ಹೆಚ್ಚು ಶೋಗಳು ಕಂಡು ಸದ್ದು ಮಾಡಿದೆ. ಅಭಿಮಾನಿಗಳು ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಗಲಾಟೆ ಮಾಡಿ ದೊಂಬಿ ಎಬ್ಬಿಸಿದ್ದಾರೆ. ಅಷ್ಟರಮಟ್ಟಿಗೆ ಸಿನಿಮಾ ರೀರಿಲೀಸ್‌ಗೆ ರೆಸ್ಪಾನ್ಸ್ ಸಿಕ್ಕಿದೆ.

  'ಮತ್ತೆ ತಿರುಗೇಟು ನೀಡುತ್ತೇವೆ' ಎಂದ ಚಾರ್ಮಿ: 'ಲೈಗರ್' ಸೋಲಿನ ಬಳಿಕ ಸೋಶಿಯಲ್ ಮೀಡಿಯಾಗೆ ಬ್ರೇಕ್!'ಮತ್ತೆ ತಿರುಗೇಟು ನೀಡುತ್ತೇವೆ' ಎಂದ ಚಾರ್ಮಿ: 'ಲೈಗರ್' ಸೋಲಿನ ಬಳಿಕ ಸೋಶಿಯಲ್ ಮೀಡಿಯಾಗೆ ಬ್ರೇಕ್!

  'ಪೋಕಿರಿ' ಸಿನಿಮಾ 300 ಶೋಗಳು ಹೌಸ್‌ಫುಲ್‌ ಆಗಿ 1.76 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದರೆ, 'ಜಲ್ಸಾ' 3.20 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ರೀರಿಲೀಸ್ ಆಗಿದ್ದ ಸಿನಿಮಾವೊಂದು ಇಷ್ಟು ದೊಡ್ಡಮೊತ್ತದ ಕಲೆಕ್ಷನ್‌ ಮಾಡಿರುವುದು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಎನ್ನಲಾಗುತ್ತಿದೆ. ಒಟ್ನಲ್ಲಿ ಪವರ್ ಸ್ಟಾರ್‌ ಅಭಿಮಾನಿಗಳಂತೂ ಮುಗಿಬಿದ್ದು ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. 'ಜಲ್ಸಾ' ಸಿನಿಮಾ ರೀರಿಲೀಸ್ ಆಗುತ್ತೆ ಅನ್ನುವ ಸುದ್ದಿ ಬಂದಾಗಲೇ 'ಪೋಕಿರಿ' ದಾಖಲೆ ಮುರಿಯುವ ಸುಳಿವು ಸಿಕ್ಕಿತ್ತು. ಅದು ನಿಜವೇ ಆಗಿದೆ.

  Jalsa Special shows worldwide Collections Creates a new All Time Record Beats Pokiri

  2008ರಲ್ಲಿ ತೆರೆಕಂಡಿದ್ದ 'ಜಲ್ಸಾ' ಸಿನಿಮಾ ಅಷ್ಟೇನು ಸದ್ದು ಮಾಡಿರಲಿಲ್ಲ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಆಕ್ಷನ್ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಸಾಂಗ್ಸ್ ಸೂಪರ್ ಹಿಟ್ ಆಗಿತ್ತು. ಪವರ್ ಸ್ಟಾರ್ ಎಂದಿನ ತಮ್ಮ ಸ್ಟೈಲ್‌ ಹಾಗೂ ಮ್ಯಾನರಿಸಂನಿಂದ ಕಮಾಲ್ ಮಾಡಿದ್ದರು. ವಿಶೇಷ ಅಂದರೆ ಈ ಚಿತ್ರಕ್ಕೆ ಮಹೇಶ್ ಬಾಬು ವಾಯ್ಸ್ ಓವರ್ ಕೊಟ್ಟಿದ್ದರು. ಟಾಲಿವುಡ್ ಪ್ರಿನ್ಸ್ ನಿರೂಪಣೆಯಲ್ಲೇ ಇಡೀ ಕಥೆಯನ್ನು ನಿರೂಪಿಸಲಾಗಿತ್ತು. ಇದು ಪ್ರೇಕ್ಷಕರಿಗೆ ಮತ್ತಷ್ಟು ಮಜಾ ಕೊಟ್ಟಿದೆ. 4k ವರ್ಷನ್‌ನಲ್ಲಿ 'ಜಲ್ಸಾ' ಸಿನಿಮಾ ರೀರಿಲೀಸ್ ಆಗಿ ಸಿನಿಮಾ ಧೂಳೆಬ್ಬಿಸಿದೆ.

  ಹೊಸ ಚಿತ್ರಕ್ಕೆ ಸ್ಯಾಮ್ ಹೊಸ ಷರತ್ತು: ಮೊದ್ಲೆ ಹಿಂಗೆ ಮಾಡಿದ್ರೆ ಡೈವೋರ್ಸ್ ತಪ್ಪುತ್ತಿತ್ತಾ?ಹೊಸ ಚಿತ್ರಕ್ಕೆ ಸ್ಯಾಮ್ ಹೊಸ ಷರತ್ತು: ಮೊದ್ಲೆ ಹಿಂಗೆ ಮಾಡಿದ್ರೆ ಡೈವೋರ್ಸ್ ತಪ್ಪುತ್ತಿತ್ತಾ?

  ಪವರ್ ಸ್ಟಾರ್ 'ಜಲ್ಸಾ' ಸಿನಿಮಾ ದಾಖಲೆ ಮುರಿಯೋಕೆ ಪ್ರಭಾಸ್ 'ಬಿಲ್ಲಾ' ಸಿನಿಮಾ ಸಿದ್ಧವಾಗ್ತಿದೆ. ಹೌದು ಅಕ್ಟೋಬರ್ 23ಕ್ಕೆ ಯಂಗ್‌ ರೆಬಲ್ ಸ್ಟಾರ್ ಬರ್ತ್‌ಡೇ ಸ್ಪೆಷಲ್ಲಾಗಿ ಸೂಪರ್ ಹಿಟ್ 'ಬಿಲ್ಲಾ' ಚಿತ್ರವನ್ನ ಹೊಸ ತಂತ್ರಜ್ಞಾನದಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಈಗಾಗಲೇ ಅಭಿಮಾನಿಗಳು ಈ ಸುದ್ದಿ ಕೇಳಿ ಥ್ರಿಲ್ಲಾಗಿದ್ದಾರೆ. ಶೋಗಳ ಸಂಖ್ಯೆ, ಕಲೆಕ್ಷನ್ ಎಲ್ಲದರಲ್ಲೂ ಹೊಸ ದಾಖಲೆ ಬರೆದು ಕಾಲರ್ ಎಗರಿಸಲು ಪ್ರಭಾಸ್ ನೆಚ್ಚಿನ ಡಾರ್ಲಿಂಗ್ಸ್ ಕಾಯುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಪ್ರಭಾಸ್ ಸದ್ದು ಮಾಡ್ತಿದ್ದಾರೆ. ವಿಶ್ವದಾದ್ಯಂತ ಡಾರ್ಲಿಂಗ್ ಅಭಿಮಾನಿಗಳ ಇರುವುದು ಗೊತ್ತೇಯಿದೆ. ಇನ್ನು 'ಬಿಲ್ಲಾ' ಸಿನಿಮಾ ಅವತ್ತಿನ ಕಾಲಕ್ಕೆ ಸಾಕಷ್ಟು ದಾಖಲೆಗಳನ್ನು ಬರೆದಿತ್ತು. ಈ ಬಾರಿ ಡಬಲ್ ರೋಲ್‌ನಲ್ಲಿ ಪ್ರಭಾಸ್ ಆರ್ಭಟಕ್ಕೆ ಬಾಕ್ಸಾಫೀಸ್ ಶೇಕ್ ಆಗುವುದು ಗ್ಯಾರೆಂಟಿ.

  English summary
  Jalsa Special shows Worldwide Collections Creates a new All Time Record Beating Pokiri. Know More.
  Sunday, September 4, 2022, 18:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X