For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್ ನಲ್ಲೂ 'ಓವರ್ ಆಕ್ಟಿಂಗ್ ರಾಣಿ' ಎಂದು ಟ್ರೋಲ್ ಆದ ರಶ್ಮಿಕಾ ಮಂದಣ್ಣ.!

  |

  ಕೊಡಗಿನ ಕುವರಿ, ತೆಲುಗು ಸಿನಿ ಅಂಗಳದಲ್ಲಿ ಹೆಚ್ಚು ಡಿಮ್ಯಾಂಡ್ ಹೊಂದಿರುವ ಕನ್ನಡ ನಟಿ ರಶ್ಮಿಕಾ ಮಂದಣ್ಣಗೆ ಟ್ರೋಲ್ ಗಳೇನು ಹೊಸದಲ್ಲ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆಗೆ ಬ್ರೇಕಪ್ ಮಾಡಿಕೊಂಡ್ಮೇಲಂತೂ ರಶ್ಮಿಕಾ ಮಂದಣ್ಣ ಕುರಿತಾಗಿ ಮಾಡಿರುವ ಟ್ರೋಲ್ ಗಳು ಒಂದೆರಡಲ್ಲ.

  ಒಂದಲ್ಲಾ ಒಂದು ವಿಷಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ರಶ್ಮಿಕಾ ಮಂದಣ್ಣ ಕಾಲೆಳೆಯುತ್ತಲೇ ಇರುತ್ತಾರೆ. ಈಗಲೂ ಆಗಿರುವುದು ಇದೇ.!

  Rashmika Mandanna gets trolled for her speech in Sarileru Neekevvaru Event

  ಇತ್ತೀಚೆಗಷ್ಟೇ ಟಾಲಿವುಡ್ ನಟ ಮಹೇಶ್ ಬಾಬು ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಸರಿಲೇರು ನೀಕ್ಕೆವ್ವರು' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಈ ಸಮಾರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ ಭಾಷಣವನ್ನು ಕೇಳಿ ತೆಲುಗು ಸಿನಿ ಪ್ರಿಯರು 'ಓವರ್ ಆಕ್ಟಿಂಗ್ ರಾಣಿ' ಎನ್ನುತ್ತಿದ್ದಾರೆ. ಬೇಕಾದ್ರೆ ನೀವೇ ಕೆಲ ಕಾಮೆಂಟ್ಸ್ ಗಳನ್ನು ನೋಡಿ...

  ರಶ್ಮಿಕಾ ಬಗ್ಗೆ ತೆಲುಗು ಮಂದಿ ಟೀಕೆ

  ರಶ್ಮಿಕಾ ಬಗ್ಗೆ ತೆಲುಗು ಮಂದಿ ಟೀಕೆ

  ಇಷ್ಟು ದಿನ ರಶ್ಮಿಕಾ ಮಂದಣ್ಣ ಬಗ್ಗೆ ಕನ್ನಡ ಸಿನಿ ಪ್ರಿಯರು ಟೀಕೆ ಮಾಡುತ್ತಿದ್ದರು. ಆದ್ರೀಗ, ತೆಲುಗು ಮಂದಿ ಕೂಡ ರಶ್ಮಿಕಾ ಮಂದಣ್ಣ ಬಗ್ಗೆ ಟ್ರೋಲ್ ಮಾಡಲು ಆರಂಭಿಸಿದ್ದಾರೆ. 'ಸರಿಲೇರು ನೀಕ್ಕೆವ್ವರು' ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಭಾಷಣವನ್ನು ಕೇಳಿ ತೆಲುಗು ಸಿನಿ ಪ್ರಿಯರು, ''ಓವರ್ ಆಕ್ಟಿಂಗ್ ಗೆ ಒಂದು ಮುಖ ಇದ್ದರೆ, ಅದು ರಶ್ಮಿಕಾ ಮಂದಣ್ಣ'' ಎನ್ನುತ್ತಿದ್ದಾರೆ.

  ಏನಾದ್ರೂ ಕೇಳಿ, ನಿಮ್ಮ ಪ್ರಶ್ನೆಗೆ ಉತ್ತರಿಸಲು ರಶ್ಮಿಕಾ ಮಂದಣ್ಣ ಸಿದ್ಧಏನಾದ್ರೂ ಕೇಳಿ, ನಿಮ್ಮ ಪ್ರಶ್ನೆಗೆ ಉತ್ತರಿಸಲು ರಶ್ಮಿಕಾ ಮಂದಣ್ಣ ಸಿದ್ಧ

  ಕಾಮೆಂಟ್ ಗಳ ಸುರಿಮಳೆ

  ಕಾಮೆಂಟ್ ಗಳ ಸುರಿಮಳೆ

  'ಸರಿಲೇರು ನೀಕ್ಕೆವ್ವರು' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದ ವಿಡಿಯೋಗಳನ್ನು ನಟ ಮಹೇಶ್ ಬಾಬು, ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಭಾಷಣವನ್ನು ನೋಡಿ ಯೂಟ್ಯೂಬ್ ನಲ್ಲಿ ಕಾಮೆಂಟ್ ಗಳ ಸುರಿಮಳೆ ಆಗುತ್ತಿದೆ. ''ಈ ವಿಡಿಯೋವನ್ನು ಪೂರ್ತಿ ನೋಡಲು ತುಂಬಾ ತಾಳ್ಮೆ ಬೇಕು'' ಎಂದು ಒಬ್ಬರು ಕಾಮೆಂಟ್ ಮಾಡಿದರೆ, ''ಮಾತೃಭಾಷೆ ಕನ್ನಡ ಆದರೂ ತೆಲುಗು ಚೆನ್ನಾಗಿ ಮಾತನ್ನಾಡಿದ್ದಾರೆ'' ಎಂದು ಇನ್ನೊಬ್ಬರು ಕಾಮೆಂಟ್ ಹಾಕಿದ್ದಾರೆ.

  ಒಂದು ಚಿತ್ರವನ್ನ ಒಪ್ಪಿಕೊಳ್ಳಲು ರಶ್ಮಿಕಾ 'ಇದನ್ನೆಲ್ಲ' ನೋಡ್ತಾರಾ.?ಒಂದು ಚಿತ್ರವನ್ನ ಒಪ್ಪಿಕೊಳ್ಳಲು ರಶ್ಮಿಕಾ 'ಇದನ್ನೆಲ್ಲ' ನೋಡ್ತಾರಾ.?

  ಏನ್ ಡವ್ ಮಾಡ್ತಾರೆ ಗುರು.!

  ಏನ್ ಡವ್ ಮಾಡ್ತಾರೆ ಗುರು.!

  ''ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಡವ್ ಮಾಡ್ತಾರೆ. ಅವರಿಗೆ ಓವರ್ ಆಕ್ಟಿಂಗ್ ಅವಾರ್ಡ್ ಕೊಡಬೇಕು. ಮೆಗಾ ಸ್ಟಾರ್ ಮುಂದೆ ಹೇಗೆ ಮಾತನಾಡಬೇಕು ಅನ್ನೋದು ಆಕೆಗೆ ಗೊತ್ತಿಲ್ಲ'' ಎಂದಲ್ಲಾ ಕಾಮೆಂಟ್ ಗಳು ಲಭ್ಯವಾಗಿವೆ.

  ಸಕ್ಸಸ್ ಕಂಡರೂ ಈ ವರ್ಷ ರಶ್ಮಿಕಾ ಮಂದಣ್ಣ ಟ್ರೋಲ್ ಆಗಿದ್ದೇ ಜಾಸ್ತಿಸಕ್ಸಸ್ ಕಂಡರೂ ಈ ವರ್ಷ ರಶ್ಮಿಕಾ ಮಂದಣ್ಣ ಟ್ರೋಲ್ ಆಗಿದ್ದೇ ಜಾಸ್ತಿ

  ರಶ್ಮಿಕಾ ಪರ ಕೆಲವರು ಬ್ಯಾಟಿಂಗ್

  ರಶ್ಮಿಕಾ ಪರ ಕೆಲವರು ಬ್ಯಾಟಿಂಗ್

  ''ಕಾಜಲ್ ಅಗರ್ವಾಲ್, ಹನ್ಸಿಕಾ, ರಾಕುಲ್.. ಇವರೆಲ್ಲ ತೆಲುಗು ಮಾತನಾಡಲು ಪ್ರಯತ್ನ ಪಡಲ್ಲ. ಆದರೆ ಸಾಯಿ ಪಲ್ಲವಿ, ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾಗೆ ಬಂದು ತೆಲುಗು ಕಲಿತಿದ್ದಾರೆ. ಇದು ಡೆಡಿಕೇಷನ್ ಅಂದ್ರೆ...'' ಎಂದು ಕೆಲವರು ರಶ್ಮಿಕಾ ಮಂದಣ್ಣ ಪರ ಬ್ಯಾಟ್ ಬೀಸಿದ್ದಾರೆ.

  English summary
  Actress Rashmika Mandanna gets trolled for her speech in Sarileru Neekevvaru Event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X