For Quick Alerts
  ALLOW NOTIFICATIONS  
  For Daily Alerts

  'ಮಾಸ್ಟರ್ ಡ್ಯಾನ್ಸರ್' ಶೋಗೆ ಚಂದನ್ ಶೆಟ್ಟಿ ಜಡ್ಜ್ ಆಗಿರೋದು ಈ ಕಾರಣಕ್ಕೆ.!

  By Harshitha
  |
  ಚಂದನ್ ಶೆಟ್ಟಿ ಮಾಸ್ಟರ್ ಡ್ಯಾನ್ಸರ್ ಷೋಗೆ ಜಡ್ಜ್ ಆಗಿರೋದು ಇದೆ ಕಾರಣಕ್ಕೆ | Filmibeat Kannada

  ಕಲರ್ಸ್ ಸೂಪರ್ ವಾಹಿನಿಯಲ್ಲಿ ಶುರು ಆಗಿರುವ 'ಮಾಸ್ಟರ್ ಡ್ಯಾನ್ಸರ್' ಡ್ಯಾನ್ಸ್ ರಿಯಾಲಿಟಿ ಶೋಗೆ ನಟಿ ಶ್ರುತಿ ಹರಿಹರನ್ ಹಾಗೂ 'ನಾಟ್ಯ' ಮಯೂರಿ ತೀರ್ಪುಗಾರರ ಸ್ಥಾನ ಅಲಂಕರಿಸಿದ್ದಾರೆ. ಇವರಿಬ್ಬರ ಮಧ್ಯೆ 'ಬಿಗ್ ಬಾಸ್ ಕನ್ನಡ-5' ವಿನ್ನರ್, ಕನ್ನಡ Rapper ಚಂದನ್ ಶೆಟ್ಟಿ ಕೂಡ ಜಡ್ಜ್ ಆಗಿದ್ದಾರೆ.

  ''ಎಲ್ಲಾ ಓಕೆ ಡ್ಯಾನ್ಸ್ ಶೋಗೆ ಚಂದನ್ ಶೆಟ್ಟಿ ಜಡ್ಜ್ ಯಾಕೆ.? ಅವರು ಡ್ಯಾನ್ಸರ್ ಅಲ್ಲ.!'' ಎಂಬ ಕಾಮೆಂಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಬರುತ್ತಿವೆ. ಕೇವಲ ಟಿ.ಆರ್.ಪಿಗಾಗಿ ಚಂದನ್ ಶೆಟ್ಟಿ ಅವರನ್ನ ನಿರ್ಣಾಯಕರ ಸ್ಥಾನದಲ್ಲಿ ಕೂರಿಸಲಾಗಿದೆ ಎಂಬ ಕಾರಣಕ್ಕೆ ಮುನಿಸಿಕೊಂಡವರೂ ಇದ್ದಾರೆ.

  ಫೇಸ್ ಬುಕ್ ನಲ್ಲಿ ಚಂದನ್ ಶೆಟ್ಟಿ ಆಯ್ಕೆ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿರುವಾಗಲೇ, 'ಮಾಸ್ಟರ್ ಡ್ಯಾನ್ಸರ್' ಶೋನಲ್ಲಿ ಚಂದನ್ ಶೆಟ್ಟಿ 'ಹೇಗೆ ಜಡ್ಜ್ ಮಾಡುವೆ?' ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಮುಂದೆ ಓದಿರಿ...

  ಅಕುಲ್ ಬಾಲಾಜಿ ನಂಬಲಿಲ್ಲ.!

  ಅಕುಲ್ ಬಾಲಾಜಿ ನಂಬಲಿಲ್ಲ.!

  ತೀರ್ಪುಗಾರರ ಸ್ಥಾನದಲ್ಲಿ ಶ್ರುತಿ ಹರಿಹರನ್ ಹಾಗೂ ಮಯೂರಿ ಆಸೀನರಾದ ಬಳಿಕ 'ಮಾಸ್ಟರ್ ಡ್ಯಾನ್ಸರ್' ವೇದಿಕೆ ಮೇಲೆ ಚಂದನ್ ಶೆಟ್ಟಿ ಪ್ರತ್ಯಕ್ಷವಾದರು. ''ನಾನು ಈ ಶೋಗೆ ಮೂರನೇ ಜಡ್ಜ್'' ಅಂತ ಚಂದನ್ ಶೆಟ್ಟಿ ಹೇಳಿದರೂ ನಿರೂಪಕ ಅಕುಲ್ ಬಾಲಾಜಿ ನಂಬಲಿಲ್ಲ. ಇದು ಗಿಮಿಕ್ ಆಗಿದ್ದರೂ, ನಿರ್ಣಾಯಕರ ಸ್ಥಾನದಲ್ಲಿ ಚಂದನ್ ಶೆಟ್ಟಿ ಯಾಕೆ ಕೂರಬೇಕು ಎಂಬುದಕ್ಕೆ ಸ್ವತಃ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಅದೇನಪ್ಪಾ ಅಂದ್ರೆ...

  ಡ್ಯಾನ್ಸ್ ಮಾಡಲು ಮ್ಯೂಸಿಕ್ ಬೇಕು ತಾನೆ.?

  ಡ್ಯಾನ್ಸ್ ಮಾಡಲು ಮ್ಯೂಸಿಕ್ ಬೇಕು ತಾನೆ.?

  ''ಮಾಸ್ಟರ್ ಡ್ಯಾನ್ಸರ್'ನಲ್ಲಿ ಡ್ಯಾನ್ಸ್ ಮಾಡಬೇಕಾದ್ರೆ, ಮ್ಯೂಸಿಕ್ ಬೇಕಲ್ವಾ.? ನಾನು ಒಬ್ಬ ಮ್ಯೂಸಿಕ್ ಡೈರೆಕ್ಟರ್ ಅಲ್ವಾ.? ಹೀಗಾಗಿ, ಕಾನ್ಸೆಪ್ಟ್ ಮೇಲೆ ನಾನು ಜಡ್ಜ್ ಮಾಡುತ್ತೇನೆ'' ಎಂದು ಸ್ಪಷ್ಟ ಪಡಿಸಿದ್ದಾರೆ ಚಂದನ್ ಶೆಟ್ಟಿ

  ಚಂದನ್ ಶೆಟ್ಟಿ ಆಯ್ಕೆ ಬಗ್ಗೆ ಶುರುವಾಯ್ತು ಪರ ವಿರೋಧ ಚರ್ಚೆ !ಚಂದನ್ ಶೆಟ್ಟಿ ಆಯ್ಕೆ ಬಗ್ಗೆ ಶುರುವಾಯ್ತು ಪರ ವಿರೋಧ ಚರ್ಚೆ !

  ಮಾನದಂಡ ಏನು.?

  ಮಾನದಂಡ ಏನು.?

  ''ಫಸ್ಟ್ ಟೈಮ್ ಡ್ಯಾನ್ಸ್ ಶೋಗೆ ನಾನು ಜಡ್ಜ್ ಆಗಿ ಬಂದಿರುವುದು. ನಾನು ಸಾಕಷ್ಟು ಡ್ಯಾನ್ಸ್ ಶೋ ನೋಡಿದ್ದೇನೆ. ಈ ಕೆಲಸ ತುಂಬಾ ಕಷ್ಟ. ನಾನು ಡ್ಯಾನ್ಸರ್ ಅಲ್ಲ. ಆದ್ರೆ, ತುಂಬಾ ಡ್ಯಾನ್ಸ್ ಫಾರ್ಮ್ಸ್ ನೋಡಿದ್ದೇನೆ. ಎಷ್ಟು ಕ್ರಿಯೇಟವ್ ಆಗಿ ಕಾನ್ಸೆಪ್ಟ್ ಮಾಡಿಕೊಂಡು ಬರ್ತಾರೆ ಎಂಬುದರ ಮೇಲೆ ನಾನು ಜಡ್ಜ್ ಮಾಡುತ್ತೇನೆ'' ಎಂದಿದ್ದಾರೆ ಚಂದನ್ ಶೆಟ್ಟಿ.

  ಕಾರ್ಯಕ್ರಮ ಪ್ರಸಾರ ಯಾವಾಗ.?

  ಕಾರ್ಯಕ್ರಮ ಪ್ರಸಾರ ಯಾವಾಗ.?

  'ಮಾಸ್ಟರ್ ಡ್ಯಾನ್ಸರ್' ಕಾರ್ಯಕ್ರಮ ನಿನ್ನೆಯಿಂದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಾರಂಭವಾಗಿದೆ. ರಾತ್ರಿ 8 ಗಂಟೆಗೆ ಶೋ ಪ್ರಸಾರ ಆಗಲಿದೆ.

  English summary
  Bigg Boss Kannada 5 Winner Chandan Shetty explains why he is a judge for 'Master Dancer' reality show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X