Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೆಂಡಸಂಪತಿಗೆ: ಕಾಶಿ ಅಮ್ಮನಿಗೆ ತಿರುಗೇಟು ಕೊಟ್ಟ ಸುಮನಾ
ಕಾಶಿ ಅಮ್ಮನಿಗೆ ಮನೆಯವರ ಮುಂದೆ ಸುಮನಾ ತಿರುಗೇಟು ನೀಡಿದ್ದಾಳೆ. ನೀನು ಮೋಸದಿಂದ ನನ್ನ ಕಟ್ಟಿ ಹಾಕಿ ಈಗ ಇಲ್ಲಿ ಬಂದು ರಂಪಾಟ ಮಾಡುತ್ತಿದ್ದೀಯಾ ಎಂದು ತಿರುಗೇಟು ನೀಡಿದ್ದಾಳೆ. ನಾನು ನನ್ನ ಅಪ್ಪನ ಆಣೆ ಕಾಶಿನ ಮದುವೆಯಾಗೋದಾಗಿ ಹೇಳಿಲ್ಲ ಎಂದು ಹೇಳಿದ್ದಾಳೆ.
ಕಾಲೋನಿ ಜನರಿಗೆ ನಿನ್ನ ಮಗ ಎಂಥಹವನು ಎಂದು ಗೊತ್ತಿದೆ. ಪದೇ-ಪದೇ ನನ್ನ ಹೆಸರಿಗೆ ಕಳಂಕ ತರುತ್ತಿದ್ದಾರೆ. ನಿನ್ನ ಮಗ ಜೈಲಿಗೆ ಹೋಗಿದ್ದಾನೆ ಹೋಗಿ ತುಪ್ಪದ ದೀಪ ಹಚ್ಚು ಎಂದು ಹೇಳಿದ್ದಾಳೆ. ಈ ವೇಳೆ ಸಾಧನ ತನ್ನ ಮಾವನಿಗೆ ಮಸಾಲೆ ಹರೆಯಲು ಶುರು ಮಾಡಿದ್ದಾಳೆ. ಇಂಥಹವರಿಂದ ನಮ್ಮ ತೀರ್ಥನಿಗೆ ಉಳಿಗಾಲವಿಲ್ಲ ಎಂದು ತಿಳಿಸಿದ್ದಾರೆ. ಇತ್ತ ಸುಮನಾ ಕಾಶಿ ಅಮ್ಮನಿಗೆ ಇನ್ನೊಂದು ಮಾತು ಆಡಿದರು ಚನ್ನಾಗಿ ಇರಲ್ಲ ಎಂದು ತಿಳಿಸಿ ಬಾಯಿ ಮುಚ್ಚಿಸಿದ್ದಾಳೆ.
ಕಾಶಿ
ವಿಶ್ವೇಶ್ವರ
ಸ್ವಾಮಿ
ದೇವಸ್ಥಾನಕ್ಕೆ
ಸುದೀಪ್
ಭೇಟಿ:
ಕಿಚ್ಚನನ್ನು
ನೋಡಲು
ಮುಗಿಬಿದ್ದ
ಅಭಿಮಾನಿಗಳು
ಕಾಶಿ ಅಮ್ಮ ಸುಮನಾಗೆ ನಿನ್ನ ನೆಮ್ಮದಿಯಾಗಿ ಇರಲು ನಾನು ಬಿಡೋದಿಲ್ಲ ಎಂದು ಸವಾಲು ಹಾಕಿದ್ದಾಳೆ. ಇತ್ತ ಸುಮನಾ ಮಾವನಿಗೂ ಇವಳು ನಿಮ್ಮನ್ನು ಉದ್ಧಾರ ಮಾಡ್ತಾಳೆ ಅಂತಾ ನಿನ್ನ ಮಗ ಕಟ್ಟಿಕೊಂಡು ಬಂದಿದ್ದಾನೆ ಆದರೆ ನಿನ್ನ ಮನೆಯನ್ನೇ ಹಾಳು ಮಾಡ್ತಾಳೆ ಎಂದು ಬೆಂಕಿ ಹಚ್ಚಿ ಹೋಗಿದ್ದಾಳೆ. ಇದು ಸಾಧನಾಳಿಗೆ ಒಂದು ರೀತಿಯಲ್ಲಿ ಖುಷಿ ತಂದು ಕೊಟ್ಟಿದೆ. ಆದರೆ ಕೇಶವ್ ಪ್ರಸಾದ್ ಚಿಂತೆಗೀಡಾಗಿದ್ದಾರೆ.

ಜನರ ಮಾತಿಗೆ ಚಿಂತೆ ಮಾಡಿದ ಕೇಶವ್ ಪ್ರಸಾದ್
ಜನರು ನಿಮ್ಮ ಮನೆಯ ಮುಂದೆ ಲೋಕಲ್ ಪೀಪಲ್ಸ್ ಬಂದು ಈ ರೀತಿ ರಂಪಾಟ ಮಾಡಿದ್ದಾರೆ. ಇದರಿಂದ ನಮಗೆ ತೊಂದರೆಯಾಗಿದೆ ಎಂದು ಕೇಳಿದ್ದಾರೆ. ನಿಮಗೆ ಆಗಿರುವ ತೊಂದರೆಗೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಕೇಶವ್ ಪ್ರಸಾದ್ ಕ್ಷಮೆಯಾಚಿಸಿದ್ದಾರೆ. ಇದರಿಂದ ನಮ್ಮ ಮನೆಯ ಮಾನಮಾರ್ಯದೆ ಹಾಳಾಗಿದೆ ಎಂದು ಚಿಂತೆಗೀಡಾಗಿದ್ದಾರೆ.

ಕಾಶಿಗೆ ಮುಹೂರ್ತ ಇಟ್ಟ ಕಾಲೋನಿ ಜನರು
ಇತ್ತ ಕೌನ್ಸಿಲರ್ ತೀರ್ಥರನ್ನು ಕೊಲೆ ಮಾಡಲು ಕಾಶಿ ಪ್ಲ್ಯಾನ್ ಮಾಡಿದ್ದು ಗೊತ್ತಾಗಿ ಕಾಲೋನಿ ಜನರು ಆತನಿಗೆ ಒಂದು ಗತಿಕಾಣಿಸಲು ಸುಮನಾ ತಂದೆ ರಾಮಣ್ಣನ ಮನೆ ಮುಂದೆ ಮಚ್ಚು,ಕುಡುಗೋಲು ಹಿಡಿದು ಬಂದು ನಿಂತಿದ್ದಾರೆ. ಆದರೆ ರಾಮಣ್ಣ ಸುಮನಾ ಮಾತು ಕೇಳಿ ಮುಂದುವರಿಯೋಣ ಎಂದು ಹೇಳಿದ್ದಾರೆ.

ಸುಮನಾಳನ್ನು ಹೊರಗೆ ಕಳಿಸಿದ ಕೇಶವ್ ಪ್ರಸಾದ್
ಎಲ್ಲಾ ಮಾತುಗಳನ್ನು ಕೇಳಿದ ಕೇಶವ್ ಪ್ರಸಾದ್ ಸುಮನಾಳನ್ನು ಮನೆಯಿಂದ ಹೊರಗೆ ಹಾಕಿದ್ದಾನೆ. ನನ್ನ ಮಗನ ಪ್ರಾಣಕ್ಕೆ ಸಂಚಕಾರ ಇರುವ ನೀನು ಮನೆಯಲ್ಲಿ ಇರುವುದು ಇಷ್ಟವಿಲ್ಲ ಎಂದು ಹೇಳುವ ಮೂಲಕ ಸುಮನಾ ಎಷ್ಟೇ ಬೇಡಿಕೊಂಡರು ಅದಕ್ಕೆ ಆಸ್ಪದ ನೀಡದೆ ನಿರ್ದಾಕ್ಷಿಣ್ಯವಾಗಿ ಮನೆಯಿಂದ ಹೊರಗೆ ಹಾಕುತ್ತಾನೆ. ಸುಮನಾ ಬ್ಯಾಗ್‌ನ್ನು ಸಾಧನಾ ಖುಷಿಯಿಂದ ಹೊರಗೆ ತಂದು ಎಸೆದು ಹರ್ಷವನ್ನು ವ್ಯಕ್ತಪಡಿಸುತ್ತಾಳೆ.

ನೀವು ಹೇಳುವವರೆಗೂ ಮನೆಗೆ ಬರಲ್ಲ ಎಂದ ಸುಮನಾ
ಮಾವನ ಮಾತಿಗೆ ಕಟ್ಟು ಬಿದ್ದ ಸುಮನಾ ನೀವು ಫೋನ್ ಮಾಡಿ ಕರೆಯುವ ವರೆಗೂ ಮನೆಗೆ ಬರೋದಿಲ್ಲ ಎಂದು ಹೇಳುತ್ತಾಳೆ. ಅತ್ತೆ ಕರೆದರೂ ಅಷ್ಟೇ, ಸಾಹೇಬರು ಕರೆದರೂ ನಾನು ಮನೆಗೆ ಬರೋದಿಲ್ಲ ಎಂದು ನಮಸ್ಕಾರ ಮಾಡಿ ಮನೆಯಿಂದ ಹೊರಡುತ್ತಾಳೆ. ಈ ವೇಳೆ ಸಹ ಸಾಧನ ಅವಳಿಗೆ ಅವಮಾನವನ್ನು ಮಾಡಿ ಕಳಿಸುತ್ತಾಳೆ. ಆದರೂ ಸಹ ಸುಮನಾ ಸಹಿಸಿಕೊಂಡು ಮನೆಯಿಂದ ಹೊರಗೆ ಹೋಗುತ್ತಾಳೆ.