For Quick Alerts
  ALLOW NOTIFICATIONS  
  For Daily Alerts

  ಸಿದ್ಧಾರ್ಥ್ ಶುಕ್ಲಾ ಸಾವಿನ ಬಗ್ಗೆ ತಮಾಷೆ ಮಾಡಿದ್ದ ಸಲ್ಮಾನ್ ಖಾನ್: ವಿಡಿಯೋ ವೈರಲ್

  By ಫಿಲ್ಮಿಬೀಟ್ ಡೆಸ್ಕ್
  |

  ಹಿಂದಿ ಕಿರುತೆರೆ ಲೋಕದ ಖ್ಯಾತ ನಟ ಸಿದ್ಧಾರ್ಥ್ ಶುಕ್ಲಾ ಹಠಾತ್ ನಿಧನ ಅವರ ಸ್ನೇಹಿತರಿಗೆ, ಅಭಿಮಾನಿಗಳಿಗೆ ಶಾಕ್ ನೀಡಿದೆ. ಸೆಪ್ಟಂಬರ್ 2 ಹೃದಯಾಘಾತದಿಂದ ಸಾವನ್ನಪ್ಪಿದ ನಟ ಸಿದ್ಧಾರ್ಥ್ ಶುಕ್ಲಾ ಇನ್ನು ನೆನಪು ಮಾತ್ರ. ಸಿದ್ಧಾರ್ಥ್ ಸಾವಿನಿಂದ ಪ್ರೇಯಸಿ ಶೆಹನಾಜ್ ಗಿಲ್ ಕಂಗೆಟ್ಟಿದ್ದಾರೆ. ತನ್ನ ಮಡಿಲಲ್ಲೇ ಸಿದ್ಧಾರ್ಥ್ ಪ್ರಾಣ ಬಿಟ್ಟಿರುವುದನ್ನು ಶೆಹನಾಜ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಗೆಳೆಯ ಸಿದ್ಧಾರ್ಥ್ ನನ್ನು ಕಳೆದುಕೊಂಡು ಶೆಹನಾಜ್ ಸಂಪೂರ್ಣವಾಗಿ ಕುಸಿದುಹೋಗಿದ್ದಾರೆ.

  ಸಿದ್ಧಾರ್ಥ್ ಸಾವಿನ ಬಗ್ಗೆ ಅನುಮಾನ ಸಹ ಮೂಡಿಸಿದೆ. ಫಿಟ್ ಅಂಡ್ ಫೈನ್ ಆಗಿದ್ದ ನಟ ಹಠಾತ್ ನಿಧನಹೊಂದಿರುವುದು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಸಿದ್ಧಾರ್ಥ್ ಮರಣೋತ್ತರ ವರದಿಯಲ್ಲಿ ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ ಎಂದು ವೈದ್ಯರು ಖಾತ್ರಿಪಡಿಸಿದ್ದಾರೆ. ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಮುಂಬೈನ ಕೂಪರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.

  ಸಿದ್ಧಾರ್ಥ್ ಶುಕ್ಲಾ ಸಾವು: ದೇಹದ ಅಂಗಗಳಲ್ಲಿ ವಿಷ ಇದ್ಯಾ? ಎಫ್‌ಎಸ್‌ಎಲ್ ತನಿಖೆ ಸಿದ್ಧಾರ್ಥ್ ಶುಕ್ಲಾ ಸಾವು: ದೇಹದ ಅಂಗಗಳಲ್ಲಿ ವಿಷ ಇದ್ಯಾ? ಎಫ್‌ಎಸ್‌ಎಲ್ ತನಿಖೆ

  ಇದೀಗ, ಸಿದ್ಧಾರ್ಥ್ ಶುಕ್ಲಾ ಅವರ ದೇಹದ ಆಂತರಿಕ ಅಂಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವಿಷದ ಅಂಶ ಏನಾದರೂ ಇದಿಯಾ ಎಂದು ಪರೀಕ್ಷಿಸಲಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮೇಲ್ನೋಟಕ್ಕೆ ಯಾವುದೇ ಅನುಮಾನ ವ್ಯಕ್ತವಾಗಿಲ್ಲವಾದರೂ, ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡಲಾಗುತ್ತಿದೆ. ಇನ್ನು ಎರಡು ದಿನಗಳಲ್ಲಿ ಎಫ್‌ಎಲ್‌ಎಲ್ ವರದಿ ಸಿಗಲಿದೆ.

  ಈ ನಡುವೆ ಸಿದ್ಧಾರ್ಥ್ ಶುಕ್ಲಾ ಅವರ ಸಾವಿನ ಬಗ್ಗೆ ನಟ ಸನ್ಮಾನ್ ಖಾನ್ ಕಾಮಿಡಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಬಿಗ್ ಬಾಸ್ 13ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದ ನಟ ಸಿದ್ಧಾರ್ಥ್ ಶುಕ್ಲಾ ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಸಲ್ಮಾನ್ ಖಾನ್, ಸಿದ್ಧಾರ್ಥ್ ಸಾವಿನ ಬಗ್ಗೆ ಹಾಸ್ಯ ಮಾಡಿ ಜೋರಾಗಿ ನಕ್ಕಿದ್ದರು. ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಆಸ್ಪತ್ರೆ ಬೆಡ್ ಮೇಲಿದ್ದ ಸಿದ್ಧಾರ್ಥ್ ಶುಕ್ಲಾ ಅವರನ್ನು ವೀಕೆಂಡ್ ವಾರ್ ಎಪಿಸೋಡ್ ನಲ್ಲಿ ವಿಡಿಯೋ ಕಾಲ್ ಮೂಲಕ ಮಾತನಾಡಿಸಿದ್ದರು. ಆ ಸಮಯದಲ್ಲಿ ಸಲ್ಮಾನ್ ಖಾನ್ ಸಿದ್ಧಾರ್ಥ್ ಸಾವಿನ ಬಗ್ಗೆ ತಮಾಷೆ ಮಾಡಿದ್ದರು. ಅಂದು ತಮಾಷೆಗೆ ಹೇಳಿದ ಮಾತುಗಳು ಇಂದು ನಿಜವಾಗಿರುವುದು ದುರಂತ. ಇಬ್ಬರ ಸಂಭಾಷಣೆಯಲ್ಲಿ, "ಅಭಿಮಾನಿಗಳು ನಿಮ್ಮನ್ನು ಕಾಪಾಡಿದ್ದಾರೆ. ಆದರೆ ಮೇಲಿರುವ ದೇವರು ಕಾಪಾಡದಿದ್ದರೆ ಎಲ್ಲರೂ ಅಳುತ್ತಾರೆ. ಏನೇ ಅಂದರೂ ಒಳ್ಳೆಯ ಮನುಷ್ಯ ಆಗಿದ್ದ ಎನ್ನುತ್ತಾರೆ. ಕೂಗಾಡುತ್ತಿದ್ದ, ನೇರವಾಗಿ ಮಾತನಾಡುತ್ತಿದ್ದ. ಆದರೂ ಒಳ್ಳೆಯ ಮನಸ್ಸಿನ ವ್ಯಕ್ತಿ ಆಗಿದ್ದ ಅಂತ ಜನರು ಕಣ್ಣೀರು ಹಾಕುತ್ತಾರೆ" ಎಂದು ತಮಾಷೆಯಾಗಿ ಮಾತನಾಡುತ್ತಾ ಸಲ್ಮಾನ್​ ಖಾನ್​ ಸಿದ್ಧಾರ್ಥ್ ಕಾಲೆಳೆದು ಜೋರಾಗಿ ನಕ್ಕಿದ್ದರು.

  ಸಲ್ಮಾನ್​ ಹಾಸ್ಯಕ್ಕೆ ಸಿದ್ದಾರ್ಥ್​ ಶುಕ್ಲಾ ಕೂಡ ನಕ್ಕಿದ್ದರು. "ಕೆಲವರಿಗೆ ಬಿಗ್​ ಬಾಸ್​ ಮನೆಯಲ್ಲಿ ಪ್ರೀತಿ ಆಯಿತು. ಕೆಲವರಿಗೆ ಮದುವೆ ಆಯಿತು. ಕೆಲವರು ಬಿಗ್​ ಬಾಸ್​ ಮನೆಯಲ್ಲೇ ಸತ್ತು ಹೋಗಿಬಿಟ್ಟರು ಎನ್ನುವಂತಾಗುತ್ತದೆ" ಎಂದು ಸಲ್ಲು ತಮಾಷೆ ಮಾಡುತ್ತ ಬಿದ್ದುಬಿದ್ದು ನಕ್ಕಿದ್ದರು. ಸಿದ್ಧಾರ್ಥ್ ಸಾವಿನ ಬಳಿಕ ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳು ಈ ವಿಡಿಯೋ ಶೇರ್ ಮಾಡಿ ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ತಮಾಷೆಗೂ ಯಾರ ಸಾವಿನ ಬಗ್ಗೆ ಮಾತನಾಡಬೇಡಿ. ಮುಂದೊಂದು ದಿನ ಅದು ನಿಜವಾಗಬಹುದು ಎಂಬ ಕಾಮೆಂಟ್​ಗಳು ಬರುತ್ತಿವೆ.

  ಸಿದ್ಧಾರ್ಥ್ ಶುಕ್ಲಾ ಬಿಗ್ ಬಾಸ್ 13ರ ವಿನ್ನರ್ ಆಗಿ ಹೊರಹೊಮ್ಮಿದರು. ಧಾರಾವಾಹಿಯಲ್ಲಿ ಮಿಂಚುತ್ತಿದ್ದ ಸಿದ್ಧಾರ್ಥ್ ಬಿಗ್ ಬಾಸ್ ಬಳಿಕ ಮತ್ತಷ್ಟು ಖ್ಯಾತಿಗಳಿಸಿದರು. ಬಿಗ್ ಬಾಸ್ ರಿಯಾಲಿಟಿ ಶೋ ಜೊತೆಗೆ ಬೇರೆ ಬೇರೆ ರಿಯಾಲಿಟಿ ಶೋಗಳಲ್ಲೂ ಸಿದ್ಧಾರ್ಥ್ ಕಾಣಿಸಿಕೊಂಡಿದ್ದರು. ಕಿರುತೆರೆ ಜೊತೆಗೆ ಸಿನಿಮಾದಲ್ಲೂ ಸಿದ್ಧಾರ್ಥ್ ಮಿಂಚಿದ್ದರು.

  'ಬಾಲಿಕಾ ವಧು', 'ದಿಲ್ ಸೆ ದಿಲ್ ತಕ್' ಧಾರಾವಾಹಿಗಳಲ್ಲಿ ಸಿದ್ಧಾರ್ಥ್ ಶುಕ್ಲಾ ನಟಿಸುತ್ತಿದ್ದು, ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು. 'ಜಲಕಾ ದಿಕ್ ಲಾಜಾ 6', 'ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ' ಅಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.

  English summary
  Bollywood Actor Salman Khan joking on sidharth shukla's death in Bigg Boss 13, video viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X