twitter
    For Quick Alerts
    ALLOW NOTIFICATIONS  
    For Daily Alerts

    ಕಲೆ, ಸಾಹಿತ್ಯ, ಸಂಸ್ಕೃತಿ ನಾಶಪಡಿಸಿದ್ದಕ್ಕೆ ಬಾಲಿವುಡ್ ವಿರುದ್ಧ ದೂರು ನೀಡಬಹುದೇ?

    |

    ''ಭಾರತದ ಸಂಗೀತ, ಸಾಹಿತ್ಯ, ಭಾಷೆ, ಸಂಸ್ಕೃತಿಯನ್ನು ನಾಶಪಡಿಸಿದ್ದಕ್ಕಾಗಿ ಸಾರ್ವಜನಿಕರು ಬಾಲಿವುಡ್‌ ವಿರುದ್ಧ ಮೊಕದ್ದಮೆ ಹೂಡಬಹುದೇ?'' ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರಶ್ನಿಸಿದ್ದಾರೆ.

    ಬೇಜವಾಬ್ದಾರಿ, ಅವಹೇಳನಕಾರಿ ಮತ್ತು ಮಾನಹಾನಿಕರ ಹೇಳಿಕೆಗಳಿಂದ ನಮ್ಮ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಇತರೆ ಪತ್ರಕರ್ತರ ವಿರುದ್ಧ ಬಾಲಿವುಡ್‌ನ 38 ಜನ ಖ್ಯಾತ ನಿರ್ಮಾಪಕರು ದೆಹಲಿ ಹೈ ಕೋರ್ಟ್‌ನಲ್ಲಿ ಮೊಕದ್ದಮೆ ಹಾಕಿದ್ದಾರೆ. ಈ ಬೆಳವಣಿಗೆಯ ನಂತರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬಾಲಿವುಡ್ ವಿರುದ್ಧ ಸಾರ್ವಜನಿಕರು ಕೇಸ್ ದಾಖಲಿಸಬಹುದೇ ಎಂದು ಹೇಳಿರುವ ಟ್ವೀಟ್ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಮುಂದೆ ಓದಿ....

    ಮಾಧ್ಯಮಗಳ ವಿರುದ್ಧ ತಿರುಗಿಬಿದ್ದ ಬಾಲಿವುಡ್: ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ ನಿರ್ಮಾಪಕರುಮಾಧ್ಯಮಗಳ ವಿರುದ್ಧ ತಿರುಗಿಬಿದ್ದ ಬಾಲಿವುಡ್: ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ ನಿರ್ಮಾಪಕರು

    ವಿವೇಕ್ ಅಗ್ನಿಹೋತ್ರಿ ಟ್ವೀಟ್‌ನಲ್ಲಿ ಏನಿದೆ?

    ವಿವೇಕ್ ಅಗ್ನಿಹೋತ್ರಿ ಟ್ವೀಟ್‌ನಲ್ಲಿ ಏನಿದೆ?

    ''ಭಾರತದ ಸಂಗೀತ, ಸಾಹಿತ್ಯ, ಭಾಷೆ, ಕಲೆ, ಸೃಜನಶೀಲತೆ, ಸಾಮಾಜಿಕ ಬಟ್ಟೆ ಮತ್ತು ಸಂಸ್ಕೃತಿಯನ್ನು ನಾಶಪಡಿಸಿದ್ದಕ್ಕಾಗಿ ಸಾರ್ವಜನಿಕರು ಬಾಲಿವುಡ್‌ ವಿರುದ್ಧ ಮೊಕದ್ದಮೆ ಹೂಡಬಹುದೇ?'' ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರಶ್ನಿಸಿದ್ದಾರೆ. ಇದಕ್ಕೆ ನೂರಾರು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ''ನೀವು ಹೇಟ್‌ಸ್ಟೋರಿ ಏಕೆ ಮಾಡಿದ್ರಿ'' ಎಂದು ತಿರುಗೇಟು ನೀಡಿದ್ದಾರೆ.

    'ಹೇಟ್ ಸ್ಟೋರಿ' ನೆನಪಿಸಿದ ನಿಖಿಲ್ ದ್ವಿವೇದಿ

    'ಹೇಟ್ ಸ್ಟೋರಿ' ನೆನಪಿಸಿದ ನಿಖಿಲ್ ದ್ವಿವೇದಿ

    ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಈ ಪ್ರಶ್ನೆಗೆ ನಿರ್ಮಾಪಕ-ನಟ ನಿಖಿಲ್ ದ್ವಿವೇದಿ ಪರೋಕ್ಷವಾಗಿ ಕಾಲೆಳೆದಿದ್ದಾರೆ. ''ಸರ್ ನೀವು-ನಾವು ಹೇಟ್ ಸ್ಟೋರಿ ಸಿನಿಮಾ ಮಾಡಿದ್ವಿ. ಇಬ್ಬರು ಟ್ರೋಲ್ ಆಗಿದ್ವಿ'' ಎಂದು ಸ್ಮರಿಸಿದ್ದಾರೆ. ಈ ಟ್ವೀಟ್ ಸಹ ವೈರಲ್ ಆಗಿದೆ.

    ಅರ್ನಬ್ ಗೋಸ್ವಾಮಿ ವಿರುದ್ಧ ಬಿ-ಟೌನ್ ಸ್ಟಾರ್ಸ್ ದೂರು: ಕಾಲೆಳೆದ ವರ್ಮಾಅರ್ನಬ್ ಗೋಸ್ವಾಮಿ ವಿರುದ್ಧ ಬಿ-ಟೌನ್ ಸ್ಟಾರ್ಸ್ ದೂರು: ಕಾಲೆಳೆದ ವರ್ಮಾ

    ಟ್ರೆಂಡ್ ಸೃಷ್ಟಿಸಿದ್ದ ಹೇಟ್ ಸ್ಟೋರಿ

    ಟ್ರೆಂಡ್ ಸೃಷ್ಟಿಸಿದ್ದ ಹೇಟ್ ಸ್ಟೋರಿ

    2012ರಲ್ಲಿ ತೆರೆಕಂಡಿದ್ದ 'ಹೇಟ್ ಸ್ಟೋರಿ' ಸಿನಿಮಾ ಈಗ ವಿವೇಕ್ ಅಗ್ನಿಹೋತ್ರಿ ಹೇಳುತ್ತಿರುವ ವಿಷಯಕ್ಕೆ ತಕ್ಕ ಉದಾಹರಣೆಯಾಗಿದ್ದ ಚಿತ್ರ. ಇಂತಹ ಸಿನಿಮಾ ಮಾಡಿದ ನಿರ್ದೇಶಕ ಈಗ ಅದರ ವಿರುದ್ಧವೇ ಮಾತನಾಡುತ್ತಿರುವುದು ಅಪಹಾಸ್ಯಕ್ಕೆ ಗುರಿಯಾಗಿದೆ. ಈ ಸಿನಿಮಾದ ಬಳಿಕ ಹೇಟ್ ಸ್ಟೋರಿ-2, ಹೇಟ್ ಸ್ಟೋರಿ-3, ಹೇಟ್ ಸ್ಟೋರಿ-4ರ ವರೆಗೂ ಸಿನಿಮಾಗಳು ಬಂದಿವೆ. ಆದ್ರೆ, ಮೊದಲ ಭಾಗವನ್ನು ಮಾತ್ರ ವಿವೇಕ್ ನಿರ್ದೇಶಿಸಿದ್ದರು. ಆ ಚಿತ್ರದಲ್ಲಿ ನಿಖಿಲ್ ದ್ವಿವೇದಿ ನಾಯಕರಾಗಿ ನಟಿಸಿದ್ದರು.

    Recommended Video

    Ragini Dwivedi, ಬೇಲ್ ಕೊಟ್ಟಿಲ್ಲ ಅಂದ್ರೆ ಪರವಾಗಿಲ್ಲ ಈ 3 ವಸ್ತುಗಳನ್ನು ವಾಪಸ್ ಕೊಡಿ ಪ್ಲೀಸ್ |Filmibeat Kannada
    ಬಾಯ್‌ಕಟ್ ಡ್ರಗ್ಗಿಸ್ಟ್

    ಬಾಯ್‌ಕಟ್ ಡ್ರಗ್ಗಿಸ್ಟ್

    ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ಹಲವು ರೀತಿಯ ಬೆಳವಣಿಗೆಗಳು ನಡೆಯುತ್ತಿದೆ. ನೆಪೋಟಿಸಂ, ಡ್ರಗ್ಸ್ ಪ್ರಕರಣ ಎಲ್ಲವೂ ಗಂಭೀರವಾಗಿ ಚರ್ಚೆಯಾಗುತ್ತಿದೆ. ಈಗ ವಿವೇಕ್ ಅಗ್ನಿಹೋತ್ರಿ ಎತ್ತಿರುವ ಪ್ರಶ್ನೆಯೂ ಚರ್ಚೆಗೆ ಕಾರಣವಾಗಿದ್ದು, ಬಾಲಿವುಡ್‌ನಲ್ಲಿ ಎರಡ್ಮೂರ ಬಣ ಆಗಿವೆ. ಸಿನಿಮಾ ಪ್ರೇಕ್ಷಕರು ಸಹ ಪರ-ವಿರೋಧದ ಚರ್ಚೆಯಲ್ಲಿ ಮುಳುಗಿ ಹೋಗಿದ್ದಾರೆ.

    English summary
    Director Vivek Agnihotri says can public sue Bollywood for destroying music, lyrics, language, art, creativity, social fabric and culture of India?
    Tuesday, October 13, 2020, 14:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X