For Quick Alerts
  ALLOW NOTIFICATIONS  
  For Daily Alerts

  50 ವರ್ಷ ಪೂರೈಸಿದ ಮೇಕಪ್ ಕಲಾವಿದೆಗೆ ಕೃತಜ್ಞತೆ ತಿಳಿಸಿದ ಸ್ಟಾರ್ ನಟಿ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಪ್ರತಿಯೊಂದು ಸಿನಿಮಾದಲ್ಲೂ ಚಾಲೆಂಜಿಂಗ್ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಇತ್ತೀಚಿಗಷ್ಟೆ 'ಪಂಗಾ' ಚಿತ್ರದಲ್ಲಿ ವಿವಾಹಿತ ಕಬಡ್ಡಿ ಆಟಗಾರ್ತಿಯಾಗಿ ನಟಿಸಿ ಮೆಚ್ಚುಗೆ ಗಳಿಸಿಕೊಂಡಿದ್ದರು.

  ಈ ನಡುವೆ ಜಯಲಲಿತಾ ಅವರ ಬಯೋಪಿಕ್ ಚಿತ್ರದಲ್ಲಿ ನಟಿಸುತ್ತಿರುವ ತಿಳಿದಿದೆ. 'ತಲೈವಿ' ಎಂದು ಹೆಸರಿಟ್ಟಿರುವ ಈ ಚಿತ್ರದ ಟೀಸರ್ ಕೂಡ ಬಂದಿದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ಅವರನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

  ನಟಿ ಕಂಗನಾಗೆ ಪದ್ಮಶ್ರೀ: ಶಿವರಾಜ್ ಕುಮಾರ್ ಅಭಿಮಾನಿಗಳ ಅಸಮಾಧಾನನಟಿ ಕಂಗನಾಗೆ ಪದ್ಮಶ್ರೀ: ಶಿವರಾಜ್ ಕುಮಾರ್ ಅಭಿಮಾನಿಗಳ ಅಸಮಾಧಾನ

  ಇದೀಗ, ತಲೈವಿ ಚಿತ್ರದ ಮೇಕಿಂಗ್ ಫೋಟೋವೊಂದು ಬಹಿರಂಗವಾಗಿದ್ದು, ಮೇಕಪ್ ಹಚ್ಚಿಕೊಳ್ಳುತ್ತಿರುವ ಕಂಗನಾ ಕುತೂಹಲ ಮೂಡಿಸಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಕಂಗನಾ ಅವರಿಗೆ ಮೇಕಪ್ ಮಾಡುತ್ತಿರುವುದು ದಿಗ್ಗಜ ಕಲಾವಿದೆ ಮರಿಯಾ ಶರ್ಮಾ.

  ಮೇಕಪ್ ಕಲಾವಿದೆ ಮರಿಯಾ ಶರ್ಮಾ ಸುಮಾರು ಐದು ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. 50 ವರ್ಷ ಪೂರೈಸಿದ್ದಾರೆ. ಹೇಮಾ ಮಾಲಿನಿ, ಶರ್ಮಿಳಾ ಟಾಗೂರ್, ಮನಿಶಾ ಕೊಯಿರಾಲಾ, ಹೆಲೆನ್ ಅಂತಹ ನಟಿಯರ ಜೊತೆ ಮರಿಯಾ ಕೆಲಸ ಮಾಡಿದ್ದಾರೆ.

  3 ದಿನಕ್ಕೆ ಕಂಗನಾ ನಟನೆಯ 'ಪಂಗಾ' ಚಿತ್ರ ಗಳಿಸಿದ್ದೆಷ್ಟು?3 ದಿನಕ್ಕೆ ಕಂಗನಾ ನಟನೆಯ 'ಪಂಗಾ' ಚಿತ್ರ ಗಳಿಸಿದ್ದೆಷ್ಟು?

  'ವೊಹ್ ಲ್ಯಾಮ್ಹೆ' ಮತ್ತು 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬಾ' ಚಿತ್ರಗಳಲ್ಲಿ ಮರಿಯಾ ಜೊತೆ ಕಂಗನಾ ಕೆಲಸ ಮಾಡಿದ್ದಾರೆ. ಈಗ ತಲೈವಿ ಚಿತ್ರದಲ್ಲೂ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಮರಿಯಾ ಶರ್ಮಾಗೆ ಕಂಗನಾ ಕೃತಜ್ಞತೆ ತಿಳಿಸಿದ್ದಾರೆ.

  ಇನ್ನುಳಿದಂತೆ ಎ ಎಲ್ ವಿಜಯ್ ಈ ಚಿತ್ರ ನಿರ್ದೇಶನ ಮಾಡಿದ್ದು, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಅರವಿಂದ್ ಸ್ವಾಮಿ ಎಂಜಿಆರ್ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರಕಾಶ್ ರಾಜ್ ಕರುಣಾನಿಧಿ ಆಗಿ ನಟಿಸುತ್ತಿದ್ದಾರೆ.

  English summary
  Bollywood actress Kangana Ranaut shared her makeup artist photo. she is complete 50 years in industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X