For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಜತೆ ನಡೆಸಿದ್ದ ವಾಟ್ಸಾಪ್ ಚಾಟ್ ಹಂಚಿಕೊಂಡ ಸ್ನೇಹಿತೆ

  By Avani Malnad
  |

  'ನಾನು ಕಿರುತೆರೆಯಿಂದ ಚಿತ್ರರಂಗಕ್ಕೆ ಬದಲಾಗುವುದು ಬಹಳ ಕಷ್ಟವಿತ್ತು. ಆದರೆ ಆಯ್ಕೆಗಳ ಕಾರಣದಿಂದ ನಾನು ಇಲ್ಲಿ ಉಳಿದುಕೊಳ್ಳುವಲ್ಲಿ ಯಶಸ್ವಿಯಾದೆ' ಇದು ನಮ್ಮನ್ನು ಅಗಲಿದ ನಟ ಸುಶಾಂತ್ ಸಿಂಗ್ ರಜಪೂತ್, ಸುಮಾರು ನಾಲ್ಕು ವರ್ಷಗಳ ಹಿಂದೆ ತಮ್ಮ ಸ್ನೇಹಿತೆ, ನಟಿ ಲಾರೆನ್ ಗೊಟ್ಲೀಬ್ ಅವರೊಂದಿಗೆ ನಡೆಸಿದ್ದ ವಾಟ್ಸಾಪ್ ಚಾಟ್‌ನಲ್ಲಿ ಹೇಳಿದ್ದ ಮಾತು.

  ಸುಶಾಂತ್ ಮಾಡಿದ್ದ ವಾಟ್ಸಪ್ ಮೆಸೇಜ್ ತೋರಿಸಿದ ನಟಿ ಲಾರೆನ್ | Sushanth Singh Rajput | Lauren Gottlieb

  ನೃತ್ಯಪಟುವೂ ಆಗಿರುವ ಲಾರೆನ್, ಸಿನಿಮಾಗಳಲ್ಲಿ ಅವಕಾಶ ಸಿಗದೆ ಪರದಾಡುವಾಗ ಸುಶಾಂತ್ ಅವರಿಗೆ ಸಾಂತ್ವನ ಮತ್ತು ಧೈರ್ಯ ತುಂಬಿದ್ದರು. ಅದನ್ನು ಅವರು ತಮ್ಮ ನಡುವಿನ ಮಾತುಕತೆಯ ಸ್ಕ್ರೀನ್ ಶಾಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ.

  ಸುಶಾಂತ್ ಸಿಂಗ್ ಅವರ ಮುದ್ದಿನ ನಾಯಿ ಸತ್ತಿದ್ದು ನಿಜವೇ?: ವಾಸ್ತವವೇನು?

  'ಎಂ.ಎಸ್. ಧೋನಿ' ಚಿತ್ರದ ಸಂದರ್ಭದಲ್ಲಿ ಇಬ್ಬರೂ ಈ ಮಾತುಕತೆ ನಡೆಸಿದ್ದು, 'ಹೊರಗಿನಿಂದ' ಬಂದವರಾದರೂ ಚಿತ್ರರಂಗದಲ್ಲಿ ಉಳಿದುಕೊಳ್ಳುವ ಬಗ್ಗೆ ಮಾತನಾಡಿದ್ದರು. ಮುಂದೆ ಓದಿ...

  ಸಾಧಾರಣ ನಟ ಎಂದು ಹೇಳಿಕೊಂಡಿದ್ದರು...

  ಸಾಧಾರಣ ನಟ ಎಂದು ಹೇಳಿಕೊಂಡಿದ್ದರು...

  ಕಿರುತೆರೆಯಾಚೆ ಸಿನಿಮಾಗಳಲ್ಲಿಯೂ ನಟಿಸುವ ಕನಸನ್ನು ಈಡೇರಿಸಿಕೊಳ್ಳಲು ಲಾರೆನ್ ಅವರಿಗೆ ಸುಶಾಂತ್ ಉತ್ತೇಜನ ನೀಡಿದ್ದರು. ಅದಕ್ಕೆ ತಮ್ಮನ್ನೇ ಉದಾಹರಣೆ ನೀಡಿದ್ದರು. ನೋಡಲು ತೀರಾ ಸಾಮಾನ್ಯನಾಗಿರುವ, ಸಾಮಾನ್ಯ ಪ್ರತಿಭೆ ಇರುವ ಮತ್ತು ಗಟ್ಟಿಯಾದ ಪೂರ್ವಗ್ರಹ ಇರುವವನೇ ಇಲ್ಲಿ ನೆಲೆ ಕಂಡಿರುವಾಗ, ನನ್ನನ್ನು ನಂಬು ಯಾವುದು ಬೇಕಾದರೂ ಸಾಧ್ಯ. ನಾನು ಸಾಧಾರಣವಾಗಿರುವುದಕ್ಕೆ ಅಲ್ಲ, ನನ್ನ ಸುತ್ತಲೂ ಇರುವವರು ಕಳಪೆಯಾಗಿರುವ ಕಾರಣಕ್ಕೆ ನಾನು ಉತ್ತಮ ನಟ ಎನಿಸುತ್ತಿದ್ದೇನೆ. ಆದರೆ ನನಗಿನ್ನೂ ತುಂಬಾ ದೂರ ಸಾಗುವುದು ಇದೆ.

  ಇಬ್ಬರೂ ಹೊರಗಿನವರು

  ಇಬ್ಬರೂ ಹೊರಗಿನವರು

  ಸುಶಾಂತ್ ಕೂಡ ತನ್ನಂತೆಯೇ 'ಹೊರಗಿನ' ವ್ಯಕ್ತಿ ಆಗಿದ್ದರಿಂದ ಅವರೊಂದಿಗೆ ಬಹಳ ಆಳವಾದ ನಂಟು ಇತ್ತು ಎಂದು ಲಾರೆನ್ ಹೇಳಿದ್ದಾರೆ. 'ಕೆಲವು ವರ್ಷಗಳ ಹಿಂದೆ ಸುಶಾಂತ್ ಜತೆ ನಡೆಸಿದ ವಾಟ್ಸಾಪ್ ಮೆಸೇಜ್‌ಗಳನ್ನು ಇಂದು ನೋಡಬೇಕು ಎನಿಸಿತು. ಅವುಗಳಲ್ಲಿ ಒಂದು ಸಂಭಾಷಣೆ ನನ್ನ ಹೃದಯವನ್ನು ಮತ್ತೆ ಛಿದ್ರಗೊಳಿಸಿತು. ಆ ಮಾತಲ್ಲಿ ಎಷ್ಟು ಪ್ರೀತಿ, ಕರುಣೆ ಹಾಗೂ ಮತ್ತೊಬ್ಬರ ಕನಸಿಗೆ ನೈಜ ಬೆಂಬಲವಿತ್ತು. ಸುಶಾಂತ್ ಮತ್ತು ನಾನು ಇಬ್ಬರೂ ಹೊರಗಿನವರಾದ ಕಾರಣ ನಮ್ಮ ನಡುವೆ ಈ ಆಪ್ತ ಬಾಂಧವ್ಯ ಇತ್ತು. ಅವರನ್ನು ನಾನು ತುಂಬಾ ಗಮನಿಸುತ್ತಿದ್ದೆ ಎಂದಿದ್ದಾರೆ.

  ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ವಿರುದ್ಧ ದೂರು ದಾಖಲು

  ಸುಶಾಂತ್‌ಗೆ ಗೌರವ

  ಸುಶಾಂತ್‌ಗೆ ಗೌರವ

  ಪ್ರತಿಯೊಬ್ಬರನ್ನೂ ನಡಿ, ಮಾತನಾಡಿ ಮತ್ತು ಎಲ್ಲರನ್ನೂ ಬಹಳ ಪ್ರೀತಿಯಿಂದ ನೋಡಿ, ಬೆಂಬಲಿಸಿ ಎಂಬುದನ್ನು ನೆನಪಿಸಲು ಸುಶಾಂತ್ ಹೇಳಿದ್ದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಹೇಗೆ ದುಃಖಿಸಬೇಕು ಎಂದು ಯಾರಿಗೂ ಹೇಳುವುದನ್ನು ನಾನು ಬಯಸುವುದಿಲ್ಲ. ಈ ವಾರದ ನನ್ನ ಕೆಲಸಗಳೆಲ್ಲವೂ ಕೆಟ್ಟದಾಗಿದೆ. ಆದರೆ ನಾವು ಆತ ಪ್ರತಿದಿನವೂ ನೀಡುತ್ತಿದ್ದಂತೆ ಸುಂದರ, ಪ್ರಕಾಶಮಾನ ಮತ್ತು ಪ್ರೀತಿಯ ಬೆಳಕನ್ನು ಚೆಲ್ಲುವ ಮೂಲಕ ಆತನಿಗೆ ಗೌರವ ಸಲ್ಲಿಸುವುದು ಸರಿಯಾದ ಮಾರ್ಗ. ಸುಶಾಂತ್ ಅವರ ವಿನಮ್ರ ಹೃದಯದಿಂದಾಗಿ ಈ ಜಗತ್ತು ಒಳ್ಳೆಯ ಸ್ಥಳ ಎನಿಸಿದೆ ಎಂದು ಅವರು ಬರೆದಿದ್ದಾರೆ.

  ಪ್ರೋತ್ಸಾಹ ನೀಡಿದ್ದ ಸುಶಾಂತ್

  ಪ್ರೋತ್ಸಾಹ ನೀಡಿದ್ದ ಸುಶಾಂತ್

  ನೀನು ತುಂಬಾ ಪ್ರತಿಭಾವಂತೆ. ಹಾಗೆಯೇ ಪ್ಯಾಷನೇಟ್ ಕೂಡ. ನಿನ್ನ ಕನಸು ಸಾಧಿಸಲು ಬೇಕಾದ ಯಾವುದೇ ಕೌಶಲ ಅಳವಡಿಸಿಕೊಳ್ಳುವ ಸಾಮರ್ಥ್ಯ ಇದೆ. ನನ್ನ ನಂಬು, ಇದು ಎಲ್ಲಕ್ಕಿಂತಲೂ ಹೆಚ್ಚು. ನಂಬಿಕೆ ಇರಿಸಿಕೊಂಡು ಸಾಧಿಸು. ಇದು ಸಮಯದ ಸಂಗತಿಯಷ್ಟೇ. ಸಾಧ್ಯವಾದಾಗ ಸಿಗೋಣ. ನೀನು ಈಗ ರಾಕ್ ಸ್ಟಾರ್ ರೀತಿ ಇರುವಂತೆಯೇ ಇರು. ಯಾವುದೇ ಸಹಾಯ ಬೇಕಾದರೂ ಕೇಳು ಎಂದು ಲಾರೆನ್‌ಗೆ ಸುಶಾಂತ್ ಪ್ರೋತ್ಸಾಹ ನೀಡಿದ್ದರು.

  ಎಬಿಸಿಡಿ ಚಿತ್ರದಲ್ಲಿ ನಟಿಸಿದ್ದ ಲಾರೆನ್

  ಎಬಿಸಿಡಿ ಚಿತ್ರದಲ್ಲಿ ನಟಿಸಿದ್ದ ಲಾರೆನ್

  'ಸೋ ಯೂ ಥಿಂಗ್ ಯೂ ಕ್ಯಾನ್ ಡ್ಯಾನ್ಸ್ 3' ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಲಾರೆನ್ ಗೊಟ್ಲೀಬ್ ಮನರಂಜನಾ ಉದ್ಯಮದಲ್ಲಿ ಪರಿಚಿತರಾಗಿದ್ದರು. ಬಳಿಕ ಇತರೆ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದರು. ನಂತರ 'ಎಬಿಸಿಡಿ: ಎನಿ ಬಡಿ ಕ್ಯಾನ್ ಡ್ಯಾನ್ಸ್' ಚಿತ್ರದ ಮೂಲಕ 2013 ಬಾಲಿವುಡ್‌ಗೆ ಪ್ರವೇಶಿಸಿದ್ದರು. ಕೆಲವು ಹಿಂದಿ ಹಾಗೂ ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದಾರೆ. 'ಝಲಕ್ ದಿಖಲಾ ಜಾ' ರಿಯಾಲಿಟಿ ಶೋದಲ್ಲಿ ಸುಶಾಂತ್ ಮತ್ತು ಲಾರೆನ್ ಒಟ್ಟಿಗೆ ಭಾಗವಹಿಸಿದ್ದರು.

  ಸುಶಾಂತ್ ಸಿಂಗ್ ಖಾತೆಯನ್ನು 'ಚಿರಸ್ಮರಣೀಯ'ಗೊಳಿಸಿದ ಇನ್‌ಸ್ಟಾಗ್ರಾಂ

  English summary
  Actor, dancer Lauren Gottlieb has shared WhatsApp conversation she had with Sushant Singh Rajput.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X