For Quick Alerts
  ALLOW NOTIFICATIONS  
  For Daily Alerts

  ಶಾರುಖ್, ಸಲ್ಮಾನ್ ಫ್ಲ್ಯಾಟ್ ಮಧ್ಯೆ ₹119 ಕೋಟಿ ಬಂಗಲೆ ಖರೀದಿಸಿದ ದೀಪಿಕಾ-ರಣ್‌ವೀರ್: ಹೈಲೈಟ್ ಏನು?

  |

  ಬಾಲಿವುಡ್‌ ಸೆಲೆಬ್ರೆಟಿಗಳು ವಾರ್ಷಿಕ ಆದಾಯ ಕೋಟಿ ಕೋಟಿಯಲ್ಲಿರುತ್ತೆ. ಸಿನಿಮಾ, ಜಾಹೀರಾತು, ಈವೆಂಟ್ ಅಂತ ದುಬಾರಿ ಸಂಭಾವನೆಯನ್ನು ಪಡೆಯುತ್ತಾರೆ. ಇಷ್ಟೇ ಅಲ್ಲ ದುಬಾರಿ ಬಂಗಲೆ, ಐಶಾರಾಮಿ ಫ್ಲ್ಯಾಟ್ ಖರೀದಿ ಮಾಡುತ್ತಲೇ ಇರುತ್ತಾರೆ.

  ಬಾಲಿವುಡ್ ಸೆಲೆಬ್ರೆಟಿಗಳು ಮುಂಬೈನಲ್ಲಿ ನೂರಾರು ಕೋಟಿ ಬೆಲೆ ಬಾಳುವ ಬಂಗಲೆಯನ್ನು ಖರೀದಿ ಮಾಡಿದ್ದಾರೆ. ಈಗ ಬಾಲಿವುಡ್‌ನ ಸೂಪರ್‌ಸ್ಟಾರ್ ಜೋಡಿ ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಐಶಾರಾಮಿ ಫ್ಲ್ಯಾಟ್ ಕೊಂಡುಕೊಂಡಿದ್ದಾರೆ.

  ದೀಪಿಕಾ ಹೃದಯ ಬಡಿತದಲ್ಲಿ ಏರು-ಪೇರು: ಪ್ರಭಾಸ್ ತೆಗೆದುಕೊಂಡ ನಿರ್ಧಾರವೇನು?ದೀಪಿಕಾ ಹೃದಯ ಬಡಿತದಲ್ಲಿ ಏರು-ಪೇರು: ಪ್ರಭಾಸ್ ತೆಗೆದುಕೊಂಡ ನಿರ್ಧಾರವೇನು?

  ಬಾಲಿವುಡ್‌ನಲ್ಲೀಗ ಈ ಜೋಡಿ ಖರೀದಿ ಮಾಡಿದ ದುಬಾರಿ ಬಂಗಲೆ ಬಗ್ಗೆನೇ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಖರೀದಿಸಿದ ಬಂಗಲೆಯ ಬೆಲೆ ಅಷ್ಟೊಂದು ದುಬಾರಿ ಯಾಕೆ? ಆ ಬಂಗಲೆಯ ವಿಶೇಷತೆಯೇನು? ದುಬಾರಿ ಫ್ಲ್ಯಾಟ್ ಇರೋದು ಎಲ್ಲಿ? ತಿಳಿಯಲು ಮುಂದೆ ಓದಿ.

  ರಣ್‌ವೀರ್-ದೀಪಿಕಾ ದುಬಾರಿ ಫ್ಲ್ಯಾಟ್

  ರಣ್‌ವೀರ್-ದೀಪಿಕಾ ದುಬಾರಿ ಫ್ಲ್ಯಾಟ್

  ರಣ್‌ವೀರ್ ಹಾಗೂ ದೀಪಿಕಾ ಪಡುಕೋಣೆ ಇಬ್ಬರೂ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟರು. ದುಬಾರಿ ಸಂಭಾವನೆ ಪಡೆಯುವ ಈ ಜೋಡಿ ಐಶಾರಾಮಿ ಬಂಗಲೆಯನ್ನು ಮುಂಬೈನ ಬಾಂದ್ರಾದಲ್ಲಿ ಖರೀದಿ ಮಾಡಿದ್ದಾರೆ. ಈ ಫ್ಲ್ಯಾಟ್‌ನ ಬೆಲೆ ಸುಮಾರು ₹119 ಕೋಟಿ ಎಂದು ಇಂಡಿಯಾ ಟುಡೇಯಲ್ಲಿ ವರದಿ ಮಾಡಿದೆ.

  ದೀಪಿಕಾ ಪಡುಕೋಣೆ ಹೃದಯ ಬಡಿತದಲ್ಲಿ ಏರುಪೇರು: ಫ್ಯಾನ್ಸ್‌ಗೆ ಟೆನ್ಶನ್.. ನಿರ್ಮಾಪಕ ಹೇಳಿದ್ದೇನು?ದೀಪಿಕಾ ಪಡುಕೋಣೆ ಹೃದಯ ಬಡಿತದಲ್ಲಿ ಏರುಪೇರು: ಫ್ಯಾನ್ಸ್‌ಗೆ ಟೆನ್ಶನ್.. ನಿರ್ಮಾಪಕ ಹೇಳಿದ್ದೇನು?

  ದಿಗ್ಗಜರ ಮನೆ ಮಧ್ಯೆ ಖರೀದಿ

  ದಿಗ್ಗಜರ ಮನೆ ಮಧ್ಯೆ ಖರೀದಿ

  ಅಷ್ಟಕ್ಕೂ ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಐಶಾರಾಮಿ ಫ್ಲ್ಯಾಟ್ ಖರೀದಿ ಮಾಡಿದ ಸ್ಥಳದ ಬಗ್ಗೆನೇ ಹೆಚ್ಚು ಚರ್ಚೆಯಾಗುತ್ತಿದೆ. ಅಂದ್ಹಾಗೆ ಶಾರುಖ್ ಖಾನ್‌ ಬಂಗಲೆ ಮನ್ನತ್ ಹಾಗೂ ಸಲ್ಮಾನ್ ಫ್ಲ್ಯಾಟ್ ಗ್ಯಾಲಕ್ಸಿ ಮಧ್ಯೆ ಇಬ್ಬರೂ ಈ ಬಂಗಲೆ ಖರೀದಿ ಮಾಡಿದ್ದಾರೆ. ಸಾಗರ್ ರೇಷಮ್ ಟವರ್‌ ಎಂಬ ಈ ಸೀ ಫೇಸಿಂಗ್ ಬಂಗಲೆಯಾಗಿದ್ದು, ಇದು ಹಲವು ಐಶಾರಾಮಿ ಸವಲತ್ತುಗಳನ್ನು ಹೊಂದಿದೆ. ಇದು ದೇಶದಲ್ಲಿಯೇ ಅತಿ ದುಬಾರಿ ಸಿಂಗಲ್ ರೆಸಿಡೆನ್ಷಿಯಲ್ ಅಪಾರ್ಮೆಂಟ್ ಡೀಲ್ ಎಂದು ಹೇಳಲಾಗಿದೆ.

  ₹119 ಕೋಟಿ ಬೆಲೆಯ ಹೈಲೈಟ್ ಏನು?

  ₹119 ಕೋಟಿ ಬೆಲೆಯ ಹೈಲೈಟ್ ಏನು?

  ಶೀಘ್ರದಲ್ಲಿಯೇ ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್‌ ದಿಗ್ಗಜರ ನೆರೆಹೊರೆಯವರಾಗಲಿದ್ದಾರೆ. ಅಂದ್ಹಾಗೆ ಈ ದುಬಾರಿ ಬಂಗಲೆಯ ಹೈಲೈಟ್ ಏನು ಅಂದ್ರೆ, ಇದು 1300 ಚದರ ಅಡಿ ವಿಸ್ತೀರ್ಣ ಹೊಂದಿದೆ. ಸಾಗರ್‌ ರೇಷಮ್ ಟವರ್‌ನ 16, 17, 18 ಹಾಗೂ 19ನೇ ಅಂತಸ್ತು ದೀಪಿಕಾ ಹಾಗೂ ರಣ್‌ವೀರ್‌ಗೆ ಸೇರಿದೆ. ಈ ನಾಲ್ಕು ಫ್ಲೋರ್‌ ಫ್ಲ್ಯಾಟ್‌ನಲ್ಲಿ ಹಲವು ಸವಲತ್ತುಗಳು ಇರಲಿವೆ.

  ದೀಪಿಕಾ-ರಣ್‌ವೀರ್ ಇಬ್ಬರೂ ಬ್ಯುಸಿ

  ದೀಪಿಕಾ-ರಣ್‌ವೀರ್ ಇಬ್ಬರೂ ಬ್ಯುಸಿ

  ಇತ್ತೀಚೆಗಷ್ಟೇ ರಣ್‌ವೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಅಮೆರಿಕಾ ಪ್ರವಾಸ ಮುಗಿಸಿ ಹಿಂತಿರುಗಿದ್ದಾರೆ. ಮುಂಬೈಗೆ ಮರಳಿದ ಬಳಿಕವೇ ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ. ಈಗಾಗಲೇ ದೀಪಿಕಾ ಕೈಯಲ್ಲಿ 'ಪಠಾಣ್', ಹೃತಿಕ್ ರೋಷನ್ ಜೊತೆಗೆ 'ಫೈಟರ್', ಅಮಿತಾಬ್ ಬಚ್ಚನ್ ಜೊತೆ 'ಇಂಟರ್ನ್', ಪ್ರಭಾಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ರಣ್‌ವೀರ್ ಸಿಂಗ್ ರೋಹಿತ್ ಶೆಟ್ಟಿಯ 'ಸರ್ಕಸ್', ಕರಣ್‌ ಜೋಹರ್‌ ಸಿನಿಮಾ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾದಲ್ಲಿ ನಟಿಸಲಿದ್ದಾರೆ.

  English summary
  Ranveer Singh, Deepika Padukone buy Rs 119 crore Luxury Quadruplex In Bandra, Know More.
  Monday, July 11, 2022, 16:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X