For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಅಭಿಮಾನಿಗಳಿಗೆ ಸಂತಸ: 'ಬ್ರಹ್ಮಾಸ್ತ್ರ' ಮೂಲಕ ಕಿಂಗ್ ಖಾನ್ ವಾಪಸ್

  |

  ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಯಾವ ಸಿನಿಮಾಗಳಿಗೂ ಕಾಣಿಸಿಕೊಳ್ಳುತ್ತಿಲ್ಲ. ಝೀರೋ ಸಿನಿಮಾದ ನಂತರ ಶಾರುಖ್ ಅಭಿಮಾನಿಗಳ ಮುಂದೆ ಬಂದಿಲ್ಲ. ಸುಮಾರು 3 ವರ್ಷಗಳಿಂದ ಸಿನಿಮಾದಿಂದ ದೂರ ಇರುವ ಶಾರುಖ್ ಈಗ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಹೌದು, ಶಾರುಖ್ ಖಾನ್ ಬಾಲಿವುಡ್ ನ ಬಹನಿರೀಕ್ಷೆಯ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ. ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಶಾರುಖ್ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

  20 ವರ್ಷದ ಹಿಂದೆ ಪತ್ನಿ ಜೊತೆ ಹೋಳಿ ಆಡಿರುವ ಶಾರುಖ್ ಖಾನ್ ವಿಡಿಯೋ ವೈರಲ್20 ವರ್ಷದ ಹಿಂದೆ ಪತ್ನಿ ಜೊತೆ ಹೋಳಿ ಆಡಿರುವ ಶಾರುಖ್ ಖಾನ್ ವಿಡಿಯೋ ವೈರಲ್

  ಮೂಲಗಳ ಪ್ರಕಾರ ಶಾರುಖ್ ವಿಜ್ಞಾನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಶಾರುಖ್ ಖಾನ್ ಪಾತ್ರದ ಶೂಟಿಂಗ್ ಕೂಡ ಮುಕ್ತಾಯವಾಗಿದೆಯಂತೆ. ಸಿನಿಮಾದ ನಿರೂಪಣೆ ಕೂಡ ಶಾರುಖ್ ಅವರೆ ಮಾಡುತ್ತಿದ್ದಾರಂತೆ. ರಣಬೀರ್ ಅನ್ವೇಷಣೆಗೆ ಶಾರುಖ್ ಸಹಾಯ ಮಾಡುತ್ತಾರಂತೆ.

  ಇನ್ನೂ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟ ನಾಗಾರ್ಜುನ್ ಮತ್ತು ನಟಿ ಡಿಂಪಲ್ ಕಪಾಡಿಯಾ ಸಹ ಸಿನಿಮಾದಲ್ಲಿ ಇದ್ದಾರೆ.

  ಸುಮಾರು ಎರಡು ವರುಷಗಳಿಂದ ಬ್ರಹ್ಮಾಸ್ತ್ರ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಇನ್ನೂ ಮುಕ್ತಾವಾಗಿಲ್ಲ. ಅಯಾನ್ ಮುಖರ್ಜಿ ಸಾರಥ್ಯದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಚಿತ್ರದಲ್ಲಿ ಈಗ ಶಾರುಖ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಮೂರು ವರ್ಷಗಳಿಂದ ಅಭಿಮಾನಿಗಳು ಶಾರುಖ್ ಸಿನಿಮಾಗಾಗಿ ಕಾದುಕುಳಿತಿದ್ದಾರೆ. ಆದರೆ ಕಿಂಗ್ ಖಾನ್ ಕಡೆಯಿಂದ ಯಾವುದೆ ಸಿನಿಮಾ ಅನೌನ್ಸ್ ಆಗಿಲ್ಲ. ಸದ್ಯ ಬ್ರಹ್ಮಾಸ್ತ್ರ ಮೂಲಕ ಗೆಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

  English summary
  Bollywood Actor Shah rukh Khan guest role in Ranbir Kapoor starrer Brahmastra. After a Zero film Shah rukh Khan is acting in Brahmastra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X