X
ಮಂಜುಳಾ

ಮಂಜುಳಾ

Actress
ಜೀವನ ಚರಿತ್ರೆ :  ಮಂಜುಳಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಸಿದ್ಧ ನಟಿ. ಸುಮಾರು ನೂರಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಇವರು ಕನ್ನಡ ಚಿತ್ರರಂಗದ ಅಪರೂಪದ ಸ್ಫುರದ್ರೂಪಿ ನಟಿ. `ಎರಡು ಕನಸು' ಚಿತ್ರದ ಮುಗ್ಧ ಪ್ರೇಮಿ ಲಲಿತಾ ಆಗಿ, `ಸಂಪತ್ತಿಗೆ ಸವಾಲ್' ಚಿತ್ರದ ಗಂಡುಬೀರಿ ದುರ್ಗಾ ಆಗಿ ಹಲವಾರು ಕಾಡುವ ಪಾತ್ರಗಳಿಗೆ ಜೀವ ತುಂಬಿದ ಈ ನಟಿ ಕನ್ನಡ ಚಿತ್ರರಂಗದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಕೆಲ ತೆಲಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲ್ಯ ಮತ್ತು ಸಿನಿಪಯಣ ತುಮಕೂರಿನ ಹೊನ್ನೇನಹಳ್ಳಿಯ ಲಿಂಗಾಯತ ಪರಿವಾರದಲ್ಲಿ ಪೋಲಿಸ್ ಇನ್ಸ್‌ಪೆಕ್ಟರ್ ಶಿವಣ್ಣನವರ ಮಗಳಾಗಿ ಜನಿಸಿದ ಇವರು ಬಾಲ್ಯದಿಂದಲೇ ನಾಟಕರಂಗದತ್ತ ಆಸಕ್ತಿ ಹೊಂದಿದ್ದರು. ಬೆಂಗಳೂರಿನ `ಪ್ರಭಾತ್ ಕಲಾವಿದರು' ನಾಟಕ ಸಂಘದಲ್ಲಿ ಅಭಿನಯ ಪ್ರಾರಂಭಿಸಿದ ಇವರು 1966 ರಲ್ಲಿ ತೆರೆಕಂಡ `ಮನೆಕಟ್ಟಿ ನೋಡು' ಚಿತ್ರದಿಂದ ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಕೆಲ ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ ಇವರು 1972 ರಲ್ಲಿ ತೆರೆಕಂಡ `ಯಾರ ಸಾಕ್ಷಿ' ಚಿತ್ರದಿಂದ ಪೂರ್ಣಪ್ರಮಾಣದ ನಾಯಕಿಯಾಗಿ ಅಭಿನಯ ಪ್ರಾರಂಭಿಸಿದರು. ಮುಂದಿನ ವರ್ಷವೇ `ಮೂರುವರೆ ವಜ್ರಗಳು' ಚಿತ್ರದಲ್ಲಿ ಡಾ. ರಾಜಕುಮಾರ್ ರವರ ಜೊತೆ ನಟಿಸುವ ಅವಕಾಶ ಲಭಿಸಿತು. ನಂತರ ರಾಜ್ ಜೊತೆ ಸತತವಾಗಿ `ಎರಡು ಕನಸು',`ಸಂಪತ್ತಿಗೆ ಸವಾಲ್',ಭಕ್ತ ಕುಂಬಾರ' ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಫ್ರೌಡಿಮೆಯನ್ನು ಪ್ರದರ್ಶಿಸಿದರು. ವಿಷ್ಣುವರ್ಧನ್, ಶಂಕರನಾಗ್, ಶ್ರೀನಾಥ್ ಮುಂತಾದ ನಟರ ಜೊತೆ ಅಭಿನಯಿಸದ ಇವರು ತಮ್ಮ ನಟನೆಗೆ ಹಲವಾರು ಪ್ರಶಸ್ತಿ ಪಡೆದಿದ್ದಾರೆ. ಇವರು ಚಿತ್ರ ನಿರ್ದೇಶಕ `ಅಮೃತಂ' ಜೊತೆ ಮದುವೆಯಾಗಿದ್ದರು. 1986 ರಲ್ಲಿ ತಮ್ಮ ಮನೆಯಲ್ಲಿ ಗ್ಯಾಸ್ ಸ್ಟೋವ್ ಸ್ಪೋಟದಿಂದ ನಿಧನ ಹೊಂದಿದರು.
ಮುಂದೆ ಓದಿ

ಮಂಜುಳಾ ಚಲಚಿತ್ರಗಳು

ಮಂಜುಳಾ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಮಂಜುಳಾ

ಹೆಸರು ಮಂಜುಳಾ
ಹುಟ್ಟಿದ ದಿನ 05 Apr 1951
ವಯಸ್ಸು 75
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಮಂಜುಳಾ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+