X
ಹೋಮ್ » ಸೆಲಬ್ರಿಟಿಗಳು » ಶ್ವೇತಾ ಚೆಂಗಪ್ಪ
ಶ್ವೇತಾ ಚೆಂಗಪ್ಪ

ಶ್ವೇತಾ ಚೆಂಗಪ್ಪ

Actress
ಜೀವನ ಚರಿತ್ರೆ :  ಶ್ವೇತಾ ಚೆಂಗಪ್ಪ ಕನ್ನಡ ಚಲನಚಿತ್ರರಂಗದ ನಟಿ, ನಿರೂಪಕಿ ಮತ್ತು ಪ್ರಖ್ಯಾತ ಕಿರುತೆರೆ ಅಭಿನೇತ್ರಿ. ಸುಮತಿಯಾಗಿ ಕಿರುತೆರೆಗೆ ಬಂದ ಇವರು ಕಾದಂಬರಿಯಾಗಿ ಇಡೀ ಕನ್ನಡ ಕಿರುತೆರೆ ಲೋಕವನ್ನೇ ಗೆದ್ದರು.ಇವರು ಕೊಡಗಿನ ಸೋಮವಾರ ಪೇಟೆಯಲ್ಲಿ 1987 ಫೆಬ್ರವರಿ 9 ರಂದು ಜನಿಸಿದರು. ಕಿರುತೆರೆ ಪಯಣ ಎಸ್. ನಾರಾಯಣ ನಿರ್ದೇಶನದ `ಸುಮತಿ' ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ ಶ್ವೇತಾ 2006 ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ `ಕಾದಂಬರಿ' ಸೀರಿಯಲ್ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದರು. ಈ ಧಾರಾವಾಹಿ ಆ ಕಾಲದಲ್ಲಿ ಸೃಷ್ಟಿಸಿದ್ದ ಕ್ರೇಜ್ ಅಭೂತಪೂರ್ವವಾಗಿತ್ತು.ಮುಂದೆ ಈ ಟಿವಿ ಕನ್ನಡದಲ್ಲಿ ಪ್ರಸಾರವಾದ `ಸುಕನ್ಯ' ಮತ್ತು `ಅರುಂಧತಿ' ಧಾರಾವಾಹಿಯಲ್ಲಿಯೂ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು. ನಿರೂಪಕಿ ನಟನೆ ಮಾತ್ರವಲ್ಲದೇ ನಿರೂಪಣೆಗೂ ಇಳಿದ ಶ್ವೇತಾ ಕಿರುತೆರೆಯಲ್ಲಿ `ಯಾರಿಗುಂಟು ಯಾರಿಗಿಲ್ಲಾ' ಎಂಬ ಕಾರ್ಯಕ್ರಮ ರೂಪಿಸಿ ಸೈ ಎನಸಿಕೊಂಡರು.ನಂತರ ಜೀ ಕನ್ನಡದಲ್ಲಿ `ಕುಣಿಯೋಣ ಬಾರಾ' ಎಂಬ ಚಿಣ್ಣರರ ನೃತ್ಯ ಶೋ ಅನ್ನು ನಿರೂಪಿಸಿದರು. `ಡ್ಯಾನ್ಸ್ ಜ್ಯೂನಿಯರ್ಸ್ ಡ್ಯಾನ್ಸ್' ಮುಂತಾದ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಸಿನಿಪಯಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ತಂಗಿಗಾಗಿ' ಚಿತ್ರದಲ್ಲಿ ದರ್ಶನ್ ಅವರ ತಂಗಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಪಯಣ ಆರಂಭಿಸಿದರು.ನಂತರ ಸಾಹಸಸಿಂಹ ವಿಷ್ಣುವರ್ಧನ ಅಭಿನಯದ `ವರ್ಷ' ಚಿತ್ರದಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಡಿಮೆ ಮೆರೆದರು. `ಕೃಷ್ಣನ್ ಮ್ಯಾರೇಜ್ ಸ್ಟೋರಿ',`ಗನ್' ಮುಂತಾದ ಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿ ಕೂಡ ಮೆಚ್ಚುಗೆ ಗಳಿಸಿದರು. ಬಿಗ್ ಬಾಸ್ ಕನ್ನಡ ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ 2 ನೇ ಸೀಜನ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಇವರು ನಾಲ್ಕನೆ ಸ್ಥಾನಗಳಿಸಿದರು. ಇವರ ಜೊತೆ ಅಕುಲ್ ಬಾಲಾಜಿ,ಸೃಜನ್ ಲೋಕೇಶ್,ಶಕೀಲಾ,ನೀತು ಮುಂತಾದವರು ಈ ಸೀಸನ್‌ನಲ್ಲಿ ಭಾಗವಹಿಸಿದ್ದರು. ಮಜಾಟಾಕೀಸ್ ಪ್ರಸ್ತುತ ಸೃಜನ್ ಲೋಕೇಶ್ ನಿರೂಪಣೆಯ `ಮಜಾಟಾಕೀಸ್' ಕಾಮಿಡಿ ಶೋನಲ್ಲಿ ರಾಣಿ ಪಾತ್ರಧಾರಿಯಾಗಿ ಸೃಜನ್ ಜೊತೆ ಸೇರಿ ಪ್ರೇಕ್ಷಕರಿಗೆ ಕಚಗುಳಿ ಇಡುತ್ತಿದ್ದಾರೆ. ಎರಡು ಬಾರಿ ಜೀ ಕನ್ನಡದ ಬೆಸ್ಟ್ ಆಂಕರ್ ಪ್ರಶಸ್ತಿ ಪಡೆದಿದ್ದಾರೆ.`ಅರುಂಧತಿ' ಸೀರಿಯಲ್‌ನಲ್ಲಿನ ನಟನೆಗಾಗಿ ಕರ್ನಾಟಕ ಸರಕಾರ ನೀಡುವ ಮಧ್ಯಂಸನ್ಮಾನ ಪ್ರಶಸ್ತಿ ಕೂಡ ಪಡೆದಿದ್ದಾರೆ. ನಟಿಸಿದ ಧಾರಾವಾಹಿಗಳು ಕಾದಂಬರಿ,ಸುಮತಿ,ಸುಕನ್ಯ,ಆರುಂಧತಿ,ಸೌಂದರ್ಯ ಭಾಗವಹಿಸಿದ/ನಿರೂಪಿಸಿದ ರಿಯಾಲಿಟಿ ಶೋಗಳು ಡೀ ಡ್ಯಾನ್ಸ್ ಶೋ- ಈ ಟಿವಿ ಕನ್ನಡ ಯಾರಿಗುಂಟು ಯಾರಿಗಿಲ್ಲ (ನಿರೂಪಕಿ)- ಜೀ ಕನ್ನಡ ಕುಣಿಯೋಣ ಬಾರ (ನಿರೂಪಕಿ)- ಈ ಟಿವಿ ಕನ್ನಡ ಬಿಗ್‌ಬಾಸ್ ಸೀಸನ್ 2 (ಸ್ಪರ್ಧಿ)- ಈ ಟಿವಿ ಕನ್ನಡ ಸೂಪರ್ ಮಿನಿಟ್ (ಸ್ಪರ್ಧಿ) -ಈ ಟಿವಿ ಕನ್ನಡ ಮಜಾ ಟಾಕೀಸ್ - ಕಲರ್ಸ್ ಕನ್ನಡ ಡ್ಯಾನ್ಸಿಂಗ್ ಸ್ಟಾರ್ - ಕಲರ್ಸ್ ಕನ್ನಡ ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ಸ - ಸ್ಟಾರ್ ಸುವರ್ಣ
ಮುಂದೆ ಓದಿ

ಶ್ವೇತಾ ಚೆಂಗಪ್ಪ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ಹರ್ಷ ಎ 23 Dec 2022
ಪಿ.ಎನ್.ಸತ್ಯ 20 Oct 2006
as Actress
ಎಸ್.ನಾರಾಯಣ್ 22 Apr 2005

ಶ್ವೇತಾ ಚೆಂಗಪ್ಪ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಶ್ವೇತಾ ಚೆಂಗಪ್ಪ

ಹೆಸರು ಶ್ವೇತಾ ಚೆಂಗಪ್ಪ
ಹುಟ್ಟಿದ ದಿನ 09 Feb 1987
ವಯಸ್ಸು 39
ಹುಟ್ಟಿದ ಸ್ಥಳ Bengaluru
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಶ್ವೇತಾ ಚೆಂಗಪ್ಪ ಆಸ್ತಿ

ಆಸ್ತಿ

ಶ್ವೇತಾ ಚೆಂಗಪ್ಪ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+