For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್‌ಗೆ ಹಾರಲಿದ್ದಾರೆ ಜೂ ಎನ್‌ಟಿಆರ್: ಆಸ್ಕರ್‌ ಅವಕಾಶವೂ ಉಂಟು!

  |

  ತೆಲುಗು ಚಿತ್ರರಂಗದಲ್ಲಿ ನಂಬಿಕೆಯೊಂದಿದೆ. ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ನಟಿಸಿದ ಯಾವುದೇ ನಾಯಕ ನಟನ ಮುಂದಿನ ಸಿನಿಮಾ ತೋಪಾಗುತ್ತದೆ ಎಂದು. ಅದು ಹಲವು ನಟರಿಗೆ ನಿಜವೂ ಆಗಿದೆ.

  ಇತ್ತೀಚೆಗೆ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಸಿನಿಮಾದಲ್ಲಿ ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ಒಟ್ಟಿಗೆ ನಟಿಸಿದ್ದರು. ಅದರ ಬಳಿಕ ಬಿಡುಗಡೆ ಆದ ರಾಮ್ ಚರಣ್ ತೇಜ ನಟಿಸಿದ್ದ 'ಆಚಾರ್ಯ' ಸಿನಿಮಾ ಧಾರುಣ ಸೋಲು ಕಂಡಿತು. ಆದರೆ ಜೂ ಎನ್‌ಟಿಆರ್‌ ನಟನೆಯ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲವಾದರೂ. 'RRR' ಬಳಿಕ ಅವರ ವೃತ್ತಿ ಜೀವನ ದೊಡ್ಡ ತಿರುವು ಪಡೆದುಕೊಳ್ಳುವ ಹೊಸ್ತಿಲಲ್ಲಿದೆ.

  ಜೂ ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಶುರುವಾಗುವುದು ಯಾವಾಗ? ಸಿಕ್ಕಿತು ಉತ್ತರಜೂ ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಶುರುವಾಗುವುದು ಯಾವಾಗ? ಸಿಕ್ಕಿತು ಉತ್ತರ

  'RRR' ಸಿನಿಮಾವು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ದೊಡ್ಡ ಹಿಟ್ ಆಯಿತು, ನೆಟ್‌ಫ್ಲಿಕ್ಸ್‌ ಕಾರಣದಿಂದಾಗಿ ವಿಶ್ವದೆಲ್ಲೆಡೆ ಚಿತ್ರಪ್ರೇಮಿಗಳು, ಚಿತ್ರಕರ್ಮಿಗಳು ಸಿನಿಮಾವನ್ನು ಕಣ್ತುಂಬಿಕೊಂಡರು, ಹಾಲಿವುಡ್‌ನ ಹಲವು ಜನಪ್ರಿಯ ನಿರ್ದೇಶಕರು, ಚಿತ್ರಕತೆ ಬರಹಗಾರರು ಸಿನಿಮಾವನ್ನು ಹೊಗಳಿದರು. ಇದೀಗ ಈ ಸಿನಿಮಾದಲ್ಲಿ ನಟಿಸಿದ್ದ ಜೂ ಎನ್‌ಟಿಆರ್‌ಗೆ ಹಾಲಿವುಡ್ ಸಿನಿಮಾ ಅವಕಾಶವೂ ಅರಸಿ ಬಂದಿದೆ ಎನ್ನಲಾಗುತ್ತಿದೆ.

  ಹಾಲಿವುಡ್‌ನಿಂದ ಬಂದಿದೆ ಅವಕಾಶ

  ಹಾಲಿವುಡ್‌ನಿಂದ ಬಂದಿದೆ ಅವಕಾಶ

  ಜೂ ಎನ್‌ಟಿಆರ್‌ಗೆ ಹಾಲಿವುಡ್‌ನ ದೊಡ್ಡ ಪ್ರೊಡಕ್ಷನ್ ಹೌಸ್‌ನಿಂದ ಜೂ ಎನ್‌ಟಿಆರ್‌ಗೆ ದೊಡ್ಡ ಅವಕಾಶವೊಂದು ಬಂದಿದೆ. ಸಿನಿಮಾ ಕುರಿತಂತೆ ಮಾತುಕತೆ ಚಾಲ್ತಿಯಲ್ಲಿದ್ದು ಶೀಘ್ರದಲ್ಲಿಯೇ ಸಿನಿಮಾದ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ. 'RRR' ಸಿನಿಮಾದಲ್ಲಿ ಜೂ ಎನ್‌ಟಿಆರ್ ಅವರ ನಟನೆ ಕಂಡು ಪ್ರಭಾವಗೊಂಡು ಹಾಲಿವುಡ್ ಕಾಸ್ಟಿಂಗ್ ನಿರ್ದೇಶಕರೊಬ್ಬರು ಜೂ ಎನ್‌ಟಿಆರ್‌ ಅನ್ನು ಹೊಸ ಸಿನಿಮಾವೊಂದಕ್ಕೆ ಆಯ್ಕೆ ಮಾಡಿದ್ದಾರೆ ಎನ್ನುವ ಗುಸು-ಗುಸು ಕೇಳಿ ಬರುತ್ತಿವೆ.

  ದಕ್ಷಿಣ ಭಾರತ ಚಿತ್ರರಂಗಕ್ಕೆ ಹೆಮ್ಮೆಯ ವಿಚಾರ

  ದಕ್ಷಿಣ ಭಾರತ ಚಿತ್ರರಂಗಕ್ಕೆ ಹೆಮ್ಮೆಯ ವಿಚಾರ

  ಈಗಾಗಲೇ ಭಾರತದ ಹಲವು ನಟರು ಹಾಲಿವುಡ್ ಸಿನಿಮಾಗಳಲ್ಲಿ ಮಿಂಚಿದ್ದಾರೆ. ದಿವಂಗತ ಇರ್ಫಾನ್ ಖಾನ್, ಪ್ರಿಯಾಂಕಾ ಚೋಪ್ರಾ, ನಾಸಿರುದ್ದೀನ್ ಶಾ, ಅಮಿತಾಬ್ ಬಚ್ಚನ್, ಇತ್ತೀಚೆಗೆ ಆಲಿಯಾ ಭಟ್ ಇನ್ನಿತರರು ನಟಿಸಿದ್ದಾರೆ. ಆದರೆ ದಕ್ಷಿಣ ಭಾರತದಿಂದ ಹಾಲಿವುಡ್‌ಗೆ ಹೋದವರ ಸಂಖ್ಯೆ ತೀರ ವಿರಳ. ಇತ್ತೀಚೆಗೆ ತಮಿಳಿನ ನಟ ಧನುಶ್ ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದರು. ಅದರ ಬೆನ್ನಲ್ಲೆ ಇದೀಗ ಜೂ ಎನ್‌ಟಿಆರ್ ಸಹ ಹಾಲಿವುಡ್‌ಗೆ ಹೋಗುತ್ತಿರುವ ದಕ್ಷಿಣ ಭಾರತ ಚಿತ್ರರಂಗದವರಿಗೆ ಹೆಮ್ಮೆಯ ವಿಷಯ.

  ಆಸ್ಕರ್‌ಗೆ ನಾಮಿನೇಟ್ ಆಗಲಿದ್ದಾರೆ ಜೂ ಎನ್‌ಟಿಆರ್

  ಆಸ್ಕರ್‌ಗೆ ನಾಮಿನೇಟ್ ಆಗಲಿದ್ದಾರೆ ಜೂ ಎನ್‌ಟಿಆರ್

  ಇದರ ಜೊತೆಗೆ ಜೂ ಎನ್‌ಟಿಆರ್ ಅಭಿಮಾನಿಗಳಿಗೆ ಮತ್ತೊಂದು ಖುಷಿಯ ವಿಚಾರವಿದೆ. ಜನಪ್ರಿಯ ವೆರೈಟಿ ಮ್ಯಾಗಜಿನ್, ಆಸ್ಕರ್‌ಗೆ ನಾಮಿನೇಟ್ ಆಗುವ ಸಂಭಾವ ಸಿನಿಮಾ, ನಟರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 'RRR' ಸಿನಿಮಾ ಸಹ ಅದರಲ್ಲಿ ಸ್ಥಾನ ಪಡೆದುಕೊಂಡಿದೆ. ಜೊತೆಗೆ ನಟ ಜೂ ಎನ್‌ಟಿಆರ್, ಆಸ್ಕರ್‌ನ ಅತ್ಯುತ್ತಮ ನಟ ವಿಭಾಗದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆಸ್ಕರ್ ಗೆಲ್ಲುತ್ತಾರೊ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

  ಎರಡು ವರ್ಷ ಜೂ ಎನ್‌ಟಿಆರ್ ಬ್ಯುಸಿ

  ಎರಡು ವರ್ಷ ಜೂ ಎನ್‌ಟಿಆರ್ ಬ್ಯುಸಿ

  ಇದರ ಹೊರತಾಗಿ ಜೂ ಎನ್‌ಟಿಆರ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಇದೀಗ ಕೊರಟಾಲ ಶಿವ ನಿರ್ದೇಶನದ ಹೊಸ ಸಿನಿಮಾದಲ್ಲಿ ಜೂ ಎನ್‌ಟಿಆರ್ ನಟಿಸುತ್ತಿದ್ದಾರೆ. ಅದರ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಾರೆ. ಆ ಬಳಿಕ ಹೊಸ ನಿರ್ದೇಶಕನೊಬ್ಬನ ಸಿನಿಮಾಕ್ಕೆ ಬಣ್ಣ ಹಚ್ಚಲಿದ್ದಾರೆ. ಒಟ್ಟಾರೆ ಮುಂದಿನ ಎರಡು ವರ್ಷ ಜೂ ಎನ್‌ಟಿಆರ್ ಬಹಳ ಬ್ಯುಸಿಯಾಗಿದ್ದಾರೆ.

  English summary
  Actor Jr NTR may act in a big Hollywood movie soon. He contacted from a big Hollywood movie production house.
  Wednesday, August 17, 2022, 13:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X