For Quick Alerts
  ALLOW NOTIFICATIONS  
  For Daily Alerts

  ಕಬ್ಜ ಚಿತ್ರದಲ್ಲಿ ಉಪ್ಪಿ ಜೊತೆ ನಟಿಸೋದು ಅವರೇನಾ, ಸರ್ಪ್ರೈಸ್‌ಗೂ ಮುಂಚೆನೇ ಮಾಹಿತಿ ಲೀಕ್?

  |

  ಸೂಪರ್ ಸ್ಟಾರ್ ಉಪೇಂದ್ರ ನಟಿಸುತ್ತಿರುವ ಕಬ್ಜ ಚಿತ್ರತಂಡ ಸಂಕ್ರಾಂತಿ ಹಬ್ಬಕ್ಕೆ ಸರ್ಪ್ರೈಸ್ ನೀಡಲು ಮುಂದಾಗಿದೆ. ಆರ್ ಚಂದ್ರು ನಿರ್ದೇಶನದಲ್ಲಿ ತಯಾರಾಗುತ್ತಿರುವ ಮೆಗಾ ಸಿನಿಮಾ ಇದಾಗಿದ್ದು, ಉಪೇಂದ್ರ ಜೊತೆ ಸ್ಟಾರ್ ನಟರೊಬ್ಬರು ಎಂಟ್ರಿಯಾಗಲಿದ್ದಾರೆ ಎಂಬ ಸುದ್ದಿಗಳು ವರದಿಯಾಗಿದೆ.

  ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ 'ಕಬ್ಜ'ದ ಕಥೆ | Filmibeat Kannada

  ಜನವರಿ 14 ರಂದು ಈ ಕುರಿತು ಅಧೀಕೃತ ಮಾಹಿತಿ ಪ್ರಕಟಿಸುವುದಾಗಿ ಆರ್ ಚಂದ್ರು ತಿಳಿಸಿದ್ದಾರೆ. ಬಹುಕೋಟಿಯಲ್ಲಿ ಸಿದ್ಧವಾಗುತ್ತಿರುವ ಕಬ್ಜ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ನಟ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ, ಯಾರು ಆ ನಟ? ಮುಂದೆ ಓದಿ...

  ಡಿಸೆಂಬರ್ 20 ರಿಂದ ಉಪೇಂದ್ರ 'ಕಬ್ಜ' ಚಿತ್ರೀಕರಣ ಆರಂಭಡಿಸೆಂಬರ್ 20 ರಿಂದ ಉಪೇಂದ್ರ 'ಕಬ್ಜ' ಚಿತ್ರೀಕರಣ ಆರಂಭ

  ಕಬ್ಜ ಚಿತ್ರದಲ್ಲಿ ಸುದೀಪ್?

  ಕಬ್ಜ ಚಿತ್ರದಲ್ಲಿ ಸುದೀಪ್?

  ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಲಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ. ಕಬ್ಜ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಸುದೀಪ್ ಬಣ್ಣ ಹಚ್ಚಲಿದ್ದಾರೆ. ಈ ಸುದ್ದಿಯನ್ನು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಬಹಿರಂಗಗೊಳಿಸಲಿದ್ದಾರಂತೆ.

  ಮುಕುಂದ ಮುರಾರಿ ಜೋಡಿ

  ಮುಕುಂದ ಮುರಾರಿ ಜೋಡಿ

  ಸುದೀಪ್ ಮತ್ತು ಉಪೇಂದ್ರ ಈ ಹಿಂದೆ ಮುಕುಂದ ಮುರಾರಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ನಂದಕಿಶೋರ್ ನಿರ್ದೇಶನದಲ್ಲಿ ಬಂದಿದ್ದ ಈ ಸಿನಿಮಾದಲ್ಲಿ ಸುದೀಪ್ ಕೃಷ್ಣನ ಪಾತ್ರ ನಿರ್ವಹಿಸಿದ್ದರೆ, ದೇವರು ಇಲ್ಲ ಎಂಬ ವಾದವನ್ನು ಮಂಡಿಸುವ ಸಾಮಾನ್ಯ ವ್ಯಕ್ತ ಪಾತ್ರದಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದರು. ಸಿನಿಮಾ ಯಶಸ್ವಿಯಾಗಿತ್ತು.

  'ಈ ಸಿನಿಮಾ ಇಂಡಸ್ಟ್ರಿ ಬೇಡ ವಾಪಸ್ ಹೋಗ್ಬಿಡು ಅಂದಿದ್ರು ಆ ವ್ಯಕ್ತಿ'- ಆರ್ ಚಂದ್ರು'ಈ ಸಿನಿಮಾ ಇಂಡಸ್ಟ್ರಿ ಬೇಡ ವಾಪಸ್ ಹೋಗ್ಬಿಡು ಅಂದಿದ್ರು ಆ ವ್ಯಕ್ತಿ'- ಆರ್ ಚಂದ್ರು

  ಹೀರೋಯಿನ್ ಇರಬಹುದು ಎನ್ನಲಾಗಿದೆ

  ಹೀರೋಯಿನ್ ಇರಬಹುದು ಎನ್ನಲಾಗಿದೆ

  ಮತ್ತೊಂದೆಡೆ 'ಕಬ್ಜ' ಚಿತ್ರತಂಡ ಬಹಿರಂಗಪಡಿಸಲಿರುವ ಆ ಹೊಸ ಸ್ಟಾರ್ ಚಿತ್ರದ ನಾಯಕಿ ಇರಬಹುದು ಎಂಬ ಊಹೆಯೂ ಇದೆ. ಬಾಲಿವುಡ್‌ನಿಂದ ಹೀರೋಯಿನ್ ಎಂಟ್ರಿಯಾಗುತ್ತಿರಬಹುದು ಎಂಬ ನಿರೀಕ್ಷೆಯೂ ಇದೆ. ಈ ಕುರಿತು ಸಂಕ್ರಾಂತಿ ಹಬ್ಬಕ್ಕೆ ಸ್ಪಷ್ಟನೆ ದೊರೆಯಲಿದೆ.

  ಏಳು ಭಾಷೆಯಲ್ಲಿ ಕಬ್ಜ

  ಏಳು ಭಾಷೆಯಲ್ಲಿ ಕಬ್ಜ

  ಆರ್ ಚಂದ್ರು ಅವರ ಸುಳಿವು ಗಮನಿಸಿದರೆ ಶಿವರಾಜ್ ಕುಮಾರ್ ಏನಾದರೂ ನಟಿಸುತ್ತಿದ್ದಾರಾ ಎಂಬ ಕುತೂಹಲವೂ ಇದೆ. ಇನ್ನುಳಿದಂತೆ ಏಳು ಭಾಷೆಯಲ್ಲಿ ಈ ಚಿತ್ರ ತೆರೆಗೆ ಬರಲಿದ್ದು, ಕೆಜಿಎಫ್ ಚಿತ್ರಕ್ಕೆ ಸಂಗೀತ ನೀಡಿದ್ದ ರವಿ ಬಸ್ರೂರು ಸಂಗೀತ ಒದಗಿಸುತ್ತಿದ್ದಾರೆ. ಜಗಪತಿ ಬಾಬು, ನವೀನ್, ಜಯಪ್ರಕಾಶ್, ಕಾಟರಾಜು, ಸುಬ್ಬರಾಜು, ಅವಿನಾಶ್, ಎಂ ಕಾಮರಾಜ ಸೇರಿದಂತೆ ಹಲವರು ನಟಿಸಲಿದ್ದಾರೆ.

  English summary
  Kannada actor Kiccha Sudeep has been roped in to play an important role in Upendra's Kabza.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X