Don't Miss!
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- News
Mangaluru cooker blast: ಸುಟ್ಟಗಾಯಗಳಿಂದ ಚೇತರಿಸಿಕೊಂಡ ಆರೋಪಿಯನ್ನು ವಶಕ್ಕೆ ಪಡೆಯಲಿರುವ ಎನ್ಐಎ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯಶ್‌ಗೆ 'ಬ್ಯಾಡ್ ಬಾಯ್' ಎಂದ ಸ್ಟಾರ್ ಪುತ್ರ, ಖುಷಿಯಾದ ರಾಧಿಕಾ!
ಕನ್ನಡ ಚಿತ್ರರಂಗದಲ್ಲಿ ನಟ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ದಿ ಬೆಸ್ಟ್ ಎನಿಸಿಕೊಂಡಿದೆ. ಈ ಜೋಡಿ ಸಿನಿಮಾ ತೆರೆಯ ಮೇಲೆ ಎಷ್ಟು ಅದ್ಭುತವಾಗಿ ಮಿಂಚಿತ್ತೋ, ಅಷ್ಟೇ ಅದ್ಭುತವಾಗಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಕೂಡ ಸದಾ ಕಂಗೊಳಿಸುತ್ತಿರುತ್ತದೆ. ನಟ ಯಶ್ ಸೂಪರ್ ಸ್ಟಾರ್ ಎನಿಸಿಕೊಂಡರು ಕೂಡ ಪಕ್ಕಾ ಫ್ಯಾಮಿಲಿ ಮ್ಯಾನ್.
Recommended Video
ನೀವು ಯಶ್ ಮತ್ತು ರಾಧಿಕಾ ಪಂಡಿತ್ ಅವರ ಕುಟುಂಬ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ, ಹೆಚ್ಚಿನ ಮಾಹಿತಿ ಸಿಗುವುದು ರಾಧಿಕಾ ಪಂಡಿತ್ ಅವರಿಂದಲೇ. ಯಾಕೆಂದರೆ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ತಮ್ಮ ಕುಟುಂಬದ ಆಗು-ಹೋಗುಗಳು, ಸಂತಸದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.
ಬಾಲ್ಯ
ಸ್ನೇಹಿತನ
ಮದುವೆಗೆ
ಪತ್ನಿ
ಸಮೇತ
ಆಗಮಿಸಿದ
ಯಶ್
ಸದ್ಯ ಯಶ್ ಮತ್ತು ರಾಧಿಕಾ ಪಂಡಿತ್ ಕುಟುಂಬದ ಬಗ್ಗೆ ಮಾತನಾಡು ಕಾರಣ, ಯಶ್ ಬಗ್ಗೆ ಬಂದಿರುವ ಹೊಸ ಕಮೆಂಟ್. ಹೌದು ನಟ ಯಶ್‌ಗೆ ಬ್ಯಾಡ್ ಬಾಯ್ ಅಂತೆ, ಹೀಗಂತೆ ಹೇಳಿರೋದು ಪುಟ್ಟ ಮಗು. ಎಷ್ಟು ಬಾರಿ ಯಶ್ ಬಗ್ಗೆ ಕೇಳಿದರೂ, ಬ್ಯಾಡ್ ಬಾಯ್ ಅಂದಿದ್ದು ಯಾರು ಎನ್ನುವುದನ್ನು ಮುಂದೆ ಓದಿ...
'ಕೆಜಿಎಫ್
2'
ಭರ್ಜರಿ
50
ದಿನ:
ಯಶ್-ಪ್ರಶಾಂತ್
ನೀಲ್
ಬರೆದ
ದಾಖಲೆಯೇನು?

ಯಶ್ 'ಬ್ಯಾಡ್ ಬಾಯ್'!
ನಟ ಯಶ್ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟುಕೊಂಡಿದೆ. ಇದೇ ಬೆನ್ನಲ್ಲೇ ಈಗ ಯಶ್ ಅವ್ರನ್ನ ಬ್ಯಾಡ್ ಬಾಯ್ ಎಂದು ಕರೆಯಲಾಗಿದೆ! ಹೌದು ನಟ ಯಶ್ ಅವರನ್ನು ಪುಟ್ಟ ಬಾಲಕ ಬ್ಯಾಡ್ ಬಾಯ್ ಎಂದು ಕರೆದಿದ್ದಾನೆ. ಅದು ಮತ್ಯಾರು ಅಲ್ಲ. ನಟ ಯಶ್ ಮಗ ಯಥರ್ವ್. ರಾಧಿಕಾ ಪಂಡಿತ್ ಹಂಚಿಕೊಂಡಿರುವ ವಿಡಿಯೋದಲ್ಲಿ ಯಥರ್ವ್, ಅಪ್ಪ ಯಶ್ ಮೇಲೆ ಮುನಿಸಿಕೊಂಡಿದ್ದಾನೆ. ಹಾಗಾಗಿ ಅಪ್ಪನನ್ನ ಬ್ಯಾಡ್ ಬಾಯ್ ಎನ್ನುತ್ತಿದ್ದಾರೆ.
ಅಪ್ಪನ ಮೇಲೆ ಯಥರ್ವ್ ಮುನಿಸು!
ಈ ವಿಡಿಯೋದಲ್ಲಿ ಯಶ್ ಮಗ ಮುದ್ದಾಗಿ ಮಾತನಾಡಿದ್ದಾನೆ. ಹಠ ಮಾಡುತ್ತಿರುವ ಯಥರ್ವ್ ಅಪ್ಪನನ್ನು ಬ್ಯಾಡ್ ಬಾಯ್ ಎಂದಿದ್ದಾನೆ. ಅಮ್ಮನನ್ನು ಗುಡ್ ಗರ್ಲ್ ಎಂದಿದ್ದಾನೆ. ಹೌದು ಈ ವಿಡಿಯೋದಲ್ಲಿ ಯಶ್ ಮಗನ ಬಳಿ ಅಪ್ಪ ಗುಡ್ ಬಾಯ್, ಅಪ್ಪ ತುಂಬಾ ಗುಡ್ ಬಾಯ್ ಎನ್ನುತ್ತಾರೆ. ಆದರೆ ಯಥರ್ವ್ ಮಾತ್ರ ಹೇಳೋದು ಒಂದೇ ಮಾತು. ಅಪ್ಪ ಬ್ಯಾಡ್ ಬಾಯ್ ಮತ್ತು ಅಮ್ಮ ಗುಡ್ ಗರ್ಲ್ ಎನ್ನುತ್ತಾನೆ. ಈ ಮುದ್ದು ಮಗುವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫೋಟೋ ಹಂಚಿಕೊಂಡಿದ್ದ ರಾಧಿಕಾ ಪಂಡಿತ್!
ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಾಲೋಯರ್‌ಗಳನ್ನು ಹೊಂದಿದ್ದಾರೆ. ಹಾಗಾಗಿ ಅವರು ಹಾಕುವ ಪೋಸ್ಟ್‌ಗಳು ಕೂಡ ವೈರಲ್ ಆಗಿಬಿಡುತ್ತವೆ. ಇತ್ತೀಚೆಗೆ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದರು. ಫೋಟೋದಲ್ಲಿ ರಾಧಿಕಾ ಪಂಡಿತ್ ಜೊತೆಗೆ ಪತಿ ಯಶ್ ಮತ್ತು ಇಬ್ಬರು ಮಕ್ಕಳಾದ ಐರಾ ಮತ್ತು ಯಥರ್ವ ಕೂಡ ಇದ್ದಾರೆ. ಇದು ಇವರ ಫ್ಯಾಮಿಲಿ ಫೋಟೋ.

ರಾಧಿಕಾ ಹಂಚಿಕೊಂಡ 500ನೇ ಪೋಸ್ಟ್!
ಫ್ಯಾಮಿಲಿ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಳ್ಳುತ್ತಿದ್ದ ಹಾಗೆ, ಈ ಫೋಟೋ ವೈರಲ್ ಆಗಿತ್ತು. ಇದೇ ಫೋಟೋವನ್ನ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲು ಕಾರಣ ಇದು 500ನೇ ಪೋಸ್ಟ್. ಹಾಗಾಗಿ ಈ ಫೋಟೋ ವಿಶೇಷವಾಗಿ ಇರಬೇಕು ಎನ್ನುವ ಕಾರಣಕ್ಕೆ ರಾಧಿಕಾ ಪಂಡಿತ್ ತಮ್ಮ ಮುದ್ದು ಮಕ್ಕಳ ಜೊತೆಗೆ ರಾಕಿಂಗ್ ಪತಿ ಇರುವ ಫೋಟೋವನ್ನು ಹಾಕಿದ್ದಾರೆ. ಜೊತೆಗೆ " ಇದು ನನ್ನ ಐನೂರನೇ ಫೋಟೋ ಇದು ವಿಶೇಷವಾಗಿರಲಿ." ಎಂದು ಕ್ಯಾಪ್ಷನ್ ಕೊಟ್ಟಿದ್ದರು.